2026ರ ಕೇಂದ್ರ ಬಜೆಟ್‌ಗೆ ಹೆಚ್ಚು ದಿನಗಳೇನು ಬಾಕಿ ಇಲ್ಲ. ಫೆಬ್ರವರಿ ತಿಂಗಳಿಗೆ ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡುತ್ತಿವೆ. ಹೀಗಾಗಿ ಭಾರತದ ವಸತಿ ಹಣಕಾಸು ವ್ಯವಸ್ಥೆಯು ನಿರ್ಣಾಯಕ ಹಂತದಲ್ಲಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಬಜೆಟ್‌ನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಏನೆಲ್ಲಾ ಬದಲಾಗಬಹುದು ಎಂಬ ನಿರೀಕ್ಷೆಯೂ ಮೂಡಿದೆ. ಅಂದರೆ ನಗರೀಕರಣವು ಕಡಿಮೆ ವೆಚ್ಚದ ವಸತಿಗಳ ಬೇಡಿಕೆಯನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ.

GDP ಬೆಳವಣಿಗೆಯಲ್ಲಿ ರಿಯಲ್ ಎಸ್ಟೇಟ್ ವಲಯವು ನಿರ್ಮಾಣ ಮತ್ತು ಇತರೆ ಕೈಗಾರಿಕಾ ಕೆಲಸಗಳ ಮೂಲಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಅಂದರೆ ನಿರ್ಮಾಣಕ್ಕಾಗಿ ಬೇಕಾಗುವ ಸಿಮೆಂಟ್, ಉಕ್ಕು, ಉದ್ಯೋಗ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಮೂಲಕ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ಆದರೆ ಮಧ್ಯಮ ಆದಾಯದವರು ಮತ್ತು ಮೊದಲ ಬಾರಿಗೆ ಮನೆ ಖರೀದಿಸಲು ಬಯಸುವವರಿಗೆ ಮನೆ ಇನ್ನೂ ಕೈಗೆಟುಕದ ಕನಸಾಗಿಯೇ ಉಳಿದಿದೆ. ಈ ಹಿನ್ನೆಲೆದಲ್ಲಿ, 2026ರ ಕೇಂದ್ರ ಬಜೆಟ್ ವಸತಿ ಹಣಕಾಸಿನ ವ್ಯವಸ್ಥೆಯನ್ನು ಸರಳ ಮತ್ತು ಜನಪರವಾಗಿಸಲು ಹೊಸ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ವಸತಿ ಸಬ್ಸಿಡಿಗಳು: ನಗರಗಳಲ್ಲಿ ಏಕೆ ಕೈಗೆಟುಕುತ್ತಿಲ್ಲ?
ಸರ್ಕಾರದ PMAY-U ಯೋಜನೆಯಡಿ ಬಡ್ಡಿ ಸಬ್ಸಿಡಿ ಇದ್ದರೂ, ಬೆಂಗಳೂರು, ಪುಣೆ ಹೀಗೆ ದೊಡ್ಡ ನಗರಗಳಲ್ಲಿ ಮನೆ ಬೆಲೆಗಳು ವೇಗವಾಗಿ ಹೆಚ್ಚಾಗಿವೆ. ಆದರೆ ಸಬ್ಸಿಡಿಗೆ ನಿಗದಿಪಡಿಸಿದ ಆದಾಯ ಮತ್ತು ಮನೆ ಮೌಲ್ಯದ ಮಿತಿಗಳು ಬದಲಾಗಿಲ್ಲ. ಇದರಿಂದ ಹಲವರು ಯೋಜನೆಯ ಪ್ರಯೋಜನದಿಂದ ಹೊರಗುಳಿಯುತ್ತಿದ್ದಾರೆ.
2026ರ ಬಜೆಟ್‌ನಲ್ಲಿ ಮನೆ ಮೌಲ್ಯ ಮತ್ತು ಸಾಲ ಮಿತಿಗಳನ್ನು ನಗರ ಹಾಗೂ ಬೆಲೆ ಏರಿಕೆಗೆ ಅನುಗುಣವಾಗಿ ಬದಲಾಯಿಸಿದರೆ, ಹೆಚ್ಚು ಜನರಿಗೆ ಸಬ್ಸಿಡಿ ಸಿಗಬಹುದು. ಬಡ ಮತ್ತು ಕಡಿಮೆ ಆದಾಯ ವರ್ಗಕ್ಕೆ ಹಳೆಯ ರೀತಿಯ ಸಹಾಯ ಮುಂದುವರಿಸಬಹುದು. ಆದರೆ ಮಧ್ಯಮ ಆದಾಯದ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಹಂತ ಹಂತವಾಗಿ ಬಡ್ಡಿ ಸಹಾಯ ನೀಡಿದರೆ EMI ಕಡಿಮೆಯಾಗುತ್ತದೆ ಮತ್ತು ಮನೆ ಖರೀದಿ ಸುಲಭವಾಗುತ್ತದೆ.
ಗೃಹ ಸಾಲ ಸುಧಾರಣೆಗಳು: EMI ಕಡಿಮೆ ಮಾಡುವ ಮಾರ್ಗ:
ಇಂದಿನ ಪರಿಸ್ಥಿತಿಯಲ್ಲಿ ಗೃಹ ಸಾಲಗಳು ಬ್ಯಾಂಕುಗಳ ದೊಡ್ಡ ಪಾಲಾಗಿವೆ. 50 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ಮನೆಗಳಿಗೆ ಸಾಲ ನೀಡುವಲ್ಲಿ ಬ್ಯಾಂಕುಗಳಿಗೆ ಹಣದ ಲಭ್ಯತೆ ಮುಖ್ಯ ಸಮಸ್ಯೆಯಾಗಿದೆ. ಸರ್ಕಾರವು NABARD ಮರುಹಣಕಾಸು ಮತ್ತು ವಿಶೇಷ ನಿಧಿಗಳ ಮೂಲಕ ಕಡಿಮೆ ವೆಚ್ಚದ ಹಣ ಒದಗಿಸಿದರೆ, ಗೃಹ ಸಾಲದ ಬಡ್ಡಿದರಗಳು ಇನ್ನಷ್ಟು ಕಡಿಮೆಯಾಗಬಹುದು.
ಇದರಿಂದ ಯುವ ಉದ್ಯೋಗಿಗಳು, ಗಿಗ್ ವರ್ಕರ್‌ಗಳು ಮತ್ತು ಟಿಯರ್-2 ನಗರಗಳ ಜನರಿಗೆ 30 ವರ್ಷಗಳ ಅವಧಿಯ ಸಾಲ ಮತ್ತು ಸ್ಟೆಪ್-ಅಪ್ EMI ಯೋಜನೆಗಳು ಸಹಾಯಕವಾಗುತ್ತವೆ. ಆದಾಯ ಹೆಚ್ಚಾದಂತೆ EMI ಕೂಡ ಹೆಚ್ಚಾಗುವ ವ್ಯವಸ್ಥೆ ಮನೆ ಖರೀದಿಯನ್ನು ಸುಲಭಗೊಳಿಸುತ್ತದೆ.
ತೆರಿಗೆ ವಿನಾಯಿತಿಗಳು: ಮನೆ ಖರೀದಿಗೆ ದೊಡ್ಡ ಪ್ರೇರಣೆ:
ಮಧ್ಯಮ ವರ್ಗದವರು ಮನೆ ಖರೀದಿಸುವಾಗ ತೆರಿಗೆ ಉಳಿತಾಯವನ್ನು ಹೆಚ್ಚು ಗಮನಿಸುತ್ತಾರೆ. ಗೃಹ ಸಾಲದ ಬಡ್ಡಿಗೆ ಸಿಗುವ ತೆರಿಗೆ ಕಡಿತವನ್ನು ಹೆಚ್ಚಿಸಿದರೆ, ಮನೆ ಖರೀದಿ ನಿರ್ಧಾರ ವೇಗವಾಗುತ್ತದೆ.
ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಿದರೆ ಸರ್ಕಾರದ ಆದಾಯಕ್ಕೆ ಹೆಚ್ಚಿನ ಹೊರೆ ಆಗದೆ ಜನರಿಗೆ ದೊಡ್ಡ ಲಾಭ ಸಿಗುತ್ತದೆ. ಅಲ್ಲದೆ, ಸ್ಥಗಿತಗೊಂಡ ಯೋಜನೆಗಳಲ್ಲಿ ಮನೆ ಖರೀದಿಸಿದವರಿಗೆ ತೆರಿಗೆ ನಿಯಮಗಳಲ್ಲಿ ಸಡಿಲಿಕೆ ನೀಡಿದರೆ, ಮರುಮಾರಾಟ ಮತ್ತು ಮನೆ ಬಳಕೆ ಹೆಚ್ಚಾಗಬಹುದು.
ಡಿಜಿಟಲ್ ಗೃಹ ಸಾಲ: ವೇಗ ಮತ್ತು ಸುಲಭ ಪ್ರಕ್ರಿಯೆ:
ಇಂದು ಡಿಜಿಟಲ್ ಪಾವತಿ ಮತ್ತು ಡೇಟಾ ವ್ಯವಸ್ಥೆಗಳು ಅಭಿವೃದ್ಧಿಯಾಗಿದ್ದರೂ, ಗೃಹ ಸಾಲ ಪ್ರಕ್ರಿಯೆ ಇನ್ನೂ ನಿಧಾನವಾಗಿದೆ. ಖಾತೆ ಸಂಗ್ರಾಹಕ ವ್ಯವಸ್ಥೆ, UPI ಮತ್ತು GST ಡೇಟಾವನ್ನು ಬಳಸಿ ಸಾಲ ಅರ್ಹತೆ ಪರಿಶೀಲಿಸಿದರೆ, 30 ದಿನಗಳ ಪ್ರಕ್ರಿಯೆ 2-3 ದಿನಗಳಿಗೆ ಇಳಿಯಬಹುದು.
2026ರ ಬಜೆಟ್‌ನಲ್ಲಿ "ಹೌಸಿಂಗ್ ಕ್ರೆಡಿಟ್ ಪಾಸ್‌ಪೋರ್ಟ್" ಎಂಬ ಡಿಜಿಟಲ್ ವ್ಯವಸ್ಥೆ ಬಂದರೆ, ಅನೌಪಚಾರಿಕ ಆದಾಯ ಹೊಂದಿರುವವರಿಗೂ ಗೃಹ ಸಾಲ ಸುಲಭವಾಗುತ್ತದೆ. ಫಿನ್‌ಟೆಕ್ ಮತ್ತು ಗೃಹ ಹಣಕಾಸು ಸಂಸ್ಥೆಗಳ ಸಹಕಾರದಿಂದ ಗ್ರಾಮ ಮತ್ತು ಪೆರಿ-ನಗರ ಪ್ರದೇಶಗಳ ಜನರಿಗೆ ಸಾಲ ಸಿಗಬಹುದು.
ಹಸಿರು ವಸತಿ ಹಣಕಾಸು: ಪರಿಸರ ಸ್ನೇಹಿ ಮನೆಗಳಿಗೆ ಉತ್ತೇಜನ:
ಪರಿಸರ ಸಂರಕ್ಷಣೆಗಾಗಿ ಹಸಿರು ಮನೆಗಳ ಅಗತ್ಯ ಹೆಚ್ಚುತ್ತಿದೆ. ಸೌರ ವಿದ್ಯುತ್, EV ಚಾರ್ಜಿಂಗ್ ಮತ್ತು ಇಂಧನ ಉಳಿತಾಯ ತಂತ್ರಜ್ಞಾನ ಬಳಕೆಯ ಮನೆಗಳಿಗೆ ಕಡಿಮೆ ಬಡ್ಡಿದರದ ಸಾಲ ನೀಡಿದರೆ, ಜನರು ಹಸಿರು ಮನೆಗಳತ್ತ ಆಕರ್ಷಿತರಾಗುತ್ತಾರೆ.
SIDBI ಮೂಲಕ ವಿಶೇಷ ಹಸಿರು ವಸತಿ ನಿಧಿ ಸ್ಥಾಪಿಸಿದರೆ, ಸಣ್ಣ ಮತ್ತು ಮಧ್ಯಮ ಡೆವಲಪರ್‌ಗಳಿಗೆ ಸಹಾಯವಾಗುತ್ತದೆ. ಇದರಿಂದ ಪರಿಸರ ಸ್ನೇಹಿ ಮನೆಗಳ ನಿರ್ಮಾಣ ಹೆಚ್ಚಾಗುತ್ತದೆ ಮತ್ತು ಉದ್ಯೋಗ ಸೃಷ್ಟಿಯೂ ಆಗುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications