ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು (ಫೆಬ್ರವರಿ 1, ಭಾನುವಾರ) ಮಂಡನೆ ಮಾಡಲಿರುವ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದೆ. ಸಂಸತ್ತಿನಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ (Union Budget 2026-27) ಮಂಡಿಸಲು ಸಜ್ಜಾಗಿದ್ದರೆ, ಇತ್ತ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಷೇರು ಮಾರುಕಟ್ಟೆ (Stock Market) ಹೂಡಿಕೆದಾರರಿಂದ ಹಿಡಿದು ಅರ್ಥಶಾಸ್ತ್ರಜ್ಞರು, ಕೈಗಾರಿಕಾ ಮುಖಂಡರು ಹಾಗೂ ಸಾಮಾನ್ಯ ನಾಗರಿಕರವರೆಗೆ ಎಲ್ಲರೂ ಸಚಿವೆ ಸೀತಾರಾಮನ್ ಅವರ ಬಜೆಟ್ ಮಂಡನೆಯತ್ತ ಚಿತ್ತ ನೆಟ್ಟಿದೆ. ಈ ಬಜೆಟ್ ಸರ್ಕಾರದ ಆರ್ಥಿಕ ಆದ್ಯತೆಗಳು, ಬೆಳವಣಿಗೆಯ ಕಾರ್ಯತಂತ್ರ ಮತ್ತು ಮುಂದಿನ ವರ್ಷದ ಪ್ರಮುಖ ನೀತಿ ಬದಲಾವಣೆಗೆ ಹೊಸ ದಾರಿಯಾಗಲಿದೆ.

ಇನ್ನೇನು ಕೆಲವೇ ಗಂಟೆಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಆದ್ರೆ ಈ ಬಜೆಟ್ ಮಂಡನೆಯನ್ನು ಎಲ್ಲಿ ಲೈವ್ ಆಗಿ ನೋಡಬಹುದು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಬಜೆಟ್ 2026-27ರ ಮಂಡನೆಯನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು ಎಂಬುದರ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವು ಫೆಬ್ರವರಿ 1, ಭಾನುವಾರದಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಭಾಷಣದ ಮೂಲಕ 2026-27ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಸರ್ಕಾರದ ಯೋಜನೆಗಳು ಮತ್ತು ನೀತಿಗಳು ಹೇಗಿದೆ ಎಂಬುದು ಗೊತ್ತಾಗಲಿದೆ.
ಬಜೆಟ್ ಮಂಡನೆಯನ್ನು ಎಲ್ಲಿ ನೋಡವುದು?
ಬಜೆಟ್ 2026ರ ನೇರ ಪ್ರಸಾರವನ್ನು ಗುಡ್‌ರಿಟರ್ನ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು. ಓದುಗರು ಇತ್ತೀಚಿನ ಬಜೆಟ್ 2026ಕ್ಕೆ ಸಂಬಂಧಿಸಿದ ನಿರಂತರ ಅಪ್‌ಡೇಟ್‌ಗಾಗಿ ಗುಡ್‌ರಿಟರ್ನ್ಸ್ ಯೂಟ್ಯೂಬ್ ಚಾನೆಲ್‌ಗೆ ಅನ್ನು ವೀಕ್ಷಿಸಬಹುದು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಬಜೆಟ್ ವಿವರಗಳನ್ನು ಸುಲಭವಾಗಿ ಪ್ರವೇಶಿಸಲು ಇದು ಉತ್ತಮ ಅವಕಾಶವಾಗಿದೆ.
ಇದರ ಜೊತೆಗೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವನ್ನು ಸಂಸದ್ ಟಿವಿ ಮತ್ತು ದೂರದರ್ಶನ (ಡಿಡಿ) ಚಾನೆಲ್‌ಗಳಲ್ಲೂ ನೇರವಾಗಿ ವೀಕ್ಷಿಸಲು ಅವಕಾಶವಿದೆ. ವೀಕ್ಷಕರು ಸಂಸದ್ ಟಿವಿ ಚಾನೆಲ್‌ನ ಯೂಟ್ಯೂಬ್ ಚಾನೆಲ್‌ನಲ್ಲಿಯೂ ನೇರ ಪ್ರಸಾರವನ್ನು ವೀಕ್ಷಿಸಬಹುದು. ಅಲ್ಲದೆ, ಕೇಂದ್ರ ಬಜೆಟ್‌ನ ಅಧಿಕೃತ ವೆಬ್‌ಸೈಟ್ ಆದ indiabudget.gov.in ನಲ್ಲಿಯೂ ಬಜೆಟ್ 2026ರ ನೇರ ಪ್ರಸಾರ ಲಭ್ಯವಾಗಲಿದೆ.
2026-27ರ ಹಣಕಾಸು ವರ್ಷದ ಬಗ್ಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಯೋಜನೆಗಳನ್ನು, ನೀತಿಗಳನ್ನು ರೂಪಿಸುವುದು ಈ ಬಜೆಟ್‌ನಲ್ಲಿ ಸಾಧ್ಯವಾಗಲಿದೆ. ವಿಶೇಷವಾಗಿ ಈ ವರ್ಷ ಫೆಬ್ರವರಿ 1 ಭಾನುವಾರ ಬಂದಿರುವುದರಿಂದ, ಬಜೆಟ್ 2026 ಅನ್ನು ಭಾನುವಾರವೇ ಮಂಡಿಸಲಾಗುತ್ತಿದೆ. ಈ ಅಭ್ಯಾಸವು ಏಪ್ರಿಲ್ 1 ರಂದು ಹಣಕಾಸು ವರ್ಷ ಪ್ರಾರಂಭವಾಗುವ ಮೊದಲು ಬಜೆಟ್ ಸಂಬಂಧಿತ ಎಲ್ಲಾ ಘೋಷಣೆಗಳನ್ನು ಜಾರಿಗೊಳಿಸಲು ಹೆಚ್ಚಿನ ಸಮಯವನ್ನು ನೀಡಲಿದೆ. ಇನ್ನು ಭಾನುವಾರ ಬಜೆಟ್ ಮಂಡನೆಯಾಗುತ್ತಿದ್ದರೂ, ಷೇರು ಮಾರುಕಟ್ಟೆಯೂ ಈ ದಿನ ತೆರೆಯಲಿದೆ.


Click it and Unblock the Notifications