Union Budget 2026: ಫೆಬ್ರವರಿ 1 ಅನ್ನು ಬಜೆಟ್‌ ಮಂಡನಾ ದಿನವನ್ನಾಗಿ ಏಕೆ ಆಯ್ಕೆ ಮಾಡಲಾಯಿತು? ಏನಿದರ ರಹಸ್ಯ?

ಇನ್ನೇನು ಕೆಲವೇ ದಿನಗಳಲ್ಲಿ 2026-27ನೇ ಕೇಂದ್ರ ಬಜೆಟ್‌ (Union Budget 2026-27) ಮಂಡನೆಯಾಗಲಿದೆ. ಭಾರತದ ಯೂನಿಯನ್‌ ಬಜೆಟ್‌ 2026-27ರತ್ತ ಎಲ್ಲರ ಚಿತ್ತ ನೆಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಫೆಬ್ರವರಿ 1 ರಂದು ತಮ್ಮ ಬಜೆಟ್‌ ಮಂಡಿಸಲಿದ್ದಾರೆ. ಕೆಲವು ವರ್ಷಗಳ ಹಿಂದೆ ಬಜೆಟ್‌ ಮಂಡನೆಯನ್ನು ಫೆಬ್ರವರಿ ಅಂತ್ಯದಲ್ಲಿ ಅಂದರೆ ಫೆಬ್ರವರಿ 28ರಂದು ಮಂಡಿಸಲಾಗುತ್ತಿತ್ತು. ಆದ್ರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ ಸರ್ಕಾರ (NDA Govt) ಅಧಿಕಾರಕ್ಕೇ ಬಂದಿದ್ದೇ ತಡ, ಫೆಬ್ರವರಿ 1 ಕ್ಕೆ ಬಜೆಟ್‌ ಮಂಡನೆಗೆ ದಿನಾಂಕ ನಿಗದಿ ಮಾಡಿತು. ಹಾಗಿದ್ರೆ ಈ ದಿನಾಂಕ ಬದಲಾಯಿಸಿದ್ದು ಏಕೆ ಗೊತ್ತಾ?

ಫೆ.1 ಅನ್ನು ಬಜೆಟ್‌ ಮಂಡನಾ ದಿನವನ್ನಾಗಿ ಏಕೆ ಆಯ್ಕೆ ಮಾಡಲಾಯಿತು?

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು 2026ರ ಕೇಂದ್ರ ಬಜೆಟ್‌ ಅನ್ನು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ. ಇದು ಅವರ ಸತತ ಒಂಬತ್ತನೇ ಬಜೆಟ್ ಮಂಡನೆಯಾಗಲಿದ್ದು, ಈ ಮಂಡನೆ ಹೊಸ ಮೈಲಿಗಲ್ಲು ಸಾಧಿಸಲಿದೆ. ಈ ಬಾರಿಯ ಬಜೆಟ್ ಪ್ರಮುಖವಾಗಿ, ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳುವುದು ಹಾಗೂ ಮಧ್ಯಮ ವರ್ಗದವರಿಗೆ ಪರಿಹಾರ ನೀಡುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.

ದಾಖಲೆಯತ್ತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌!
ಈ ಬಜೆಟ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೂರನೇ ಅವಧಿಯ ಸರ್ಕಾರದ ಎರಡನೇ ಪೂರ್ಣ ಬಜೆಟ್ ಆಗಲಿದೆ. ಈ ಹಿಂದಿನ ಮೊದಲ ಪೂರ್ಣ ಬಜೆಟ್ 2025 ರಲ್ಲಿ ಮಂಡಿಸಲಾಗಿತ್ತು. ನಿರ್ಮಲಾ ಸೀತಾರಾಮನ್ ಅವರು ಒಂದೇ ಪ್ರಧಾನಮಂತ್ರಿಯ ಅಧಿಕಾರಾವಧಿಯಲ್ಲಿ ಸತತ ಒಂಬತ್ತು ಬಜೆಟ್‌ಗಳನ್ನು ಪ್ರಸ್ತುತಪಡಿಸಿದ ಏಕೈಕ ವಿತ್ತ ಸಚಿವೆ ಎಂಬ ಹೊಸ ದಾಖಲೆಯನ್ನು ಸಹ ಈ ಬಾರಿ ಸೃಷ್ಟಿಸಲಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ತೆರಿಗೆ ಹಾಗೂ ಹಣದುಬ್ಬರದ ಕಾರಣದಿಂದ ಮಧ್ಯಮ ವರ್ಗದ ಜನರಿಗೆ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, 2026 ರ ಬಜೆಟ್‌ನಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳುವ ಜೊತೆಗೆ, ಮಧ್ಯಮ ವರ್ಗಕ್ಕೆ ಸೂಕ್ತ ಪರಿಹಾರ ನೀಡಲು ಸರ್ಕಾರ ಒತ್ತು ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಬದಲಾಯ್ತು ಬಜೆಟ್‌ ದಿನಾಂಕ!
ಭಾರತದಲ್ಲಿ ಬಜೆಟ್ ಮಂಡನೆಯ ದಿನಾಂಕ ಮತ್ತು ಸಮಯವು ಕಾಲಕಾಲಕ್ಕೆ ಬದಲಾಗಿದೆ. ಹಿಂದೆ, ಕೇಂದ್ರ ಬಜೆಟ್‌ ಅನ್ನು ಫೆಬ್ರವರಿ 28 ರಂದು ಮಂಡಿಸಲಾಗುತ್ತಿತ್ತು. ಆದರೆ, 2017 ರಲ್ಲಿ ಮೋದಿ ಸರ್ಕಾರವು ಈ ದಿನಾಂಕವನ್ನು ಫೆಬ್ರವರಿ 1 ಕ್ಕೆ ಬದಲಾವಣೆ ಮಾಡಿತು. ಇದರಿಂದ ಸಂಸತ್ತಿನಲ್ಲಿ ಬಜೆಟ್‌ಗೆ ಶೀಘ್ರ ಅನುಮೋದನೆ ದೊರೆತು, ಏಪ್ರಿಲ್ 1 ರಿಂದ ಹೊಸ ಯೋಜನೆಗಳು ಸಮಯಕ್ಕೆ ಸರಿಯಾಗಿ ಜಾರಿಗೆ ಬರಲು ಪ್ರಯೋಜನವಾಗಿದೆ.

ಬ್ರಿಟಿಷ್‌ ಸಂಪ್ರದಾಯವನ್ನು ಮುರಿದ ಮೋದಿ ಸರ್ಕಾರ!
ಬ್ರಿಟಿಷ್ ಆಳ್ವಿಕೆಯ ಸಂಪ್ರದಾಯದಂತೆ, ಹಲವಾರು ದಶಕಗಳ ಕಾಲ ಬಜೆಟ್‌ ಅನ್ನು ಫೆಬ್ರವರಿ ಕೊನೆಯ ಕೆಲಸದ ದಿನದಂದು ಅದರೆ ಫೆಬ್ರವರಿ 28 ಅಥವಾ 29ಕ್ಕೆ ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಲಂಡನ್‌ನಲ್ಲಿ ಕಚೇರಿ ಸಮಯಕ್ಕೆ ಮಾಹಿತಿ ತಲುಪಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. 1999 ರಲ್ಲಿ ಅಂದಿನ ವಿತ್ತ ಸಚಿವ ಯಶವಂತ್ ಸಿನ್ಹಾ ಅವರು ಈ ಸಮಯವನ್ನು ಬದಲಾಯಿಸಿ, ಬೆಳಿಗ್ಗೆ 11 ಗಂಟೆಯನ್ನು ನಿಗದಿಪಡಿಸಿದರು. ಈ ಸಂಪ್ರದಾಯವು ಇಂದಿಗೂ ಮುಂದುವರಿದಿದೆ.

ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ಟನ್ನು 1947ರ ನವೆಂಬರ್ 26 ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು. ಆಗಿನ ದೇಶದ ಮೊದಲ ವಿತ್ತ ಸಚಿವ ಆರ್‌ಕೆ ಷಣ್ಮುಖಂ ಚೆಟ್ಟಿ ಅವರು ಈ ಐತಿಹಾಸಿಕ ಬಜೆಟ್ ಅನ್ನು ಪ್ರಸ್ತುತಪಡಿಸಿದರು.

ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ವಿತ್ತ ಮಂತ್ರಿಗಳೆಂದರೆ ಮೊರಾರ್ಜಿ ದೇಸಾಯಿ (10 ಬಾರಿ), ಪಿ. ಚಿದಂಬರಂ (9 ಬಾರಿ) ಮತ್ತು ಪ್ರಣಬ್ ಮುಖರ್ಜಿ (8 ಬಾರಿ). ಮೊರಾರ್ಜಿ ದೇಸಾಯಿ ಅವರು 1959-1964 ಮತ್ತು ನಂತರ 1967-1969ರ ಅವಧಿಯಲ್ಲಿ ಒಟ್ಟು 10 ಬಜೆಟ್‌ಗಳನ್ನು ಮಂಡಿಸುವ ಮೂಲಕ ಈ ದಾಖಲೆ ಸೃಷ್ಟಿಸಿದ್ದಾರೆ.

ಡಾ. ಮನಮೋಹನ್ ಸಿಂಗ್ ಅವರು ವಿತ್ತ ಸಚಿವರಾಗಿದ್ದ ಅವಧಿಯಲ್ಲಿ, 1991 ರಿಂದ 1995 ರ ನಡುವೆ ಸತತ ಐದು ಬಜೆಟ್‌ಗಳನ್ನು ಮಂಡಿಸಿದ್ದರು. ವಿಶೇಷವಾಗಿ 1991 ರ ಬಜೆಟ್ ಅನ್ನು ಭಾರತದಲ್ಲಿ ಆರ್ಥಿಕ ಸುಧಾರಣೆಗಳ ಆರಂಭಕ್ಕೆ ಕಾರಣವಾದ ಐತಿಹಾಸಿಕ ಬಜೆಟ್ ಎಂದು ಪರಿಗಣಿಸಲಾಗಿದೆ.

ಬಜೆಟ್‌ ಭಾಷಣದಲ್ಲೂ ದಾಖಲೆ!
ಬಜೆಟ್ ಮಂಡನೆ ಮಾತ್ರವಲ್ಲ, ಭಾಷಣಗಳಿಗೂ ಸಂಬಂಧಿಸಿ ಕೆಲವು ದಾಖಲೆಗಳಾಗಿದೆ. ನಿರ್ಮಲಾ ಸೀತಾರಾಮನ್ ಅವರು 2020ರ ಫೆಬ್ರವರಿ 1 ರಂದು 2 ಗಂಟೆ 40 ನಿಮಿಷಗಳ ಕಾಲ ಮಾತನಾಡಿದ ಭಾಷಣವು ಅತಿ ಉದ್ದದ ಬಜೆಟ್ ಭಾಷಣ ಎಂಬ ದಾಖಲೆ ನಿರ್ಮಿಸಿದೆ. 1977 ರಲ್ಲಿ ಹಿರೋಬಾಯಿ ಮುಲ್ಜಿಭಾಯಿ ಪಟೇಲ್ ನೀಡಿದ ಕೇವಲ 800 ಪದಗಳ ಮಧ್ಯಂತರ ಬಜೆಟ್ ಭಾಷಣವು ಅತಿ ಚಿಕ್ಕ ಭಾಷಣವೆಂದು ಪರಿಗಣಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+