ಫೆಬ್ರವರಿ 1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ 2026ರ (Central Budget 2026-27) ಕಡೆಗೆ ಭಾರತೀಯರ ಚಿತ್ತ ನೆಟ್ಟಿದೆ. ಯಾವ ವಸ್ತುಗಳು ದುಬಾರಿಯಾಗಬಹುದು ಅಥವಾ ಯಾವ ವಸ್ತುಗಳು ಅಗ್ಗವಾಗಬಹುದು ಎಂಬುದನ್ನು ಉದ್ಯಮ ಮತ್ತು ಗ್ರಾಹಕ ವಲಯ ಭಾರೀ ಕುತೂಹಲದಿಂದ ಕಾದು ಕುಳಿತಿದೆ. ವಿಶೇಷವಾಗಿ, ತಂಬಾಕು ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗುವ ನಿರೀಕ್ಷೆಯಿದ್ದು, ಅಸ್ತಿತ್ವದಲ್ಲಿರುವ ಆರ್ಥಿಕ ಕ್ರಮಗಳಿಂದಾಗಿ ಇಲ್ಲಿ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

2025ರಲ್ಲಿ ಹೇಗಿತ್ತು ಬಜೆಟ್?
2025ರ ಬಜೆಟ್ ವರದಿಗಳ ಪ್ರಕಾರ, ಇಂಟರಾಕ್ಟಿವ್ ಫ್ಲಾಟ್ ಪ್ಯಾನಲ್ ಡಿಸ್‌ಪ್ಲೇಗಳು, ಹೆಣೆದ ಬಟ್ಟೆಗಳು, ಆಮದು ಮಾಡಿಕೊಂಡ ಪಾದರಕ್ಷೆಗಳು, ಸ್ಮಾರ್ಟ್ ಮೀಟರ್‌ಗಳು, ಸೋಲಾರ್ ಸೆಲ್‌ಗಳು ಹಾಗೂ ಆಯ್ದ PVC ಉತ್ಪನ್ನಗಳಂತಹ ಆಮದು ವಸ್ತುಗಳ ಮೇಲೆ ಸುಂಕ ಹೆಚ್ಚಿದ ಕಾರಣ ದುಬಾರಿಯಾಗಿದ್ದವು. ಇದರ ಬೆನ್ನಲ್ಲೇ ಮೊಬೈಲ್ ಬಿಡಿಭಾಗಗಳು, ವೈದ್ಯಕೀಯ ಉಪಕರಣಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಘಟಕಗಳಂತಹ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಅಗ್ಗವಾಗಿದ್ದವು.
ಆದರೆ, ಈ ವರ್ಷ ತಂಬಾಕು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಭಾರೀ ಗಮನಹರಿಸಿದೆ ಎಂದು ಹೇಳಲಾಗುತ್ತಿದೆ. ಹೊಸ ಬಜೆಟ್ ಘೋಷಣೆಗಳಿಗಿಂತ ಹೊರತಾಗಿ, ಈಗಾಗಲೇ ಜಾರಿಗೆ ಬಂದಿರುವ ಹೊಸ ತೆರಿಗೆ ನಿಯಮದಿಂದಾಗಿ ಫೆಬ್ರವರಿ 1 ರಿಂದ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಬೆಲೆ ಏರಿಕೆಯಾಗುತ್ತಾ?
ಕೇಂದ್ರ ಬಜಟ್ 2026 ರಲ್ಲಿ ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಮತ್ತು ಇತರ ಟೊಬ್ಯಾಕೋ ಉತ್ಪನ್ನಗಳ ಮೇಳೆ ತೆರಿಗೆ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಇದು ಫೆಬ್ರವರಿ 1, 2026 ರಿಂದಲೇ ಜಾರಿಗೆ ಬರಬಹುದು ಎನ್ನಲಾಗಿದೆ. ಸರ್ಕಾರ ಈಗಾಗಲೇ ಡಿಸೆಂಬರ್ 31, 2025 ರಂದೇ ಹೊಸ ಎಕ್ಸೈಸ್ ಡ್ಯೂಟಿ ಮತ್ತು ಸೆಸ್ (Cess) ನಾಟಿಫಿಕೇಶನ್ ಬಿಡುಗೆ ಮಾಡಿದೆ. ಇದರಿಂದಾಗಿ ತಂಬಾಕು ಉತ್ಪನ್ನಗಳ ಬೆಲೆ ಏರಿಕೆಯಾಗಬಹುದು ಎನ್ನಲಾಗಿದೆ. ಇದು ಜಿಎಸ್‌ಟಿ ಕಾಂಪನ್ಸೇಷನ್ ಸೆಸ್ ಮುಗಿದ ನಂತರದ ಹೊಸ ಟ್ಯಾಕ್ಸ್ ಸ್ಟ್ರಕ್ಚರ್ ಆಗಲಿದೆ.
ಹೊಸ ತೆರಿಗೆ ಸ್ಟ್ರಕ್ಚರ್: ಕೇಂದ್ರ ಬಜೆಟ್ 2026 ರಲ್ಲಿ ಸರ್ಕಾರ "ಸಿನ್ ಗೂಡ್ಡ್" (Sin Goods) ಮೇಲೆ ಹೆಚ್ಚಿನ ತೆರಿಗೆ ಬಗ್ಗೆ ಉಲ್ಲೇಖಿಸುವ ನಿರೀಕ್ಚೆಯಿದೆ. ಅದರಲ್ಲಿ ಪಾನ್ ಮಸಾಲಾ, ಸಿಗರೇಟ್, ಗುಟ್ಕಾ, ಟೊಬ್ಯಾಕೋ ಉತ್ಪನ್ನಗಳು ಸೇರಿದೆ. ಈ ನಿರೀಕ್ಷೆಗಳು ಹಿಂದಿನ ಬಜೆಟ್‌ನಲ್ಲೂ ಇದ್ದ ಕಾರಣ, ಇದೀಗ 2026ರ ಬಜೆಟ್‌ನಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ನಾಟಿಫಿಕೇಶನ್ ವಿವರ: ಡಿಸೆಂಬರ್ 31, 2025 ರಂದು ಫೈನಾನ್ಸ್ ಮಿನಿಸ್ಟ್ರಿ ಹೊಸ ತೆರಿಗೆ ನಿಯಮಗಳನ್ನು ಘೋಷಿಸಿದ್ದು, ಇದು ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಬಜೆಟ್ ಮಂಡನೆಗೆ ಮುನ್ನವೇ ಇದು ಘೋಷಣೆಯಾಗಿರುವುದರಿಂದ, ಬಜೆಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಫೆಬ್ರವರಿಯಿಂದ ಜಾರಿಯಾಗಲಿರುವ ಹೊಸ ತೆರಿಗೆ ವಿವರ:
ಜಿಎಸ್‌ಟಿ ದರ ಹೆಚ್ಚಳ: ಪ್ಯಾನ್ ಮಸಾಲಾ, ಸಿಗರೇಟ್, ಟೊಬ್ಯಾಕೋ ಉತ್ಪನ್ನಗಳ ಮೇಲೆ 40% ಜಿಎಸ್‌ಟಿ ವಿಧಿಸಲಾಗುತ್ತದೆ. ಇನ್ನು ಬೀಡಿಗಳ ಮೇಲೆ 18% ಜಿಎಸ್‌ಟಿ ವಿಧಿಸಲಾಗುತ್ತದೆ.


Click it and Unblock the Notifications