ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು, ಚೆನ್ನೈ, ವಿಶಾಖಾಪಟ್ಟಣಂ ಹಾಗೂ ಜೈಪುರದಲ್ಲಿ ಯೂನಿಯನ್ ಬ್ಯಾಂಕ್ ನಾರಿ ಶಕ್ತಿ ಶಾಖೆಗಳನ್ನು ಉದ್ಘಾಟನೆ ಮಾಡಿದರು. ಈ ವಿಶೇಷ ಶಾಖೆಗಳು ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ಹಾಗೂ ಬೆಂಬಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಈ ಶಾಖೆಗಳನ್ನು ತೆರೆಯುವ ಮೂಲಕ ಯೂನಿಯನ್ ಬ್ಯಾಂಕ್ ಹಾಗೂ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತದೆ. ಇದರ ಮುಖಾಂತರ ಮಹಿಳೆಯರಿಗೆ ವಿಶೇಷ ಕೌಶಲ್ಯ ತರಬೇತಿ ಹಾಗೂ ಹಣಕಾಸು ಸೇವೆಗಳನ್ನು ನೀಡುವುದಾಗಿದೆ.
ನಾರಿ ಶಕ್ತಿ ಬ್ರ್ಯಾಂಚ್‌ಗಳು ಮಹಿಳಾ ಉದ್ಯಮಿಗಳನ್ನು ಕೇಂದ್ರಿ ಕರಿಸಿ ತೆರೆಯಲಾಗುತ್ತಿದೆ. ಈ ಮೂಲಕ ಮಹಿಳಾ ಉದ್ಯಮಿಗಳಿಗೆ ಹಣಕಾಸಿನ ಅಡೆ ತಡೆ ನಿವಾರಿಸುವುದು ಹಾಗೂ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸುವ ಗುರಿಯನ್ನು ಹೊಂದಿವೆ. ಈ ಶಾಖೆಗಳು ಸರ್ವಿಸ್ ಹಾಗೂ ಉತ್ಪಾದನಾ ಕೈಗಾರಿಕೆಗಳಲ್ಲಿ ಮಹಿಳೆಯರಿಗೆ ಸಾಲಾ ಹಾಗೂ ಹಣಕಾಸಿನ ಬೆಂಬಲವನ್ನು ನೀಡುತ್ತವೆ. ಈ ಶಾಖೆಗಳು ತಂತ್ರಜ್ಞಾನ ಆಧಾರಿತ, ಕ್ಲಸ್ಟರ್ ಆಧಾರಿತ ಯೋಜನೆಗಳನ್ನು ಹೊಂದಿವೆ.

ಈ ಶಾಖೆಗಳಿಂದ ಏನು ಪ್ರಯೋಜನ?
ಈ ಶಾಖೆಗಳನ್ನು ಮಹಿಳೆಯರು ಉದ್ಯಮ ವಲಯದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಅನುಕೂಲವಾಗಲಿ ಎಂದು ಆರಂಭಿಸಲಾಗಿದೆ. ಈ ಶಾಖೆಗಳು ಸಾಲ ಸಲಭ್ಯಗಳ ಹೊರತಾಗಿ ಕೌಶಲ್ಯ ಅಭಿವೃದ್ಧಿ, ತರಬೇತಿ, ಸಲಹೆಗಳನ್ನು ನೀಡುವ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಈ ಮುಖಾಂತರ ಉದ್ಯಮವನ್ನು ತೆರೆಯಲು ಸ್ಟಾರ್ಟ್ ಅಪ್‌ಗಳನ್ನು ಸಾಧಿಸಲು ಕಾರ್ಯಾಗಾರವನ್ನು ಸಹ ನಡೆಸುತ್ತವೆ. ಅಲ್ಲದೆ ನೆಟ್‌ವರ್ಕಿಂಗ್ ಅವಕಾಶವನ್ನು ನೀಡುತ್ತವೆ. ಅಗತ್ಯವಿದ್ದಾಗ ಮಹಿಳಾ ಉದ್ಯಮಿಗಳಿಗೆ ತರಬೇತಿ ಹಾಗೂ ಉದಮ್ಯದಲ್ಲಿ ಸಹಯೋಗವನ್ನು ಬೆಳೆಸುವುದರ ಜೊತೆಗೆ, ಈ ಕೇಂದ್ರಗಳು ಮಹಿಳಾ ಉದ್ಯಮಿಗಳಿಗೆ ಸಮಗ್ರ ಬೆಂಬಲವನ್ನು ನೀಡುತ್ತವೆ.
ಮಹಿಳಾ ಉದ್ಯಮಿಗಳು ಅನುಭವಿಸುತ್ತಿದ್ದ ಹಣಕಾಸಿನ ತೊಂದರೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಸೇರಿದಂತೆ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಪ್ರಯತ್ನವಾಗಿದೆ. ಲಿಂಗ ಸಮಾನತೆಯ ವಿಶಾಲ ದೃಷ್ಟಿಗೆ ಕೊಡುಗಡೆ ನೀಡುವಲ್ಲಿ ಇಂತಹ ಯೋಜನೆಗಳು ಮಹತ್ವ ಪಡೆಡಿವೆ. ಅಲ್ಲದೆ ಈ ಯೋಜನೆಗಳ ಮುಖಾಂತರ ಮಹಿಳಾ ಉದ್ಯಮಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುರಿಯನ್ನು ಸಹ ಹೊಂದಲಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾರಿ ಶಕ್ತಿ ಶಾಖೆಯು ಸಮಾಜದ ಮುಖ್ಯವಾಹಿನಿಯೊಂದಿಗೆ ಮಹಿಳೆಯರನ್ನು ನೇರವಾಗಿ ಸಂಪರ್ಕಿಸುವಲ್ಲಿ ಒಂದು ಮೈಲಿಗಲ್ಲಾಗಿ ಸಾಬೀತಾಗುತ್ತಿದೆ. ಮಹಿಳೆಯರು ಸಮಾಜದಲ್ಲಿ ಸದೃಢ ಸ್ಥಾನವನ್ನು ಹೊಂದುವಂತೆ ಮಾಡಲು ಈ ಶಾಖೆಗಳು ಬೆಂಬಲವನ್ನು ನೀಡುತ್ತವೆ. ಭಾರತದಲ್ಲಿ ಮಹಿಳಾ ಸಬಲೀಕರಣ ವೇಗವನ್ನು ಪಡೆದುಕೊಳ್ಳುತ್ತಿದೆ. ಇವುಗಳನ್ನು ಬಳಸಿಕೊಂಡು ಈಗಾಗಲೇ ದೇಶದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಈ ಯೋಜನೆಗಳ ಮೂಲಕ ಮಹಿಳೆಯರು ಉದ್ಯಮಿಗಳಾಗುತ್ತಿದ್ದಾರೆ. ಸರ್ಕಾರ ನೀಡುತ್ತಿರುವ ಯೋಜನೆಗಳ ಲಾಭವನ್ನು ಪಡೆದು ಮಹಿಳಾ ಉದ್ಯಮಿಗಳು ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದುತ್ತಿದ್ದಾರೆ. ಈ ಯೋಜನೆಯ ಲಾಭವನ್ನು ಮಹಿಳೆಯರು ಪಡೆದ ದೇಶದ ಪ್ರಗತಿಗೆ ಸಾಥ್ ನೀಡುತ್ತಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications