ಇಂದಿನ ಕಾಲದಲ್ಲಿ ಕೇವಲ ಉದ್ಯೋಗವೊಂದರಿಂದಲೇ ಸಂಪತ್ತಿನ ಹೆಚ್ಚಳ ಸಾಧ್ಯವಿಲ್ಲ, ಬದಲಾಗಿ ಸೂಕ್ತ ರೀತಿಯಲ್ಲಿ ಸಲಹೆ ಪಡೆದು ಹೂಡಿಕೆಯತ್ತಲೂ ಮನಸ್ಸು ಮಾಡಬೇಕೆನ್ನುವುದು ಬಹುತೇಕ ಎಲ್ಲಾ ಆರ್ಥಿಕ ತಜ್ಞರ ಅಭಿಮತ. ಆದರೆ ಯಾವ ಸಂಸ್ಥೆಯಲ್ಲಿ, ಎಷ್ಟು ಹಾಗೂ ಯಾವ ಹೂಡಿಕೆ ಮಾಡಬೇಕೆನ್ನುವುದು ಬಹುತೇಕರಿಗೆ ತಿಳಿದಿರದ ಸಂಗತಿ. ಅದೇ ರೀತಿಯಲ್ಲಿ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕವೂ ಜನರು ತಮ್ಮ ಸಂಪತ್ತಿನ ವೃದ್ದಿ ಮಾಡಬಹುದು.
ಏನಿದು ಎಸ್‌ಐಪಿ?
ಹೆಸರೇ ಹೇಳುವಂತೆ ಇದೊಂದು ವ್ಯವಸ್ಥಿತ ಹೂಡಿಕೆ ಯೋಜನೆಯಾಗಿದೆ. ಎಸ್‌ಐಪಿಯು ಹೂಡಿಕೆದಾರರಿಗೆ ಮ್ಯೂಚ್‌ವಲ್ ಫಂಡ್‌ಗಳಲ್ಲಿ ನಿಯಮಿತವಾಗಿ ಸ್ಥಿರ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದರಂತೆ ನಿಗದಿತ ಮೊತ್ತವನ್ನು ಪ್ರತೀ ತಿಂಗಳು ಹೂಡಿಕೆ ಮಾಡುವುದೇ ಆಗಿದೆ. ಇದರಿಂದ ಶಿಸ್ತುಬದ್ಧ ಹೂಡಿಕೆಯ ಉತ್ತೇಜನ ಹಾಗೂ ಕಾಲಾನಂತರದಲ್ಲಿ ಸಂಭಾವ್ಯ ಸಂಪತ್ತಿನ ಕ್ರೋಢೀಕರಣ ಕೂಡ ಇದು ಪ್ರೋತ್ಸಾಹಿಸುತ್ತದೆ.

ಹೆಚ್ಚುತ್ತಿರುವ ಎಸ್‌ಐಪಿ ಹೂಡಿಕೆ
ಇನ್ನು ಎಎಂಎಫ್‌ಐ ನ ದಾಖಲೆ ಪ್ರಕಾರ ಸೆಪ್ಟೆಂಬರ್‌ನಲ್ಲಿ ಎಸ್‌ಐಪಿ ದಾಖಲೀಕರಣ ಪ್ರಕ್ರಿಯೆಯೇ ಕೂಡ ಭಾರೀ ಹೆಚ್ಚಳವಾಗಿರುವುದನ್ನು ತೋರಿಸಿದೆ. ಮಾಸಿಕ ಎಸ್‌ಐಪಿ ಕೊಡುಗೆಯು ಕಳೆದ ಆಗಸ್ಟ್‌ನಲ್ಲಿ ಸುಮಾರು 23,547 ಕೋಟಿ ರೂ.ನಷ್ಟಿದ್ದರೆ ಈ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಬರೊಬ್ಬರಿ 24,508 ಕೋಟಿ ರೂ.ಗೆ ಏರಿಕೆ ಕಂಡಿದೆ. ಈ ಮೂಲಕ ಹೊಸ ಎಸ್‌ಐಪಿ ದಾಖಲೀಕರಣವು ಸಂಖ್ಯೆಯು 6,638,857 ಗೆ ಹೆಚ್ಚಳವಾಗಿದೆ. ಅಲ್ಲದೆ ಇದೇ ಅವಧಿಯಲ್ಲಿ ಎಸ್‌ಐಪಿ ಎಯುಎಮ್ ಪ್ರಮಾಣವು ಸಾರ್ವಕಾಲಿಕ 13.81 ಲಕ್ಷ ಕೋಟಿ ರೂ.ಗೆ ಹೆಚ್ಚಿದೆ.
ರಿಟೈಲ್ ಹೂಡಿಕೆದಾರರಲ್ಲಿ ಹೆಚ್ಚುತ್ತಿರುವ ನಂಬಿಕೆ
ಇನ್ನು ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿನ ಏರಿಕೆಯು ರಿಟೈಲ್ ಅಂದರೆ ಚಿಲ್ಲರೆ ಹೂಡಿದಾರರ ನಂಬಿಕೆಯ ಮನೋಭಾವವನ್ನು ಕೂಡ ಬಿಂಬಿಸುತ್ತದೆ. ಅಲ್ಲದೆ ಒಂದನೇ ಶ್ರೇಣಿಯ ನಗರಗಳಲ್ಲಿ ಮ್ಯೂಚುಯಲ್ ಫಂಡ್‌ಗಳ ಜನಪ್ರಿಯತೆಯನ್ನು ಹೆಚ್ಚಿಸಿದೆ. ಅದೂ ಅಲ್ಲದೆ ವಿವಿಧ ಹೊಸ ವಿಭಾಗಗಳೊಂದಿಗೆ ವಿಸ್ತರಿಸುತ್ತಿರುವ ಉದ್ಯಮವು SIP ಸಂಖ್ಯೆಗಳನ್ನು ಇನ್ನಷ್ಟು ಹೆಚ್ಚಿಸಲು ನೆರವು ನೀಡಿದೆ.
ದೊಡ್ಡ ಮೊತ್ತದ ಹೂಡಿಕೆ ಸಾಧ್ಯವಿಲ್ಲ
ಇನ್ನು ಎಸ್‌ಐಪಿ ಯಲ್ಲಿ ಒಂದೇ ಹಂತದಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಾಧ್ಯವಿಲ್ಲ. ಬದಲಾಗಿ ಹಲವು ವರ್ಷಗಳ ಅವಧಿಯಲ್ಲಿ ಒಂದು ನಿಗದಿತ ಪ್ರಮಾಣದ ಮೊತ್ತವನ್ನು ಪಡೆಯಲು ಬಯಸುವವರಿಗೆ ಉಪಯುಕ್ತವಾಗಿದೆ. ಹಾಗಾಗಿ ಈ ಹಿನ್ನೆಲೆಯಲ್ಲಿ ಈ ವೈಶಿಷ್ಟ್ಯವು ಮ್ಯೂಚುವಲ್ ಫಂಡ್‌ಗಳಲ್ಲಿ SIP ಹೂಡಿಕೆ ಮಾಡಲು ಹೆಚ್ಚಿನ ಸಂಖ್ಯೆಯ ಚಿಲ್ಲರೆ ಹೂಡಿಕೆದಾರರನ್ನು ಆಕರ್ಷಿಸಿದೆ. ಅದರಲ್ಲೂ ವಿವಿಧ ಸಮಯಗಳಲ್ಲಿ NAV ಗಳನ್ನು ವಿವಿಧ ಪ್ರಮಾಣದಲ್ಲಿ ಖರೀದಿಸುವ ಮೂಲಕ SIP ಗಳು ಸರಾಸರಿ ವೆಚ್ಚವನ್ನು ಹತೋಟಿಗೆ ತರುತ್ತವೆ.
ಇದರಿಂದ ಸಂಯೋಜಿತ ಆದಾಯದ ಲಾಭ ಕೂಡ ನೀಡುತ್ತದೆ. ಅಂದರೆ ಹೂಡಿಕದಾರರ ಮಾಸಿಕ ಎಸ್‌ಐಪಿ ಸಣ್ಣ ಮೊತ್ತವನ್ನು ಹೊಂದಿದ್ದರೂ ದೀರ್ಘಾವಧಿಯಲ್ಲಿ ಹೆಚ್ಚಿನ ಮೊತ್ತವನ್ನು ಪಡೆಯಲು ಸೂಕ್ತವಾಗಿದೆ. ಸ್ಥಿರವಾದ ಹೂಡಿಕೆಯ ಮೂಲಕ ಹೂಡಿಕೆದಾರರು ತಮ್ಮ ಮಾಸಿಕ SIP ಸಣ್ಣ ಮೊತ್ತವನ್ನು ಹೊಂದಿದ್ದರೂ ಕೂಡ ದೀರ್ಘಾವಧಿಯಲ್ಲಿ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಬಹುದು. ಇದು ಪರಿಣಾಮಕಾರಿ ತಂತ್ರವಾಗಿದ್ದು, ಕಾಲಾನಂತರದಲ್ಲಿ ನಮ್ಮ ಹೂಡಿಕೆಗಳನ್ನು ಹೆಚ್ಚಿಸಲು ನೆರವಾಗುತ್ತದೆ.
ಲೆಕ್ಕಾಚಾರಗಳತ್ತ ಒಮ್ಮೆ ನೋಡೋಣ
ಇನ್ನು ಸಂಯೋಜಿತ ವಾರ್ಷಿಕ ಬೆಳವಣಿಗೆ ದರ ಅಥವಾ ಸಿಎಜಿಆರ್ 14 ಪ್ರತಿಶತ ಎಂದು ಊಹಿಸಿಕೊಂಡರೆ ತಿಂಗಳಿಗೆ 2,000, 3,000 ಮತ್ತು 5000 ರೂಪಾಯಿಗಳನ್ನು ಹೂಡಿಕೆ ಮಾಡುವಾಗ ಎಷ್ಟು ಸಮಯದಲ್ಲಿ 1 ಕೋಟಿ ರೂಪಾಯಿ ಹೂಡಿಕೆಯ ಕಾರ್ಪಸ್ ಗುರಿಯನ್ನು ತಲುಪಬಹುದು ಎಂಬುದನ್ನು ಈ ಲೆಕ್ಕಾಚಾರಗಳಿಂದ ನೋಡೋಣ.
ಉದಾಹರಣೆ 1:
2,000 ರೂ. ಮಾಸಿಕ SIP
ಆದಾಯದ ದರ: 14 ಪ್ರತಿಶತ
30 ವರ್ಷಗಳಲ್ಲಿ ಒಟ್ಟು ಹೂಡಿಕೆ: 7,20,000 ರೂ.
ಒಟ್ಟು ಅಂದಾಜು ಆದಾಯ: 1,03,94,111 ರೂ.
ಒಟ್ಟು ಮೌಲ್ಯ: 1,11,14,111 ರೂ.
ಇನ್ನು ಇದರ ಪ್ರಕಾರ ಒಂದು ವೇಳೆ ನೀವು ತಿಂಗಳಿಗೆ 2,000 ರೂಪಾಯಿಗಳನ್ನು ಹೂಡಿಕೆ ಮಾಡಿ, 14% ಪ್ರತಿಶತ ಸಂಯೋಜಿತ ವಾರ್ಷಿಕ ಬೆಳವಣಿಗೆ ದರವನ್ನು ಪಡೆದುಕೊಂಡರೆ ಮೊತ್ತವು 1 ಕೋಟಿ ರೂಪಾಯಿಗಿಂತ ಹೆಚ್ಚು ಪಡೆಯಲು 30 ವರ್ಷಗಳ ಸಮಯ ಹಿಡಿದುಕೊಳ್ಳುತ್ತದೆ.
ಉದಾಹರಣೆ 2:
3,000 ರೂ.ನ ಮಾಸಿಕ SIP
ಆದಾಯದ ದರ: 14 ಪ್ರತಿಶತ
27 ವರ್ಷಗಳಲ್ಲಿ ಒಟ್ಟು ಹೂಡಿಕೆ: 9,72,000 ರೂ.
ಒಟ್ಟು ಅಂದಾಜು ಆದಾಯ: 99,19,599 ರೂ.
ಒಟ್ಟು ಮೌಲ್ಯ: 1,08,91,599 ರೂ.
ಇದರಂತೆ ಒಂದು ವೇಳೆ ನೀವು 2,000 ರೂಪಾಯಿಗಳನ್ನು ಹೂಡಿಕೆ ಮಾಡಿ, 14 ಪ್ರತಿಶತದಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆ ದರ ಪಡೆದುಕೊಂಡರೆ 1 ಕೋಟಿ ರೂಪಾಯಿಗಿಂತ ಹೆಚ್ಚು ಪಡೆಯಲು 27 ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ.


Click it and Unblock the Notifications