ಯಾವುದೇ ಉದ್ಯಮ ಅಥವಾ ವ್ಯವಹಾರ ನಡೆಸಲು ಹಣದ ಅವಕಾಶ ಇರುವುದು ಸಾಮಾನ್ಯವಾಗಿದೆ. ಹೀಗೆ ಹಣದ ಅವಕಾಶ ಇರುವಾಗ ಜನರು ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಗಳತ್ತ ಮುಖಮಾಡುತ್ತಾರೆ. ಆದರೆ ಇವುಗಳಲ್ಲಿ ಯಾವುದೇ ಹಣದ ನೆರವು ಲಭಿಸದೇ ಇದ್ದಾಗ, ಅಂಥವರಿಗೆಂದೇ ಸದ್ಯ ಹಲವು ಅನೇಕ ಸಾಲದ ಅಪ್ಲಿಕೇಶನ್‌ಗಳು ಹುಟ್ಟಿಕೊಂಡಿದೆ. ಮೂಲಗಳ ಪ್ರಕಾರ ಇವುಗಳೆಲ್ಲವೂ ಚೀನಾ ಮೂಲವನ್ನು ಹೊಂದಿದ್ದು, ಎನ್ನಲಾಗಿದೆ. ಇವುಗಳ ಭಾರೀ ಅಪಾಯಕಾರಿ ಕೂಡ ಆಗಿದೆ. ಸಾಲ ಅಪ್ಲಿಕೇಶನ್‌ಗಳ ಮೂಲಕ ಸಾಲ ಪಡೆದವರು ಕೊನೆಗೆ ಸಾಲದ ಬಡ್ಡಿಗೆ ಹಣ ಹೊಂದಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಕೂಡ ಸಾಕಷ್ಟಿದೆ. ಸದ್ಯ ಇದಕ್ಕೆಲ್ಲಾ ಅಂಕುಶ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಅನಿಯಂತ್ರಿತ ಆ್ಯಪ್ ಸಾಲಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸುತ್ತಿದೆ. ಈ ಕಾನೂನು ಅಡಿ ಅಪರಾಧಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಈ ಮಸೂದೆಯ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು 2025ರ ಫೆಬ್ರವರಿ 13ರವರೆಗೆ ಸಂಗ್ರಹಿಸಲಾಗುತ್ತಿದೆ.
ಹೊಸ ಕಾನೂನು ಪರಿವಯಿಸಿದ ಕೇಂದ್ರ ಸರ್ಕಾರ
ಸದ್ಯ ಅನಿಯಂತ್ರಿತ ಸಾಲದ ಆಪ್‌ಗಳಿಂದ ಹಲವಾರು ಕಹಿ ಘಟನೆಗಳು ಭಾರತದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಕಠಿಣ ಕ್ರಮಗಳನ್ನು ಹೊಂದಿರುವ ಪ್ರಸ್ತಾಪವನ್ನು ಹೊರತಂದಿದೆ. ಆ್ಯಪ್ ಸಾಲ ಸೇರಿ ಅನಿಯಂತ್ರಿತ ಸಾಲಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದ್ದು, ಈ ಸಂಬಂಧ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ. ಇದರ ಪ್ರಕಾರ ಅಪರಾಧಿಗಳಿಗೆ 10 ವರ್ಷ ಸೆರೆವಾಸ ಹಾಗೂ ದಂಡ ವಿಧಿಸಲಾಗುವುದು. ಅನಿಯಂತ್ರಿತ ಸಾಲವನ್ನು ನಿಯಂತ್ರಿಸುವ ಸಲುವಾಗಿ ರಚಿಸಲಾಗಿದ್ದ ಆರ್‌ಬಿಐನ ತಂಡ 2021ರ ನವೆಂಬರ್‌ನಲ್ಲಿ ವರದಿ ಸಲ್ಲಿಸಿದೆ. ಇದರಲ್ಲಿ ವ್ಯಕ್ತಿಗಳು ಅಥವಾ ಕಂಪನಿಗಳು ನೀಡುವ ಅನಿಯಂತ್ರಿತ ಸಾಲ ನಿಷೇಧಿಸುವ ಕಾನೂನು ಸೇರಿದಂತೆ ಕೆಲ ಕ್ರಮಗಳನ್ನು ಸೂಚಿಸಲಾಗಿದೆ.

ಪ್ರಸ್ತಾವಿತ ಕಾನೂನು ಏನು ಹೇಳುತ್ತದೆ?
ಪ್ರಸ್ತಾವಿತ ಹೊಸ ಕಾನೂನಿನ ಪ್ರಕಾರ ಡಿಜಿಟಲ್ ಅಥವಾ ಯಾವುದೇ ರೂಪದಲ್ಲಿ ಅನಿಯಂತ್ರಿತ ಸಾಲ ವ್ಯವಹಾರದಲ್ಲಿ ತೊಡಗಿದವರಿಗೆ ಕನಿಷ್ಠ 2 ವರ್ಷ, ಗರಿಷ್ಠ 7 ವರ್ಷ ಸೆರೆವಾಸ, 2 ಲಕ್ಷದಿಂದ 1 ಕೋಟಿ ರು. ವರೆಗೆ ದಂಡ ವಿಧಿಸಲಾಗುವುದು. ಸಾಲ ತೆಗೆದುಕೊಂಡವರ ಶೋಷಣೆ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಸಾಲ ವ್ಯವಹಾರದಲ್ಲಿ ತೊಡಗಿದವರು ಅಥವಾ ಅವರ ಆಸ್ತಿಗಳು ವಿವಿಧ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿದ್ದರೆ, ಇಲ್ಲವೇ, ಸಾಲದ ಮೊತ್ತ ಅತ್ಯಧಿಕವಿದ್ದರೆ ಆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಲಾಗುವುದು. ಸಂಬಂಧಿತರು ಹೊಸ ಮಸೂದೆಯಾದ ಬುಲಾ(ಅನಿಯಂತ್ರಿತ ಸಾಲ) ಬಗ್ಗೆ 2025ರ ಫೆ.13ರ ಒಳಗೆ ಅಭಿಪ್ರಾಯಗಳನ್ನು ತಿಳಿಸಬಹುದು.
ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು
ಅನಿಯಂತ್ರಿತ ಸಾಲದ ಅಪ್ಲಿಕೇಶನ್‌ಗಳಿಂದ ಅತೀ ಸುಲಭವಾಗಿ ಯಾವುದೇ ದಾಖಲಾತಿ ಅಥವಾ ಕಾಯುವ ಅಗತ್ಯವಿಲ್ಲದೆ ಸಾಲ ಸೌಲಭ್ಯಗಳು ಸಿಗುವ ಹಿನ್ನೆಲೆಯಲ್ಲಿ ಹೆಚ್ಚಿನ ಯುವಜನತೆ ಇದರತ್ತ ಮುಖಮಾಡುತ್ತಿದ್ದಾರೆ. ಆದರೆ ಸಮಯ ಕಳೆದಂತೆಲ್ಲಾ ಕೊಟ್ಟ ಸಾಲಕ್ಕೆ ವಿಧಿಸಲಾಗುವ ಅತೀ ದೊಡ್ಡ ಬಡ್ಡಿದರಗಲಿಂದ ಸಾಲ ಮರುಪಾವತಿ ಮಾಡುವಲ್ಲಿ ತೊಡಕುಂಟು ಮಾಡುತ್ತದೆ. ಇನ್ನು ತೀರಾ ಇತ್ತೀಚಿನ ಪ್ರಕರಣದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆಯಾದ 47 ದಿನಕ್ಕೆ ಯುವಕನೊಬ್ಬ ಈ ಲೋನ್ ಆಪ್‌ಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಅತೀ ವೇಗದ ಲೋನ್ ಆಪ್‌ನಿಂದ 2 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ ಆತ. ಸಾಲ ತೆಗೆದುಕೊಂಡಿದ್ದ ಮೊತ್ತವನ್ನು ವಾಪಾಸ್ ಕಟ್ಟಿದ್ದ. ಆದರೆ, ದೊಡ್ಡ ಮಟ್ಟದ ಬಡ್ಡಿ ಕಟ್ಟುವಂತೆ ನಿರಂತರವಾಗಿ ಲೋನ್ ಆಪ್‌ನಿಂದ ಕಿರುಕುಳ ಎದುರಿಸಿದ್ದ 37 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಇಂಥ ನಿದರ್ಶನಗಳು ಇಡೀ ಭಾರತದಲ್ಲಿ ವರದಿಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಅಪ್ಲಿಕೇಶನ್‌ಗಳು ಚೀನಾ ಮೂಲದಿಂದ ನಿಯಂತ್ರಿಸಲ್ಪಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂಥ ಅಪ್ಲಿಕೇಶನ್‌ಗಳ ವಿರುದ್ದ ಕಠಿಣ ಕಾನೂನಿಗೆ ಮುಂದಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications