2025ರಲ್ಲಿ ಕಮಾಲ್ ಮಾಡಲಿದೆ UPI: ಮತ್ತಷ್ಟು ದೇಶದಲ್ಲಿ ಬಳಕೆಗೆ ಲಭ್ಯ

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅಥವಾ ಭಾರತದಲ್ಲಿ ಯುಪಿಐ ಎಂಬ ಸಂಸ್ಥೆ ದೇಶದ ಡಿಜಿಟಲ್‌ ಪಾವತಿ ವ್ಯವಸ್ಥೆಯಲ್ಲಿ ಯಾವ ರೀತಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿವೆ ಎಂದು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. NPCI ಮಾಡಿರುವ ಕ್ರಾಂತಿಯಿಂದಾಗಿ ಭಾರತದಲ್ಲಿ ಸದ್ಯ ಅತೀ ಹೆಚ್ಚು ಡಿಜಿಟಲ್‌ ಪಾವತಿಗಳಾಗುತ್ತಿದೆ. ಕೇವಲ ಭಾರತದಲ್ಲೇ ಅಲ್ಲದೆ ಯುರೋಪ್‌ನ ಫ್ರಾನ್ಸ್‌ ಸೇರಿದಂತೆ ಹಲವಾರು ದೇಶಗಳಲ್ಲೂ ಯುಪಿಐ ವ್ಯವಸ್ಥೆ ಜಾರಿಯಾಗಿದ್ದು, ಭಾರತದ ಡಿಜಿಟಲ್‌ ಪರಾಕ್ರಮಕ್ಕೆ ಸಾಕ್ಷಿ ಎಂಬಂತಿದೆ. ಸದ್ಯ ಮುಂದಿನ ವರ್ಷದಿಂದ ಹೆಚ್ಚುವರಿ ನಾಲ್ಕರಿಂದ ಆರು ರಾಷ್ಟ್ರಗಳಿಗೂ ವಿಸ್ತರಿಸಲು ಸಜ್ಜಾಗಿದ್ದು, ಈ ಮೂಲಕ ಭಾರತದ ಶಕ್ತಿ ಇನ್ನಷ್ಟು ರಾಷ್ಟ್ರಗಳಿಗೂ ಹಬ್ಬಲು ಸಿದ್ದವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ NPCI ಸಿಇಒ ರಿತೇಶ್ ಶುಕ್ಲಾ, ಭಾರತದಲ್ಲಿ NPCI ಅತ್ಯಂತ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ನಾವು ಭಾರತದ ಹೊರಗೆ ಪಾಲುದಾರರನ್ನು ಹೊಂದಿದ್ದೇವೆ. ಅವರು ಯೋಜನೆಗಳನ್ನು ಪೂರ್ಣಗೊಳಿಸಲು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ. ಯೋಜನೆಗಳು ಸಮಯಕ್ಕೆ ಪೂರ್ಣಗೊಂಡರೆ ಮುಂದಿನ ವರ್ಷ ನಾವು ಇನ್ನೂ 3-4 ದೇಶಗಳಲ್ಲಿ ಇದನ್ನು ಆರಂಭಿಸುವ ಭರವಸೆ ಹೊಂದಿದ್ದೇವೆ. UPI ಅನ್ನು ಅಂತರಾಷ್ಟ್ರೀಯವಾಗಿ ಬಳಸುವ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ ನೀಡಲು ನಾವು ಭಾರತದಲ್ಲಿನ ಬ್ಯಾಂಕ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ, ಬಳಕೆದಾರರು ವಿದೇಶಿ ಮಾರುಕಟ್ಟೆಗಳಿಗೆ ಬಂದಂತೆ ಅಧಿಸೂಚನೆಗಳನ್ನು ರಚಿಸಲು ಫಿನ್‌ಟೆಕ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ನಾವು ಅಂತಾರಾಷ್ಟ್ರೀಯ ಟರ್ಮಿನಲ್‌ಗಳಲ್ಲಿ ಆರು ವಿಮಾನ ನಿಲ್ದಾಣಗಳಿಗೆ ಕೂಡ ವಿಸ್ತರಿಸುತ್ತಿದ್ದೇವೆ. ಈ ವ್ಯವಸ್ಥೆಗಳು ಸಿದ್ಧವಾದ ನಂತರ ಮೂಲಸೌಕರ್ಯ ಮಟ್ಟದಲ್ಲಿ, ದೇಶೀಯ ಪಾವತಿ ಅಗತ್ಯಗಳಲ್ಲಿ ನಾವು ಇತರ ದೇಶಗಳಿಗೆ ಸಾರ್ವಭೌಮರಾಗಲು ಸಹಾಯ ಮಾಡುತ್ತಿದ್ದೇವೆ. ದ್ವಿಪಕ್ಷೀಯ ಆಧಾರದ ಮೇಲೆ ಗಡಿಯಾಚೆಗಿನ ಹರಿವನ್ನು ಪೂರೈಸಲು ನಾವು ಅವುಗಳನ್ನು ಭಾರತದೊಂದಿಗೆ ಸಂಪರ್ಕಿಸಲು ನೋಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಏಳು ರಾಷ್ಟ್ರಗಳಲ್ಲಿ ಅಸ್ವಿತ್ವ ಹೊಂದಿರುವ ಯುಪಿಐ

ಇನ್ನು ಎಲ್ಲರಿಗೂ ತಿಳಿದಿರುವಂತೆ ಭಾರತವಲ್ಲದೆ ಭೂತಾನ್, ಮಾರಿಷಸ್, ನೇಪಾಳ, ಸಿಂಗಾಪುರ, ಶ್ರೀಲಂಕಾ ಮತ್ತು ಫ್ರಾನ್ಸ್ ಸೇರಿದಂತೆ ಏಳು ರಾಷ್ಟ್ರಗಳಲ್ಲಿ UPI ಪಾವತಿ ವ್ಯವಸ್ಥೆಯನ್ನು ಹೊಂದಿದೆ. BHIM, PhonePe, Paytm ಮತ್ತು Google Pay ನಂತಹ 20ಕ್ಕೂ ಅಧಿಕ ಮೂರನೇ ವೇದಿಕೆಗಳು ಈ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಎಲ್ಲರಿಗೂ ತಿಳಿದಿರುವಂತೆ ಭಾರತದ ರಾಷ್ಟ್ರೀಯ ಪಾವತಿಗಳ ನಿಗಮದ (NPCI) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಕತಾರ್, ಥೈಲ್ಯಾಂಡ್ ಮತ್ತು ಆಗ್ನೇಯ ಏಷ್ಯಾದ ಪ್ರದೇಶ ಸೇರಿದಂತೆ ಭಾರತೀಯ ಪ್ರಯಾಣಿಕರಿಗೆ ಮಹತ್ವದ ಪ್ರದೇಶಗಳಲ್ಲಿ UPI ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. UPI ಸೇವೆಗಳನ್ನು ಇತರ ರಾಷ್ಟ್ರಗಳಿಗೆ ವಿಸ್ತರಿಸುವುದರ ಜೊತೆಗೆ ಭಾರತದ ನೈಜ-ಸಮಯದ ಪಾವತಿಯ ಚೌಕಟ್ಟಿನಂತೆಯೇ ಪಾವತಿ ವ್ಯವಸ್ಥೆಯನ್ನು ರಚಿಸಲು ಪೆರು, ನಮೀಬಿಯಾ, ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋದಂತಹ ದೇಶಗಳೊಂದಿಗೆ ಅಂತಾರಾಷ್ಟ್ರೀಯ ಪಾವತಿಗಳ ಸಂಸ್ಥೆಯು ಸಹಕರಿಸಿದೆ.

ಮುಂದಿನ ವರ್ಷ ಮತ್ತಷ್ಟು ರಾಷ್ಟ್ರಗಳಿಗೆ ಯುಪಿಐ ವಿಸ್ತರಣೆ

ಅಂತಾರಾಷ್ಟ್ರೀಯ ಅಪ್ಲಿಕೇಶನ್‌ಗಳ ಮೇಲೆ ಚಿತ್ತ

NIPL ವಿಶೇಷವಾಗಿ ಪೀರ್-ಟು-ಪೀರ್ (P2P) ಮತ್ತು ಪೀರ್-ಟು-ಮರ್ಚೆಂಟ್ (P2M) ವಹಿವಾಟುಗಳ ಕ್ಷೇತ್ರಗಳಲ್ಲಿಅಂತರಾಷ್ಟ್ರೀಯ ಅಪ್ಲಿಕೇಶನ್‌ಗಳ ಮೇಲೆ ಕೇಂದ್ರೀಕರಿಸುತ್ತಿದೆ. P2P ವಹಿವಾಟುಗಳಿಗೆ ಸಂಬಂಧಿಸಿದಂತೆ ಇದು ಭಾರತದಲ್ಲಿ UPI ವ್ಯವಸ್ಥೆಯನ್ನು ಹೋಲುತ್ತದೆ. NIPL ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಉಪಕ್ರಮಗಳನ್ನು ಒಳಗೊಳ್ಳುವ ಡ್ಯುಯಲ್ ವಿಧಾನವನ್ನು ಕಾರ್ಯಗತಗೊಳಿಸುತ್ತಿದೆ. ಈಗಾಗಲೇ NIPL ತನ್ನ ದ್ವಿಪಕ್ಷೀಯ ಉಪಕ್ರಮಗಳ ಭಾಗವಾಗಿ ಸಿಂಗಪುರದಲ್ಲಿ ಅಲ್ಲಿನ PayNow ನೊಂದಿಗೆ ಭಾರತದಲ್ಲಿ UPI ಅನ್ನು ಯಶಸ್ವಿಯಾಗಿ ಜೋಡಿಸಿದೆ. ಹೆಚ್ಚುವರಿಯಾಗಿ, ಯುಪಿಐಗೆ ಸಮಾನಾಂತರವಾಗಿರುವ ಯುಎಇಯ ಕ್ಷಿಪ್ರ ಪಾವತಿ ವ್ಯವಸ್ಥೆಯಾದ ಆನಿಯೊಂದಿಗೆ ಕಂಪನಿನಿಯೊಂದಿಗೆ ತೊಡಗಿಸಿಕೊಂಡಿದೆ. ಬಹುಪಕ್ಷೀಯ ಘಟಕವು ಪ್ರಾಜೆಕ್ಟ್ ನೆಕ್ಸಸ್‌ನಂತಹ ಉಪಕ್ರಮಗಳನ್ನು ಒಳಗೊಂಡಿದ್ದು, ಇದು ಬ್ಯಾಂಕ್ ಫಾರ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್ಸ್ (BIS) ನೊಂದಿಗೆ ಸಂಯೋಜಿತವಾಗಿದೆ. ವಿವಿಧ ರಾಷ್ಟ್ರಗಳ ತ್ವರಿತ ಪಾವತಿ ವ್ಯವಸ್ಥೆಗಳನ್ನು (IPS) ಲಿಂಕ್ ಮಾಡುವ ಗುರಿಯನ್ನು ಹೊಂದಿರುವ ಈ ಯೋಜನೆಯನ್ನು ಮುನ್ನಡೆಸಲು BIS ಇನ್ನೋವೇಶನ್ ಹಬ್ ಭಾರತ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್ ಮತ್ತು ಥೈಲ್ಯಾಂಡ್‌ನ ಕೇಂದ್ರೀಯ ಬ್ಯಾಂಕ್‌ಗಳೊಂದಿಗೆ ಸಹಕರಿಸುತ್ತಿದೆ.

ವೃದ್ದಿಸುತ್ತಿರುವ ಭಾರತದ ವರ್ಚಸ್ಸು

ಯುಪಿಐ ವ್ಯವಸ್ಥೆಯಿಂದ ಭಾರತದ ಜಾಗತಿಕ ವರ್ಚಸ್ಸು ಭಾರೀ ಪ್ರಮಾಣದಲ್ಲಿ ವೃದ್ದಿಯಾಗಿದ್ದು, ಸದ್ಯ ಬಹುತೇಕ ರಾಷ್ಟ್ರಗಳು ಕೂಡ ಇದನ್ನು ತನ್ನ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಅಳವಡಿಸುವ ಯೋಜನೆ ಹಾಕಿಕೊಂಡಿದೆ. ಈ ಮೂಲಕ ಭಾರತದ ತಂತ್ರಜ್ಞಾನಕ್ಕೆ ಮಣೆ ಹಾಕಿದಂತಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+