ನವದೆಹಲಿ, ಆಗಸ್ಟ್ 12: ಭಾರತವೂ ಮಾಲ್ಡೀವ್ಸ್ ನೊಂದಿಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ( UPI) ಪರಿಚಯಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಮಾಲ್ಡೀವ್ಸ್ ದೇಶದ ಪ್ರವಾಸೋದ್ಯಮ ಕ್ಷೇತ್ರದ ಮೇಲೆ "ಅತ್ಯಂತ ಧನಾತ್ಮಕ" ಪರಿಣಾಮವನ್ನು ಬೀರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಎಸ್ ಜೈಶಂಕರ್ ಅವರು ಮಾಲ್ಡೀವ್ಸ್ ನ ಮೂರು ದಿನಗಳ ಅಧಿಕೃತ ಭೇಟಿಯ ಸಂದರ್ಭದಲ್ಲಿ ಶುಕ್ರವಾರ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು.
ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಜೈಶಂಕರ್ "ಮಾಲ್ಡೀ ನ್ಸ್ ನೊಂದಿಗೆ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪರಿಚಯಿಸುವ ಕುರಿತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಮಾಲ್ಡೀ ನ್ಸ್ ನ ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವಾಲಯದ ನಡುವೆ ಎಂಒಯುಗೆ ಸಾಕ್ಷಿಯಾಗಿದೆ" ಎಂದು ತಿಳಿಸಿದ್ದಾರೆ.

ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ, ಏಕೀಕೃತ ಪಾವತಿ ಇಂಟರ್ಫೇಸ್ ( UPI) ಮೊಬೈಲ್ ಫೋನ್ ಗಳ ಮೂಲಕ ಅಂತರ-ಬ್ಯಾಂಕ್ ವಹಿವಾಟುಗಳನ್ನು ಸುಲಭಗೊಳಿಸಲು ತ್ವರಿತ ರಿಯಲ್ ಟೈಮ್ ಪಾವತಿ ವ್ಯವಸ್ಥೆಯಾಗಿದೆ.
ಮಾಲ್ಡೀವ್ಸ್ ನಲ್ಲಿ ಜೈಶಂಕರ್ ಮಾಲ್ಡೀವಿಯನ್ ಕೌಂಟರ್ಪಾರ್ಟ್ ಜಮೀರ್ ಮೂಸಾ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಜೈಶಂಕರ್, "ಭಾರತವು ತನ್ನ ಯುಪಿಐ ಮೂಲಕ ಡಿಜಿಟಲ್ ವಹಿವಾಟುಗಳನ್ನು ಕ್ರಾಂತಿಕಾರಿಯಾಗಿಸಿದೆ" ಎಂದು ಹೇಳಿದ್ದಾರೆ.
ಭಾರತದಲ್ಲಿ ಯುಪಿಐ ಎನ್ನುವ ಆರ್ಥಿಕ ಸೇರ್ಪಡೆಯೂ ಹೊಸ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ಒತ್ತಿ ಹೇಳಿದ ಅವರು, "ಇಂದು ವಿಶ್ವದ ಶೇಕಡಾ 40ರಷ್ಟು ರಿಯಲ್ ಟೈಮ್ ಡಿಜಿಟಲ್ ಪಾವತಿಗಳು ನಮ್ಮ ದೇಶದಲ್ಲಿ ನಡೆಯುತ್ತಿವೆ" ಎಂದು ಹೇಳಿದ್ದಾರೆ.
"ನಾವು ಈ ಡಿಜಿಟಲ್ ಕ್ರಾಂತಿಯನ್ನು ನಮ್ಮ ಜೀವನದಲ್ಲಿ ಪ್ರತಿದಿನ ನೋಡುತ್ತಿದ್ದೇವೆ. ಇಂದು ಒಪ್ಪಂದ ಪತ್ರಕ್ಕೆ ಸಹಿ ಹಾಕುವುದರೊಂದಿಗೆ, ಈ ಡಿಜಿಟಲ್ ಆವಿಷ್ಕಾರವನ್ನು ಮಾಲ್ಡೀನ್ಸ್ ನಲ್ಲಿ ತರುವ ನಿಟ್ಟಿನಲ್ಲಿ ನಾವು ಮೊದಲ ಹೆಜ್ಜೆ ಇಟ್ಟಿದ್ದೇ ವೆ ಎಂದು ಹೇಳಲು ನನಗೆ ಸಂತೋಷವಾಗಿದೆ.ಎರಡೂ ಕಡೆಯ ಮಧ್ಯಸ್ಥಗಾರರಿಗೆ ನಾನು ಶುಭ ಹಾರೈಸುತ್ತೇನೆ, ನಾವು ಶೀಘ್ರದಲ್ಲೇ UPI ವಹಿವಾಟನ್ನು ಇಲ್ಲಿ ನೋಡಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ಇದು ಪ್ರವಾಸೋದ್ಯಮದ ಮೇಲೆ ಬಹಳ ಧನಾತ್ಮಕ ಪರಿಣಾಮ ಬೀರಲಿದೆ" ಎಂದು ಹೇಳಿದ್ದಾರೆ.
ಏಕೀಕೃತ ಪಾವತಿ ವ್ಯವಸ್ಥೆಯು ಹಲವು ಬ್ಯಾಂಕ್‌ಗಳು ಒಂದಾಗಿ ಹಣ ಪಾವತಿಗೆ ಮತ್ತು ವರ್ಗಾವಣೆಗೆ ಇರುವ ಬೇರೆ ಬೇರೆ ವ್ಯವಸ್ಥೆಗಳನ್ನು ಏಕೀಕರಿಸಿ ಮಾಡಿದ ಒಂದು ಪಾವತಿ ವ್ಯವಸ್ಥೆ. ಯುಪಿಐ ಅನ್ನು 2016 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಪ್ರಾರಂಭಿಸಿತು. ಇದನ್ನು ಸ್ಮಾರ್ಟ್‌ಫೋನ್ ಮೂಲಕ ಬಳಸಬಹುದಾಗಿದೆ. ಯುಪಿಐ ಹಣವನ್ನು ವೇಗವಾಗಿ, ಸುರಕ್ಷಿತವಾಗಿ ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಮಾಡುವ ಮತ್ತು ಹಣವನ್ನು ಸ್ವೀಕೃತಿ ಕಾರಣಕ್ಕೆ ಈ ಒಂದು ವ್ಯವಸ್ಥೆ ಜನಮನ್ನಣೆ ಗಳಿಸಿದೆ.
ಈ ದೇಶಗಳು ಈಗ ಭಾರತೀಯರಿಂದ ಯುಪಿಐ ಪಾವತಿಗಳನ್ನು ಸ್ವೀಕರಿಸುತ್ತವೆ
ಮಾರಿಷಸ್: ಭಾರತೀಯ ಪ್ರವಾಸಿಗರು ಸ್ಥಳೀಯ ಪಾವತಿಗಳಿಗಾಗಿ ಯುಪಿಐ ಅನ್ನು ಬಳಸಬಹುದಾಗಿದೆ.
ಭೂತಾನ್: 2021 ಜುಲೈನಲ್ಲಿ ರಾಯಲ್ ಮಾನಿಟರಿ ಅಥಾರಿಟಿ ಸಹಯೋಗದೊಂದಿಗೆ BHIM UPI QR-ಆಧಾರಿತ ಪಾವತಿಗಳನ್ನು ಪರಿಚಯಿಸಲಾಗಿದೆ.
ಶ್ರೀಲಂಕಾ: ಭಾರತೀಯರು ಶ್ರೀಲಂಕದಲ್ಲಿ ತಮ್ಮ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಶ್ರೀಲಂಕಾದಲ್ಲಿ ವ್ಯಾಪಾರಿಗಳೊಂದಿಗೆ QR ಕೋಡ್ ಆಧಾರಿತ ಪಾವತಿಗಳನ್ನು ಮಾಡಬಹುದು.
ಒಮಾನ್: 2022ರ ಅಕ್ಟೋಬರ್ ನಲ್ಲಿ ಎನ್‌ಪಿಸಿಐ, ಎನ್‌ಐಪಿಎಲ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಓಮನ್ ನಡುವೆ ಸಹಿ ಮಾಡಲಾದ ಎಂಒಯು ಒಮಾನ್‌ನೆಟ್ ನೆಟ್‌ವರ್ಕ್ ಎಟಿಎಂಗಳು, ಪಿಒಎಸ್ ಮತ್ತು ಇ-ಕಾಮರ್ಸ್ ಸೈಟ್‌ಗಳಲ್ಲಿ ಭಾರತೀಯ ರುಪೇ ಕಾರ್ಡ್‌ಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.
ನೇಪಾಳ: ನೇಪಾಳಿ ಬಳಕೆದಾರರು ಮೊಬೈಲ್ ಬ್ಯಾಂಕಿಂಗ್ ಮೂಲಕ UPI ಐಡಿಗಳನ್ನು ಬಳಸಿಕೊಂಡು ಭಾರತಕ್ಕೆ ಬ್ಯಾಂಕ್ ವರ್ಗಾವಣೆಗಳನ್ನು ಮಾಡಬಹುದು.
ಫ್ರಾನ್ಸ್: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಈಗ ಅಧಿಕೃತವಾಗಿ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಸೇವೆಯನ್ನು ನೀಡುತ್ತದೆ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications