ಜನವರಿ 17 ರಂದು ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಆರಂಭ; ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ

ಬೆಂಗಳೂರಿನಲ್ಲಿ ಯುಎಸ್‌ ಕಾನ್ಸುಲೇಟ್‌ ಕಚೇರಿ ಆರಂಭಕ್ಕೆ ಬಹುದಿನಗಳಿಂದ ತಯಾರಿ ನಡೆಯುತ್ತಿದ್ದು, ಈಗ ಇದರ ಆರಂಭಕ್ಕೆ ಕಾಲಕೂಡಿ ಬಂದಿದೆ. ಬೆಂಗಳೂರಿನಲ್ಲಿ ಜನವರಿ 17 ರಂದು ಯುಎಸ್‌ ಕನ್ಸುಲೇಟ್‌ ಆರಂಭವಾಗಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆಯನ್ನ ನೀಡಿದ್ದಾರೆ.

"ನನ್ನ ಪ್ರೀತಿಯ ಬೆಂಗಳೂರು, ಇದು ಅಧಿಕೃತ ಘೋಷಣೆ, ಬಹುದಿನಗಳಿಂದ ಕಾಯುತ್ತಿದ್ದ ಯುಎಸ್‌ ಕಾನ್ಸಲೇಟ್‌ ಕಚೇರಿ ಜನವರಿ 17ರಂದು ಆರಂಭವಾಗಲಿದೆ" ಎಂದು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಷ್ಟ್ರೀಯ ಅಧ್ಯಕ್ಷರು ಎಕ್ಸ್‌ ಪೋಸ್ಟ್‌ನ ಮೂಲಕ ತಿಳಿಸಿದ್ದಾರೆ. ಇನ್ನು ಇದ ಜೊತೆಗೆ ಕಚೇರಿ ಆರಂಭವಾಗುವುದಕ್ಕೆ ಮುಖ್ಯ ಕಾರಣರಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ನಿತಿನ್‌ ಗಡ್ಕರಿ ಅವರನ್ನ ಶ್ಲಾಘಿಸಿದ್ದಾರೆ.

ಜನವರಿ 17 ರಂದು ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಆರಂಭ!

ಇನ್ನು ಈ ವೇಳೆ ಸಂಸದ ತೇಜ್ಸವಿ ಸೂರ್ಯ ಅವರು ದೆಹಲಿಗೆ ತೆರಳಿ ವಿದೇಶಾಂಗ ಸಚಿವ ಜೈಶಂಕರ್‌ ಅವರನ್ನ ಭೇಟಿ ಮಾಡಿ ಮೈಸೂರು ಪಾಕ್‌ ತಿನ್ನಿಸುವ ಮೂಲಕ ಸಚಿವರಿಗೆ ಸಂಸದ ತೇಜಸ್ವಿ ಸೂರ್ಯ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಹಾಗು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಅವರ ಪ್ರಯತ್ನದಿಂದ ಮಾತ್ರ ಇದು ಸಾಧ್ಯವಾಗಿದೆ. ಎಂದು ಪೊಸ್ಟ್‌ ಮೂಲಕ ತಿಳಿಸಿದ್ದಾರೆ.

ಸಧ್ಯಕ್ಕೆ ಈ ಯುಎಸ್‌ ಕಾನ್ಸುಲೇಟ್‌ ಕಚೇರಿಯನ್ನ ತಾತ್ಕಾಲಿಕವಾಗಿ ಖಾಸಗಿ ಹೋಟೆಲ್‌ನಲ್ಲಿ ಆರಂಭಮಾಡಲಿದ್ದೇವೆ. ಇದರಿಂದ ಕರ್ನಾಟಕದ ಜನರು ವೀಸಾಗಾಗಿ ಬೇರೆ ರಾಜ್ಯಗಳಿಗೆ ಹೋಗುವುದು ತಪ್ಪುತ್ತದೆ. ಮುಂದಿನ ದಿನಗಳಲ್ಲಿ ಇದರ ಕಚೇರಿಯನ್ನ ನಿರ್ಮಾಣ ಮಾಡತ್ತೇವೆ ಎಂದು ಹೇಳಿದರು.

ವೀಸಾಗಳನ್ನ ಬೇರೆ ರಾಜ್ಯಗಳಿಗೆ ಹೋಗಿ ಮಾಡಿಸುವುದು ಜನರಿಗೆ ಸಮಸ್ಯೆಯನ್ನ ನಿವಾರಿಸಲು ಯುಎಸ್‌ ಕಾನ್ಸುಲೇಟ್‌ ಕಚೇರಿಯನ್ನ ಬೆಂಗಳೂರಿನಲ್ಲೆ ಮಾಡುವ ತೀರ್ಮಾನಕ್ಕೆ ಬಂದಿದ್ದೇವೆ. ಅಲ್ಲದೆ ಇದು ಬೆಂಗಳೂರಿಗರ ಬಹುದಿನದ ಬೇಡಿಕೆಯಾಗಿದೆ ಎಂದು ಸಂಸದರು ಸ್ಪಷ್ಟನೆ ನೀಡಿದ್ರು.

ಯುಎಸ್‌ ಕಾನ್ಸುಲೇಟ್‌ನ ಪ್ರಯೋಜನಗಳು

ಬೆಂಗಳೂರು ಈಗಾಗಲೇ ಆಸ್ಟ್ರೇಲಿಯಾ ಕಾನ್ಸುಲೇಟ್‌ಗೆ ನೆಲೆಯಾಗಿದೆ. ಈ ಕಾನ್ಸುಲೇಟ್‌ ರೆಸಿಡೆನ್ಸಿ ರಸ್ತೆಯಲ್ಲಿರುವ ರಿಟ್ಜ್-ಕಾರ್ಲ್‌ಟನ್‌ನಲ್ಲಿದೆ. ಬಹು ರಾಜತಾಂತ್ರಿಕ ಕಾರ್ಯಗಳ ಉಪಸ್ಥಿತಿ ತಂತ್ರಜ್ಞಾನ ಮತ್ತು ಬದಾವಣೆಗಳಿಗೆ ಜಾಗತಿಕ ಕೇಂದ್ರವಾಗಿದೆ. ಇನ್ನು ಇದು ನಗರದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನ ಕೂಡ ಒತ್ತಿಹೇಳುತ್ತದೆ.

ಯುಎಸ್‌ ಕಾನ್ಸುಲೇಟ್‌ ಆರಂಭ ಮಾಡುವುದರಿಂದ ಕರ್ನಾಟಕದ ಜನರು ಹೈದ್ರಾಬಾದ್‌, ಚೆನ್ನೈಗೆ ಹೋಗಿ ವೀಸಾ ಮಾಡಿಸಿಕೊಳ್ಳುವುದನ್ನು ನಾವು ತಪ್ಪಿಸಬಹುದು. ಹಾಗೆ ನಗರದಲ್ಲಿರುವ ವೃತ್ತಿಪರರು, ವ್ಯಾಪಾರಿಗಳು ಹಾಗೆ ಮುಖ್ಯವಾಗಿ ವಿದೇಶಕ್ಕೆ ಹೋಗಿ ಓದಲು ಆಶಿಸುವ ವಿದ್ಯಾರ್ಥಿಗಳಿಗೆ ಇದು ಸುಲಭವಾಗಲಿದೆ. ಅಲ್ಲದೆ ಕಾನ್ಸುಲೇಟ್‌ ಆರಂಭಸುವುದು ಬಹುನಿರೀಕ್ಷಿತ ಅಭಿವೃದ್ಧಿಯಾಗಿದ್ದು ಅದು ಅನುಕೂಲತೆ, ಅವಕಾಶಗಳು ಮತ್ತು ನಿಕಟ ಅಂತರರಾಷ್ಟ್ರೀಯ ಸಹಯೋಗವನ್ನು ನೀಡುತ್ತದೆ.

ನೂತನವಾಗಿ ಬೆಂಗಳೂರಿನಲ್ಲಿ ಯುಎಸ್‌ ಕಾನ್ಸುಲೇಟ್‌ ಅನ್ನು ಸ್ಥಾಪನೆ ಮಾಡುವುದರಿಮದ ಕರ್ನಾಟಕದ ಜನರು ಯುಎಸ್‌ ಕಾನ್ಸುಲೇಟ್‌ಗಾಗಿ ಹೊರ ರಾಜ್ಯಗಳಿಗೆ ಹೋಗುವುದು ತಪ್ಪುತ್ತದೆ. ಇದರರಿಂದಾಗಿ ಜನರ ಸಮಯವನ್ನ ಕೂಡ ಉಳಸಬಹುದು.

ವೃತ್ತಿಪರರಿಗೆ ಹಾಗು ವಿದ್ಯಾರ್ಥಿಗಳಿಗೆ ನೆಲೆಯಾಗಿರುವ ಬೆಂಗಳೂರು ಮುಂಬರುವ ದಿನಗಳಲ್ಲಿ ಯುಎಸ್‌ನಲ್ಲಿ ಶೈಕ್ಷಣಿಕ ಮತ್ತು ಕೆಲಸದ ಅವಕಾಶಗಳಿಗೆ ವೀಸಾ ಅರ್ಜಿಗಳಿಗಾಘಿ ಈ ಕಾನ್ಸುಲೇಟ್‌ ಸಹಾಯಕವಾಗಲಿದೆ.

ಬೆಂಗಳೂರು ಈಗಾಗಲೇ ಸಾಫ್ಟ್‌ವೇರ್‌ ಉದ್ಯಮದ ಉತ್ಪಾದನೆಯಲ್ಲಿ ಭಾರತಕ್ಕೆ 40% ಕೊಡುಗೆಯನ್ನ ನೀಡ್ತಿದೆ. ಯುಎಸ್‌ ಕಾನ್ಸುಲೇಟ್‌ ಬೆಂಗಳೂರಿನಲ್ಲಿ ಆರಂಭವಾಗುವುದರಿಂದ ಹೆಚ್ಚಿನ ಪ್ರಯೋಜನಗಳಾಗಲಿದೆ. ಕಾನ್ಸುಲೇಟ್‌ ಭಾರತ ಮತ್ತು ಯುಎಸ್‌ ನಡುವಿನ ತಂತ್ರಜ್ಞಾನ-ಚಾಲಿತ ಸಹಯೋಗಗಳು ಹಾಗೆ ಎರಡು ದೇಶಗಳ ವ್ಯಾಪಾರವನ್ನು ಸುಲಭಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಈಗಾಗಲೇ ಕೆಲವು ರಾಜ್ಯಗಳಲ್ಲಿ ಯುಎಸ್‌ ಕಾನ್ಸುಲೇಟ್‌ಗಳು ಇವೆ. ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದ್ರಾಬಾದ್‌ನಲ್ಲಿ ಕಾನ್ಸುಲರ್‌ ನೆಟ್‌ವರ್ಕ್ಗೆ ಈಗ ಬೆಂಗಳೂರು ಕೂಡ ಸೇರ್ಪಡೆಯಾಗಲಿದೆ. ಅಲ್ಲದೆ ಇಸು ಕರ್ನಾಟಕದ ಸಾವಿರಾರು ನಿವಾಸಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಬೆಂಗಳೂರು ಹಲವು ದೇಶಗಳ ವೀಸಾ ಕಚೇರಿಯನ್ನ ಹೊಂದಿದೆ. ಆದ್ರೆ ಯುಎಸ್‌ ವೀಸಾ ಕಚೇರಿ ಮಾತ್ರ ಇರಲಿಲ್ಲ. ಇನ್ನು ಇದನ್ನು ಆರಂಮಾಡುವುದರಿಂದ ಇದು ಭಾರತದಲ್ಲಿರುವ US ರಾಯಭಾರ ಕಚೇರಿಯೊಂದಿಗಿನ ಸಂಬಂಧವನ್ನ ಇನ್ನಷ್ಟು ಗಟ್ಟಿ ಮಾಡಲಿದೆ. ಹಾಗೆ ಈ ಬೆಳವಣಿಗೆ ಭಾರತದಲ್ಲಿನ US ರಾಯಭಾರ ಕಚೇರಿಯ ವಿಶಾಲ ವಿಸ್ತರಣೆ ಯೋಜನೆಗಳೊಂದಿಗೆ ಕೂಡ ಹೊಂದಿಕೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+