ವಂಚನೆ ಪ್ರಕರಣ: ಗೌತಮ್‌ ಅದಾನಿ ವಿರುದ್ಧ ವಾರಂಟ್‌ ಜಾರಿ ಮಾಡಿದ US ಕೋರ್ಟ್‌

ಭಾರತದ ಶ್ರೀಮಂತರಲ್ಲಿ ಒಬ್ಬರಾದ ಗೌತಮ್‌ ಅದಾನಿ ವಿರುದ್ಧ ಯುಎಸ್‌ ಡಿಸ್ಟ್ರಿಕ್ ಕೋರ್ಟ್‌ ವಾರಂಟ್‌ ಜಾರಿ ಮಾಡಿದೆ. ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಬಹುಕೋಟಿ ಡಾಲರ್‌ ಲಂಚ, ವಂಚನೆ ಕೇಸ್‌ನಲ್ಲಿ ಗೌತಮ್‌ ಹಾಗು ಅವರ ಸೋದರಳಿಯ ಸಾಗರ್‌ ವಿರುದ್ಧ ಯುಎಸ್‌ ನ್ಯಾಯಾಲಯ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಇನ್ನು ಪ್ರಕರಣ ಸಂಬಂಧ ಅಮೆರಿಕದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಅಧಾನಿಯನ್ನು ಬಂಧಿಸುವಂತೆ ಅಮೆರಿಕದ ನ್ಯೂಯಾರ್ಕ್‌ ನ್ಯಾಯಲಯ ವಾರಂಟ್‌ ಜಾರಿಗೊಳಿಸಿದೆ.

ಇತ್ತೀಚೆಗೆ 22 ತಿಂಗಳ ಹಿಂದೆ ಯುಎಸ್‌ ಆಧಾರಿತ ಕಿರು ಮಾರಾಟಗಾರ ಹಿಂಡೆನ್‌ಬರ್ಗ್‌ ರಿಸರ್ಚ್‌ ಅದಾನಿ ಸಮೂಹದ ವಂಚನೆಗಳ ಬಗ್ಗೆ ಆರೋಪವನ್ನ ಮಡಿತ್ತು, ಅದಾದ ನಂತರ ಯುಎಸ್‌ ಡಿಸ್ಟ್ರಿಕ್ಟ್‌ ಕೋರ್ಟ್‌ ಅದಾನಿ ವಿರುದ್ಧ ವಚನೆಗಳ ದಾಖಲೆಗಳನ್ನ ಪಟ್ಟಿ ಮಾಡಿ ವರಂಟ್‌ ಜಾರಿಗೊಳಿಸಿದೆ.

ಅಮೆರಿಕಾದಲ್ಲಿ ಗೌತಮ್‌ ಅದಾನಿ ವಿರುದ್ಧ ವಾರಂಟ್‌ ಜಾರಿ!?

ಅಲ್ಲದೆ ಯುಎಸ್‌ ಡಿಸ್ಟ್ರಿಕ್ಟ್‌ ಕೋರ್ಟ್‌ ಬ್ರೂಕ್ಲಿನ್‌ನಲ್ಲಿ ಅದಾನಿ ವಿರುದ್ಧ ಸಲ್ಲಿಸಲಾದ ಆರೋಪಗಳು ಬಹಳ ಗಂಭಿರವಾಗಿವೆ ಎನ್ನಲಾಗ್ತಿದೆ. ಯುಸ್‌ ಹೂಡಿಕೆದಾರೊಂದಿಗೆ ಸಂಗ್ರಹಿಸಿದ ಹಣವನ್ನ ಭಾರತದಲ್ಲಿನ ಸರ್ಕಾರಿ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ನೀಡಲಾಗಿದೆ ಎಂದು ದಾಖಲೆಗಳು ಹೇಳ್ತಿವೆ. ಹೀಗಾಗಿ ಅದಾನಿ ವಿರುದ್ಧ ನ್ಯೂಯಾರ್ಕ್ ಪೂರ್ವ ಜಿಲ್ಲೆಯ ಸಹಾಯಕ ಅಟಾರ್ನಿ ಜನರಲ್‌ ಲಿಸಾ ಹೆಚ್‌ ಮಿಲ್ಲರ್‌ ಕೇಸ್‌ ದಾಖಲಿಸಿ ವರಂಟ್‌ ಜಾರಿ ಮಾಡಿದ್ದಾರೆ.

ಏನಿದು ವಂಚನೆ ಪ್ರಕರಣ?

ಅದಾನಿ ಗ್ರೂಪ್‌ ಅಧ್ಯಕ್ಷ ಅದಾನಿ ಮತ್ತು ಅವರ ಸೋದರಳಿಯ, ಸಾಗರ್‌ ಅದಾನಿ ಸೇರಿದಂತೆ ಏಳು ಜನರ ವಿರುದ್ಧ ಬಹುಕೋಟಿ ವಂಚನೆ ಪ್ರಕರಣ ದಾಖಲಾಗಿದೆ. ಭಾರತದಲ್ಲಿ ಸೌರ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಸಲು ಭಾರತೀಯ ಸರ್ಕಾರಿ ಅಧಿಕಾರಗಳಿಗೆ ಸುಮಾರು 265 ಮಿಲಿಯನ್‌ ಡಾಲರ್‌ ಲಂಚ ನೀಡಿದ ಆರೋಪ ಕೇಳಿಬಂದಿದೆ. ಇನ್ನು ಭಾರತೀಯ ರೂಪಾಯಿಯಲ್ಲಿ ಹೇಳುವುದಾದ್ರೆ, ಬರೋಬ್ಬರಿ 2,237 ಕೋಟಿ ರೂಪಯಿ ವಂಚನೆ ಆರೋಪ ಕೇಳಿಬಂದಿದೆ. ಇದರ ಜೊತೆಗೆ ಅದಾನಿ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ.

ಅಮೆರಿಕಾದಲ್ಲಿ ಚಾರ್ಜ್‌ಶೀಟ್‌ ಸಲ್ಲಸಲು ಕರಣವೇನು?

ಉದ್ಯಮಿ ಗೌತಮ್‌ ಅದಾನಿ ಮತ್ತು ಇತರೆ ಸಹಚರರು ಭಾರತದ ಅಧಿಕಾರಿಗಳಿಗೆ ಲಂಚ ನೀಡಲು ಅಮೆರಿಕಾ ಹೂಡಿಕೆದಾರರ ಬಳಿ ಹಣ ಸಂಗ್ರಹಿಸಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗದೆ. ಅಮೆರಿಕಾದ ಹೂಡಿಕೆದಾರರಿಗೆ ಸಳ್ಳು ಹೇಳಿ, ಅವರ ಬಳಿ ಹಣ ಪಡೆಯಲಾಗಿದೆ ಎಂಬುದೇ ಅಮೆರಿಕಾದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ಮುಖ್ಯ ಕಾರಣವಾಗಿದೆ.

ಅಮೆರಿಕಾ ಹೂಡಿಕೆದಾರರ ಹಣವನ್ನ ಬಳಸಿಕೊಂಡು ಅದಾನಿ ಮತ್ತು ಇತರರು ಲಂಚ ನೀಡುವ ಮೂಲಕ ವಂಚನೆ ಮಾಡಿದ್ದಾರೆ. ಅಲ್ಲದೆ ಇದು ಅಮರಿಕಾ ಕಾನೂನಿಗೆ ವಿರುದ್ಧವಾಗಿದೆ. ಜೊತೆಗೆ ಈ ಬಗ್ಗೆ ಜಗತ್ತಿನಾದ್ಯಂತ ಯಾವುದೇ ಭಾಗದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸದಂತೆ ತನಿಖೆಗೆ ಅಡ್ಡಿಪಡಿಸಿದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಿಲ್ಲರ್‌ ಹೇಳಿದ್ದಾರೆ.

ಅದಾನಿ-ಪಿಎಂಸಿ ಸಂಪರ್ಕ

ಪ್ರಮುಖ ಯೋಜನೆಗಳಿಗಾಗಿ ಅದಾನಿ ಕಂಪನಿಗಳು ಖಾಸಗಿ ಗುತ್ತಿಗೆದಾರ PMC ಯೋಜನೆಗಳಿಗೆ ಕಳೆದ 12 ವರ್ಷಗಳಲ್ಲಿ 6,300 ಕೋಟಿ ರೂಪಾಯಿಗಳನ್ನು ಪಾವತಿಸಿವೆ ಎಂದು US ಆರೋಪ ಮಡಿದೆ. 2014ರ DRI ತನಿಖೆಯು PMC ಯೋಜನೆಗಳನ್ನು ಅದಾನಿ ಗ್ರೂಪ್‌ಗೆ "ಡಮ್ಮಿ ಸಂಸ್ಥೆ" ಎಂದು ಕರೆದಿದೆ. ಹೊಸದಾಗಿ ಬಹಿರಂಗಗೊಂಡ ಮಾಲೀಕತ್ವದ ದಾಖಲೆಗಳು PMC ಪ್ರಾಜೆಕ್ಟ್‌ಗಳು ವಿನೋದ್ ಅದಾನಿಯವರ ನಿಕಟ ಸಹವರ್ತಿ ಚಾಂಗ್ ಚುಂಗ್-ಲಿಂಗ್ ಅವರ ಪುತ್ರನ ಒಡೆತನದಲ್ಲಿದೆ ಎಂದು ವರದಿ ಹೇಳಿದೆ. ಅಲ್ಲದೆ ಚಾಂಗ್ ಚುಂಗ್-ಲಿಂಗ್ ಅವರ ಮಗ ಅದಾನಿ ಗ್ರೂಪ್‌ನ ತೈವಾನ್ ಪ್ರತಿನಿಧಿ ಎಂದು ತೈವಾನ್ ಮಾಧ್ಯಮ ವರದಿ ಮಾಡಿದೆ ಎಂದು ಯುಎಸ್‌ ಆರೋಪಿಸಿದೆ.

ಶೇಕಡಾ 20 ರಷ್ಟು ಷೇರುಗಳು ಇಳಿಕೆ

ಈ ಪ್ರಕರಣದಿಂದಾಗಿ ಅದಾನಿ ಗ್ರೂಪ್‌ನ 3 ಪ್ರಮುಖ ಷೇರುಗಳು 20% ವರೆಗೆ ಕುಸಿದಿವೆ. ಹಾಗೆ ಎಲ್ಲಾ 11 ಅದಾನಿ ಗ್ರೂಪ್ ಷೇರುಗಳ ಒಟ್ಟು 2ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದೆ. ಈಗ 12.3 ಲಕ್ಷ ಕೋಟಿಗ ರೂಪಾಯಿಗೆ ತಲುಪಿದೆ. 2023ರ ಹಿಂಡೆನ್‌ಬರ್ಗ್ ವರದಿಯ ನಂತರ ಇದು ಅದಾನಿ ಗ್ರೂಪ್‌ನ ಅತಿ ದೊಡ್ಡ ನಷ್ಟ ಎಂದು ಹೇಳಲಾಗ್ತಿದೆ. ಹಾಗೆ ಗೌತಮ್ ಅದಾನಿ ಅವರ ಸಂಪತ್ತು 10.5 ಶತಕೋಟಿ ಡಾಲರ್‌ಗಳಷ್ಟು ಕುಸಿದಿದೆ ಎಂದು ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ಸ್‌ ಪಟ್ಟಿಯಲ್ಲಿ ಹೇಳಲಾಗಿದೆ. ಜತೆಗೆ ಅವರ ನಿವ್ವಳ ಮೌಲ್ಯ ಪ್ರಸ್ತುತ 59.3 ಬಿಲಿಯನ್‌ಗಷ್ಟು ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+