ವಿಶ್ವ ಬ್ಯಾಂಕ್‌ನ 25 ಸದಸ್ಯರ ಸಮಿತಿಯು ಮಾಸ್ಟರ್‌ಕಾರ್ಡ್‌ನ ಮಾಜಿ ಸಿಇಒ, ಭಾರತೀಯ- ಅಮೇರಿಕನ್, ಯುಎಸ್ ನಾಮನಿರ್ದೇಶಿತ ಅಜಯ್ ಬಂಗಾರನ್ನು ವಿಶ್ವಸಂಸ್ಥೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನವನ್ನು ಅಜಯ್ ಬಂಗಾ ಜೂನ್ 2ರಿಂದ ವಹಿಸಿಕೊಳ್ಳಲಿದ್ದಾರೆ ಎಂದು ಬ್ಯಾಂಕ್ ಘೋಷಣೆ ಮಾಡಿದೆ. ಅಜಯ್ ಬಂಗಾ ಭಾರತ ಮೂಲದವರಾಗಿದ್ದು, ಹಣಕಾಸು ಕ್ಷೇತ್ರದಲ್ಲಿ ತಜ್ಞರಾಗಿದ್ದಾರೆ.
ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ 63 ವರ್ಷದ ಅಜಯ್ ಬಂಗಾರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಫೆಬ್ರವರಿಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅಜಯ್ ಬಂಗಾರನ್ನು ವಿಶ್ವ ಬ್ಯಾಂಕ್‌ನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ವಿಶ್ವಬ್ಯಾಂಕ್‌ನ ಮುಖ್ಯಸ್ಥರಾದ ಡೇವಿಡ್ ಮಾಲ್ಪಾಸ್ ಶೀಘ್ರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬಳಿಕ ಯುಎಸ್ ಅಧ್ಯಕ್ಷ ವಿಶ್ವ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾರನ್ನು ಶಿಫಾರಸು ಮಾಡಿದ್ದಾರೆ.

ಮತದಾನದ ಮೂಲಕ ಅಜಯ್ ಬಂಗಾ ಆಯ್ಕೆ
ವಿಶ್ವ ಬ್ಯಾಂಕ್ ಬೋರ್ಡ್ ಸದಸ್ಯರು ಸೋಮವಾರ ಅಜಯ್ ಬಂಗಾರನ್ನು ಸಂದರ್ಶನ ಮಾಡಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ಈ ಸಂದರ್ಶನ ನಡೆದಿದೆ. ಡೇವಿಡ್ ಮಾಲ್ಪಾಸ್ ಅಧಿಕಾರವಧಿ ಜೂನ್ 1ರಂದು ಕೊನೆಯಾಗಲಿದ್ದು, ಅಂದಿನಿಂದಲೇ ಅಜಯ್ ಬಂಗಾ ಅಧಿಕಾರವನ್ನು ಸ್ವೀಕಾರ ಮಾಡಲಿದ್ದಾರೆ. ವಿಶ್ವ ಬ್ಯಾಂಕ್‌ನ 25 ಸದಸ್ಯರ ಸಮಿತಿಯ ಮತದಾನ ನಡೆಸುವ ಮೂಲಕ ಅಜಯ್ ಬಂಗಾರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ 24 ಸದಸ್ಯರು ಮಾತ್ರ ಹಾಜರಿದ್ದು ರಷ್ಯಾ ಗೈರುಹಾಜರಾಗಿತ್ತು ಎಂದು ವರದಿಯಾಗಿದೆ.
ಬೋರ್ಡ್ ಸದಸ್ಯರೊಂದಿಗೆ ಕಳೆದ ಕೆಲವು ವಾರಗಳಿಂದ ಮಾತುಕತೆಗಳು ನಡೆದಿದ್ದು ಸೋಮವಾರ ಸಂದರ್ಶನ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ಹಿಂದೆಯೇ ಅಜಯ್ ಬಂಗಾ ವಿಶ್ವ ಸಂಸ್ಥೆಯ ಅಧ್ಯಕ್ಷರಾಗಲಿದ್ದಾರೆ ಎಂಬ ಅಂದಾಜು ಇತ್ತು, ನಿರೀಕ್ಷೆಯು ಇತ್ತು. ಅದಕ್ಕೆ ಪ್ರಮುಖ ಕಾರಣ ಬೇರೆ ಯಾವುದೇ ದೇಶಗಳು ಬೇರೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡದೆ ಇರುವುದು ಆಗಿದೆ.
ವಿಶ್ವ ಬ್ಯಾಂಕ್‌ನ ನೂತನ ಅಧ್ಯಕ್ಷ ಅಜಯ್ ಬಂಗಾ ಯಾರು?
63 ವರ್ಷದ ಅಜಯ್ ಬಂಗಾ ಭಾರತೀಯ-ಅಮೇರಿಕನ್ ಆಗಿದ್ದಾರೆ. ಪ್ರಸ್ತುತ ಈಕ್ವಿಸಿ ಸಂಸ್ಥೆಯಾದ ಜನರಲ್ ಅಟ್ಲಾಟಿಕ್‌ನಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಅದಕ್ಕೂ ಮುನ್ನ 2021ರಲ್ಲಿ ಆರಂಭವಾದ ಜನರಲ್ ಅಟ್ಲಾಂಟಿಕ್‌ನ ಬಿಯಾಂಡ್‌ನೆಟ್‌ಜಿರೋ ಸಾಹಸೋದ್ಯಮಕ್ಕೆ ಸಲಹೆಗಾರರಾಗಿದ್ದವರು. ಇದಕ್ಕೂ ಹಿಂದೆ ಮಾಸ್ಟರ್‌ಕಾರ್ಡ್‌ನ ಸಿಇಒ ಆಗಿ ಅಜಯ್ ಬಂಗಾ ಕಾರ್ಯನಿರ್ವಹಣೆ ಮಾಡಿದ್ದರು.
ಪ್ರಸ್ತುತ ವಿಶ್ವಬ್ಯಾಂಕ್‌ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಆಗಿದ್ದು, ತನ್ನ ಅವಧಿ ಪೂರ್ಣವಾಗುವುದಕ್ಕೂ ಮುನ್ನವೇ ಸ್ಥಾನವನ್ನು ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಆದ್ದರಿಂದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಅಜಯ್ ಬಂಗಾ ಹೆಸರು ನಾಮನಿರ್ದೇಶನ ಮಾಡಿದ್ದಾರೆ. ಹಾಗೆಯೇ ಅಜಯ್ ಬಂಗಾರ ಸಾಮರ್ಥ್ಯವನ್ನು ಹಾಡಿಹೊಗಳಿದ್ದಾರೆ.
ಅಜಯ್ ಬಂಗಾ ಮಾಸ್ಟರ್‌ಕಾರ್ಡ್ ಮುಖ್ಯಸ್ಥರಾಗಿ ಮತ್ತು ಅಮೇರಿಕನ್ ರೆಡ್ ಕ್ರಾಸ್, ಕ್ರಾಫ್ಟ್ ಫುಡ್ಸ್ ಮತ್ತು ಡೌ ಇಂಕ್‌ನ ಮಂಡಳಿಗಳಲ್ಲಿಯೂ ಸೇವೆ ನೀಡಿದ್ದಾರೆ. ಒಟ್ಟಾಗಿ ಸುಮಾರು 30 ವರ್ಷಗಳ ಅನುಭವವನ್ನು ಅಜಯ್ ಬಂಗಾ ಹೊಂದಿದ್ದಾರೆ. ಇನ್ನು ನಾಮನಿರ್ದೇಶನಗೊಂಡ ಅಜಯ್ ಬಂಗಾರಿಗೆ ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫಾರಮ್ (ಯುಎಸ್‌ಐಎಸ್‌ಪಿಎಫ್) ಅಭಿನಂದನೆ ಸಲ್ಲಿಸಿದೆ.


Click it and Unblock the Notifications