ನರೇಂದ್ರ ಮೋದಿ (Narendra Modi) ಭೇಟಿ ನಂತರ ಭಾರತವನ್ನು ಮಿತ್ರರಾಷ್ಟ್ರ ಎಂದು ಕರೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಮತ್ತೆ ಸುಂಕದ ಸಮರಕ್ಕೆ ರೆಡಿಯಾಗಿದ್ದಾರೆ. ಭಾರತದ ಮೇಲಿನ ಕೋಪ ಟ್ರಂಪ್‌ಗೆ ಇನ್ನೂ ಕಮ್ಮಿಯಾಗಿಲ್ಲ ಅನ್ಸುತ್ತೆ. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 'ಹೆಚ್ಚಿನ' ಟ್ಯಾರಿಫ್‌ಗಳನ್ನು ಹೇರುವುದಾಗಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ರಷ್ಯಾದ ಜೊತೆಗಿನ ಭಾರತ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದು, ಇದನ್ನು ಅಮೆರಿಕಾ ನೋಡಲಾಗದೆ ಆಕ್ರೋಶಗೊಂಡಿದೆ. ಏಕೆಂದರೆ ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಏರ್‌ಫೋರ್ಸ್ ಒನ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯನ್ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರೂ, ಇದು ನಡೆಯದಿದ್ದರೆ 'ಮಾಸಿವ್' ಟ್ಯಾರಿಫ್ (Trump Tarriffs) ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಲವಾರು ಯುದ್ಧಗಳನ್ನು ನಿಲ್ಲಿಸಿದ್ದು ನಾನೇ ಎಂದು ಬೀಗುತ್ತಾ ಬಂದಿದ್ದ ಡೊನಾಲ್ಡ್ ಟ್ರಂಪ್‌ಗೆ, ರಷ್ಯಾ-ಉಕ್ರೇನ್ ಯುದ್ಧವನ್ನು ಇನ್ನೂ ನಿಲ್ಲಿಸಲು ಆಗಿಲ್ಲ. ಮಾತಿನ ಮೂಲಕವೇ ನೋಬೆಲ್ ಶಾಂತಿ ಪ್ರಶಸ್ತಿಯನ್ನ ಗಿಟ್ಟಿಸಲು ಪ್ರಯತ್ನ ಮಾಡಿದ್ದ ಟ್ರಂಪ್‌ಗೆ ಅದೂ ಕೂಡಾ ಕೈತಪ್ಪಿತು. ಇನ್ನು ಭಾರತ ಮತ್ತು ಚೀನಾದ ಮೇಲೆ ಸುಂಕ ವಿಧಿಸಿದರೂ ಕ್ಯಾರೇ ಅನ್ನದೇ ತನ್ನ ವ್ಯಾಪಾರವನ್ನು ಮುಂದುವರೆಸಿದೆ. ಆದ್ರೆ ಈ ಎಲ್ಲಾ ಕೋಪಗಳನ್ನು ತನ್ನ ನೆರೆಯ ರಾಷ್ಟ್ರಗಳ ವಿರುದ್ಧ ಸುಂಕದ ಹೆಸರಿನಲ್ಲಿ ದಾಳಿ ಮಾಡುತ್ತಿದ್ದಾರೆ.
ಭಾರತಕ್ಕೆ ಮತ್ತೆ ಟ್ರಂಪ್ ಎಚ್ಚರಿಕೆ!
ಏರ್ ಫೋರ್ಸ್ ಒನ್ ವಿಮಾನದಲ್ಲಿದ್ದಾಗ ಪತ್ರಕರ್ತರೊಂದಿಗೆ ಟ್ರಂಪ್ ಮಾತನಾಡಿದ್ದು, ಇದೇ ವೇಳೆ ಭಾರತದ ವಿರುದ್ಧ ಮತ್ತೆ ಸುಂಕದ ಸಮರದ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಮೋದಿಯವರನ್ನು ಕಳೆದ ಬಾರಿ ಭೇಟಿಯಾದಾಗ 'ನಾನು ರಷ್ಯಾದ ತೈಲ ವಿಷಯದಲ್ಲಿ ಭಾಗವಹಿಸುವುದಿಲ್ಲ' ಎಂದಿದ್ದರು. ಒಂದು ವೇಳೆ ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳದೆ, ರಷ್ಯಾದ ತೈಲ ಖರೀದಿಸಿದ್ರೆ, ಭಾರತದ ವಿರುದ್ಧ ದೊಡ್ಡ ಮಟ್ಟದಲ್ಲಿ ತೆರಿಗೆ ವಿಧಿಸಲಾಗುತ್ತದೆʼ ಎಂದು ಹೇಳಿದ್ದಾರೆ. ಇನ್ನು ಟ್ರಂಪ್ ಹೇಳಿಕೆ ಬಗ್ಗೆ ಭಾರತ ಸ್ಪಷ್ಟನೆ ಕೊಟ್ಟಿದ್ದು, ರಷ್ಯಾದ ತೈಲದ ವಿಷಯದಲ್ಲಿ ಅಮೆರಿಕಾದ ಜೊತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿತ್ತು.
ಮತ್ತೆ ಭಾರತದ ವಿರುದ್ಧ ಅಮೆರಿಕ ಮುನಿಸು
ಟ್ರಂಪ್‌ನ ಈ ಆತುರದ ನಡೆ ಭಾರತ-ಅಮೆರಿಕ ವಾಣಿಜ್ಯ ಸಂಬಂಧಗಳಲ್ಲಿ ಈಗಾಗಲೇ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಟ್ರಂಪ್ ಎರಡನೇ ಬಾರಿ ಅಧಿಕಾರಕ್ಕೆ ಬರುತ್ತಲೇ, ಅಮೆರಿಕ ಭಾರತದಿಂದ ಆಮದು ಮಾಡಿಕೊಳ್ಳುವ ಹೆಚ್ಚಿನ ಉತ್ಪನ್ನಗಳ ಮೇಲೆ 50% ಟ್ಯಾರಿಫ್ ಹೇರಿದ್ದು, ಇದರಲ್ಲಿ ಅರ್ಧದಷ್ಟು ಭಾರತ ರಷ್ಯನ್ ತೈಲ ಖರೀದಿಸಿದ್ದಕ್ಕೆ ನೀಡಿದ ಶಿಕ್ಷೆ ಎನ್ನಲಾಗಿದೆ. ಇದೀಗ ಟ್ರಂಪ್ ಮತ್ತೊಮ್ಮೆ ಸುಂಕ ಏರಿಕೆಯ ಬಗ್ಗೆ ಮಾತನಾಡಿದ್ದು, ಈ ಮಧ್ಯೆ ಎರಡು ದೈತ್ಯ ರಾಷ್ಟ್ರಗಳ ನಡುವಿನ ವಹಿವಾಟಿನಲ್ಲಿ ಭಾರೀ ಹಿನ್ನಡೆ ಬೀಳಲಿದೆ ಎನ್ನಲಾಗಿದೆ.
2022 ರಲ್ಲಿ ರಷ್ಯಾ, ಯುಕ್ರೇನ್ ದೇಶದ ಮೇಲೆ ಆಕ್ರಮಣ ನಡೆಸಿದ ನಂತರ, ಪಶ್ಚಿಮ ದೇಶಗಳು ರಷ್ಯನ್ ತೈಲ ಮತ್ತು ಅನ್ಯ ಆರ್ಥಿಕ ಸಂಪನ್ಮೂಲಗಳ ಮೇಲೆ ಹಲವು ನಿರ್ಬಂಧಗಳನ್ನು ಹೇರಿಕೆ ಮಾಡಿತ್ತು. ಈ ಸಂದರ್ಭದಲ್ಲಿ ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡಲು ಮುಂದಾಗಿತ್ತು. ಇದ್ದನೇ ಸದುಪಯೋಗಪಡಿಸಿಕೊಂಡ ಭಾರತವು ಇಂದು ರಷ್ಯಾ ತೈಲದ ಅತಿದೊಡ್ಡ ಖರೀದಿದಾರರಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತದ ತೈಲ ಆಮದಿನ ಪೈಕಿ ಸುಮಾರು 42% ರಷ್ಯಾದಿಂದಲೇ ತೈಲವನ್ನು ಖರೀದಿ ಮಾಡುತ್ತಿದ್ದು, ಇದು ಭಾರತದ ಆರ್ಥಿಕತೆಗೆ ಅನುಗುಣವಾಗಿ ಕಡಿಮೆ ಬೆಲೆಯಲ್ಲಿ ತೈಲ ಸರಬರಾಜು ಮಾಡುತ್ತದೆ ಎಂದು ಭಾರತ ಸರ್ಕಾರ ಹೇಳುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications