ಯುಎಸ್: ವೆನೆಜುವೆಲಾದ (Venezuela) ಮೇಲೆ ದಾಳಿ ನಡೆಸಿ, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೋವನ್ನು ಸೆರೆ ಹಿಡಿದ ನಂತರ, ಅಮೆರಿಕದ ನಿರ್ಧಾರ ಮತ್ತಷ್ಟು ಕಠಿಣವಾಗುತ್ತಿದೆ. ತೈಲ ಉತ್ಪಾದನೆಯಿಂದಾಗಿ ರಷ್ಯಾದ ವಿರುದ್ಧ ಅಮೆರಿಕ (America) ಕೆಂಗಣ್ಣು ನೆಟ್ಟಿದೆ. ರಷ್ಯಾದೊಂದಿಗೆ ತೈಲ ವ್ಯಾಪಾರ ನಿಲ್ಲಿಸಬೇಕೆಂಬ ಅಮೆರಿಕದ್ದು ಈಗಿನದ್ದಲ್ಲ, ಹಿಂದಿನಿಂದಲೂ ಒತ್ತಡ ಹೇರುತ್ತಲೇ ಬರುತ್ತಿದೆ. ಅದರಲ್ಲೂ ಭಾರತ, ಚೀನಾ, ಟರ್ಕಿ ವಿರುದ್ಧ ಸುಂಕದ (Tariffs) ಸಮರ ಸಾರುವ ಮೂಲಕ ಕೆಂಗಣ್ಣಿಗೆ ಗುರಿಯಾಗಿತ್ತು. ಆದ್ರೆ ಇದೀಗ ಅದೇ ಚಾಳಿಯನ್ನ ಅಮೆರಿಕಾ ಮುಂದುವರೆಸಿದೆ.

ವೆನೆಜುವೆಲಾ ವಿರುದ್ಧ ಸಮರ ಸಾರಿದ ಟ್ರಂಪ್ ಅಧಿಕಾರದ ಅಮೆರಿಕಾ, ಇದೀಗ ಭಾರತ, ಬ್ರೆಜಿಲ್, ಚೀನಾದಂತಹ ಪ್ರಮುಖ ರಾಷ್ಟ್ರಗಳ ವಿರುದ್ಧ ಮತ್ತೆ ಸುಂಕದ ಸಮರಕ್ಕೆ ಮುಂದಾಗಿದೆ. ರಷ್ಯಾದಿಂದ ತೈಲ ಖರೀದಿ ಮಾಡುವದನ್ನೇ ಕಾರಣವಾಗಿಟ್ಟುಕೊಂಡು, ಈ ಮೂರು ದೇಶಗಳ ಮೇಲೆ ಶೇ.500% ರಷ್ಟು ಭಾರೀ ಸುಂಕ ವಿಧಿಸಲು ಸಜ್ಜಾಗಿದೆ.
ರಷ್ಯಾದ ವಿರುದ್ಧ ಅಮೆರಿಕದ ಅಸ್ತ್ರ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದ್ವಿಪಕ್ಷೀಯ ರಷ್ಯಾ ನಿರ್ಬಂಧ ಮಸೂದೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ನಿರ್ಧಾರ, ಉಕ್ರೇನ್-ರಷ್ಯಾ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗಳ ಬೆನ್ನಲ್ಲೇ ಬಂದಿದೆ. ಮುಂದಿನ ವಾರ ಮಸೂದೆಯು ದ್ವಿಪಕ್ಷೀಯ ಮತದಾನಕ್ಕೆ ಬರಬಹುದು ಎಂದು ಯುಎಸ್ ಕಾಂಗ್ರೆಸ್ ಸದಸ್ಯ ಹಾಗೂ ಟ್ರಂಪ್ ಅವರ ಆಪ್ತರಾದ ಸೆನೆಟರ್ ಲಿಂಡ್ಸೆ ಗ್ರಹಾಂ, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕಾಯ್ದೆಯು ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳು ರಷ್ಯಾ ತೈಲ ಖರೀದಿಸುವುದನ್ನು ನಿಲ್ಲಿಸಲು ಒತ್ತಡ ಹೇರಲಿದೆ ಎಂದು ಹೇಳಲಾಗಿದೆ.
ಅಮೆರಿಕದ ಹೊಸ ವ್ಯವಸ್ಥೆಯ ಪ್ರಕಾರ, ಭಾರತ, ಚೀನಾ ಮತ್ತು ಬ್ರೆಜಿಲ್ ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲೆ ಶೇ. 500 ರಷ್ಟು ಹೆಚ್ಚುವರಿ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. 2025 ರಲ್ಲಿ ಅಮೆರಿಕ ಭಾರತದಿಂದಾಗುವ ಕೆಲವು ರಫ್ತುಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸುತ್ತಿದೆ. ಒಂದು ವೇಳೆ ಹೊಸ ಮಸೂದೆ ಜಾರಿಯಾದರೆ, ವ್ಯಾಪಾರ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಇನ್ನು ಎಕ್ಸ್ ಪೋಸ್ಟ್‌ನಲ್ಲಿ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ, "ಬುಧವಾರ ಉತ್ಪಾದಕ ಸಭೆಯನ್ನು ನಡೆಸಿದ ನಂತರ, ಅಮೆರಿಕ ಅಧ್ಯಕ ಟ್ರಂಪ್ ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸುವ ಮಸೂದೆಗೆ ಅನುಮೋದನೆ ನೀಡಿದ್ದಾರೆ. ನಾನು ಈ ಮಸೂದೆಯ ಮೇಲೆ ಹಲವು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದೇನೆ. ಇದು ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ನೇರ ಶಿಕ್ಷೆ ವಿಧಿಸುವ ಉದ್ದೇಶದಿಂದ ಜಾರಿಗೆ ತರಲಿದೆ. ಇದರ ಪರಿಣಾಮ ಭಾರತ, ಚೀನಾ ಮತ್ತು ಬ್ರೆಜಿಲ್ ಮೇಲೆ ನೇರ ಪರಿಣಾಮ ಬೀರಲಿದೆ" ಎಂದು ಬರೆದಿದ್ದಾರೆ.
ಇನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮಸೂದೆಗೆ ಅನುಮೋದನೆ ನೀಡಿದ್ದರೂ, ಸಂಸತ್ತಿನಿಂದ ಅನುಮೋದನೆ ಇನ್ನೂ ಬಾಕಿದೆ. ಅಂದರೆ ಕಾನೂನಾಗಿ ಇನ್ನೂ ಜಾರಿಗೆ ಬಂದಿಲ್ಲ. ಈ ಮಸೂದೆಯನ್ನು ಮುಂದಿನ ವಾರ ಯುಎಸ್ ಕಾಂಗ್ರೆಸ್‌ನಲ್ಲಿ ಮಂಡಿಸಿ ಮತದಾನ ನಡೆಸುವ ನಿರೀಕ್ಷೆಯಿದೆ. ಆದ್ದರಿಂದ ಸಂಸತ್ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರವಾದ್ರೆ, ಈ ಸುಂಕ ಇತರ ದೇಶಗಳ ಮೇಲೆ ಪರಿಣಾಮ ಬೀರುವುದಂತೂ ಪಕ್ಕಾ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications