US Tariffs: ಡೊನಾಲ್ಡ್‌ ಟ್ರಂಪ್‌ ಸುಂಕ ಹೆಚ್ಚಿಸಲು ಚೀನಾದ ಅದೊಂದೇ ನಿರ್ಧಾರ ಕಾರಣ! ಏನದು ಗೊತ್ತಾ?

ದೊಡ್ಡಣ್ಣ ಎಂದು ಕರೆಸಿಕೊಂಡಿರುವ ಅಮೆರಿಕಾ (America) ಸದಾ ಒಂದಲ್ಲೊಂದು ಸುದ್ದಿಯಲ್ಲಿರುತ್ತದೆ. ಇದೀಗ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಭಾರತದ ಮೇಲೆ ಸುಂಕ ವಿಧಿಸಿದ ಕೆಲವೇ ತಿಂಗಳಲ್ಲಿ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಚೀನಾದ ವಿರುದ್ಧ ಸುಂಕದ ಯುದ್ಧ ಸಾರಿದೆ. ಹೌದು, ಇದೀಗ ಅಮೆರಿಕಾ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ ಶುರುವಾಗಿದೆ. ಈ ಹಿನ್ನೆಲೆ ನವೆಂಬರ್ 1 ರಿಂದ ಚೀನಾದ ಎಲ್ಲಾ ಸರಕುಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್‌ ಘೋಷಣೆಯನ್ನೂ (Trump Tariffs) ಮಾಡಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಸುಂಕ ಹೆಚ್ಚಿಸಲು ಚೀನಾದ ಅದೊಂದೇ ನಿರ್ಧಾರ ಕಾರಣ!

ಅಮೆರಿಕಾ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದಾಗಿನಿಂದ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾದಾಗಿನಿಂದ ಭಾರತದ ವಿರುದ್ಧ ಒಂದಲ್ಲಾ ಒಂದು ವಿಷಯಕ್ಕೆ ಸಮರ ಸಾರುತ್ತಲೇ ಇದ್ದಾರೆ. ಭಾರತ ಮತ್ತು ರಷ್ಯಾದ ಜೊತೆಗಿನ ಸಂಬಂಧವನ್ನು ನೋಡಲಾಗದೆ ಟ್ರಂಪ್‌ ಭಾರತದ ವಿರುದ್ಧ50% ಸುಂಕ ಹೇರಿದ್ದರು. ಇದೀಗ ಚೀನಾದ ವಿರುದ್ಧ 100% ಸುಂಕ ವಿಧಿಸುವ ಮೂಲಕ ಮತ್ತೊಮ್ಮೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗಿದ್ರೆ ಅಷ್ಟಕ್ಕೂ ಚೀನಾದ ವಿರುದ್ಧ ಅಮೆರಿಕ ಇಷ್ಟು ಖಡಕ್‌ ನಿರ್ಧಾರ ಕೈಗೊಳ್ಳು ಕಾರಣವೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಟ್ರಂಪ್‌ ಸುಂಕ ವಿಧಿಸಿದ್ದೇಕೆ?

ಚೀನಾ ಅಪರೂಪದ ಖನಿಜಗಳ ರಾಜ. ಹಲವಾರು ಉತ್ಪನ್ನಗಳನ್ನು ಖನಿಜಗಳನ್ನು ಚೀನಾದಿಂದ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅದರಲ್ಲಿ ಅಮೆರಿಕ ಕೂಡಾ ಒಂದು. ಇತ್ತೀಚೆಗಷ್ಟೇ ಚೀನಾ ಅಪರೂಪದ ಭೂಮಿಯ ಖನಿಜಗಳ ರಫ್ತಿನ ಮೇಲೆ ಹೊಸ ನಿಯಂತ್ರಣಗಳನ್ನು ಹೇರಿತ್ತು. ಇದೇ ಕಾರಣದಿಂದ ಇದೀಗ ಅಮೆರಿಕಾ ಕೂಡಾ ಚೀನಾದ ವಿರುದ್ಧ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಇನ್ನು ಚೀನಾದ ಈ ಖನಿಜಗಳು ಸೆಮಿಕಂಡಕ್ಟರ್‌ಗಳು, ಫೈಟರ್ ಜೆಟ್‌ಗಳು, ಸ್ಮಾರ್ಟ್‌ಫೋನ್‌ಳು ಮತ್ತು ಇತರ ಟೆಕ್‌ ಸಾಧನಗಳ ಉತ್ಪಾದನೆಯಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಅಮೆರಿಕಾ ಚೀನಾಗೆ ಪ್ರಮುಖ ಖರೀದಿದಾರನಾಗಿದ್ದರಿಂದ, ಚೀನಾದ ನಿರ್ಧಾರ ಟ್ರಂಪ್‌ ಅನ್ನು ಕೆರಳಿಸಿದೆ. ಅದೇ ಕಾರಣದಿಂದ ಇದೀಗ ಡೊನಾಲ್ಡ್‌ ಟ್ರಂಪ್‌ ಚೀನಾದ ವಿರುದ್ಧ ಸುಂಕದ ಸಮರ ಸಾರಿದ್ದಾರೆ ಎನ್ನಲಾಗಿದೆ.

ಅಮೆರಿಕಾದ ಸುಂಕದ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಇದು ಚೀನಾದ ವಿರುದ್ಧ ಅಮೆರಿಕಾದ ಪ್ರತೀಕಾರ ಎಂದು ಹೇಳಲಾಗುತ್ತಿದೆ. ಚೀನಾದ ಅಪರೂಪದ ಭೂಮಿಯ ಖನಿಜಗಳ ಮೇಲೆ ವಿಧಿಸಿರುವ ನಿರ್ಧಾರಗಳು ಅಮೆರಿಕಾದ ಕೈಗಾರಿಕಾ ಮತ್ತು ರಕ್ಷಣಾ ವಲಯಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಚೀನಾದ ನಿರ್ಧಾರಕ್ಕೆ ಕೆರಳಿರುವ ಅಮೆರಿಕ ಸುಂಕ ಹೆಚ್ಚಳದ ಮೂಲಕ ಟಾಂಗ್‌ ಕೊಡಲು ಸಿದ್ಧವಾಗಿದೆ.

ಪೋಸ್ಟ್‌ ಮೂಲಕ ಎಚ್ಚರಿಕೆ

ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದು, ಚೀನಾವನ್ನು "ಅಸಾಧಾರಣ ಆಕ್ರಮಣಕಾರಿ" ಎಂದು ಬಣ್ಣಿಸಿದ್ದಾರೆ. ಇದು "ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ನೈತಿಕ ಅವಮಾನ" ಎಂದು ಕರೆದಿದ್ದಾರೆ. ಇನ್ನು ಚೀನಾ ಇದರ ನಂತರವೂ ಮತ್ತಷ್ಟು ಕ್ರಮಗಳನ್ನು ತೆಗೆದುಕೊಂಡರೆ ಸುಂಕಗಳು ಬೇಗನೆ ಜಾರಿಗೆ ಬರಬಹುದು ಎಂದು ಎಚ್ಚರಿಕೆ ನೀಡಿದರು.

ಚೀನಾ ಅಧ್ಯಕ್ಷರನ್ನ ಭೇಟಿಯಾಗ್ತಾರ ಟ್ರಂಪ್?

ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ APEC ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಯಾಗುವ ನಿರೀಕ್ಷೆಯಿತ್ತು. ಆದರೆ ಅದಕ್ಕೂ ಮುನ್ನ ಚೀನಾ ಲಾಭ ಪಡೆಯಲು ಉದ್ದೇಶಪೂರ್ವಕವಾಗಿ ರಫ್ತು ನಿಯಂತ್ರಣಗಳನ್ನು ಹೇರಿದೆ ಎಂದು ಅಮೆರಿಕಾ ಅಧಿಕಾರಿಗಳು ಹೇಳುತ್ತಾರೆ. ಈ ಶೃಂಗಸಭೆಯಲ್ಲಿ ಟ್ರಂಪ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾಗುವ ನಿರೀಕ್ಷೆಯಿತ್ತು. ಆದರೆ ಈಗ ಆ ಭೇಟಿ ಬಹುತೇಕ ಡೌಟ್‌ ಎನ್ನಲಾಗುತ್ತಿದೆ. ಕ್ಸಿ ಅವರನ್ನು ಭೇಟಿಯಾಗಲು ಯಾವುದೇ ಕಾರಣವಿಲ್ಲ ಎಂದು ಟ್ರಂಪ್ ಹೇಳಿದ್ದರೂ, ಈ ಬಗ್ಗೆ ಯಾವುದೇ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಏನಿದು ಅಪರೂಪದ ಭೂಮಿಯ ಖನಿಜಗಳು?

ಇನ್ನು ಚೀನಾದಲ್ಲಿರುವ ಅಪರೂಪದ ಭೂಮಿಯ ಖನಿಜಗಳು ಹಲವಾರು ಟೆಕ್‌ ಉತ್ಪನ್ನಗಳ ಉತ್ಪಾದನೆಯಲ್ಲಿ ಉಪಯೋಗಿಸಲಾಗುತ್ತದೆ. ಇದರಲ್ಲಿ ಲ್ಯಾಂಥನಮ್, ನಿಯೋಡೈಮಿಯಮ್ ಮತ್ತು ಯುರೋಪಿಯಂನಂತಹ 17 ವಿಶೇಷ ಖನಿಜಗಳಾಗಿವೆ. ಈ ಖನಿಜಗಳನ್ನ ಬಳಸಿಕೊಂಡು ಸೆಮಿಕಂಡಕ್ಟರ್‌, ಫೈಟರ್‌ ಜೆಟ್‌, ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಿಕ್ ಕಾರುಗಳು, ಹಲವು ಉತ್ಪನ್ನಗಳಿಗೆ ಸಹಕಾರಿಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+