ನೋಬೆಲ್ ಶಾಂತಿ ಪ್ರಶಸ್ತಿ ಕೈತಪ್ಪಿದ ನಂತರ ಡೊನಾಲ್ಡ್ ಟ್ರಂಪ್ (Donald Trump) ಅವರ ಕೋಪ ಮತ್ತಷ್ಟು ಹೆಚ್ಚಾಗಿದೆ. ರಷ್ಯಾದ ಜೊತೆ ಭಾರತದ ಸಂಬಂಧವನ್ನು ನೋಡಲಾಗದೆ ಟ್ರಂಪ್ ಭಾರತದ ವಿರುದ್ಧ ಸುಂಕದ ಸಮರಕ್ಕೆ ಮುಂದಾಗಿತ್ತು. ಆದರೆ ಕ್ಯಾರೇ ಅನ್ನದೆ ಭಾರತ ತನ್ನ ವ್ಯಾಪಾರ ವಹಿವಾಟುಗಳನ್ನು (India-America) ನಡೆಸುತ್ತಲೇ ಇತ್ತು. ಭಾರತ ನಂತರ ಅಮೆರಿಕಾದ ಕೆಂಗಣ್ಣಿಗೆ ಚೀನಾ ಗುರಿಯಾಗಿತ್ತು. ಅಲ್ಲದೇ ಈಗಾಗಲೇ 100% ಸುಂಕ ವಿಧಿಸಿ ಚೀನಾಗೆ ಬೆದರಿಕೆಯನ್ನೂ ಹಾಕಿದ್ದರು. ಆದರೆ ಚೀನಾ ಕೂಡಾ ಅಮೆರಿಕಾದ ನಿರ್ಧಾರವನ್ನು ಕ್ಯಾರೇ ಅನ್ನದೆ ತನ್ನಷ್ಟಕ್ಕೆ ವ್ಯಾಪಾರ ನಡೆಸುತ್ತಿದೆ. ಆದ್ರೆ ಇದೀಗ ಚೀನಾದ ಮೇಲೆ ಡೊನಾಲ್ಡ್ ಟ್ರಂಪ್ ಮತ್ತೆ ಸುಂಕ ಏರಿಕೆ ಮಾಡಿದ್ದಾರೆ. ಈ ಮೂಲಕ ನವೆಂಬರ್ 1 ರಿಂದ ಅಮೆರಿಕವನ್ನು ಪ್ರವೇಶಿಸುವ ಎಲ್ಲಾ ಚೀನೀ ಸರಕುಗಳ ಮೇಲೆ 155 ಪ್ರತಿಶತ ಸುಂಕವನ್ನು ವಿಧಿಸಲಾಗುವುದು (China Tariffs) ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಣೆ ಮಾಡಿದರು.

ಭಾರತ ನಂತರ ಕೊನೆಗೂ ಚೀನಾದ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ವ್ಯಾಪಾರ ಯುದ್ಧ' ಕರೆ ನೀಡಿದ್ದಾರೆ. ನವೆಂಬರ್ 1ರಿಂದ ಚೀನಾ ಆಮದುಗಳ ಮೇಲೆ ಶೇಕಡಾ 155% ರಷ್ಟು ದೊಡ್ಡ ಸುಂಕ ವಿಧಿಸಲಿದೆ ಎಂದು ಘೋಷಿಸಿದ್ದಾರೆ. ಅಕ್ಟೋಬರ್ 22, 2025 ಈ ಘೋಷಣೆ ಮಾಡಿದ್ದು, ಸದ್ಯ ಜಾಗತಿಕವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚೀನಾದೊಂದೊಂದಿಗೆ ಉತ್ತಮ ಸಂಬಂಧ ಬೇಕು, ಆದರೆ...
ವೈಟ್‌ಹೌಸ್‌ನಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, "ಅಮೆರಿಕ ಮತ್ತು ಚೀನಾ ಉತ್ತಮ ಸಂಬಂಧದಲ್ಲಿರಬೇಕೆಂದು ನಾನು ಬಯಸುತ್ತೇನೆ. ಆದರೆ ಚೀನಾ ಕಳೆದ ಕೆಲವು ವರ್ಷಗಳಿಂದ ಅಮೆರಿಕಾದೊಂದಿಗೆ ತುಂಬಾ ಕಠಿಣವಾಗಿ ವರ್ತಿಸಿದೆ. ಏಕೆಂದರೆ ನಮ್ಮ ಮಾಜಿ ಅಧ್ಯಕ್ಷರು ವ್ಯಾಪಾರದ ದೃಷ್ಟಿಯಿಂದ 'ಸ್ಮಾರ್ಟ್' ಆಗಿರಲಿಲ್ಲ, ಹಾಗಾಗಿ ಚೀನಾ ಮತ್ತು ಇತರೆ ದೇಶಗಳು ಸುಲಭದಲ್ಲಿ ಅಮೆರಿಕದ ಸಹಾಯವನ್ನು ಪಡೆದುಕೊಂಡಿತು" ಎಂದು ಹೇಳಿದ್ದಾರೆ.
ಟ್ರಂಪ್ ಪ್ರಕಾರ, ನವೆಂಬರ್ 1ರಿಂದ ಚೀನಾ ಮೇಲೆ ವಿಧಿಸಲಿರುವ ಶೇಕಡಾ 155 ರಷ್ಟು ಸುಂಕ ಚೀನಾದ ಆರ್ಥಿಕತೆಗೆ ಸುಸ್ಥಿರವಲ್ಲ. ಆದರೆ ಅಮೆರಿಕದ ನೀತಿಗಳ ರಕ್ಷಣೆಗೆ ಈ ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ. ಇದು ಚೀನಾದೊಂದಿಗೆ ದೀರ್ಘಕಾಲದಿಂದ ನಡೆಯುತ್ತಿರುವ ಏಕಪಕ್ಷೀಯ ಆರ್ಥಿಕ ವ್ಯವಹಾರಗಳಿಗೆ ನೀಡಿದ ಪ್ರತಿಕ್ರಿಯೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವ್ಯಾಪಾರಕ್ಕಾಗಿ ಅಲ್ಲ, ರಾಷ್ಟ್ರೀಯ ಭದ್ರತೆಗಾಗಿ..
ಟ್ರಂಪ್ ಅವರು ಸುಂಕ ವಿಧಿಸಿದ ಹಿಂದಿನ ಕಾರಣವನ್ನು ಕೇವಲ ವ್ಯಾಪಾರ ಅಸ್ತ್ರ ಎಂದು ಕರೆಯದೆ, ಈ ನಿರ್ಧಾರ 'ರಾಷ್ಟ್ರೀಯ ಭದ್ರತೆ'ಗಾಗಿ ಎಂದು ಸ್ಷಷ್ಟನೆ ನೀಡಿದ್ದಾರೆ. ಈ ಹಿಂದೆ ಯುರೋಪಿಯನ್ ಯೂನಿಯನ್, ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ವಿಧಿಸಿದ ಸುಂಕಗಳು, ಅಮೆರಿಕಕ್ಕೆ ಶತಕೋಟಿ ಡಾಲರ್‌ಗಳಲ್ಲಿ ಆದಾಯ ತಂದುಕೊಟ್ಟಿತ್ತು. ಇದೇ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸುಂಕದ ಹಣ, ಸಾಲಕ್ಕಾಗಿ:
ಸುಂಕ ವಿಧಿಸುವುದರಿಂದ ಅಮೆಕಕ್ಕೆ ನೂರಾರು ಕೋಟಿ ಅಲ್ಲ, ಲಕ್ಷ ಕೋಡಿ ಡಾಲರ್‌ನಷ್ಟು ಆದಾಯ ಬರುತ್ತದೆ. ಇದರಿಂ ನಾವು ಸಾಲ ತೀರಿಸಲು ಬಳಸುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.
ರಷ್ಯಾಗೆ ಬೆಂಬಲ ನೀಡಿದ ದೇಶಗಳ ವಿರುದ್ಧ ಅಮೆರಿಕಾ ನೀತಿ:
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇಂಧನ ವ್ಯಾಪಾರದ ಮೂಲಕ ರಷ್ಯಾಗೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಅಮೆರಿಕಾ ತನ್ನ ಸುಂಕದ ನೀತಿಯನ್ನು ಕೈಗೊಳ್ಳುತ್ತಿದೆ. ಈ ಹಿಂದೆ ಭಾರತದ ಮೇಲೆ (ರಷ್ಯಾದ ತೈಲ ಆಮದಿನ ಮೇಲೆ 50% ಸುಂಕ) ಸುಂಕವನ್ನು ವಿಧಿಸಿತ್ತು. ಆದರೆ, ರಷ್ಯಾದ ಕಚ್ಚಾ ತೈಲದ ವಿಶ್ವದ ಅತಿದೊಡ್ಡ ಆಮದುದಾರನಾದ ಚೀನಾ ಮೇಲೆ 155% ಸುಂಕ ವಿಧಿಸಿದೆ. ಇದೀಗ ಅಮೆರಿಕ ಮತ್ತೆ ರಷ್ಯಾದ ವಿರುದ್ಧ ತನ್ನ ನಿಲುವನ್ನು ಎತ್ತಿ ತೋರಿಸಿದೆ.


Click it and Unblock the Notifications