ಕರೆನ್ಸಿ ಮೌಲ್ಯವನ್ನು ಕುಶಲತೆಯಿಂದ ತಿರುಚುವ ಪಟ್ಟಿಯಲ್ಲಿ ಇದೀಗ ತೈವಾನ್ ಮತ್ತು ಥಾಯ್ಲೆಂಡ್ ಜತೆಗೆ ಭಾರತವನ್ನೂ ಬುಧವಾರ ಯುಎಸ್ "ನಿಗಾ ಪಟ್ಟಿಗೆ" ಸೇರ್ಪಡೆ ಮಾಡಿದೆ. ವಿಯೆಟ್ನಾಂ ಮತ್ತು ಸ್ವಿಟ್ಜರ್ಲೆಂಡ್ ಅನ್ನು ಸಹ ಕರೆನ್ಸಿ ತಿರುಚುವವರು ಎಂದು ಬ್ರ್ಯಾಂಡ್ ಮಾಡಿದೆ. ಈ ನಿಗಾ ಪಟ್ಟಿಯಲ್ಲಿ ಜಪಾನ್, ದಕ್ಷಿಣ ಕೊರಿಯಾ, ಜರ್ಮನಿ, ಇಟಲಿ, ಸಿಂಗಾಪೂರ್ ಮತ್ತು ಮಲೇಷ್ಯಾ ದೇಶಗಳು ಇವೆ.
ಇನ್ನು ಆ ನಿಗಾ ಪಟ್ಟಿಯಿಂದ ಐರ್ಲೆಂಡ್ ಅನ್ನು ತೆಗೆಯಲಾಗಿದೆ ಎಂದು ಖಜಾನೆ ಇಲಾಖೆಯಿಂದ ಬಂದಿರುವ ವರದಿಯಲ್ಲಿ ತಿಳಿದುಬಂದಿದೆ. ಬುಧವಾರ ಅಮೆರಿಕನ್ ಕಾಂಗ್ರೆಸ್ ಗೆ ಈ ವರದಿಯನ್ನು ಸಲ್ಲಿಸಲಾಗಿದೆ.
ಜೂನ್ 2020ರ ತನಕ ನಾಲ್ಕು ತ್ರೈಮಾಸಿಕಗಳಲ್ಲಿ ಯುಎಸ್ ನ ಪ್ರಮುಖ ವಾಣಿಜ್ಯ ಸಹಭಾಗಿಗಳಾದ ವಿಯೆಟ್ನಾಂ, ಸ್ವಿಟ್ಜರ್ಲೆಂಡ್, ಭಾರತ ಮತ್ತು ಸಿಂಗಾಪೂರ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ನಿರಂತರವಾಗಿ, ಅಸಮಾನ ಬಗೆಯಲ್ಲಿ ಮಧ್ಯಪ್ರವೇಶಿಸಿವೆ ಎಂದು ಯುಎಸ್ ಹೇಳಿದೆ.

ವಿಯೆಟ್ನಾಂ ಮತ್ತು ಸ್ವಿಟ್ಜರ್ಲೆಂಡ್ ಮತ್ತೂ ಎರಡು ಮಾನದಂಡಗಳನ್ನು ಮೀರಿವೆ. ಅದರಿಂದ ಯುಎಸ್ ಬೆಳವಣಿಗೆಗೆ ಅಥವಾ ಅಮೆರಿಕನ್ ಸಿಬ್ಬಂದಿ ಮತ್ತು ಸಂಸ್ಥೆಗೆ ಸಮಸ್ಯೆಯಾಗುತ್ತದೆ. ಬಾಹ್ಯ ಅಸಮತೋಲನಕ್ಕೆ ಕಾರಣ ಆಗುತ್ತದೆ ಎಂದು ಹೇಳಲಾಗಿದೆ.
ಹತ್ತು ಆರ್ಥಿಕತೆಗಳನ್ನು ನಿಗಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದರಲ್ಲಿ ಪ್ರಮುಖ ವಾಣಿಜ್ಯ ಸಹಭಾಗಿಗಳ ಕರೆನ್ಸಿ ಪದ್ಧತಿಗಳನ್ನು ಗಮನಿಸಲಾಗುತ್ತಿದೆ. ಆ ಹತ್ತು ಆರ್ಥಿಕತೆಗಳೆಂದರೆ: ಚೀನಾ, ಜಪಾನ್, ಕೊರಿಯಾ, ಜರ್ಮನಿ, ಇಟಲಿ, ಸಿಂಗಾಪೂರ್, ಮಲೇಷ್ಯಾ, ತೈವಾನ್, ಥಾಯ್ಲೆಂಡ್ ಮತ್ತು ಭಾರತ. ಕೊನೆಯ ಮೂರನ್ನು ಈಗಿನ ವರದಿಯಲ್ಲಿ ಸೇರಿಸಲಾಗಿದೆ.
ಆರ್ ಬಿಐ ಮಾಹಿತಿ ಪ್ರಕಾರ 2019ರ ದ್ವಿತೀಯಾರ್ಧದಲ್ಲಿ ಭಾರತದಿಂದ ವಿದೇಶಿ ಕರೆನ್ಸಿಗಳ ಖರೀದಿ ಹೆಚ್ಚು ಮಾಡಿದೆ. ಜೂನ್ 2020ರ ವರೆಗಿನ ನಾಲ್ಕು ತ್ರೈಮಾಸಿಕದಲ್ಲಿ ವಿದೇಶಿ ವಿನಿಮಯ ನಿವ್ವಳ ಖರೀದಿ $ 64 ಅಥವಾ ಜಿಡಿಪಿಯ 2.4% ಖರೀದಿ ಮಾಡಲಾಗಿದೆ.
ಭಾರತವು ಬಹಳ ಹಿಂದಿನಿಂದಲೂ ವಿದೇಶಿ ಕರೆನ್ಸಿಗಳ ಖರೀದಿ ಮತ್ತು ಮಾರಾಟದ ಮಾಹಿತಿಯನ್ನು ಪ್ರಕಟಿಸಿ, ಪಾರದರ್ಶಕತೆ ಪ್ರದರ್ಶಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಲಾಗಿದೆ.


Click it and Unblock the Notifications