ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ಎಂಬ ಹೆಸರು ಕೇಳುವಾಗಲೇ ಒಮ್ಮೆ ಖುಷಿಯಾಗುತ್ತೆ. ಭಾರತೀಯ ರೈಲ್ವೇ ಮೈಲಿಗಲ್ಲನ್ನೇ ಇಡೀ ವಿಶ್ವ ತಿರುಗಿ ನೋಡಿವಂತೆ ಮಾಡಿದ ರೈಲ್ವೇ ಸೇವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೇಯ ಅತ್ಯಂತ ಆಧುನಿಕ, ಹೈಸ್ಪೀಡ್ ರೈಲ್ವೇ ಸೇವೆಗಳಲ್ಲಿ ಒಂದು. ಮೇಕ್ ಇನ್ ಇಂಡಿಯಾ (Make In India) ಯೋಜನೆಯಡಿ 2019 ರಲ್ಲಿ ಆರಂಭವಾದ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಸ್ತುತ ದೇಶದಾದ್ಯಂತ ವಿಸ್ತರಿಸಿದೆ. ಇದೀಗ ಕರಾವಳಿ ಜಿಲ್ಲೆಯ ಜನರಿಗೂ ಗುಡ್ ನ್ಯೂಸ್ ನೀಡಲು ಸಜ್ಜಾಗಿದೆ.

ಮಂಗಳೂರಿನ ಬಹು ವರ್ಷಗಳ ಕನಸು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೊಂದುವುದು. ಇದೀಗ ಈ ಕನಸು ನನಸಾಗುವ ಕ್ಷಣ ಬಂದಿದೆ. ಅಂದರೆ ಶೀಘ್ರದಲ್ಲೇ ಮಂಗಳೂರು ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ರೈಲು ಶೀಘ್ರದಲ್ಲೇ ಆರಂಭವಾಗಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗಿನ ಲೇಖನದಲ್ಲಿದೆ ಓದಿ.
ಕೇಂದ್ರ ರೈಲ್ವೇ ಸಚಿವರಿಂದ ಬಿಗ್ ಅಪ್ಡೇಟ್!
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ವಂದೇ ಭಾರತ್ ಕುರಿತು ಮಾತನಾಡಿದ ಸಚಿವರು, ಬೆಂಗಳೂರು ಮತ್ತು ಮಂಗಳೂರು ನಡುವೆ ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಈ ಮಾರ್ಗದಲ್ಲಿ ವಿದ್ಯುದೀಕರಣ ಕಾರ್ಯಗಳು ಸಂಪೂರ್ಣಗೊಂಡಿದೆ. ಅಲ್ಲದೇ ಈ ಮಾರ್ಗದ ಅಗತ್ಯ ಸುರಕ್ಷತಾ ಪ್ರಮಾಣೀಕರಣಗಳನ್ನು ಪಡೆದ ನಂತರ ಹೊಸ ಸೇವೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಗುಡ್ ನ್ಯೂಸ್!
ಭಾರತೀಯ ರೈಲ್ವೇ ಇಲಾಖೆಯಿಂದ ಕರ್ನಾಟಕಕ್ಕೆ ಈ ಮೂಲಕ ಸಿಹಿಸುದ್ದಿ ಬಂದಿದೆ. ರಾಜ್ಯದಲ್ಲಿ ಈಗಾಗಲೇ 21 ವಂದೇ ಭಾರತ್ ರೈಲು ಸೇವೆಗಳು 11 ಜೋಡಿ ರೈಲುಗಳಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ ಬೆಂಗಳೂರು ಮತ್ತು ಮಂಗಳೂರು ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಇದರೊಂದಿಗೆ ಕರ್ನಾಟಕಕ್ಕೇ 22ನೇ ವಂದೇ ಭಾರತ್ ರೈಲು ಬಂದಂತಾಗುತ್ತದೆ.
ಯೋಜನೆಯ ವಿವರ:
ಮಾರ್ಗ: ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್.
ವಿಸ್ತರಣೆಯ ಯೋಜನೆ: ಸದ್ಯ ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಆರಂಭಿಸಲು ಪ್ಲಾನ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರವಾರದವರೆಗೂ ವಿಸ್ತರಿಸಲು ಪ್ಲಾನ್ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಯೋಜನಗಳೇನು?
ಪ್ರಸ್ತುತ ಬೆಂಗಳೂರಿನಿಂದ ಮಂಗಳೂರಿಗೆ ಬಸ್ ಅಥವಾ ರೈಲಿನ ಮೂಲಕ ಪ್ರಯಾಣ ಮಾಡಬೇಕೆಂದರೆ ಸುಮಾರು 8 ರಿಂದ 12 ಗಂಟೆಗಳು ಬೇಕಾಗುತ್ತದೆ. ಆದರೆ ವಂದೇ ಭಾರತ್ ರೈಲು ಕಾರ್ಯಾರಂಭ ಮಾಡಿದ್ರೆ ಇದರಿಂದ ಪ್ರಯಾಣದ ಸಮಯ ಭಾರೀ ಕಡಿಮೆಯಾಗಲಿದೆ. ಆದ್ದರಿಂದ ಪ್ರಯಾಣಿಕರು ಕೂಡಾ ವೇಗವಾದ, ಆರಾಮದಾಯಕ ಪ್ರಯಾಣ ಒದಗಿಸಲಿದೆ. ಪ್ರಸ್ತುತ ಹಾಸನ-ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್‌ಗಳ ವಿದ್ಯುದೀಕರಣ ಪೂರ್ಣಗೊಂಡಿದ್ದು, ಇದರಿಂದ ಎಲೆಕ್ಟ್ರಿಕ್ ವಂದೇ ಭಾರತ್ ರೈಲು ಸುಗಮವಾಗಿ ಸಂಚರಿಸಲು ಸಹಕಾರಿಯಾಗಲಿದೆ.


Click it and Unblock the Notifications