ಭಾರತೀಯ ರೈಲ್ವೇಯ (Indian Railways) ಪ್ರೀಮಿಯಂ ರೈಲು ಸೇವೆಗಳಲ್ಲಿ ವಂದೇ ಭಾರತ್ ಕೂಡಾ ಒಂದು. ತನ್ನ ವಿಶಿಷ್ಟ ಲುಕ್ ಮತ್ತು ವೇಗದ ಪ್ರಯಾಣದಿಂದ ವಂದೇ ಭಾರತ್ ರೈಲು ಭಾರೀ ಜನಪ್ರಿಯತೆಯನ್ನು ಪಡೆದಿದೆ. ಇದೀಗ ಭಾರತೀಯ ರೈಲ್ವೇಯ ಬಹಳ ಮಹತ್ವಾಕಾಂಕ್ಷೆಯ ವಂದೇ ಭಾರತ್ ಸ್ಲೀಪರ್ ರೈಲಿನ (Vande Bharat Sleeper Train) ಆಗಮನಕ್ಕಾಗಿ ಇಡೀ ದೇಶವೇ ಕಾತುರದಲ್ಲಿದೆ. ಇದೀಗ ಈ ಬಗ್ಗೆ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.

ಹೌದು, ವಂದೇ ಭಾರತ್ ರೈಲಿನ ಬಹುಬೇಡಿಕೆಯ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ತೆಲುಗು ರಾಜ್ಯದಲ್ಲಿ ಕಾರ್ಯಾರಂಭ ಮಾಡಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ವಂದೇ ಭಾರತ್ ಸ್ಲೀಪರ್ ಈಗಾಗಲೇ ಕಾರ್ಯಾರಂಭ ಮಾಡಲಿದೆ ಎಂದು ಹೇಳಲಾಗಿದೆ. ಆದರೆ ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದೆ. ಆದರೆ ವರದಿಗಳ ಪ್ರಕಾರ, ಡಿಸೆಂಬರ್‌ನಲ್ಲಿ ಮೊದಲ ಸ್ಲೀಪರ್ ರೈಲು ಹಳಿಗಳ ಮೇಲೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಅದೂ ಕೂಡ ಮೊದಲ ರೈಲು ತೆಲುಗು ರಾಜ್ಯಗಳಲ್ಲಿಯೇ ಮೊದಲ ಬಾರಿಗೆ ಓಡಲಿದೆ ಎಂದು ನಿರೀಕ್ಷಿಸಲಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲಿನ ಸಂಚಾರ!
ವಿಜಯವಾಡ ವಭಾಗದ ಮೂಲಕ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾರಂಭ ಮಾಡಲಿದೆ ಎಂದು ಹೇಳಲಾಗುತ್ತಿದೆ.. ವಿಜಯವಾಡ-ಸಿಕಂದರಾಬಾದ್ ಮತ್ತು ವಿಜಯವಾಡ-ವಿಶಾಖಪಟ್ಟಣಂನಂತಹ ಜನನಿಬಿಡ ಮಾರ್ಗಗಳಲ್ಲಿ ಈ ಸ್ಲೀಪರ್ ರೈಲು ಆರಂಭವಾಗಬಹುದು ಎಂದು ನಿರೀಕ್ಷಿಲಾಗಿದೆ. ಭಾರತೀಯ ರೈಲ್ವೇ ಇಲಾಖೆಯಿಂದ ಅನುಮತಿ ಸಿಕ್ಕರೆ ಡಿಸೆಂಬರ್‌ನಲ್ಲಿ ಸೇವೆಗಳನ್ನು ಆರಂಭಿಸಲು ರೈಲ್ವೆ ಇಲಾಖೆ ಸಜ್ಜಾಗಿದೆ. ಆಂಧ್ರಪ್ರದೇಶದಲ್ಲಿ ರೈಲು ಕಾರ್ಯಾಚರಣೆಯ ಬಗ್ಗೆ ಶೀಘ್ರದಲ್ಲೇ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶಾದ್ಯಂತ ವಂದೇ ಭಾರತ್ ರೈಲುಗಳಿಗೆ ಈಗಾಗಲೇ ಭಾರೀ ಡಿಮ್ಯಾಂಡ್ ಇದೆ. ಈ ಬೇಡಿಕೆ ಬೆನ್ನಲ್ಲೇ ಇದೀಗ ವಂದೇ ಭಾರತ್ ಸ್ಲೀಪರ್ ಲಾಂಚ್ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ. ಹೊಸ ಕೋಚ್‌ಗಳು ಹಲವು ಪ್ರಯೋಗಗಳಲ್ಲಿ ಯಶಸ್ವಿಯಾಗಿವೆ. ರಾತ್ರಿ ಪ್ರಯಾಣವನ್ನು ಆರಾಮದಾಯಕವಾಗಿಸಲು ಮತ್ತಷ್ಟು ಕೆಲಸಗಳು ನಡೆಯುತ್ತಿದೆ. ಆರಂಭಿಕ ಪ್ರಯೋಗಗಳ ನಂತರ ಆಸನಗಳಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಲಾಗಿದ್ದು, ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಹೊಸ ಬದಲಾವಣೆಗಳನ್ನು ಸಹ ಮಾಡಲಾಗಿದೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶ ಮಾತ್ರವಲ್ಲದೇ, ದೆಹಲಿ-ಪಾಟ್ನಾ ಮಾರ್ಗವೂ ಪರಿಗಣನೆಯಲ್ಲಿದೆ. ಆ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ಅಧಿಕಾರಿಗಳು ಅಲ್ಲಿಯೂ ಕಾರ್ಯಾರಂಭ ಮಾಡಬಹುದು ಎಂದು ವರದಿಯಾಗಿದೆ.
ವಂದೇ ಭಾರತ್ ರೈಲಿನ ವಿಶೇಷತೆ:
ಈ ರೈಲು ಎಸಿ ಫಸ್ಟ್ ಕ್ಲಾಸ್, ಎಸಿ ಟು ಟೈರ್ ಮತ್ತು ಎಸಿ ಥ್ರೀ ಟೈರ್ ಕೋಚ್‌ಗಳನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಒಟ್ಟು 823 ಬರ್ತ್‌ಗಳಿವೆ. ಎಸಿ ಥ್ರೀ ಟೈರ್‌ನಲ್ಲಿ 611, ಎಸಿ ಟು ಟೈರ್‌ನಲ್ಲಿ 188 ಮತ್ತು ಫಸ್ಟ್ ಕ್ಲಾಸ್‌ನಲ್ಲಿ 24 ಬರ್ತ್‌ಗಳು ಇರುತ್ತವೆ. ಫಸ್ಟ್ ಎಸಿ ಕೋಚ್‌ನಲ್ಲಿ ಬಿಸಿನೀರಿನ ಶವರ್, ಅತ್ಯುತ್ತಮ ಇಂಟೀರಿಯರ್ ಮತ್ತು ಸುಧಾರಿತ ಸೌಲಭ್ಯಗಳು ಇರುತ್ತವೆ. ದೀರ್ಘ ಪ್ರಯಾಣಗಳಲ್ಲಿ ಪ್ರಯಾಣಿಕರು ಆರಾಮವಾಗಿ ಮಲಗಲು ವಿಶೇಷವಾಗಿ ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ.


Click it and Unblock the Notifications