ನವದೆಹಲಿ, ಮೇ 17: ದೇಶದ ನಂ.1 ಡೈರಿ ಉತ್ಪನ್ನ ಸಂಸ್ಥೆಯಾಗಿರುವ ಅಮುಲ್‌ನ ಹೊಸ ಪ್ರೋಡಕ್ಟ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಅಮುಲ್ ನ ಹೈ ಪ್ರೋಟೀನ್ ಉಳ್ಳ ಹಾಲು ಹಾಗೂ ಸಾವಯವ ಮಸಾಲೆ ಉತ್ಪನ್ನಗಳನ್ನು ಮುಂದಿನ ಕೆಲ ವಾರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಜನಸಾಮಾನ್ಯರಿಗೆ ಲಭ್ಯವಾಗಲಿದೆ.
ಈ ಮೂಲಕ ಫಿಟ್‌ನೆಸ್ ಮತ್ತು ಆರೋಗ್ಯವು ಕೇಂದ್ರಿದ ಮಾರುಕಟ್ಟೆಯಲ್ಲಿ, ಭಾರತದ ಡೈರಿ ದೈತ್ಯ ಅಮುಲ್, ಕ್ರಾಂತಿಕಾರಿ ಉತ್ಪನ್ನವನ್ನು ಪ್ರಾರಂಭಿಸುವುದರೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಆಟವನ್ನು ಆರಂಭಿಸಲಿದೆ . 'ಸೂಪರ್ ಹಾಲು' ಎಂಬ ಹಾಲಿನಲ್ಲಿ ಒಂದು ಲೋಟೆ ಹಾಲಿನಲ್ಲಿ ಸಿಗುವ ಪ್ರೋಟೀನ್ ಗಿಂತ ಐದು ಪಟ್ಟು ಹೆಚ್ಚು ಪ್ರೋಟೀನ್ ಸಿಗಲಿದೆ.

ಪ್ಯಾಕೇಜಿಂಗ್‌ನಲ್ಲಿರುವ ಪೌಷ್ಟಿಕಾಂಶದ ವಿವರಗಳ ಪ್ರಕಾರ, ಅಮುಲ್ ಟೋನ್ಡ್ ಹಾಲು ಸಾಮಾನ್ಯವಾಗಿ 200 ಮಿಲಿಲೀಟರ್‌ಗಳಿಗೆ (ಮಿಲಿ) ಸುಮಾರು 3 ಗ್ರಾಂ ಪ್ರೋಟೀನ್‌ನ್ನು ಹೊಂದಿರುತ್ತದೆ. ಆದರೆ ಫುಲ್ ಕ್ರೀಂ ಮಿಲ್ಕ್ ಸುಮಾರು 7 ಗ್ರಾಂಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆದರೆ ಅಮುಲ್ ಸೂಪರ್ ಮಿಲ್ಕ್ ನ 200 ಮಿಲಿ ಪ್ಯಾಕೆಟ್ ನಲ್ಲಿ 30 ಗ್ರಾಂ ಪ್ರೋಟೀನ್ ಹೊಂದಿರುವ ಹಾಲು ಇರಲಿದೆ.
ಅಮುಲ್ ಈಗಾಗಲೇ ತನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲಸ್ಸಿ, ಮಿಲ್ಕ್‌ಶೇಕ್‌ಗಳು, ಮಜ್ಜಿಗೆ ಗಳಲ್ಲಿಯೂ ಪ್ರೋಟೀನ್‌ನ ಹೈ-ಪ್ರೋಟೀನ್ ಆವೃತ್ತಿಗಳನ್ನು ಪರಿಚಯಿಸಿದೆ. ಪ್ರತಿಯೊಂದೂ ಪ್ರತಿ ಸರ್ವ್ ನಲ್ಲೂ 15-20 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ.
ಅಮುಲ್ ಎಂಡಿ ಜಾಯೆನ್ ಮೆಹ್ತಾ ಮಾತನಾಡಿ, 'ನಮ್ಮ ಯಾವುದೇ ಉತ್ಪನ್ನಗಳಲ್ಲಿ ಇದು ಅತ್ಯುನ್ನತ ಮಟ್ಟದ ಪ್ರೋಟೀನ್ ಆಗಿದೆ. ಹೀಗಾಗಿಯೇ ನಾವಿದನ್ನು ಸೂಪರ್ ಮಿಲ್ಕ್ ಎಂದು ಕರೆಯುತ್ತೇವೆ.ಇದಲ್ಲದೇ ಸಾವಯವ ಮಸಾಲೆಗಳು, ಗುರ್ (ಬೆಲ್ಲ) ಮತ್ತು ಸಕ್ಕರೆ ಸೇರಿ ನಮ್ಮ ಸಾವಯವ ವಿಭಾಗದಿಂದ ಇನ್ನೂ 20 ಉತ್ಪನ್ನಗಳು ಈ ವಾರವೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ' ಎಂದು ಮೆಹ್ತಾ ಹೇಳಿದ್ದಾರೆ. ಹೆಚ್ಚಿನ ಪ್ರೊಟೀನ್ ಹಾಲಿನ ಜೊತೆಗೆ ಕಂಪನಿಯು 2023ರಲ್ಲಿ 55,000 ಕೋಟಿ ರೂಪಾಯಿ ($7.2 ಬಿಲಿಯನ್) ಮೀರಿದ ವಾರ್ಷಿಕ ವಹಿವಾಟು ಸಾಧಿಸಿದೆ.
ಅಮೆರಿಕದ ಮಾರುಕಟ್ಟೆ ಮೇಲೆ ಕಣ್ಣಿಟ್ಟ ಅಮುಲ್
"ನಾವು ಬೆಣ್ಣೆ, ಚೀಸ್, ತುಪ್ಪ, ಶ್ರೀಖಂಡ್, ಐಸ್ ಕ್ರೀಮ್ ಮತ್ತು ಪನೀರ್ ಅನ್ನು ಅಮೇರಿಕಾಕ್ಕೆ ರಫ್ತು ಮಾಡುತ್ತಿದ್ದೇವೆ. ಯುಎಸ್‌ನಲ್ಲಿರುವ ನಮ್ಮ ಗ್ರಾಹಕರು ಅಮುಲ್ ಗೋಲ್ಡ್‌ನಂತಹ ಹೆಚ್ಚಿನ ಕೊಬ್ಬಿನ ಹಾಲು ಸೇರಿದಂತೆ ಭಾರತೀಯ ರುಚಿಯನ್ನು ಹೊಂದಿರುವ ನಮ್ಮ ಹೆಚ್ಚಿನ ಉತ್ಪನ್ನಗಳನ್ನು ಬಯಸುತ್ತಿದ್ದಾರೆ, "ಎಂದು ಮೆಹ್ತಾ ಹೇಳಿದ್ದಾರೆ.
ಅಮುಲ್ 'ಸೂಪರ್ ಮಿಲ್ಕ್' ನಿಂದ ಯಾರಿಗೆ ಹೆಚ್ಚು ಪ್ರಯೋಜನ ?
ಫಿಟ್‌ನೆಸ್ ಪ್ರಿಯರಿಗೆ : ನೀವು ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರೆ ನಿಮ್ಮ ಮಸಲ್ಸ್ ಮತ್ತು ಬೆಳವಣಿಗೆಯಲ್ಲಿ 'ಸೂಪರ್ ಹಾಲು' ಅನುಕೂಲಕ್ಕೆ ಬರಬಹುದು. ಅಮುಲ್'ಸೂಪರ್ ಹಾಲು' ಪ್ರೋಟೀನ್ ಶೇಕ್‌ಗಳಿಗೆ ಸಮನಾಗಿ ಬೆಳೆದು ನಿಲ್ಲಬಹುದು.
ಸಸ್ಯಾಹಾರಿಗಳಿಗೆ: ನಮ್ಮ ದೇಶದಲ್ಲಿ ಸಸ್ಯಾಹಾರವು ಅನೇಕರಿಗೆ ಜೀವನ ವಿಧಾನವಾಗಿರುವುದರಿಂದ, ದೈನಂದಿನ ಪ್ರೋಟೀನ್ ಅಗತ್ಯಗಳನ್ನು ಪೂರೈಸುವುದು ಒಂದು ಸವಾಲಾಗಿದೆ. 'ಸೂಪರ್ ಹಾಲು' ಒಂದು ಇವರಿಗೆ ರುಚಿಕರ ಮತ್ತು ಅತ್ಯುತ್ತಮ ಆಹಾರವಾಗಿ ಹೊರಹೊಮ್ಮಲಿದೆ.


Click it and Unblock the Notifications