ಬೆಂಗಳೂರು, ಜೂನ್ 27: ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್‌ಪುತ್ರ ಸಿದ್ಧಾರ್ಥ್ ಮಲ್ಯ ತಮ್ಮ ಗೆಳತಿ ಜಾಸ್ಮಿನ್ ಅವರೊಂದಿಗೆ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಂಡನ್ ನಲ್ಲಿ ಶನಿವಾರ ನಡೆದ ಖಾಸಗಿ ಕಾರ್ಯಕ್ರಮದ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ದಂಪತಿ ಫಾರೆವರ್ ಎಂದು ಬರೆದುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಪ್ತರು ಮತ್ತು ಕುಟುಂಬಸ್ಥರು ಮಾತ್ರ ಉಪಸ್ಥಿತರಿದ್ದರು.
ಮಾಡೆಲ್ ಹಾಗೂ ನಟರಾಗಿರುವ ಸಿದ್ದಾರ್ಥ್ ಮಲ್ಯ , ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ ನೆಲೆಸಿದ್ದಾರೆ. ಇಲ್ಲೇ ಜನಿಸಿರುವ ಸಿದ್ದಾರ್ಥ್ ಲಂಡನ್ ಮತ್ತು ಮತ್ತು ಯುಎಇಯಲ್ಲಿ ಬೆಳೆದರು. ಅವರು ಲಂಡನ್ ವೆಲ್ಲಿಂಗ್ಟನ್ ಕಾಲೇಜು ಮತ್ತು ಕ್ವೀ ನ್ ಮೇರಿ ವಿಶ್ವ ವಿದ್ಯಾ ಲಯದಲ್ಲಿ ಅಧ್ಯ ಯನ ಮಾಡಿದರು, ನಂತರ ರಾಯಲ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀ ಚ್ ಅಂಡ್ ಡ್ರಾಮಾದಲ್ಲಿ ತರಬೇತಿ ಪಡೆದರು. ಆ ಬಳಿಕ ಮಾಡೆಲ್ ಮತ್ತು ನಟರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು.

ಸಿದ್ಧಾರ್ಥ್ ಮಲ್ಯ ಆಸ್ತಿ:
ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಸಿದ್ಧಾರ್ಥ್ Sad-Glad ' ಎಂಬ ಪುಸ್ತಕವನ್ನು ಸಹ ಬರೆದಿದ್ದಾರೆ, ಇದು ಬದಲಾಗುತ್ತಿರುವ ಭಾವನೆ ಹಾಗೂ ಮೆಂಟಲ್ ಹೆಲ್ತ್ ಕುರಿತ ಪುಸ್ತಕವಾಗಿದೆ. ಮಾಧ್ಯ ಮ ವರದಿಗಳನ್ನು ಉಲ್ಲೇಖಿಸಿದ ನವಭಾರತ್ ಟೈಮ್ಸ್ ಪ್ರಕಾರ, ಸಿದ್ಧಾರ್ಥ್ ಮಲ್ಯ ಅವರ ನಿವ್ವಳ ಮೌಲ್ಯ ವು 2023 ರ ವೇಳೆಗೆ ಸುಮಾರು 3,175 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅವರ ಸಂಪತ್ತು ಅವರ ವ್ಯಾಪಾರ ಉದ್ಯಮಗಳು, ಮನರಂಜನಾ ಯೋಜನೆಗಳು ಮತ್ತು ಮಾಡೆಲಿಂಗ್ ವೃತ್ತಿಯಿಂದ ಬಂದಿದೆ ಎನ್ನಲಾಗಿದ್ದು ಅದರೂ ಇವುಗಳು ಅಧಿಕೃತ ದೃಡೀಕರಣಗೊಂಡ ಅಂಕಿಅಂಶಗಳಲಿಲ್ಲ.
ತಮ್ಮ ವೃತ್ತಿಜೀವನದ ಜೊತೆಗೆ, ಸಿದ್ಧಾರ್ಥ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಕ್ರಿಕೆಟ್ ತಂಡದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. 2012 ರಲ್ಲಿ , ಅವರು 'ನೋ ಬೌಂಡರೀಸ್' ಹೆಸರಿನ ಇಂಟರ್ನೆಟ್ ಟಾಕ್ ಶೋ ಅನ್ನು ಪ್ರಾರಂಭಿಸಿದರು, ಇದು ಕಾರ್ಪೊರೇಟ್ ಪ್ರ ಪಂಚದ ಹೊರಗೆ ತನ್ನದೇ ಆದ ಗುರುತನ್ನು ಸ್ಥಾಪಿಸಲು ಸಹಾಯ ಮಾಡಿತು. ಸಿದ್ದಾರ್ಥ್ ಫ್ಯಾ ಶನ್ ಇಂಡಸ್ಟ್ರಿ ಯಲ್ಲಿ ಅನೇಕ ಪ್ರ ಸಿದ್ಧ ವಿನ್ಯಾ ಸಕಾರರಿಗೆ ರಾಂಪ್ ವಾಕ್ ಮಾಡಿದ್ದಾರೆ ಮತ್ತು ಇತ್ತೀ ಚೆಗೆ 'ಸಿದ್ ಸೆಷನ್ಸ್' ಎಂಬ ತಮ್ಮದೇ ಆದ ಯೂ ಟ್ಯೂಬ್ ಶೋ ಅನ್ನು ಪ್ರಾರಂಭಿಸಿದ್ದಾರೆ.
2023ರ ಆರಂಭದಲ್ಲಿಯೇ ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಗೆಳತಿ ಜಾಸ್ಮೀನ್ ಗೆ ಸಿದ್ಧಾರ್ಥ್ ಪ್ರಪೋಸ್ ಮಾಡಿದ್ದರು. ಪ್ರಪೋಸ್ ಮಾಡಿದ ಫೋಟೋ ಸಹ ವೈರಲ್ ಆಗಿತ್ತು. ಜಾಸ್ಮೀನ್ ಸಹ ಸಿದ್ಧಾರ್ಥ್ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಒಂದೂವರೆ ವರ್ಷದ ಬಳಿಕ ನಿಶ್ಚಿತಾರ್ಥ ಮದುವೆಯಾಗಿದ್ದಾರೆ.
ವಿಜಯ್ ಮಲ್ಯ 900 ಕೋಟಿಗೂ ಅಧಿಕ ಸಾಲವನ್ನು ಬ್ಯಾಂಕ್ ಗಳಿಗೆ ಪಾವತಿಸದೇ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿ ಭಾರತ ಬಿಟ್ಟು ಪರಾರಿಯಾಗಿದ್ದಾರೆ.


Click it and Unblock the Notifications