ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೋತಿಯ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಆ ತನ್ನ ತಾಯಿಯನ್ನ ಕಳೆದುಕೊಂಡಿದ್ದ ಮರಿ ಕೋತಿ, ಬೇರೆ ಕೋತಿಗಳ ಬಳಿ ಹೋಗೋದು. ಅವುಗಳು ಈ ಮರಿಯನ್ನ ದೂರ ತಳ್ಳೋದು. ತನಗ್ಯಾರೂ ಇಲ್ಲವೆಂಬಂತೆ ಈ ಕೋತಿಮರಿ ಒಬ್ಬಂಟಿಯಾಗೋದು. ಅದರ ಒಂಟಿತನ ಹೋಗಲಾಡಿಸಲು, ಒಂದು ಗೊಂಬೆಯನ್ನ ಕೊಡೋದು, ಆ ಗೊಂಬೆಯೇ ತನ್ನ ತಾಯಿ ಎಂದುಕೊಂಡು ಕೋತಿ ಮರಿ ಆಟ ಆಡ್ತಾ ನಲಿಯೋದು. ಈ ದೃಶ್ಯ ಎಲ್ಲರಿಗೂ ಗೊತ್ತಿದೆ. ಇದು ಯಾವುದೇ ಸಿನಿಮಾ ದೃಶ್ಯವಲ್ಲ. ಇದೊಂದು ರಿಯಲ್ ಆಗಿ ನಡೆದ ಘಟನೆ. ಈ ಒಂದು ರಿಯಲ್ ಘಟನೆಯಿಂದ ಪ್ರೇರಿತವಾಗಿ, ಈಗ ಆಟಿಕೆ ರೂಪದಲ್ಲಿ ಎಲ್ಲರಿಗೂ ಸಿಗ್ತಿದೆ.

ಹೌದು, ಈ ಘಟನೆ ಜಪಾನ್‌ನ ಇಚಿಕಾವಾ ನಗರ ಮೃಗಾಲಯದಲ್ಲಿ ನಡೆದಿದ್ದು. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಏಳು ತಿಂಗಳ ಕೋತಿ ಮರಿ ಹೆಸರು ಪಂಚ್. ಇದರ ಕಥೆ ಎಲ್ಲರಿಗೂ ಗೊತ್ತೇ ಇದೆ. ಅಂದಹಾಗೆ ಆ ಕೋತಿಮರಿಗೆ ಕೊಡಲಾದ ಗೊಂಬೆ, ಐಕಿಯಾ ಸ್ಟಫಡ್ ಒರಾಂಗುಡನ್ ಆಟಿಕೆ. ಅದನ್ನ ಹಿಡಿದುಕೊಂಡೇ ಆ ಕೋತಿಮರಿ ತನ್ನ ತಾಯಿ ಎಂದುಕೊಂಡು ನಲಿದಾಡಿದೆ.
ಇನ್ನು ವೈರಲ್ ಪಂಚ್‌ನ ದೃಶ್ಯವನ್ನು ಮೃಗಾಲಯದ ಸಿಬ್ಬಂದಿ ಕ್ಯಾಮೆರಾದಲ್ಲಿ ದಾಖಲಿಸಿದ್ರು. ತಾಯಿಯನ್ನ ಅಪ್ಪಿಕೊಳ್ಳುವಂತೆ ಒಂದು ಗೊಂಬೆಯನ್ನ ಪಂಚ್ ಅಪ್ಪಿಕೊಳ್ಳೋವಾಗ ಎಷ್ಟೋ ಜನರ ಮನಸ್ಸಿಗೆ ತಾಗಿದೆ. ಕೆಲ ಪ್ರಾಣಿಪ್ರಿಯರು ಭಾವುಕರೂ ಆದ್ರೂ.
ಇನ್ನು ಈ ವೈರಲ್ ವಿಡಿಯೋದಿಂದ ಆ ಆಟಿಕೆಯ ಬೇಡಿಕೆ ಕೂಡ ಜೋರಾಗಿದೆ. ಜನರು ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಐಕಿಯಾ ಅಂಗಡಿಗಳಿಗೆ ಹೋಗಿ ಅದನ್ನ ಖರೀದಿ ಮಾಡ್ತಿದ್ದಾರೆ. ವಿಶೇಷ ಏನಂದ್ರೆ ಈ ಆಟಿಕೆ ಬೆಲೆ ಮೊದಲು 19.99 ಡಾಲರ್ ಇತ್ತು. ಆದರೆ ಈಗ ಇ-ಬೇಯಲ್ಲಿ 100 ರಿಂದ 350 ಡಾಲರ್‍ವರೆಗೆ ಮಾರಟವಾಗ್ತಿದೆ. ಕೆಲವು ಮಾರಾಟಗಾರರು ಸಾಗಣೆ ಶುಲ್ಕವನ್ನು ಕೂಡ ಸೇರಿಸಿದ್ದಾರೆ.
ಇನ್ನು ಯುಎಸ್‌ನ ಐಕಿಯಾ ಸಿಇಒ ಈ ಬಗ್ಗೆ ಹೇಳಿಕೆಯೊಂದನ್ನ ಕೂಡ ನೀಡಿದ್ದಾರೆ. ಅದೇನೆಂದರೆ ಈ ಆಟಿಕೆಯು ಈಗ ಅತ್ಯಂತ ಜನಪ್ರಿಯವಾದ ಆಟಿಕೆಯಾಗಿದೆ. ಆಟಿಕೆಯನ್ನು ಖರೀದಿಸಲು ಪಂಚ್‌ನ ಹೃದಯಸ್ಪರ್ಶಿ ವಿಡಿಯೋ ಪ್ರಭಾವಿತ ಮಾಡಿವೆ. ಅಲ್ಲದೇ ಐಕಿಯಾ ಕಂಪನಿ ಕೂಡ ಇದರಿಂದ ಪ್ರೇರಿತಗೊಂಡು, ಮೃಗಾಲಯಕ್ಕೆ ಮತ್ತಷ್ಟು ಸ್ಟಫಡ್ ಆಟಿಕೆಗಳನ್ನ ದಾನ ಮಾಡಿದೆ. ಈಗ ಮೃಗಾಲಯದ ಪ್ರಾಣಿಗಳು, ವಿಶೇಷವಾಗಿ ಸಾಂತ್ವನಕ್ಕೆ ಅಗತ್ಯವಿರುವ ಮಕಾಕ್ ಮತ್ತು ಇತರ ಪ್ರಾಣಿಗಳು, ಈ ಆಟಿಕೆಗಳಿಂದ ಸಂತೋಷವನ್ನು ಅನುಭವಿಸುತ್ತಿದ್ದಾರೆ.
ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಜನರು ಮರಿ ಕೋತಿಯಾದ ಪಂಚ್ ಹಾಗೂ ಐಕಿಯಾ ಮೇಲೆ ವಿಶೇಷವಾದ ಪ್ರೀತಿಯನ್ನ ವ್ಯಕ್ತಪಡಿಸೋಕೆ ಶುರು ಮಾಡುದ್ದಾರೆ. ಈ ಮಕಾಕ್ ಎಲ್ಲ ಬ್ರಾಂಡ್ ಡೀಲ್‌ಗಳಿಗೆ ಅರ್ಹ ಕೂಡ ಎಂದಿದ್ದಾರೆಂದು ಕಂಪನಿ ಸಿಇಒ ಖುಷಿಯಾಗಿ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ವೈರಲ್ ಆದ ದೃಶ್ಯ ನಿರ್ಜೀವ ವಸ್ತುಗಳು ಕೂಡ ಸಾಂತ್ವನ ನೀಡುತ್ತವೆ. ಭಾವನೆಗಳಿಗೆ ಮಿತಿ ಇಲ್ಲ, ಜಾತಿ ಇಲ್ಲ, ಬಣ್ಣವಿಲ್ಲ, ಬೇಧವಿಲ್ಲ ಹಾಗೂ ಸಜೀವ-ನಿರ್ಜೀವವೆಂಬೂದೂ ಇಲ್ಲ. ಈ ಗೊಂಬೆ ಹಾಗೂ ಒಂದು ಮರಿ ಕೋತಿ ಸಾಕಷ್ಟು ಪಾಠ ಕಲಿಸಿದೆ. ಸಾಕಷ್ಟು ವಿಚಾರಗಳನ್ನ ಹರಿಸಿವೆ ಅಂದ್ರೂ ತಪ್ಪಾಗಲ್ಲ.


Click it and Unblock the Notifications