ವಿರಾಟ್ ಕೊಹ್ಲಿ, ಕ್ರಿಕೆಟ್ ಜಗತ್ತಿನ ಕಿಂಗ್ ಎಂದೇ ಅಭಿಮಾನಿಗಳು ಕೊಂಡಾಡುತ್ತಾರೆ. ಮೈದಾನದಲ್ಲಿ ಮಾತ್ರವಲ್ಲ, ಮೈದಾನದ ಹೊರಗೂ ಅವರ ಜೀವನ ಶೈಲಿ ರಾಜನಂತೆಯೇ ಇದೆ. ಸಾವಿರಾರು ಕೋಟಿ ರೂ.ಗಳ ಒಡೆಯನಾದ ಕೊಹ್ಲಿ, ವಿಲಾಸಿ ಜೀವನವನ್ನು ನಡೆಸುತ್ತಿದ್ದಾರೆ. ಅವರ ಐಷಾರಾಮಿ ಜೀವನ ಶೈಲಿಗೆ ಸಾಕ್ಷಿ ಅವರ ಕೈಗಡಿಯಾರಗಳ ಸಂಗ್ರಹ.
ಕ್ರಿಕೆಟ್ ಮೈದಾನದಲ್ಲಿ ಮಿಂಚಲಿ ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿ, ಐಷಾರಾಮಿ, ಲಕ್ಶುರಿ ಕೈ ಗಡಿಯಾರಗಳ ಮೇಲಿನ ಅವರ ಮೆಚ್ಚುಗೆ ಎದ್ದು ಕಾಣುತ್ತದೆ. ಅದೇ ರೀತಿ ವಿರಾಟ್ ಕೊಹ್ಲಿ ಐಪಿಎಲ್ 2025 ಕ್ಕೂ ಮೊದಲು ಕೋಲ್ಕತ್ತಾದಲ್ಲಿ ಆರ್‌ಸಿಬಿ ಜೆರ್ಸಿಯನ್ನು ಧರಿಸಿ ಕಾಣಿಸಿಕೊಂಡಾಗ ಅವರ ಕೈಯಲ್ಲಿದ್ದ ರೋಲೆಕ್ಸ್ ವಾಚ್ ಬಹಳಷ್ಟು ಜನರ ಗಮನ ಸೆಳೆಯಿತು. ಈ ಹಿಂದೆಯೂ ಲಕ್ಷಾಂತರ ಮೌಲ್ಯದ ವಾಚ್ ಧರಿಸಿರುವ ಕೊಹ್ಲಿಯ ಅನೇಕ ಪೋಟೋ ವೈರಲ್ ಆಗಿತ್ತು. ಹಾಗಿದ್ರೆ ಈ ಚಿನ್ನದ ಆ ವಾಚ್‌ನ ಬೆಲೆ ಎಷ್ಟಿರಬಹುದು?

ಇದು ಕೊಹ್ಲಿ ವಾಚ್ನ ಬೆಲೆ..!
ಅಂದಹಾಗೆ ಕೊಹ್ಲಿ ಧರಿಸಿರುವ ಈ ಗಡಿಯಾರವು ರೋಲೆಕ್ಸ್‌ನ ಪ್ರಸಿದ್ಧ ಡೇಟೋನಾ ಸರಣಿಗೆ ಸೇರಿದ್ದು, ಇದು ಅತ್ಯಂತ ಸೊಗಸಾದ ವಿನ್ಯಾಸ ಮತ್ತು ಉತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. 18 ಕ್ಯಾರೆಟ್ ಹಳದಿ ಚಿನ್ನದಿಂದ ತಯಾರಿಸಲಾಗಿರುವ ಈ ವಾಚ್ ಕಪ್ಪು ಸೆರಾಮಿಕ್ ಅಂಚು ಹೊಂದಿರುವ ಕಾರಣ, ಇದು ಬಂಗಾರ ಬಣ್ಣದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಈ ಗಡಿಯಾರದ ಡಯಲ್ 'ಪಾಲ್ ನ್ಯೂಮನ್' ಸಬ್‌ಡಯಲ್‌ಗಳಿಂದ ಅಲಂಕರಿಸಲ್ಪಟ್ಟಿದೆ. ಈ ಸಬ್‌ಡಯಲ್‌ಗಳು ಗಡಿಯಾರಕ್ಕೆ ಒಂದು ಕ್ಲಾಸಿಕ್ ಮತ್ತು ವಿಂಟೇಜ್ ಲುಕ್ ನೀಡುತ್ತವೆ. ಇದು ಕ್ಯಾಲಿಬರ್ 4132 ಚಲನೆಯಿಂದ ಕಾರ್ಯನಿರ್ವಹಿಸುತ್ತದೆ, ಇದು ಕ್ಲಾಸಿಕ್ ಡೇಟೋನಾ 4131 ರ ಸುಧಾರಿತ ಆವೃತ್ತಿಯಾಗಿದೆ. ಈ ನವೀನ ಅಪ್‌ಗ್ರೇಡ್ 24-ಗಂಟೆಗಳ ಟೋಟಲೈಸರ್ ಅನ್ನು ಒಳಗೊಂಡಿದೆ. ಇದು ಗಡಿಯಾರದ ಕಾರ್ಯವನ್ನು ಹೆಚ್ಚಿಸುತ್ತದೆ.
ಬಾಳಿಕೆಗಾಗಿ ವಿನ್ಯಾಸಗೊಳಿಸಲಾದ ಈ ಗಡಿಯಾರವು ಸ್ಕ್ರಾಚ್-ನಿರೋಧಕ ನೀಲಮಣಿ ಸ್ಫಟಿಕವನ್ನು ಹೊಂದಿದೆ. ಮೂರು ಲೇಯರ ವಾಟರ್ ಪ್ರೂಫ್ ರಕ್ಷಣೆಯೊಂದಿಗೆ ಸ್ಕ್ರೂ-ಡೌನ್ ಕಿರೀಟವನ್ನು ಹೊಂದಿದೆ. ಇದರ 18-ಕ್ಯಾರೆಟ್ ಚಿನ್ನದ Oyster ಬ್ರೇಸ್ಲೆಟ್ ಸುರಕ್ಷಿತ ಮತ್ತು ಸೊಗಸಾದ ಫಿಟ್ ಎರಡನ್ನೂ ನೀಡುತ್ತದೆ. ಕ್ರೊನೊ24 ವೆಬ್‌ಸೈಟ್ ಪ್ರಕಾರ, ಈ ಐಷಾರಾಮಿ ರೋಲೆಕ್ಸ್ ಡೇಟೋನಾ 2.49 ಕೋಟಿ ರೂ.ಗಳ ಅದ್ಭುತ ಬೆಲೆಯನ್ನು ಹೊಂದಿದೆ.
ಇದಲ್ಲದೇ ಕೊಹ್ಲಿ ಬಳಿ ಹಲವಾರು ದುಬಾರಿ ವಾಚ್ಗಳಿವೆ. ಅವುಗಳ ಪೈಕಿ ರೊಲೆಕ್ಸ್ ಡೇಟೋನಾ ರೈನ್ಬೋ ಎವೆರೋಸ್ ಗೋಲ್ಡ್ ಕೂಡಾ ಒಂದು ರೊಲೆಕ್ಸ್ ಡೇಟೋನಾ ರೈನ್ಬೋ ಎವೆರೋಸ್ ಗೋಲ್ಡ್ ವಿಶ್ವದ ಕೆಲವೇ ಕೆಲವು ಟಾಪ್ ಸೆಲಬ್ರಿಟಿಗಳ ಬಳಿ ಈ ವಾಚ್ ಇದೆ. ಈ ವಾಚ್ ಮೌಲ್ಯ ಬೆಲೆ 4 ಕೋಟಿ, 60 ಲಕ್ಷ ರೂಪಾಯಿ ಎನ್ನಲಾಗಿದೆ.
ಸೆಲೆಬ್ರಿಟಿಗಳ ಲೋಕದಲ್ಲಿ ರೋಲೆಕ್ಸ್ ವಾಚ್‌ಗಳು ಇನ್ನೂ ಜನಪ್ರಿಯವಾಗಿವೆ. ಅನೇಕ ಪ್ರಸಿದ್ಧ ವ್ಯಕ್ತಿಗಳು ತಮ್ಮ ಅಮೂಲ್ಯವಾದ ರೋಲೆಕ್ಸ್ ಕೈಗಡಿಯಾರಗಳನ್ನು ಪ್ರದರ್ಶಿಸುತ್ತಾರೆ. ಸೆಲೆಬ್ರಿಟಿಗಳು ರೋಲೆಕ್ಸ್ ವಾಚ್‌ಗಳನ್ನು ಧರಿಸುವುದು ಆ ಬ್ರ್ಯಾಂಡ್‌ನ ಪ್ರತಿಷ್ಠೆ ಮತ್ತು ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ. ನೀತಾ ಅಂಬಾನಿ 1.05 ಕೋಟಿ ರೂ. ಮೌಲ್ಯದ 18 ಕ್ಯಾರೆಟ್ ಬಿಳಿ ಚಿನ್ನದ ರೋಲೆಕ್ಸ್ ಡೇ-ಡೇಟ್ ಧರಿಸಿದ್ದರೆ, ಧನುಷ್ 1.35 ಕೋಟಿ ರೂ. ಬೆಲೆಯ ವಾಚ್ ಧರಿಸಿದ್ದರು. ಶಾರುಖ್ ಖಾನ್ ರೋಲೆಕ್ಸ್ ಆಯ್ಸ್ಟರ್ ಪರ್ಪೆಚುಯಲ್ 'ಸೆಲೆಬ್ರೇಷನ್' ಒಡೆಯರಾಗಿದ್ದಾರೆ ಮತ್ತು ಡೇವಿಡ್ ಬೆಕ್‌ಹ್ಯಾಮ್ ಅತ್ಯಾಧುನಿಕ ಸ್ಕೈ-ಡ್ವೆಲ್ಲರ್ ಅನ್ನು ಇಷ್ಟಪಡುತ್ತಾರೆ.


Click it and Unblock the Notifications