ಇನ್ನೇನು ಒಂದು ತಿಂಗಳಲ್ಲಿ ಹೊಸ ವರ್ಷ ಬರಲಿದೆ. ರಾತ್ರಿ ಕಳೆದು ಬೆಳಗಾದಂತೆ 2025ನೇ ವರ್ಷ ಮುಗಿದೇ ಹೋಯ್ತು. ಹೊಸ ವರ್ಷ ಆರಂಭವಾಗುತ್ತಿದ್ದಂತೆ, ಅನೇಕರು ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಕೆಲವರು ಜಾತಕ ಬದಲಾಯಿಸಿದರೆ, ಇನ್ನೂ ಕೆಲವು ಜಾತಕ ನೋಡಿ ಬ್ಯುಸಿನೆಸ್ (Business) ಆರಂಭಿಸುತ್ತಾರೆ. ಆದರೆ ಯಾವುದೇ ಶುಭಕಾರ್ಯ ಆರಂಭಿಸುವ ಮುನ್ನ ನಂಬರ್ ಅನ್ನೋದು ಬಹಳ ಮುಖ್ಯ. ಹಿಂದೂ ಧರ್ಮದಲ್ಲಿ (Hindu) ಸಂಖ್ಯಾಶಾಸ್ತ್ರಕ್ಕೆ ಮಹಳ ಹೆಚ್ಚಿನ ಮಹತ್ವ ನೀಡಲಾಗುತ್ತದೆ.

2026ನೇ ಇಸವಿ ನಿಮಗೆ ಹೊಸ ಆರಂಭ, ಯಶಸ್ಸು, ಮಂಗಳಕರವಾಗಿರಬೇಕೆಂದರೆ ನಿಮ್ಮ ಜನ್ಮ ದಿನಾಂಕದ ಪ್ರಕಾರ, ಕೆಲವು ದೇವಾಲಯಗಳಿಗೆ ಹೋಗಬೇಕು. ಹಾಗಿದ್ರೆ ಆ ದೇವಾಲಯಗಳು ಯಾವುದೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಜನ್ಮ ದಿನಾಂಕ 1, 10, 19, 28:
2026ರ ಅಧಿಪತಿ 1 ಆಗಿದೆ. ಇದು ಸೂರ್ಯ ಗ್ರಹದಿಂದ ಆಳಲ್ಪಡುತ್ತದೆ, ಸೂರ್ಯನು ಸೌರವ್ಯೂಹದ ಅತಿ ದೊಡ್ಡ ಮತ್ತು ಶಕ್ತಿಶಾಲಿ ಗ್ರಹಗಳಲ್ಲಿ ಒಂದಾಗಿದೆ. ಶಕ್ತಿ, ಚೈತನ್ಯ, ಯಶಸ್ಸು, ಕಣ್ಣುಗಳು ಮತ್ತು ಹೃದಯವನ್ನು ಸೂರ್ಯನು ಪ್ರತಿನಿಧಿಸುತ್ತಾನೆ. ಈ ದಿನಾಂಕಗಳಲ್ಲಿ ಜನಿಸಿದವರು ವಿಷ್ಣು ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ.
ಜನ್ಮ ದಿನಾಂಕ 2, 11, 20, 29:
ಚಂದ್ರ ಗ್ರಹದಿಂದ ಆಳಲ್ಪಡುವ ಸಂಖ್ಯೆ 2ರ ಜನರಿಗೆ ಶಿವನ ಆರಾಧನೆ ಶ್ರೇಷ್ಠ. ತಮ್ಮ ಅದೃಷ್ಟವನ್ನು ಸುಧಾರಿಸಲು ಮತ್ತು 2026ರಲ್ಲಿ ನೆಮ್ಮದಿ, ಸಂಪತ್ತಿನಿಂದ ಇರಬೇಕಾದರೆ, ಶಿವಲಿಂಗಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಬೇಕು. ಆದ್ದರಿಂದ ಈ ನಂಬರ್‌ನಲ್ಲಿ ಜನಿಸಿದವರು ಶಿವ ದೇವಾಲಯಕ್ಕೆ ಭೇಟಿ ನೀಡುವುದು ಬೆಸ್ಟ್.
ಜನ್ಮ ದಿನಾಂಕ 3, 12, 21, 30:
ಸಂಖ್ಯೆ 3ರ ಅಧಿಪತಿ ಗುರು. ಈ ದಿನಾಂಕಗಳಲ್ಲಿ ಹುಟ್ಟಿದವರು ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ ಹಳದಿ ಬಟ್ಟೆ ಮತ್ತು ಸಿಹಿತಿಂಡಿಗಳನ್ನು ದೇವರಿಗೆ ಅರ್ಪಿಸಬೇಕು. ವಾರಕ್ಕೊಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿದರೆ, ಜ್ಞಾನ ಮತ್ತು ಆಧ್ಯಾತ್ಮಿಕವಾಗಿಯೂ ಅಭಿವೃದ್ಧಿ ಕಾಣಬಹುದು.
ಜನ್ಮ ದಿನಾಂಕ 4, 13, 22, 31:
ಸಂಖ್ಯೆ 4ರಲ್ಲಿ ಜನಿಸಿದವರು ರಾಹು ಗ್ರಹದ ಪ್ರಭಾವಕ್ಕೆ ಗುರಿಯಾಗುತ್ತಾರೆ. ಆದ್ದರಿಂ ಈ ದಿನಾಂಕದಲ್ಲಿ ಜನಿಸಿದವರು ಶ್ರೀ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ ರವೆ ಹಲ್ವಾ ಮತ್ತು ಹಾಲನ್ನು ಶ್ರೀ ಕಾಲಭೈರವನಿಗೆ ಅರ್ಪಿಸಬೇಕು. ಕಾಲಭೈರವನ ಅನುಗ್ರಹಕ್ಕಾಗಿ ಸಾಸಿವೆ ಎಣ್ಣೆಯ ದೀಪ ಹಚ್ಚುವುದು ಉತ್ತಮ.
ಜನ್ಮ ದಿನಾಂಕ 5, 14, 23:
ಸಂಖ್ಯೆ 5ರ ಅಧಿಪತಿ ಬುಧ. ಇವರು ತಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಲು ದುರ್ಗಾ ದೇವಿಯ ದೇವಾಲಯಕ್ಕೆ ಭೇಟಿ ನೀಡಬೇಕು. ಅಲ್ಲಿ ಹಲ್ವಾ ಚನಾ ಭೋಗವನ್ನು ಅರ್ಪಿಸಿ ದೇವಿಯ ಆಶೀರ್ವಾದ ಪಡೆದರೆ ಒಳ್ಳೆಯದಾಗುತ್ತೆ.
ಜನ್ಮ ದಿನಾಂಕ 6, 15, 24:
ಶುಕ್ರ ಗ್ರಹವು ಸಂಖ್ಯೆ 6ರ ಜನರ ಅಧಿಪತಿಯಾಗಿದೆ. 2026ನೇ ವರ್ಷವನ್ನು ತಮ್ಮ ಅತ್ಯುತ್ತಮ ವರ್ಷವಾಗಿಸಲು, ಇವರು ಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದಾಗುತ್ತೆ. ಅಲ್ಲಿ ಪೂಜೆ ಸಲ್ಲಿಸಿ, ಸಿಹಿತಿಂಡಿಗಳನ್ನು ಅರ್ಪಿಸುವ ಮೂಲಕ ದೇವಿಯ ಆಶೀರ್ವಾದವನ್ನು ಪಡೆಯಬಹುದು.
ಜನ್ಮ ದಿನಾಂಕ 7, 16, 25:
ಸಂಖ್ಯೆ 7ರಲ್ಲಿ ಜನಿಸಿದವರಿಗೆ ಕೇತು ಗ್ರಹ ಅಧಿಪತಿಯಾಗಿದೆ. 2026ರಲ್ಲಿ ಇವರಿಗೆ ಆಧ್ಯಾತ್ಮಿಕ ಜ್ಞಾನ ಮತ್ತು ಯಾವುದೇ ಸಮಸ್ಯೆ ಎದುರಾಗಬಾರದೆಂದರೆ, ಗಣಪತಿ ದೇವಾಲಯಕ್ಕೆ ಭೇಟಿ ನೀಡಬೇಕು. ಗರಿಕೆ ಹುಲ್ಲು ಮತ್ತು 5 ಬೂಂದಿ ಲಡ್ಡುಗಳನ್ನು ಅರ್ಪಿಸಿದರೆ ಒಳ್ಳೆಯದಾಗುತ್ತೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications