ಈ ವರ್ಷದ ಮಾರ್ಚ್ 31ರಿಂದ ವಿಸ್ತಾರಾ ಎಸ್‌ಬಿಐ ಹಾಗೂ ಐಡಿಎಫ್‌ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ನಲ್ಲಿ ಹಲವು ಬದಲಾವಣೆಯಾಗಲಿವೆ. 2024ರಲ್ಲಿ ಏರ್‍ಇಂಡಿಯಾ ಜೊತೆ ವಿಲೀನಗೊಂಡ ವಿಸ್ತಾರಾ, ಲಾಯಲ್ಟಿ ಪ್ರೋಗ್ರಾಂ ಮತ್ತು ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳ ಲಾಭಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ತರಲು ಯೋಜನೆ ರೂಪಿಸಿದೆ. ಈ ಪ್ರಕಾರ ಫ್ಲೈಯಿಂಗ್ ರಿಟರ್ನ್ಸ್ ಪ್ರೋಗ್ರಾಂನ ಮಹಾರಾಜ ಕ್ಲಬ್‌ನೊಂದಿಗೆ ಸಂಯೋಜನೆ ಮಾಡಲಾಗಿದೆ. ಮತ್ತು ಕ್ಲಬ್ ವಿಸ್ತಾರಾ ಯೋಜನೆಯನ್ನು ಪುನರ್ ರಚಿಸಿದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಪ್ರಭಾವ:
ಮಾರ್ಚ್ 31ರ ನಂತರ ಕ್ಲಬ್ ವಿಸ್ತಾರಾ ಲಾಭಗಳು ಸ್ಥಗಿತಗೊಳ್ಳುತ್ತವೆ. ಆಗ ಉಚಿತ ಟಿಕೆಟ್ ವೋಚರ್‌ಗಳು ಮತ್ತು ಅಪ್‌ಗ್ರೇಡ್ ವೋಚರ್‌ಗಳು ರದ್ದಾಗಲಿವೆ. ಹಾಗೂ ಮಹಾರಾಜ ಪಾಯಿಂಟ್ ಗಳಿಸಲು ಮಾರ್ಚ್ 31, 2026 ವರೆಗೆ ಅವಕಾಶ ನೀಡಲಾಗಿದೆ. ಈ ದಿನಾಂಕದ ನಂತರ ಈ ಕಾರ್ಡ್ ಸಂಪೂರ್ಣವಾಗಿ ಮುಚ್ಚಲ್ಪಡಲಿದೆ ಎಂದು ತಿಳಿಯಲಾಗಿದೆ.
ಎಸ್‌ಬಿಐ ವಿಸ್ತಾರಾ ಕ್ರೆಡಿಟ್ ಕಾರ್ಡ್ ಬದಲಾವಣೆಗಳು:
ಎಸ್‌ಬಿಐ ವಿಸ್ತಾರಾ ಕ್ರೆಡಿಟ್ ಕಾರ್ಡ್ ಏಪ್ರಿಲ್ 1ರಿಂದ ಉಚಿತ ಟಿಕೆಟ್ ವೋಚರ್‍ಗಳನ್ನು ರದ್ದುಗೊಳಿಸಲಿದೆ. ಮೈಲಿಗಲ್ಲು ಪರಿತೋಷಕಗಳು ಕೂಡ ನಿಲ್ಲಲಿದೆ. ಅಲ್ಲದೇ ಪುನರ್ ನವೀಕರಣ ಶುಲ್ಕ ಒಂದು ವರ್ಷಕ್ಕೆ ವಿನಾಯಿತಿಗೊಳಿಸಲಾಗಿದೆ.
ಭಾರತದ ವಿಮಾನಯಾನ ಲಾಯಲ್ಟಿ ವ್ಯವಸ್ಥೆಯಲ್ಲಿ ಇದರಿಂದ, ದೊಡ್ಡ ಬದಲಾವಣೆಯಾಗುತ್ತದೆ. ಸದ್ಯ ಕಾರ್ಡ್ ಹೊಂದಿರುವ ಪ್ರಯಾಣಿಕರು ಬ್ಯಾಂಕ್ ಅಥವಾ ಏರ್ ಇಂಡಿಯಾದಿಂದ ಹೊಸ ಲಾಯಲ್ಟಿ ಪ್ರೋಗ್ರಾಂ ಬಗ್ಗೆ ಮಾಹಿತಿಯನ್ನು ಪಡೆಯಬೇಕಿದೆ. ಅಲ್ಲದೇ ಏರ್ ಇಂಡಿಯಾ ಕೂಡ ತನ್ನ ಹೊಸ ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಪರಿಚಯಿಸುವ ಸಾಧ್ಯತೆ ಇದ್ದು, ಪ್ರಯಾಣಿಕರು ಅದನ್ನು ಪರಿಗಣಿಸಬಹುದಾಗಿದೆ. ಎಸ್‌ಬಿಐ ಕಾರ್ಡ್ಸ್ ತನ್ನ ಗ್ರಾಹಕರಿಗೆ ಮುಂಬರುವ ಬದಲಾವಣೆಗಳ ಬಗ್ಗೆ ತಿಳಿಸಿದೆ. ಏಪ್ರಿಲ್ ಒಂದರಿಂದ ಎಲ್ಲಾ ಕ್ಲಬ್ ವಿಸ್ತಾರಾ SBI ಕ್ರೆಡಿಟ್ ಕಾರ್ಡ್‌ಗಳು ಮತ್ತು ಕ್ಲಬ್ ವಿಸ್ತಾರಾ SBI PRIME ಕ್ರೆಡಿಟ್ ಕಾರ್ಡ್‌ಗಳ ಪ್ರಯೋಜನಗಳನ್ನು ಬದಲಾಯಿಸಲಾಗುತ್ತದೆ.
ಪ್ರಮುಖ ಬದಲಾವಣೆಗಳೇನೇನು..?
ಕ್ಲಬ್ ವಿಸ್ತಾರಾ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಿಗೆ 1 ಎಕಾನಮಿ ಟಿಕೆಟ್ ವೋಚರ್ ಸ್ಥಗಿತಗೊಳ್ಳಲಿದೆ. ಹಾಗೂ ಕೆಲವು ವಾರ್ಷಿಕ ಖರ್ಚುಗಳಿಗೆ ಯಾವುದೇ ಮೈಲಿಗಲ್ಲು ಪ್ರಯೋಜನಗಳಿಲ್ಲ. ಅಂದರೆ 1.25 ರೂಪಾಯಿ, 2.5 ಲಕ್ಷ ರೂಪಾಯಿ ಮತ್ತು 5 ಲಕ್ಷ ರೂಪಾಯಿಗಳ ಖರ್ಚುಗಳಿಗೆ, ಯಾವುದೇ ಮೈಲಿಗಲ್ಲು ಪ್ರಯೋಜನಗಳಿಲ್ಲ. ಮೂಲ ಕಾರ್ಡ್‌ಗೆ 1,499 ರೂಪಾಯಿಗಳ ನವೀಕರಣ ಶುಲ್ಕ ಮನ್ನಾ ಮಾಡಲಾಗುತ್ತದೆ. ಹಾಗೆಯೇ PRIME ಕಾರ್ಡ್‌ಗೆ 2,999 ರೂಪಾಯಿಗಳ ನವೀಕರಣ ಶುಲ್ಕ ಮನ್ನಾ ಮಾಡಲಾಗುತ್ತದೆ.
ಇನ್ನು ವಿಸ್ತಾರಾ ಕಾರ್ಡ್‌ದಾರರು ಸದ್ಯ ಇರುವ ಉಚಿತ ಟಿಕೆಟ್‌ಗಳು ಮತ್ತು ಬಹುಮಾನಗಳಲ್ಲಿ ಕಡಿತವನ್ನು ಅನುಭವಿಸಲಿದ್ದಾರೆ. ಆದರೆ ಹೊಸ ಏರ್ ಇಂಡಿಯಾ ಯೋಜನೆ ಹೆಚ್ಚು ಲಾಭದಾಯಕವಾಗಬಹುದು ಎಂಬ ನಿರೀಕ್ಷೆಯೂ ಇದೆ. ಹೀಗಾಗಿಯೇ ನಿಮ್ಮ ವಿಮಾನ ಪ್ರಯಾಣದ ಲಾಭವನ್ನು ಮಿತಿಮೀರಿಸಲು ಹೊಸ ಯೋಜನೆಗಳ ಮೇಲೆ ನಿಗಾ ಇಡುವುದು ಉತ್ತಮ. ಈ ಬದಲಾವಣೆ ಬಗ್ಗೆ ಗ್ರಾಹಕರು ಈಗಲೇ ಅರಿತು ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.
ಇನ್ನು ಈ ಬದಲಾವಣೆಗಳಿಂದ ಏರ್ ಇಂಡಿಯಾ ತನ್ನದೇ ಆದ ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು ಪ್ರಾರಂಭಿಸುವ ಕಾರ್ಯತಂತ್ರದ ಬಗ್ಗೆ ಅರಿಯಬಹುದಾಗಿದೆ. ವಿಸ್ತಾರಾ ಕಾರ್ಡ್‌ದಾರರು ಉಚಿತ ಟಿಕೆಟ್‌ಗಳು ಮತ್ತು ಮೈಲಿಗಲ್ಲು ಬಹುಮಾನಗಳಲ್ಲಿ ಕಡಿತವನ್ನು ನೋಡಿದರೂ, ಕಾರ್ಡ್ ನವೀಕರಣದ ನಂತರ ಅವರ ಕಾರ್ಡ್‌ಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ನೀಡಲಾಗುತ್ತದೆ. ಈ ಮೂಲಕ ಅವರು ಕಳೆದುಕೊಂಡ ಆಫರ್‍ನ ಬೇರೆ ರೂಪದಲ್ಲಿ ನೀಡಲಾಗುತ್ತದೆ.


Click it and Unblock the Notifications