ಪ್ರತಿಯೊಬ್ಬ ಅರ್ಹ ನಾಗರಿಕನೂ ಆದಾಯ ತೆರಿಗೆಯನ್ನು ಪಾವತಿಸುವುದು ಕರ್ತವ್ಯವಾಗಿದೆ. ಹೀಗೆ ಪಾವತಿಸಿದ ತೆರಿಗೆ ಪರೋಕ್ಷವಾಗಿ ನಮ್ಮ ಸೌಲಭ್ಯಗಳಿಗೆ ಸರ್ಕಾರ ವಿನಿಯೋಗಿಸುತ್ತದೆ. ಹೀಗೆ ಯಾವುದೇ ದೇಶವು ಅಭಿವೃದ್ದಿ ಹೊಂದಬೇಕಾದರೆ ಸರಿಯಾದ ರೀತಿಯಲ್ಲಿ ತೆರಿಗೆ ಪಾವತಿಸುವುದು ಅತ್ಯಗತ್ಯವಾಗಿದೆ. ಇನ್ನು ಇತ್ತೀಚಿಗಿನ ವರೆಗೂ ತೆರಿಗೆ ಪಾವತಿ ವೇಳೆ ನಾಗರಿಕರಿಗೆ ಹಲವಾರು ತೊಡಕುಗಳು ಬರುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ 2024ರ ಬಜೆಟ್‌ನಲ್ಲಿ ವಿವಾದ್ ಸೇ ವಿಶ್ವಾಸ್ 2.0 ಎಂಬ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಮೂಲಕ ತೆರಿಗೆ ಪಾವತಿ ವೇಳೆ ಉಂಟಾಗುತ್ತಿದ್ದ ಗೊಂದಲ ಹಾಗೂ ಸಮಸ್ಯೆಗಳನ್ನು ನಿವಾರಿಸುವುದು ಇದರ ಉದ್ದೇಶವಾಗಿತ್ತು.
ಏನಿದು ವಿವಾದ್ ಸೆ ವಿಶ್ವಾಸ್ ಯೋಜನೆ 2.0
ವಿವಾದ್ ಸೆ ವಿಶ್ವಾಸ್ ಯೋಜನೆ 2.0 ಯೋಜನೆಯು ಬಾಕಿ ಉಳಿದಿರುವ ಆದಾಯ ತೆರಿಗೆ ದಾವೆಗಳನ್ನು ಪರಿಹರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಅರ್ಹ ತೆರಿಗೆದಾರರು ತಮ್ಮ ಬಾಕಿ ಇರುವ ಬಾಕಿಗಳ ನಿರ್ದಿಷ್ಟ ಭಾಗವನ್ನು ಪಾವತಿಸುವ ಮೂಲಕ ತಮ್ಮ ತೆರಿಗೆ ವಿವಾದಗಳನ್ನು ಇತ್ಯರ್ಥಗೊಳಿಸಬಹುದು. ಇದರಿಂದ ಕಳೆದ ಹಲವಾರು ವರ್ಷಗಳಿಂದ ಆದಾಯ ತೆರಿಗೆ ವಿವಾದ ಅಥವಾ ದಾವೆಯಲ್ಲಿ ಸಿಲುಕಿರುವ ಅನೇಕ ತೆರಿಗೆ ಪಾವತಿದಾರರು ಈ ಯೋಜನೆಯಲ್ಲಿ ತಮ್ಮ ತಮ್ಮ ವಿವಾದವನ್ನು ಪರಿಹರಿಸಿ, ಆದಾಯ ತೆರಿಗೆ ಇಲಾಖೆಯ ಬಗ್ಗೆ ವಿಶ್ವಾಸ ಬೆಳೆಸಿಕೊಂಡಿದ್ದಾರೆ. ಈ ಯೋಜನೆಯಡಿಯಲ್ಲಿ ತೆರಿಗೆ ಪಾವತಿದಾರರು ವಿವಾದಿತ ತೆರಿಗೆ ಮೊತ್ತವನ್ನು ಮತ್ತು ಈ ಮೊತ್ತದ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಫಾರ್ಮ್ 1 ರ ಜೊತೆಗೆ ಆದಾಯ ತೆರಿಗೆ ಇಲಾಖೆಗೆ ಪಾವತಿಸಬೇಕು. ಈ ಮೊತ್ತವನ್ನು ಠೇವಣಿ ಮಾಡಿದ ನಂತರ ಆದಾಯ ತೆರಿಗೆ ಇಲಾಖೆಯು ತೆರಿಗೆ ವಿವಾದವನ್ನು ಅಂತ್ಯಗೊಳಿಸುತ್ತದೆ. ಅದೂ ಅಲ್ಲದೆ ಎಲ್ಲಾ ಹೆಚ್ಚುವರಿ ದಂಡಗಳನ್ನು ಕೂಡ ಮನ್ನಾ ಮಾಡಲಾಗುತ್ತದೆ. ಇದರಲ್ಲಿ ಬಡ್ಡಿ ಮೊತ್ತವು ಕೂಡ ಅನ್ವಯಿಸುತ್ತದೆ. ಆದರೆ ಸದ್ಯ ಈ ಅವಕಾಶವು ಇದೇ ಡಿಸೆಂಬರ್ 31ರ ವರೆಗೆ ಅಂತಿಮ ದಿನವಾಗಿದ್ದು, ಈ ದಿನ ಕಳೆದ ಬಳಿಕ ಯಾವುದೇ ಅರ್ಜಿಯನ್ನು ವಿವಾದ್ ಸೇ ವಿಶ್ವಾಸ್ ಯೋಜನೆಯ ಅಡಿಯಲ್ಲಿ ಕಡಿಮೆ ತೆರಿಗೆ ಮೊತ್ತ ಅರ್ಹರಾಗಿರುವುದಿಲ್ಲ. ಅಂದರೆ 2025ರ ಜನವರಿ 1ರ ಬಳಿಕ ಹಾಗೂ ನಂತರ ತೆರಿಗೆ ವಿವಾದ ಘೋಷಣೆ ಮಾಡಿದರೆ ತೆರಿಗೆದಾರರು ವಿವಾದಿತ ತೆರಿಗೆ ಬೇಡಿಕೆಯ 110 ಪ್ರತಿಶತವನ್ನು ಪಾವತಿಸಬೇಕಿದೆ. ಹಾಗಾಗಿ ಡಿಸೆಂಬರ್ 31ರ ಒಳಗೆ ತೆರಿಗೆದಾರರು ತಮ್ಮ ತೆರಿಗೆ ವಿವಾದವನ್ನು ಬಗೆಹರಿಸಿಕೊಳ್ಳಬೇಕಿದೆ.

ವಿವಾದ್ ಸೇ ವಿಶ್ವಾಸ್ ಯೋಜನೆ ಬಗ್ಗೆ...
ಈಗಾಗಲೇ ಹೇಳಿದಂತೆ 2024-25ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಯನ್ನು ಅನಾವರಣಗೊಳಿಸಿದರು. ಬಾಕಿ ಉಳಿದಿರುವ ಆದಾಯ ತೆರಿಗೆ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಜುಲೈನಲ್ಲಿ ವಿವದ್ ಸೇ ವಿಶ್ವಾಸ್ ಯೋಜನೆ ಘೋಷಿಸಲಾಯಿತು. ವಿವಾದ್ ಸೆ ವಿಶ್ವಾಸ್ 2.0 ಯೋಜನೆ ಈ ವರ್ಷದ ಅಕ್ಟೋಬರ್ 1ರಂದು ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಆದಾಯ ತೆರಿಗೆ ಇಲಾಖೆಯ ಪ್ರಕಾರ ಜುಲೈ 22ರ 2024 ರವರೆಗೆ ಬಾಕಿ ಉಳಿದಿರುವ ಎಲ್ಲಾ ಮೇಲ್ಮನವಿಗಳು ಅಂತಿಮವಾಗಿ ಹಿಂತೆಗೆದುಕೊಳ್ಳಲ್ಪಟ್ಟ ಹೊರತಾಗಿಯೂ ಅಥವಾ ವಿಲೇವಾರಿಯಾಗಿದ್ದರೂ ಕೂಡ ತೆರಿಗೆದಾರರು ವಿವಾದ್ ಸೇ ವಿಶ್ವಾಸ್ ಯೋಜನೆ 2024 ಗೆ ಅರ್ಹವಾಗಿರುತ್ತಾರೆ. ಇನ್ನು CBDT ಬಿಡುಗಡೆ ಮಾಡಿದ ಪರಿಷ್ಕೃತ FAQ ಗಳ ಪ್ರಕಾರ, ಯೋಜನೆಗೆ ಅರ್ಹರಾಗಲು ತೆರಿಗೆದಾರರು ಡಿಸೆಂಬರ್ 31, 2024 ರೊಳಗೆ ಘೋಷಣೆಯನ್ನು ಸಲ್ಲಿಸಬೇಕು. ಹಾಗಾಗಿ ಒಂದು ವೇಳೆ ಜುಲೈ 22, 2024 ರ ಒಳಗೆ ಬಾಕಿ ಉಳಿದಿರುವ ಮೇಲ್ಮನವಿಯನ್ನು ಘೋಷಣೆಯನ್ನು ಸಲ್ಲಿಸುವ ಮೊದಲು ಪರಿಹರಿಸಿದರೆ, ಸ್ಪರ್ಧಾತ್ಮಕ ತೆರಿಗೆಯನ್ನು ಇನ್ನೂ ಬಾಕಿಯಿರುವಂತೆ ಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಮನವಿಯು ಇನ್ನೂ ಯೋಜನೆಯ ಅಡಿಯಲ್ಲಿ ಇತ್ಯರ್ಥಕ್ಕೆ ಅರ್ಹವಾಗಿರುತ್ತದೆ.
ಅನುಷ್ಠಾನಕ್ಕೆ ಅರ್ಜಿ ನಮೂನೆ
ಫಾರ್ಮ್ 1: ಡಿಕ್ಲರೇಶನ್ ಮತ್ತು ಅಂಡರ್‌ಟೇಕಿಂಗ್ ಫಾರ್ಮ್ ಅನ್ನು ತೆರಿಗೆ ಘೋಷಣೆದಾರರು ಸಲ್ಲಿಸಬೇಕು
ಫಾರ್ಮ್ 2: ಬಳಿಕ ಗೊತ್ತುಪಡಿಸಿದ ಪ್ರಾಧಿಕಾರದಿಂದ ನೀಡಬೇಕಾದ ಪ್ರಮಾಣಪತ್ರ ನೀಡಬೇಕಿದೆ
ಫಾರ್ಮ್ 3: ಈ ನಮೂನೆಯ ಮೂಲಕ ಅರ್ಜಿದಾರರು ಪಾವತಿ ಮಾಡಿದ್ದನ್ನು ದೃಢೀಕರಿಸುತ್ತಾರೆ.
ಫಾರ್ಮ್ 4: ಗೊತ್ತುಪಡಿಸಿದ ಪ್ರಾಧಿಕಾರದಿಂದ ತೆರಿಗೆ ಬಾಕಿಗಳ ಪೂರ್ಣ ಮತ್ತು ಅಂತಿಮ ಇತ್ಯರ್ಥಕ್ಕಾಗಿ ಆದೇಶ.


Click it and Unblock the Notifications