ಗ್ರಾಹಕರನ್ನು ಸೆಳೆಯಲು ಪ್ರಮುಖ ಟೆಲಿಕಾಂ ಕಂಪನಿಗಳು ಆಕರ್ಷಕ ಪ್ಲ್ಯಾನ್‌ಗಳನ್ನು ಪೈಪೋಟಿಗೆ ಬಿದ್ದು ಪರಿಚಯಿಸುತ್ತಿವೆ. ಸದ್ಯ ಬಹುತೇಕ ಗ್ರಾಹಕರು ಅಧಿಕ ಡೇಟಾ ಸೌಲಭ್ಯದ ಪ್ಲ್ಯಾನ್‌ಗಳನ್ನು ಬಯಸುತ್ತಾರೆ.
ಈ ನಿಟ್ಟಿನಲ್ಲಿ ಏರ್‌ಟೆಲ್, ಜಿಯೋ ಸಂಸ್ಥೆಗಳು ಈಗಾಗಲೆ ಹೆಚ್ಚುವರಿ ಡೇಟಾ ಸೌಲಭ್ಯದ ಯೋಜನೆಗಳನ್ನು ಘೋಷಿಸಿವೆ. ಅದೇ ಹಾದಿಯಲ್ಲಿ ಇದೀಗ ವೊಡಾಫೋನ್ ಸಹ ಭರ್ಜರಿ ಡೇಟಾ ಯೋಜನೆ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ.
ವೊಡಾಫೋನ್ ಸಂಸ್ಥೆಯು 251ರೂ.ಗಳು ಪ್ರೀಪೇಯ್ಡ್ ಡೇಟಾ ಪ್ಲ್ಯಾನ್ ಅನ್ನು ಪರಿಚಯಿದೆ. ಈ ಡೇಟಾ ವೋಚರ್‌ನಲ್ಲಿ ಒಟ್ಟು 50 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ದೊರೆಯುತ್ತದೆ. ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಹಾಗೂ ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ವೊಡಾಫೋನಿನ ಈ ಡೇಟಾ ವೋಚರ್ ಹೆಚ್ಚು ಸೂಕ್ತ ಅನಿಸಲಿದೆ. ಈ ಹೊಸ ಡೇಟಾ ವೋಚರ್‌ನ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ....
ಡೇಟಾ ವೋಚರ್
ವೋಡಾಫೋನಿನ 251ರೂ. ಡೇಟಾ ವೋಚರ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 50GB ಡೇಟಾ ಸೌಲಭ್ಯ ದೊರೆಯುತ್ತದೆ. ಇದೊಂದು ಡೇಟಾ ವೋಚರ್ ಆಗಿರುವುದರಿಂದ ಉಚಿತ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್‌ನಂತಹ ಯಾವುದೇ ಹೆಚ್ಚುವರಿ ಪ್ರಯೋಜನಗಳು ಲಭ್ಯವಾಗುವುದಿಲ್ಲ.
ಕೆಲವು ಕಡೆ ಸಿಗುವುದಿಲ್ಲ
ವೊಡಾಫೋನಿನ ಈ ಹೊಸ ಡೇಟಾ ವೋಚರ್ ಬಿಹಾರ, ಚೆನ್ನೈ, ಗುಜರಾತ್, ಹರಿಯಾಣ, ಕೇರಳ, ತಮಿಳುನಾಡು (ಚೆನ್ನೈ ಹೊರತುಪಡಿಸಿ) ಮತ್ತು ಪೂರ್ವ ಉತ್ತರ ಪ್ರದೇಶ ಟೆಲಿಕಾಂ ವಲಯಗಳಲ್ಲಿ ಲಭ್ಯವಾಗುತ್ತದೆ. ಹಾಗೆಯೇ ಆಂಧ್ರಪ್ರದೇಶ, ಅಸ್ಸಾಂ, ದೆಹಲಿ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ, ಮಧ್ಯಪ್ರದೇಶ, ಮುಂಬೈ, ಈಶಾನ್ಯ, ಒಡಿಶಾ, ಪಂಜಾಬ್, ರಾಜಸ್ಥಾನ, ಪಶ್ಚಿಮ ಯುಪಿ ಮತ್ತು ಪಶ್ಚಿಮ ಬಂಗಾಳ ಪ್ರದೇಶಗಳಲ್ಲಿ ಈ ಪ್ಲ್ಯಾನ್ ಲಭ್ಯತೆ ಇರುವುದಿಲ್ಲ. ವೊಡಾಫೋನಿನ ಇತರೆ ಡೇಟಾ ವೋಚರ್‌ಗಳು ಬಗ್ಗೆ ಮುಂದಿನ ಸ್ಲೈಡರ್‌ಗಳಲ್ಲಿ ಓದಿರಿ.
ವೊಡಾಫೋನ್ 98ರೂ
ಹೆಚ್ಚಿನ ಡೇಟಾ ಅನುಕೂಲಕ್ಕಾಗಿ ವೊಡಾಫೋನ್ ಆಡ್ ಆನ್ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವೊಡಾಫೋನ್ 98ರೂ. ಬೆಲೆಯ ಪ್ಯಾಕ್ ಈಗ ಪರಿಷ್ಕರಣೆ ಆಗಿದ್ದು, ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್, ಉಚಿತ ವಾಯಿಸ್ ಕರೆ ಸೌಲಭ್ಯಗಳು ದೊರೆಯುವುದಿಲ್ಲ. ಡೇಟಾ ಮಾತ್ರ ಲಭ್ಯವಾಗುತ್ತದೆ.
ವೊಡಾಫೋನ್ 16ರೂ ಮತ್ತು 48ರೂ ಡೇಟಾ ಪ್ಯಾಕ್
ವೊಡಾಫೋನ್ ಆರಂಭಿಕ 16ರೂ, ಡೇಟಾ ಆಡ್ ಆನ್ ಪ್ಯಾಕ್ ಒಂದು ದಿನದ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, 1GB ಡೇಟಾ ಪ್ರಯೋಜನ ಒದಗಿಸುತ್ತದೆ. ಹಾಗೂ 48ರೂ. ಡೇಟಾ ಆಡ್ ಆನ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಒಟ್ಟು 3GB ಡೇಟಾ ಪ್ರಯೋಜನ ನೀಡುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications