For Quick Alerts
ALLOW NOTIFICATIONS  
For Daily Alerts

ಭಾರತದ ವಿರುದ್ಧ 20 ಸಾವಿರ ಕೋಟಿಯ ಮಧ್ಯಸ್ಥಿಕೆ ಪ್ರಕರಣ ಗೆದ್ದ ವೊಡಾಫೋನ್

By ಅನಿಲ್ ಆಚಾರ್
|

ಯುನೈಟೆಡ್ ಕಿಂಗ್ ಡಮ್ ಮೂಲದ ವೊಡಾಫೋನ್ ಗ್ರೂಪ್ ಶುಕ್ರವಾರದಂದು ಭಾರತದ ವಿರುದ್ಧ ಅಂತರರಾಷ್ಟ್ರೀಯ ಮಧ್ಯಸ್ಥಿಕೆಯ ಪ್ರಕರಣದಲ್ಲಿ ತೆರಿಗೆ ಪುನರ್ ಪರಿಶೀಲನೆಯ 20,000 ಕೋಟಿ ರುಪಾಯಿಯ ತೀರ್ಪು ತನ್ನ ಪರವಾಗಿ ಪಡೆದುಕೊಂಡಿದೆ. ಹೇಗ್ ನಲ್ಲಿ ಇರುವ ಮಧ್ಯಸ್ಥಿಕೆ ಶಾಶ್ವತ ಕೋರ್ಟ್ ಈ ತೀರ್ಪು ನೀಡಿದೆ. ಆದಾಯ ತೆರಿಗೆ ಇಲಾಖೆಯು ನ್ಯಾಯಸಮ್ಮತ ಹಾಗೂ ಸಮಾನವಾಗಿ ನಡೆದುಕೊಳ್ಳುವ ನಿಯಮದ ಉಲ್ಲಂಘನೆ ಮಾಡಿದೆ ಎಂದು ಹೇಳಿದೆ.

 

ಡಿಎಂಡಿ ಅಡ್ವೊಕೇಟ್ಸ್ ನಿಂದ ವೊಡಾಫೋನ್ ಪರವಾಗಿ ವಾದ ಮಂಡಿಸಲಾಗಿತ್ತು. ತೆರಿಗೆ ಜವಾಬ್ದಾರಿಯನ್ನು ಹೇರುವುದರಿಂದ ಭಾರತ ಮತ್ತು ನೆದರ್ಲೆಂಡ್ ಮಧ್ಯದ ವ್ಯಾಪಾರ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾಯಾಧೀಕರಣವು ತನ್ನ ತೀರ್ಪಿನಲ್ಲಿ ತಿಳಿಸಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತ ವಿರುದ್ಧ 20 ಸಾವಿರ ಕೋಟಿಯ ಮಧ್ಯಸ್ಥಿಕೆ ಪ್ರಕರಣ ಗೆದ್ದ ವೊಡಾಫೋನ್

ಇದು ತೆರಿಗೆ ವ್ಯಾಜ್ಯವಾಗಿತ್ತು. ಭಾರತ ಸರ್ಕಾರದಿಂದ ಹಾಕಲಾಗಿದ್ದ ತೆರಿಗೆಗೆ ಸಂಬಂಧಿಸಿದಂತೆ ಪ್ರಕರಣವು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗಿತ್ತು. ಇದೀಗ ಭಾರತದ ಕ್ರಮದ ವಿರುದ್ಧವಾಗಿ ತೀರ್ಮಾನ ಬಂದಿದ್ದು, ಈ ಪ್ರಕರಣದಲ್ಲಿ ವೊಡಾಫೋನ್ ವಿಜಯಿ ಆಗಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

English summary

Vodafone Won 20000 Crore International Arbitration Case Against Government

UK based Vodafone won 20,000 crore international arbitration tax case against India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X