ಭಾರತೀಯರೇ ಇಲ್ಲಿಕೇಳಿ..ಇನ್ಮುಂದೆ ಆಧಾರ್ ಕಾರ್ಡ್‌ ಜೊತೆ ವೋಟರ್ ಐಡಿ ಲಿಂಕ್..ನಕಲಿ ಮತದಾರರ ಪತ್ತೆ ಸುಲಭ..!

ಭಾರತೀಯ ಚುನಾವಣಾ ಆಯೋಗ ಹೊಸ ನಿರ್ಧಾರ ತೆಗೆದುಕೊಂಡಿದೆ.. ಈ ಒಂದು ನಿರ್ಧಾರದಿಂದ ನಕಲಿ ಮತದಾರರನ್ನು ಪತ್ತೆ ಹಚ್ಚುವುದು ಅತಿ ಸುಲಭದ ಕೆಲಸವಾಗಲಿದೆ. ಅಂದರೆ ಆಧಾರ್‍‌ ಕಾರ್ಡ್‌ ಡೇಟಾಬೇಸ್‌ ಜೊತೆಗೆ, ಮತದಾರರ ದಾಖಲಾತಿಗಳನ್ನು ಲಿಂಕ್ ಮಾಡಲು ಚಿಂತಿಸಿದೆ. ಇದಕ್ಕಾಗಿ UIDAI (Unique Identification Authority of India)ನೊಂದಿಗೆ ಸಹಯೋಗಿಸುತ್ತಿದೆ.

ಇನ್ಮುಂದೆ ಆಧಾರ್‍‌ ಕಾರ್ಡ್‌ ಜೊತೆ ವೋಟರ್ ಐಡಿ ಲಿಂಕ್..!

ಇನ್ನು ಈ ಹೊಸ ನಿರ್ಧಾರದಿಂದ ಇನ್ನು ಸುಲಭವಾಗಿ ನಕಲಿ ಮತದಾರರನ್ನು ಪತ್ತೆಹಚ್ಚಬಹುದು. ಹಾಗೂ ಈ ಮೂಲಕ ಮತದಾರರ ಪಟ್ಟಿಯನ್ನು ಕೂಡ ಪರಿಷ್ಕರಿಸಬಹುದು. ಹೀಗಾಗಿ ಮತದಾರರು ಆಧಾರ್ ಕಾರ್ಡ್ ವಿವರಗಳನ್ನು ನೀಡುವುದು ಸಂಪೂರ್ಣವಾಗಿ ಸ್ವಯಂಪ್ರೇರಿತ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಒಂದು ವೇಳೆ ಮತದಾರರು ತಮ್ಮ ಆಧಾರ್ ಸಂಖ್ಯೆ ಒದಗಿಸಲು ಹಿಂದೇಟು ಹಾಕಿದರೆ, ಅದಕ್ಕೆ ನಿಖರವಾದ ಕಾರಣವನ್ನು ನೀಡಿ ವಿವರಿಸಬೇಕು. ಈ ಅಸ್ಪಷ್ಟತೆಯನ್ನು ನಿವಾರಿಸಲು ಫಾರ್ಮ್ 6B ಅನ್ನು ತಿದ್ದುಪಡಿ ಮಾಡಲಾಗುತ್ತಿದೆ.

ಇನ್ನು ಮಾರ್ಚ್ 18ರಂದು ಭಾರತೀಯ ಚುನಾವಣಾ ಆಯೋಗ ಒಂದು ಸಭೆ ನಡೆಸಿದೆ. ಆ ಸಭೆಯಲ್ಲಿ ಗೃಹ ಸಚಿವಾಲಯ, ಕಾನೂನು ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು UIDAIನ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಈ ಉನ್ನತ ಮಟ್ಟದ ಸಭೆಯಲ್ಲಿ ಮತದಾರರ ಮಾಹಿತಿಯನ್ನು ಆಧಾರ್‌ ಜೊತೆ ಲಿಂಕ್ ಮಾಡುವ ಲಾಭ-ನಷ್ಟಗಳ ಬಗ್ಗೆ ಹಾಗೂ ಕಾನೂನುಬದ್ಧ ಅಂಶಗಳ ಕುರಿತು ಒಂದಷ್ಟು ಚರ್ಚೆ ನಡೆಯಿತು.

ಅಂದಹಾಗೆ ಈ ಸಭೆಯ ಮುಖ್ಯ ಉದ್ದೇಶವು, ಮತದಾರರ ಪಟ್ಟಿಯನ್ನು ಶುದ್ಧಗೊಳಿಸುವುದಾಗಿದೆ. ಅಲ್ಲದೇ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ನಕಲಿ ಮತದಾರರ ದಾಖಲೆಗಳನ್ನು ನಿವಾರಿಸುವುದಾಗಿದೆ. ಭಾರತೀಯ ಮತದಾರರ ಗೌಪ್ಯತೆ ಮತ್ತು ಕಾನೂನು ಬದ್ಧ ಹಕ್ಕುಗಳನ್ನು ಕಾಪಾಡಿಕೊಳ್ಳಲು ಕೂಡ ಈ ಹೊಸ ನಿಯಮ ಸೂಕ್ತವಾಗಲಿದೆ.

ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಪ್ರಸ್ತುತ ಸ್ಥಿತಿ:

ಇನ್ನು ಭಾರತದಲ್ಲಿ ಸದ್ಯ 66 ಕೋಟಿಗೂ ಹೆಚ್ಚು ಮತದಾರರು ತಮ್ಮ ಆಧಾರ್ ವಿವರಗಳನ್ನು ಸ್ವಯಂಪ್ರೇರಿತವಾಗಿ ಒದಗಿಸಿದ್ದಾರೆ. ಹೀಗಾಗಿಯೇ ನಕಲಿ ಮತದಾರರನ್ನು ಪತ್ತೆಹಚ್ಚಲಾಗಲಿ, ಮತದಾರರ ಪಟ್ಟಿಯನ್ನು ಶುದ್ಧಗೊಳಿಸಲಾಗಲಿ ಆಧಾರ್ ಡೇಟಾವನ್ನು ಪ್ರಸ್ತುತ ಬಳಸುತ್ತಿಲ್ಲ. ಮುಂದಿನ ಹಂತದಲ್ಲಿ ECI ಮತ್ತು UIDAI ತಜ್ಞರು ಈ ಡೇಟಾಬೇಸ್‌ಗಳನ್ನು ಹೇಗೆ ಲಿಂಕ್ ಮಾಡುವುದು ಎಂಬುದರ ಬಗ್ಗೆ ಕಾರ್ಯಯೋಜನೆ ರೂಪಿಸಲಿದ್ದಾರೆ.

ಮತದಾರರ ಪ್ರೈವಸಿ ಮತ್ತು ಕಾನೂನು ರಕ್ಷಣೆ:

ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಪ್ರಕ್ರಿಯೆಯು 1950ರ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 23(4), 23(5), 23(6) ಅಡಿಯಲ್ಲಿ ನಡೆಯಲಿದೆ. ಅಂದರೆ ಇದರ ಅನುಸಾರ ಚುನಾವಣಾ ಅಧಿಕಾರಿಗಳು ಮತದಾರರ ಗುರುತಿನ ಪರಿಶೀಲನೆಗಾಗಿ ಆಧಾರ್ ಅನ್ನು ವಿನಂತಿಸಬಹುದು. ಅಲ್ಲದೇ ಆಧಾರ್ ಮಾಹಿತಿ ಒದಗಿಸುವುದು ಸ್ವಯಂಪ್ರೇರಿತವಾಗಿರುವುದರಿಂದ ಯಾರೂ ಯಾರ ಮೇಲೂ ಒತ್ತಡ ಹೇರುವಂತಿಲ್ಲ. ಆಧಾರ್ ವಿವರ ಒದಗಿಸಲು ನಿರಾಕರಿಸಿದರೆ, ಅದರ ಯುಕ್ತಿಯುಕ್ತ ಕಾರಣವನ್ನು ಒದಗಿಸಬೇಕು. ಅಲ್ಲದೇ ಆಧಾರ್ ವಿವರ ಒದಗಿಸಿಲ್ಲ ಎಂದು ಯಾರನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕುವಂತಿಲಗಲ. ಹಾಗೆಯೇ ಹಕ್ಕು ನಿರಾಕರಿಸುವಂತೆಯೂ ಇಲ್ಲ. ಆದರೆ Form 6Bಯಲ್ಲಿ ಮತದಾರರಿಗೆ ಆಧಾರ್ ಒದಗಿಸುವುದನ್ನು ನಿರಾಕರಿಸಲು ಸೂಕ್ತ ಆಯ್ಕೆಗಳಿಲ್ಲ. ಒಂದು ವೇಳೆ ನಿಮ್ಮ ಬಳಿ ಆಧಾರ್ ಇಲ್ಲದಿದ್ದರೆ, ನನ್ನ ಬಳಿ ಇಲ್ಲದ ಕಾರಣ ನಾನು ಒದಗಿಸಲು ಸಾಧ್ಯವಿಲ್ಲ ಎಂದು ಘೋಷಿಸುವುದು ಉತ್ತಮ. ಹಾಗೆಯೇ ಈ ಈ ನಿರ್ಬಂಧಿತ ಆಯ್ಕೆಗಳನ್ನು ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ.

ಇನ್ನು ಈ ಬಗ್ಗೆ ವಿರೋಧ ಪಕ್ಷಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಅಕ್ರಮ ದಾಖಲೆಗಳಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದರಿಂದ ಈ ಸಭೆ ನಡೆಯಲಾಗಿದ್ದು, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತ್ತು ಇನ್ನಿತರ ವಿರೋಧ ಪಕ್ಷಗಳ ನಾಯಕರು ಮತದಾರರ EPIC ಸಂಖ್ಯೆಗಳ ಹೇರಳ ದೋಷಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಂದೇ ರೀತಿಯ EPIC ಸಂಖ್ಯೆಗಳನ್ನು ಹಲವರಿಗೆ ನೀಡಲಾಗಿದೆ ಎಂಬ ಅಕ್ರಮದ ಬಗ್ಗೆ ಮಾತನಾಡಲಾಗುತ್ತಿದೆ.

ಇನ್ನು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು, ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. ಅಂದತೆ ಬಿಜೆಪಿಯು ತನ್ನ ಲಾಭಕ್ಕಾಗಿ ಚುನಾವಣಾ ಆಯೋಗದೊಂದಿಗೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ಈ ಆಧಾರ್-ವೋಟರ್ ಐಡಿ ಲಿಂಕೇಜ್ ತಿದ್ದುಪಡಿ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಜಾರಿಯಾಗುವ ಸಾಧ್ಯತೆ ಇದೆ. ಚುನಾವಣಾ ಆಯೋಗವು ಭವಿಷ್ಯದ ಚುನಾವಣೆಗಳಲ್ಲಿ ಮತದಾರರ ಪಟ್ಟಿಯ ದೋಷಪೂರಿತ ದಾಖಲೆಗಳನ್ನು ತಿದ್ದಲು ಹಾಗೂ ಸುಗಮ ಮತದಾನ ಪ್ರಕ್ರಿಯೆಯನ್ನು ರೂಪಿಸಲು ಯೋಜನೆ ಹಾಕಿಕೊಳ್ಳುತ್ತಿದೆ. ಒಟ್ಟಿನಲ್ಲಿ ಮತದಾರರ ಪಟ್ಟಿ ಶುದ್ಧಗೊಳಿಸಲು, ನಕಲಿ ಮತದಾರರನ್ನು ತೊಡೆದುಹಾಕಲು ಆಧಾರ್ ಲಿಂಕೇಜ್ ಪ್ರಕ್ರಿಯೆ ಆರಂಭವಾಗಿದೆ.

ಇದು "ಮತದಾರರು ಸ್ವಯಂಪ್ರೇರಿತವಾಗಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ" ಎಂಬ ಸ್ಪಷ್ಟತೆಯನ್ನು ನೀಡುವುದು. ಈ ತಿದ್ದುಪಡಿ ಭಾರತದ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ಸುರಕ್ಷಿತ, ಪಾರದರ್ಶಕ ಮತ್ತು ದೋಷರಹಿತಗೊಳಿಸಲು ಮುಖ್ಯ ಪಾತ್ರ ವಹಿಸಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+