ಮದುವೆ ಸೀಸನ್ ಆರಂಭ: ದೇಶಾದ್ಯಂತ 48 ಲಕ್ಷ ವಿವಾಹಗಳ ನಿರೀಕ್ಷೆ, 6 ಲಕ್ಷ ಕೋಟಿ ರೂ. ಆರ್ಥಿಕ ಚಟುವಟಿಕೆ!

ಭಾರತದಲ್ಲಿಹಬ್ಬ ಹರಿದಿನಗಳನ್ನು ಎಷ್ಟು ಸಾಂಗವಾಗಿ ನೆರವೇರಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಮದುವೆ ವೇಳೆ ಯಾವ ಅಬ್ಬರದ ರೀತಿಯಲ್ಲಿ ಖರ್ಚು ಮಾಡುತ್ತಾರೆ ಎಂದು ಸದ್ಯ ಊಹಿಸುವುದು ಕೂಡ ಕಠಿಣ.

ವಿದೇಶಿಗರೇ ಹೇಳುವಂತೆ ಭಾರತದಲ್ಲಿ ಮದುವೆ ಕಾರ್ಯಕ್ರಮವನ್ನು ದೊಡ್ಡ ಉತ್ಸವವನ್ನಾಗಿ ನೆರವೇರಿಸುತ್ತಾರೆ. ಭಾರತದ ಮದುವೆ ಪ್ರಕ್ರಿಯೆಯನ್ನು ದುಂದುವೆಚ್ಚ ಎನ್ನುವುದಕ್ಕಿಂತ ಸಂಪ್ರದಾಯ ಎಂದರೆ ಸರಿಹೊಂದುತ್ತದೆ. ಅದೂ ಅಲ್ಲದೆ ಸಾಂಗವಾಗಿ ಮದುವೆ ಕಾರ್ಯಕ್ರಮವನ್ನು ನೆರವೇರಿಸುವುದರಿಂದ ಭಾರತದ ಆರ್ಥಿಕತೆಗೂ ಹೆಚ್ಚಿನ ಬಲ ಲಭಿಸುತ್ತದೆ.

ದೇಶಾದ್ಯಂತ 48 ಲಕ್ಷ ವಿವಾಹಗಳ ನಿರೀಕ್ಷೆ!

ಇದೊಂದು ಚೈನ್‌ ಎಫೆಕ್ಟ್‌ ಎಂಬಂತೆ ಒಂದಕ್ಕೊಂದು ಲಿಂಕ್‌ ಆಗಿರುತ್ತದೆ. ಉದಾಹರಣೆಗೆ ಕ್ಯಾಟರಿಂಗ್‌ ಸೇವೆಯಿಂದ ಹಿಡಿದು ತರಕಾರಿ, ಜಿನಸು, ಮಾಂಸ, ಹಾಲು, ಪೆಂಡಾಲ್, ವಸ್ತ್ರ ಮುಂತಾದ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಇದರಿಂದ ಇದನ್ನು ಪೂರೈಸುವವರಿಗೂ ಆರ್ಥಿಕವಾಗಿ ನೆರವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಇಡೀ ಭಾರತದಲ್ಲಿ ಇದೇ ರೀತಿಯಲ್ಲಿ ನಡೆಯುವುದರಿಂದ ಮೊದಲೇ ಹೇಳಿದಂತೆ ವರ್ತಕರಿಗೂ ಆರ್ಥಿಕವಾಗಿ ನೆರವಾಗುತ್ತದೆ. ಇನ್ನು ಸದ್ಯದ ವಿಚಾರ ಏನೆಂದರೆ ಮುಂದಿನ ಎರಡು ತಿಂಗಳುಗಳ ಕಾಲ ಭಾರತದಲ್ಲಿ ಬರೊಬ್ಬರಿ ಹೆಚ್ಚು ಕಡಿಮೆ 48 ಲಕ್ಷ ವಿವಾಹ ಕಾರ್ಯ ನಡೆಯಲಿದ್ದು, ಈ ಮೂಲಕ 6 ಲಕ್ಷ ಕೋಟಿ ರೂ. ಮೊತ್ತದ ಆರ್ಥಿಕ ಕೊಡು ಕೊಳ್ಳುವಿಕೆ ನಡೆಯಲಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.

ಎರಡು ತಿಂಗಳಲ್ಲಿ 48 ಲಕ್ಷ ವಿವಾಹಗಳು!

ಭಾರತದಲ್ಲಿ ಮದುವೆಯ ಸೀಸನ್ ಸಮೀಪಿಸುತ್ತಿದ್ದಂತೆ ವ್ಯಾಪಾರಿಗಳು ಕೂಡ ಕೈ ಬಿಸಿ ಮಾಡಿಕೊಳ್ಳುವುದು ಸಾಮಾನ್ಯ. ಹಾಗಾಗಿ ಸದ್ಯದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ದೇಶಾದ್ಯಂತ 48 ಲಕ್ಷ ವಿವಾಹಗಳು ನಡೆಯಲಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಅಂದಾಜಿಸಿದೆ.

ಈ ಮೂಲಕ ಕಂಡುಕೇಳರಿಯದ ರೀತಿಯಲ್ಲಿ 6 ಲಕ್ಷ ಕೋಟಿ ರೂ. ಮೊತ್ತದಲ್ಲಿ ಹಣಕಾಸಿನ ವ್ಯವಹಾರಗಳು ನಡೆಯಲಿದೆ. ಅದರಲ್ಲೂ 48 ಲಕ್ಷ ವಿವಾಹದಲ್ಲಿ ದೆಹಲಿಯೊಂದರಲ್ಲೇ 4.5 ಲಕ್ಷ ವಿವಾಹಗಳು ನಡೆಯಲಿದೆ. ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಉತ್ತರ ಭಾರತದಲ್ಲಿ ಕೊಂಚ ಹೆಚ್ಚು ಸಾಂಗವಾಗಿಯೇ ವಿವಾಹಗಳು ನಡೆಯುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ಅದರಲ್ಲೂ ದೆಹಲಿಯಲ್ಲಿ ಮದುವೆಗಳು ಯಾವ ಅಬ್ಬರದಿಂದ ಕೂಡಿರುತ್ತದೆ ಎಂಬ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಈ ಮೂಲಕ ದೆಹಲಿ ಪ್ರದೇಶದಲ್ಲೇ 1.5 ಲಕ್ಷ ಕೋಟಿ ಮೊತ್ತವನ್ನು ಆರ್ಥಿಕತೆಗೆ ಜೋಡಿಸಲಿದೆ.

ಹೇಗಿರುತ್ತದೆ ಮದುವೆ ಸಂಬಂಧಿ ಆರ್ಥಿಕ ಚಟುವಟಿಕೆ

ನವೆಂಬರ್ 12, 2024 ರಂದು ಮದುವೆಯ ಸೀಸನ್ ಪ್ರಾರಂಭವಾಗುವ ಮೂಲಕ ಭಾರತದಾದ್ಯಂತ ಚಿಲ್ಲರೆ ವ್ಯಾಪಾರಿಗಳು ಗಮನಾರ್ಹ ಆರ್ಥಿಕ ಉನ್ನತಿಗಾಗಿ ತಯಾರಿ ನಡೆಸುತ್ತಿದ್ದಾರೆ. ಸರಕು ಮತ್ತು ಸೇವೆಗಳೆರಡನ್ನೂ ಒಳಗೊಂಡಿರುವ ಚಿಲ್ಲರೆ ವಲಯವು ಈ ಹಬ್ಬದ ಸಮಯದಲ್ಲಿ ಒಟ್ಟು 5.9 ಲಕ್ಷ ಕೋಟಿ ರೂ. ವಹಿವಾಟು ಸಾಧಿಸುವ ನಿರೀಕ್ಷೆಯಿದೆ ಎಂದು CAIT ಯ ಇತ್ತೀಚಿನ ಅಧ್ಯಯನ ಬಹಿರಂಗಪಡಿಸಿದೆ.

ಈ ಪ್ರವೃತ್ತಿಗೆ ಅನುಗುಣವಾಗಿ ಸೆಂಕೋ ಗೋಲ್ಡ್‌ನ ಎಂಡಿ ಮತ್ತು ಸಿಇಒ ಸುವಾಂಕರ್ ಸೇನ್, ಧನ್ತೇರಸ್ ಸಮಯದಲ್ಲಿ ಮದುವೆಗೆ ಸಂಬಂಧಿಸಿದ ಚಿನ್ನದ ಖರೀದಿಗಳಲ್ಲಿ ಹೆಚ್ಚಳವನ್ನು ವರದಿ ಮಾಡಿದ್ದಾರೆ. ಅವರ ಪ್ರಕಾರ, ನವೆಂಬರ್ 2024 ರಿಂದ ಫೆಬ್ರವರಿ 2025 ರವರೆಗೆ ಬಿಡುವಿಲ್ಲದ ಮದುವೆಯ ಸೀಸನ್‌ಗಾಗಿ ಅನೇಕ ಗ್ರಾಹಕರು ತಯಾರಿ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಆಗಸ್ಟ್‌ನಲ್ಲಿ ಸುಂಕ ಕಡಿತವು ಆರಂಭದಲ್ಲೇ ಗ್ರಾಹಕರಿಗೆ ಹೆಚ್ಚಿನ ಆಸಕ್ತಿ ಒದಗಿಸಿದೆ. ಇದರ ಪರಿಣಾಮವಾಗಿ ಅಂಗಡಿಗಳಲ್ಲಿ ಹೆಚ್ಚಿದ ಜನಸಂದಣಿ ಮತ್ತು ಮದುವೆಯ ಋತುವಿನ ಖರೀದಿ ಪ್ರಾರಂಭವಾಯಿತು ಎಂದು ತಿಳಿಸಿದ್ದಾರೆ.

ಯಾವೆಲ್ಲಾ ಉತ್ಪನ್ನಗಳ ಮಾರಾಟ

ಸಾಮಾನ್ಯವಾಗಿ ಭಾರತದಲ್ಲಿ ಮದುವೆ ಸಮಯದಲ್ಲಿ ವಸ್ತ್ರ ಹಾಗೂ ಬೆಳ್ಳಿ, ಬಂಗಾರ, ವಜ್ರಗಳ ಖರೀದಿಯು ಸಿಂಹಪಾಲು ಪಡೆಯುತ್ತದೆ. ಅದರಲ್ಲೂ ಭಾರೀ ಮೊತ್ತದ ವಸ್ತ್ರಗಳ ಖರೀದಿಯಿಂದ ವಸ್ತ್ರೋದ್ಯಮ ಇಂದು ಭಾರತದಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ.

ಇನ್ನು ಮದುವೆ ಸಂದರ್ಭದಲ್ಲಿ ಆಹಾರಕ್ಕೆ ಕೂಡ ಹೆಚ್ಚಿನ ಖರ್ಚು ವೆಚ್ಚಗಳನ್ನು ಮಾಡಲಾಗುತ್ತದೆ. ಉಳಿದಂತೆ ಪೆಂಡಾಲ್‌, ವಾಹನ ಖರೀದಿ ಸೇರಿದಂತೆ ಹಲವು ಇತರೆ ವಸ್ತುಗಳ ಖರೀದಿ ಭರಾಟೆ ಕೂಡ ಅಬ್ಬರದಿಂದ ಕೂಡಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಭಾರತದಲ್ಲಿ ಮದುವೆಯನ್ನು ದೊಡ್ಡ ಉತ್ಸವನ್ನಾಗಿ ಆಚರಿಸುತ್ತಾರೆ ಎಂಬ ಮಾತು ಸತ್ಯ ಎನಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+