ದೀಪಾವಳಿ ಹಬ್ಬ (Deepavali Festival) ಬರುತ್ತಿದೆ ಎಂದು ಮುನ್ಸೂಚನೆ ನೀಡುವ ದಿನವೇ ಧನ್ತೇರಸ್ ಹಬ್ಬ. ಅಕ್ಟೋಬರ್ 18 ಅಂದರೆ ಇಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಧನ್ತೇರಸ್ ಅಥವಾ ಧನತ್ರಯೋದಶಿ (Dhanteras 2025) ಹಬ್ಬವನ್ನು ಸಂಪತ್ತಿನ ಅಧಿಪತಿ ಲಕ್ಷ್ಮೀ ದೇವಿಗೆ ಅರ್ಪಿಸಲಾಗುತ್ತದೆ. ಆದ್ದರಿಂದ ಈ ಧನತ್ರಯೋದಶಿ ದಿನದಂದು, ಚಿನ್ನ, ಬೆಳ್ಳಿ ಅಥವಾ ಇನ್ನಿತರ ಅದೃಷ್ಟವೆಂದು (Lucky) ಪರಿಗಣಿಸುವ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಹಾಗಿದ್ರೆ, ಧನತ್ರಯೋದಶಿಯಂದು ಯಾವ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಸಂಪತ್ತು ಮತ್ತು ಸಮೃದ್ಧಿಯನ್ನು ತರುವ ಈ ಧನ್ತೇರಸ್ ಹಬ್ಬವು ಚಿನ್ನ, ಬೆಳ್ಳಿ, ಇನ್ನಿತರ ಖರೀದಿಗಾಗಿ ಮಾರುಕಟ್ಟೆಗೆ ಹೋಗಲು ಬೆಸ್ಟ್ ಟೈಮ್. ಈ ದಿನದಂದು ಕುಬೇರ ಮತ್ತು ಲಕ್ಷ್ಮಿ ದೇವಿಯನ್ನು ಬಹಳ ಗೌರವದಿಂದ, ಸಂಪ್ರದಾಯದೊಂದಿಗೆ ಪೂಜಿಸಲಾಗುತ್ತದೆ. ವಿಶೇಷವಾಗಿ ಧನತ್ರಯೋದಶಿ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಶುಭವೆಂದು ನಂಬಲಾಗಿದೆ.
ಚಿನ್ನ ಮತ್ತು ಬೆಳ್ಳಿ ಅತ್ಯಂತ ಉತ್ತಮ ಹೂಡಿಕೆ ಮತ್ತು ದುಬಾರಿ ವಸ್ತುವಾಗಿದೆ. ಮಿತವ್ಯಯದ ಆಯ್ಕೆಗಳನ್ನು ಹುಡುಕುವವರಿಗೆ ಇದು ಬೆಸ್ಟ್ ಹೂಡಿಕೆಯಾಗಿದೆ.
ಧನತ್ರಯೋದಶಿಯಂದು ಖರೀದಿಸಬೇಕಾದ ಮತ್ತು ಖರೀದಿಸಬಾರದ ವಸ್ತುಗಳು:
ಧನತ್ರಯೋದಶಿಯಂದು ಖರೀದಿಸಬಹುದಾದ ವಸ್ತುಗಳಿವು:
ಚಿನ್ನ ಮತ್ತು ಬೆಳ್ಳಿ:
ಧನತ್ರಯೋದಶಿಯಂದು ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಖರೀದಿಸಿದರೆ ಒಳ್ಳೆಯದು. ಅಲ್ಲದೇ ಇತರ ಚಿನ್ನಾಭರಣಗಳು ಅಥವಾ ಮನೆ ಬಳಕೆಗೆ ಪಾತ್ರೆಗಳನ್ನು ಖರೀದಿಸುವುದು ಉತ್ತಮ. ಇದರಿಂದ ಮನೆಯಲ್ಲಿ, ಕುಟುಂಬದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ. ಅಲ್ಲದೇ ವಿಶೇಷವಾಗಿ ಲಕ್ಷ್ಮಿ ಮತ್ತು ಗಣೇಶನ ಕೆತ್ತನೆಯಿರುವ ನಾಣ್ಯಗಳನ್ನು ಈ ದಿನ ಖರೀದಿ ಮಾಡಿದ್ರೆ ಶುಭಕರವೆಂದು ಪರಿಗಣಿಸಲಾಗುತ್ತದೆ.
ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳು:
ಚಿನ್ನ ಮತ್ತು ಬೆಳ್ಳಿಯ ಮಾತ್ರವಲ್ಲದೇ, ಧನತ್ರಯೋದಶಿಯಂದು ಅಡುಗೆಮನೆಗೆ ಬೇಕಾಗುವ ಪಾತ್ರೆಗಳನ್ನು ಖರೀದಿಸಿದರೆ ಒಳ್ಳೆಯದು. ಅಂದ್ರೆ ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳನ್ನು ಖರೀದಿಸಿದರೂ ಉತ್ತಮ.
ಲಕ್ಷ್ಮಿ-ಗಣೇಶ ವಿಗ್ರಹಗಳು:
ಚಿನ್ನ, ಬೆಳ್ಳಿ, ಪಾತ್ರೆ ಮಾತ್ರವಲ್ಲದೇ ಲಕ್ಷ್ಮಿ-ಗಣೇಶ ವಿಗ್ರಹಗಳನ್ನು ಧನತ್ರಯೋದಶಿಯಂದು ಖರೀದಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನಲಾಗಿದೆ. ಗಣೇಶನನ್ನು ವಿಘ್ನನಿವಾರಕ ಎಂದು ಪೂಜಿಸಲಾಗುತ್ತದೆ, ಆದರೆ ಲಕ್ಷ್ಮಿ ಸಂಪತ್ತು ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುವುದರಿಂದ, ಇವೆರಡು ಬಹಳ ಶುಭಕರ ಎಂದು ಹೇಳಲಾಗಿದೆ. ಈ ವಿಗ್ರಹಗಳನ್ನು ಮನೆಗೆ ತಂದರೆ ಈ ವರ್ಷವಿಡೀ ಮನೆಯಲ್ಲಿ ಸಂಪತ್ತು, ಸಮೃದ್ಧಿ ತುಂಬಿ ತುಳುಕುತ್ತದೆ ಎನ್ನಲಾಗಿದೆ.
ಪೊರಕೆ:
ಈ ಶುಭ ಸಂದರ್ಭದಲ್ಲಿ ಪೊರಕೆಯನ್ನು ಖರೀದಿಸುವುದು ವಿಚಿತ್ರವೆನಿಸಿದರೂ, ಇದು ಸತ್ಯ. ಆದ್ದರಿಂದ ಪೊರಕೆ ಕೂಡಾ ಈ ದಿನ ಖರೀದಿಸಿದರೆ ಒಳ್ಳೆಯದು. ಇದು ಸ್ವಚ್ಛತೆ ಮತ್ತು ಲಕ್ಷ್ಮಿ ದೇವಿಯ ಉಪಸ್ಥಿತಿಯ ಸಂಕೇತವನ್ನು ಸೂಚಿಸುತ್ತದೆ. ಪೊರಕೆ ಖರೀದಿಸುವುದರಿಂದ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನಲಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ವಾಹನಗಳು:
ಹೊಸ ಮೊಬೈಲ್, ಗ್ಯಾಜೆಟ್ ಅಥವಾ ವಾಹನಗಳನ್ನು ಖರೀದಿಸಲು ನೀವು ಪ್ಲಾನ್ ಮಾಡಿದ್ದರೆ, ಧನತ್ರಯೋದಶಿ ದಿನ ಬಹಳ ಸೂಕ್ತ. ಅದರಲ್ಲೂ ವಾಹನಗಳನ್ನು ಖರೀದಿಸಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಖರೀದಿಸಬಾರದ ವಸ್ತುಗಳು:
ಧನತ್ರಯೋದಶಿಯಂದು ಕೆಲವು ವಸ್ತುಗಳನ್ನು ಖರೀದಿಸಿದರೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆಯಾದರೂ, ಇನ್ನೂ ಕೆಲವು ವಸ್ತುಗಳನ್ನು ಖರೀದಿಸಿದರೆ ಮನೆಯಲ್ಲಿ ಆರ್ಥಿಕ ಸಮಸ್ಯೆ, ನಕಾರಾತ್ಮಕ ಶಕ್ತಿಗಳಿಗೆ ಆಹ್ವಾನ ನೀಡಬಹುದು.
ಕಬ್ಬಿಣ ಮತ್ತು ಉಕ್ಕಿನ ವಸ್ತುಗಳು:
ಧನತ್ರಯೋದಶಿಯಂದು ಅಲಂಕಾರಿಕ ವಸ್ತುಗಳು ಅಥವಾ ಉಕ್ಕಿನ ಪಾತ್ರೆಗಳನ್ನು ಖರೀದಿಸಬಾರದು ಎಂದು ಹೇಳಲಾಗಿದೆ. ಏಕೆಂದರೆ ಅವುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಗಾಜು, ಕನ್ನಡಿಗಳು ಅಥವಾ ಸ್ಫಟಿಕಗಳು:
ಧನತ್ರಯೋದಶಿ ಖರೀದಿ ಪಟ್ಟಿಯಿಂದ ಗಾಜು, ಕನ್ನಡಿಯಂತಹ ವಸ್ತುಗಳನ್ನು ತೆಗೆದುಹಾಕಿ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ವಸ್ತುಗಳನ್ನು ಖರೀದಿಸಿದರೆ ದುರಾದೃಷ್ಟವನ್ನು ತರಬಹುದು.
(ಸೂಚನೆ: ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications