ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವಾಗ ಯಾವ ಅಂಶಗಳ ಬಗ್ಗೆ ಗಮನಹರಿಸಬೇಕು? ತಿಳಿಯಿರಿ

ಪ್ರತಿಯೊಬ್ಬರೂ ಕೂಡ ಆರೋಗ್ಯ ವಿಮೆಯನ್ನ ಪಡೆದಿರಬೇಕು. ಆರೋಗ್ಯ ವಿಮೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ಇದು ಪ್ರತಿಯೊಬ್ಬರ ಹಕ್ಕು ಕೂಡ, ಏಕೆಂದರೆ ಈ ಆಧುನಿಕ ಕಾಲಮಾನದಲ್ಲಿ ಯಾವಾಗ ಯಾವ ಕಾಯಿಲೆಗಳು ಕೂಡ ಬರಬಹುದು. ಅದ ಯಾವಾಗ ಬರಬಹುದು ಎಂದು ಯಾರು ಊಹೆ ಮಾಡಲಾರರು. ಅಲ್ಲದೆ ಈಗಂತೂ ಎಲ್ಲಾ ದುಭಾರಿಯಾದ್ದರಿಂದ ಚಿಕಿತ್ಸೆಗೆ, ಮಾತ್ರೆಗಳಿಗೆ ಎಂದು ಹತ್ತು ಹಲವು ಖರ್ಚುಗಳನ್ನ ನಾವು ನಿಭಾಯಿಸಬೇಕಾಗುತ್ತದೆ. ಆದ್ರೆ ನಮ್ಮ ಬಳಿ ಆರೋಗ್ಯ ವಿಮೆ ಇದ್ರೆ ನಾವು ಇಂತಹ ಪರಿಸ್ಥಿತಿಗಳನ್ನು ಸುಲಭವಾಗಿ ಎದುರಿಸಬಹುದು.

ಒಬ್ಬ ವ್ಯಕ್ತಿ ಆರೋಗ್ಯ ವಿಮಾ ಪಾಲಿಸಿಯನ್ನ ಖರೀದಿಸುವಾಗ ಒಂದಿಷ್ಟು ಪ್ರಮುಖ ಅಂಶಗಳನ್ನ ನಾವು ಪಾಲಿಸಬೇಕಗುತ್ತದೆ. ಅಲ್ಲದೆ ನಾವು ಆರೋಗ್ಯ ವಿಮಾ ಪಾಲಿಸಿಯನ್ನ ಖರೀದಿಸುವುದು ಎಷ್ಟು ಮುಖ್ಯವೋ ಈ ಪ್ರಮುಖ ಅಂಶಗಳನ್ನ ತಿಳಿದಿರುವುದು ಬಹಳ ಮುಖ್ಯ. ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವಾಗ, ಮೊದಲೇ ಅಸ್ತಿತ್ವದಲ್ಲಿರುವ ರೋಗಗಳ ಬಗ್ಗೆ ತಿಳಿಸಬೇಕು. ಏಕೆಂದರೆ ನೀವು ನಮ್ಮ ಆರೋಗ್ಯ ವಿಮಾ ಪಾಲಿಸಿ ಖರೀದಿಸುವಾಗ ಇವುಗಳು ಮುಖ್ಯವಾಗುತ್ತವೆ.

ಆರೋಗ್ಯ ವಿಮಾ ಪಾಲಿಸಿ ಖರೀದಿಸುವಾಗ ಈ ಅಂಶಗಳ ಬಗ್ಗೆ ಗಮನವಿರಲಿ

ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವ ವೇಳೆ ಗಮನಹರಿಸಬೇಕಾದ 5 ಅಂಶಗಳು

ವೈದ್ಯಕೀಯ ವೆಚ್ಚಗಳು ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇವೆ. ಅದರಲ್ಲೂ ವರ್ಷಿಕವಾಗಿ ಈ ವೆಚ್ಚಗಳು 10 ಪ್ರತಿಶತದಷ್ಟು ಏರಿಕೆಯಗ್ತಿದೆ. ಇದು ಚಿಲ್ಲರೆ ಹಣದುಬ್ಬರವನ್ನು ಹೆಚ್ಚಳ ಮಾಡ್ತಿದೆ. ಮತ್ತೊಂದೆಡೆ, ಸಂಬಳ ಹಾಗು ವೇತನ ಹೆಚ್ಚಳ ಚಿಲ್ಲರೆ ಅಥವಾ ವೈದ್ಯಕೀಯ ಹಣದುಬ್ಬರದೊಂದಿಗೆ ಸಿಂಕ್ ಆಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ವೈದ್ಯಕೀಯ ವಿಮಾ ಪಾಲಸಿಯನ್ನು ಹೊಂದಿರುವುದು ಬಹಳ ಮುಖ್ಯವಾಗುತ್ತದೆ. ಆದ್ರೆ ನಾವು ವಿಮಾ ಪಾಲಿಸಿ ಬಗ್ಗೆ ಹುಡುಕಿದಾಗ, ಪಾಲಸಿಯಲ್ಲಿ ನೀಡುವ ಸೌಲಭ್ಯಗಳು ಮತ್ತು ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ನಡುವೆ ಗೊಂದಲಗಳು ಆರಂಭವಾಗುತ್ತವೆ. ಈ ಸಮಯದಲ್ಲಿ ನಾವು ಈ ಅಂಶಗಳ ಬಗ್ಗೆ ತಿಳಿದಿರಬೇಕು.

ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವಾಗ ಬೇಕಾಗುವ 5 ಪ್ರಮುಖ ಅಂಶಗಳು ಇಲ್ಲಿವೆ.

1. ವಿಮಾ ಮೊತ್ತ

ವಾರ್ಷಿಕವಾಗಿ ನಮ್ಮ ವೈದ್ಯಕೀಯ ವೆಚ್ಚಗಳು 10-12 ಪ್ರತಿಶತದಷ್ಟು ಏರುತ್ತಿವೆ. ಹೀಗಗಿ ಇವತ್ತು ಸಾಕೆನಿಸುವ ಪಾಲಿಸಿಯು ಮಂಬರುವ ವೆಚ್ಚಗಳನ್ನು ಭರಿಸುವುದಿಲ್ಲ. ಆದ್ದರಿಂದ, ಹಣದುಬ್ಬರ ಮತ್ತು ಅನಿರೀಕ್ಷಿತ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಂದ ರಕ್ಷಿಸಲು ಕನಿಷ್ಠ ನಮಗೆ 10-15 ಲಕ್ಷ ರೂ. ಬೇಕಾಗುತ್ತದೆ.

2. ಟಾಪ್ ಅಪ್ ಯೋಜನೆ ಅತ್ಯಗತ್ಯ

ಒಂದು ಟಾಪ್-ಅಪ್ ಯೋಜನೆಯು ಒಂದು ನಿರ್ದಿಷ್ಟ ಮಿತಿಯ ನಂತರ ಆಸ್ಪತ್ರೆಯ ವೆಚ್ಚವನ್ನು ಒಳಗೊಳ್ಳುವ ಮೂಲಕ ನಿಮ್ಮ ಮೂಲ ನೀತಿಯನ್ನು ಪೂರೈಸುತ್ತದೆ. ಪ್ರೀಮಿಯಂ ಹೆಚ್ಚಳವಿಲ್ಲದೆ ನಿಮ್ಮ ಕುಟುಂಬದ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸಲು ಇದು ಪರಿಣಾಮಕಾರಿ ಮಾರ್ಗವಾಗಿದೆ.

3. ಅಸ್ತಿತ್ವದಲ್ಲಿರುವ ರೋಗಗಳ ಘೋಷಣೆ

ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವಾಗ, ನೀವು ನಿಮಗೆ ಮೊದಲೇ ಇರುವ ರೋಗಗಳನ್ನು ಸರಿಯಾಗಿ ಹೇಳಬೇಕು. ಇದರಿಂದಾಗಿ ನಿಮಗೆ ಎಷ್ಟು ಅಗ್ಯತ್ಯವಿದೆ ಎನ್ನುವುದನ್ನು ನೀವು ಬಹಿರಂಗಪಡಿಸಬಹುದು. ಆದ್ರೆ ನೀವು ನಿಮ್ಮ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಬಹಿರಂಗಪಡಿಸಲು ವಿಫಲವಾದರೆ ಹಕ್ಕು ನಿರಾಕರಣೆಗಳಿಗೆ ಕಾರಣವಾಗಬಹುದು.

4. ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳ ಬಗ್ಗೆ ತಿಳಿಯಿರಿ

ನೀವು ಸಲ್ಲಿಸಿರುವ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಖಾತ್ರಿಪಡಿಸಿಕೊಳ್ಳಲು ನಿಮ್ಮ ಅರ್ಜಿಯನ್ನು ನೀವು ಎಚ್ಚರಿಕೆಯಿಂದ ಓದಿ. ಇದರಿಂದಾಗಿ ನಿಮ್ಮ ಅರ್ಜಿಯಲ್ಲಿ ಎಷ್ಟು ಅಂಶಗಳು ಒಳಗೊಂಡಿವೆ ಎಂಬುನ್ನು ನೀವು ಖಚಿತಪಡಿಸಿಕೊಳ್ಳಬಹುದು.

5. ತೆರಿಗೆ ಉಳಿತಾಯದ ಮೇಲೆ ರಕ್ಷಣೆಗೆ ಗಮನ ಕೊಡಿ

ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಕಡಿತಗಳು ಬೋನಸ್ ಆದರೆ ಒಬ್ಬರ ನಿರ್ಧಾರಗಳನ್ನು ಚಾಲನೆ ಮಾಡಬಾರದು. ತೆರಿಗೆ ಉಳಿತಾಯವನ್ನು ಹೆಚ್ಚಿಸುವ ಬದಲು ತಮ್ಮ ಕುಟುಂಬಕ್ಕೆ ಉತ್ತಮ ರಕ್ಷಣೆಯನ್ನ ನೀಡುವತ್ತ ಗಮನಹರಿಸಬೇಕು.

ಆರೋಗ್ಯ ವಿಮೆಯನ್ನು ಖರೀದಿಸುವ ಸಮಯದಲ್ಲಿ ಅಗತ್ಯವಿರುವ ದಾಖಲೆಗಳು

ಯಾವುದೇ ಆರೋಗ್ಯ ವಿಮಾ ಯೋಜನೆಯನ್ನು ಖರೀದಿಸುವ ಸಮಯದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳು ಹೆಚ್ಚು ಅಗತ್ಯವಗಿರುತ್ತವೆ.

ವಯಸ್ಸಿನ ಪುರಾವೆ - ಆರೋಗ್ಯ ವಿಮೆಯನ್ನು ಖರೀದಿಸುವಾಗ ವಯಸ್ಸಿನ ಪುರಾವೆಯನ್ನು ಸಲ್ಲಿಸುವುದು ಬಹಳ ಮುಖ್ಯ. ಏಕೆಂದರೆ ಅನೇಕ ಪಾಲಿಸಿಗಳು ನಿಶ್ಚಿತ ಪ್ರವೇಶ ವಯಸ್ಸನ್ನು ಹೊಂದಿರುತ್ತವೆ. ನೀವು ಆಯ್ಕೆ ಮಾಡಿದ ಆರೋಗ್ಯ ವಿಮಾ ಪಾಲಿಸಿಯ ಅಡಿಯಲ್ಲಿ ವಿಮೆ ಮಾಡಿಸಿಕೊಳ್ಳಲು ಎಲ್ಲಾ ಸದಸ್ಯರ ವಯಸ್ಸಿನ ಪುರಾವೆಯನ್ನು ಸಹ ನೀವು ಒದಗಿಸಬೇಕಾಗುತ್ತದೆ. ಅರ್ಜಿದಾರರ ವಯಸ್ಸಿನ ಪುರಾವೆಗಾಗಿ ನೀವು ಈ ಕೆಳಗಿನ ಯಾವುದೇ ದಾಖಲೆಗಳನ್ನ ಸಲ್ಲಿಸಬಹುದು.

ಮತದಾರರ ಗುರುತಿನ ಚೀಟಿ

ಪ್ಯಾನ್ ಕಾರ್ಡ್
ಆಧಾರ್ ಕಾರ್ಡ್
ಡ್ರೈವಿಂಗ್‌ ಲೈಸೆನ್ಸ್‌
ಪಾಸ್‌ ಪೋರ್ಟ್
ಜನನ ಪ್ರಮಾಣಪತ್ರ
10ನೇ ಅಥವಾ 12ನೇ ಅಂಕಪಟ್ಟಿ

ವಿಳಾಸ ಪುರಾವೆ - ಆರೋಗ್ಯ ವಿಮಾ ಯೋಜನೆಯನ್ನು ಖರೀದಿಸುವಾಗ ವಿಳಾಸದ ಪುರಾವೆಯನ್ನು ಸಲ್ಲಿಸಬೇಕಾಗುತ್ತದೆ. ನೀವು ಆಯ್ಕೆ ಮಾಡಿರುವ ಆರೋಗ್ಯ ವಿಮಾ ಕಂಪನಿ ನಿಮ್ಮ ಪೋಸ್ಟಲ್ ವಿಳಾಸಕ್ಕೆ ವಿವಿಧ ದಾಖಲೆಗಳನ್ನ ಕಳಿಸುತ್ತದೆ. ಹೀಗಗಿ ವಿಳಾಸ ಪುರಾವೆಗಳು ಬಹಳ ಮುಖ್ಯವಗುತ್ತದೆ.

ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು - ವಿಮಾದಾರರ ದಾಖಲೆಗಳಿಗಾಗಿ ಅರ್ಜಿದಾರರು ಮತ್ತು ವಿಮಾ ಯೋಜನೆಯ ಸದಸ್ಯರ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು ಸಹ ನಿಮಗೆ ಅಗತ್ಯವಿರುತ್ತದೆ.

ವೈದ್ಯಕೀಯ ವರದಿಗಳು - ಕೆಲವು ವಿಮಾದಾರರು ಅರ್ಜಿದಾರರು ಮತ್ತು ಸದಸ್ಯರು ವೈದ್ಯಕೀಯ ವರದಿಯನ್ನು ಕೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವುಗಳು ಬಳ ಮುಖ್ಯವಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+