ಸ್ವಾತಂತ್ರ್ಯ ಬಂದ ನಂತರ ಭಾರತೀಯ ಹಣಕಾಸು ಸಚಿವರು ಬಜೆಟ್ ಮಂಡನೆಗೆ ಅದರ ಪ್ರತಿಗಳನ್ನು ಪ್ರತಿವರ್ಷವೂ ಸಂಸತ್ತಿಗೆ ಬ್ರೀಫ್ಕೇಸ್ ಕೊಂಡೊಯ್ಯುವ ಸಂಪ್ರದಾಯವಿತ್ತು. ಇದನ್ನು ಬಹುತೇಕ ಹಲವಾರು ವರ್ಷಗಳು ಎಲ್ಲ ಹಣಕಾಸು ಸಚಿವರು ಪಾಲಿಸಿದ್ದರು. ಆದರೆ 2019ರಲ್ಲಿ ಸರ್ಕಾರ 'ಬಹಿ ಖಾತಾ'ವನ್ನು ಪರಿಚಯಿಸುವ ಮೂಲಕ ಈ ಸಂಪ್ರದಾಯು ಗಮನಾರ್ಹವಾಗಿ ಬದಲಾಯಿತು. ದೇಶದ ಮೊದಲ ಪೂರ್ಣಾವಧಿ ವಿತ್ತ ಸಚಿವೆ ಎಂಬ ಹಿರಿಮೆ ಗಳಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರು ಹಲವಾರು ವರ್ಷಗಳ ಸಂಪ್ರದಾಯವನ್ನು ಕಳೆದ ವರ್ಷ ಮುರಿದಿದ್ದರು.
ಹಣಕಾಸು ಸಚಿವೆ ಸೀತಾರಾಮನ್ ಅವರು 2019ರಲ್ಲಿ ಬಜೆಟ್ ಪತ್ರವನ್ನು ಹೊತ್ತ ಬಟ್ಟೆಯ ಲೆಡ್ಜರ್ ಅಥವಾ "ಬಹಿ ಖಾತಾ" ಕೊಂಡೊಯ್ಯಲು ನಿರ್ಧರಿಸಿದರು. ಈ ಮೂಲಕ ಹಲವು ವರ್ಷಗಳ ಬ್ರಿಟೀಷ್ ಸಂಪ್ರದಾಯವನ್ನು ಕೈಬಿಟ್ಟು ಈ ಸಂಪ್ರದಾಯಕ್ಕೆ ಭಾರತೀಯ ಸ್ಪರ್ಶ ನೀಡಿದರು. ಜೊತೆಗೆ ಈ ನಿರ್ಧಾರವು ವಸಾಹತುಶಾಹಿ ಪರಂಪರೆಯಿಂದ ದೂರವಿರುವ ಸಾಂಕೇತಿಕ ಕ್ರಮವಾಗಿತ್ತು. ಬ್ರಿಟಿಷ್ ಹಣಕಾಸು ಮಂತ್ರಿಗಳು ಸಂಸತ್ತಿಗೆ "ಗ್ಲಾಡ್‌ಸ್ಟೋನ್ ಬಾಕ್ಸ್" ಅನ್ನು ಒಯ್ಯುತ್ತಿದ್ದರು. ಕಾಲ ಕಳೆದಂತೆ, ಇದು ಬ್ಯಾಗ್‌ಗಳು ಮತ್ತು ಬ್ರೀಫ್‌ಕೇಸ್‌ಗೆ ಬದಲಾಯಿಸಲಾಯಿತು. ಇದನ್ನೇ ಭಾರತ ಕೂಡಾ ಅಳವಡಿಸಿಕೊಂಡಿತ್ತು.

ಸಾಮಾನ್ಯವಾಗಿ 2019 ಮುಂಚೆ ವಿತ್ತ ಸಚಿವರು ಸೂಟ್ ಕೇಸ್ ಅಥವಾ ಬ್ರೀಫ್ ಕೇಸ್ ನಲ್ಲಿ ಇಟ್ಟು ಸಂಸತ್ತಿಗೆ ಆಗಮಿಸುತ್ತಿದ್ದರು. ಸಂಸತ್ತಿಗೆ ಪ್ರವೇಶಿಸುವ ಮುನ್ನ ಆವರಣದಲ್ಲಿ ನಿಂತ ಸುದ್ದಿಗಾರರು, ಫೋಟೋಗ್ರಾಫರ್ ಗಳತ್ತ ಬ್ರೀಫ್ ಕೇಸ್ ತೋರಿಸಿ ನಗೆ ಬೀರುತ್ತಿದ್ದರು. 2019ರಲ್ಲಿ ಬಜೆಟ್ ಮಂಡನೆ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಶಕಗಳ ಕಾಲದ ಸಂಪ್ರದಾಯಕ್ಕೆ ಕೊನೆ ಹಾಡಿ ಬಜೆಟ್ ಪ್ರತಿಗಳನ್ನು ಕೆಂಪು ಬಟ್ಟೆ ಸುತ್ತಿದ ಬಜೆಟ್ ಪ್ರತಿಯೊಂದಿಗೆ ಆಗಮಿಸಿ ಹೊಸ ಪರಂಪರೆಗೆ ನಾಂದಿ ಹಾಡಿದ್ದರು.
ಈ ವೇಳೆ ಅನೇಕ ಪ್ರಶ್ನೆಗಳು ಎಲ್ಲರ ಮನಸ್ಸಿನಲ್ಲಿ ಹುಟ್ಟಿಹಾಕಿತ್ತು. ಚರ್ಮದ ಸೂಟ್ ಕೇಸ್ ಎಲ್ಲಿ ಎಂದು ಪತ್ರಕರ್ತರು ಪ್ರಶ್ನಿಸಿದ್ದಾಗ ಅಂದಿನ ಮುಖ್ಯ ಆರ್ಥಿಕ ಸಲಹೆಗಾರ ಕೆ ಸುಬ್ರಹ್ಮಣ್ಯನ್ ಮಾಧ್ಯಮಗಳಿಗೆ ಉತ್ತರ ಕೊಟ್ಟು, ಬ್ರೀಫ್ ಕೇಸ್ ಬ್ರಿಟಿಷ್ ಗುಲಾಮ ಸಂಸ್ಕೃತಿ. ಗುಲಾಮದಿಂದ ಹೊರಬಂದು ನಮ್ಮ ಭಾರತೀಯ ಸಂಸ್ಕೃತಿಗೆ ಆದ್ಯತೆ ನೀಡಲು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬದಲಾವಣೆ ಮಾಡಲು ಹೇಳಿದ್ದರು ಎಂದು ಸ್ಪಷ್ಟನೆ ನೀಡಿದ್ದರು.
ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಗಳು ತಮ್ಮ ಹಣಕಾಸುಗಳನ್ನು ಮೇಲ್ವಿಚಾರಣೆ ಮಾಡಲು ಬಹಿ ಖಾತಾವನ್ನು ಬಳಸುತ್ತಾರೆ. ತಮ್ಮ ಆಯವ್ಯಯ ಪುಸ್ತಕವನ್ನು ದೇವರ ಮುಂದೆ ಇರಿಸಿ ಪೂಜಿಸುತ್ತಾರೆ. ಅದೇ ರೀತಿ ಬಜೆಟ್ ಪ್ರತಿ ಕೂಡ. ಇದು ಸರ್ಕಾರದ ಆಯವ್ಯಯದ ಪುಸ್ತಕ, ಹಾಗಾಗಿ ನನಗೆ ಇದಕ್ಕೂ ತುಂಬಾ ಗೌರವ ಕೊಡಬೇಕೆನ್ನಿಸಿ ಗುಲಾಮ ಸಂಸ್ಕೃತಿ ಕೈಬಿಟ್ಟು ಬಹಿ ಖಾತಾ ಸಂಸ್ಕೃತಿ ಜಾರಿಗೆ ತಂದೆನು ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದರು.
ಕಾಗದ ರಹಿತ ಬಜೆಟ್: ತಂತ್ರಜ್ಞಾನದೊಂದಿಗೆ ಸಂಪ್ರದಾಯದ ಮಿಳಿತ
1 ಫೆಬ್ರವರಿ 2021 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಕಾಗದ ರಹಿತ ಬಜೆಟ್ ಮಂಡಿಸಿದರು. ಸಂಪ್ರದಾಯದ 'ಬಹಿ-ಖಾತಾ' ಶೈಲಿಯ ಪೌಚ್‌ನಲ್ಲಿ ಡಿಜಿಟಲ್ ಟ್ಯಾಬ್ಲೆಟ್ ತಂದರು. ನಂತರ 2022 , 2023, ಮತ್ತು 2024 ರಲ್ಲಿ ಬಹಿ ಖಾತಾ ಶೈಲಿಯನ್ನು ನೆನಪಿಸುವ ಕೆಂಪು ಚೀಲದ ಪಚ್ ನಲ್ಲಿ ಚಿನ್ನದ ಬಣ್ಣದ ರಾಷ್ಟ್ರೀಯ ಲಾಂಛನ ಸುತ್ತುವರಿದ ಟ್ಯಾಬ್ಲೆಟ್ ಅನ್ನು ಸಂಸತ್ತಿಗೆ ತಂದು ಕಾಗದ ರಹಿತ ಬಜೆಟ್ ಮಂಡಿಸಿದ್ದರು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications