ಬೆಂಗಳೂರು, ಜುಲೈ 4: ತೆರಿಗೆ ಉಳಿತಾಯಕ್ಕೆ ಅನೇಕ ಮಾರ್ಗಗಳಿವೆ ಎನ್ನುವುದು ನಿಮಗೆ ಗೊತ್ತು. ಹಿಂದೂ ಅವಿಭಕ್ತ ಕುಟುಂಬವಾಗಿದ್ದರೆ ಅಲ್ಲಿಯೂ ತೆರಿಗೆ ಉಳಿತಾಯದ ಲಾಭ ಪಡೆದುಕೊಳ್ಳಲು ಸಾಧ್ಯವಿದೆ. ಎಚ್‌ಯುಎಫ್ ಎಂದರೆ ಹಿಂದೂ ಅವಿಭಕ್ತ ಕುಟುಂಬದ ಮೂಲಕ ತೆರಿಗೆ ಉಳಿಸಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರಲಕ್ಕಿಲ್ಲ. ಹಾಗಿದ್ದರೆ ಇಲ್ಲಿ ತೆರಿಗೆ ಲಾಭ ಪಡೆದುಕೊಳ್ಳಬಹುದು ಎನ್ನುವುದನ್ನು ನೋಡೋಣ.
ಎಚ್‌ಯುಎಫ್ ಅಂದ್ರೆ ಹಿಂದೂ ಅನ್‌ಡಿವೈಡೆಡ್ ಫ್ಯಾಮಿಲಿ ಅಥವಾ ಅವಿಭಕ್ತ ಕುಟುಂಬ. ಹಿಂದೂ ವ್ಯಕ್ತಿಯೊಬ್ಬ ಮದುವೆಯಾದಾಗ ಅವನ ಹೊಸ ಕುಟುಂಬವು ಒಂದು ಹಿಂದೂ ಅವಿಭಕ್ತ ಕುಟುಂಬ ಆಗುತ್ತೆ. ಆದಾಗ್ಯೂ, ಆದಾಯ ತೆರಿಗೆ ಕಾನೂನಿನಲ್ಲಿ, ಕೋಪಾರ್ಸೆನರ್ ಅಥವಾ ಸಹಪಾಲುದಾರ ಅನ್ನೋ ಒಂದು ಪರಿಕಲ್ಪನೆ ಇದೆ. ಈ ಕಾನೂನಿನ ಪ್ರಕಾರ, ಒಬ್ಬರಿಗಿಂತ ಹೆಚ್ಚು ಸಹಪಾಲುದಾರರು ಇರಲೇಬೇಕು. ಅಂತಹ ಸಂದರ್ಭದಲ್ಲಿ, ದಂಪತಿಗಳಿಗೆ ಮಗು ಹುಟ್ಟಿದಾಗ, ಅವರ ಅವಿಭಕ್ತ ಕುಟುಂಬವು ಆದಾಯ ತೆರಿಗೆ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತದೆ. ಹಿಂದೂಗಳು ಮಾತ್ರವಲ್ಲದೇ, ಜೈನರು , ಸಿಖ್ಖರು, ಮತ್ತು ಬೌದ್ಧರು ಹಿಂದೂ ಅವಿಭಕ್ತ ಕುಟುಂಬಗಳನ್ನು ಹೊಂದಬಹುದು.

ಯಾರೆಲ್ಲಾ ಒಂದು ಎಚ್‌ಯುಎಫ್ ರಚಿಸಿಕೊಳ್ಳಬಹುದು?
ಆದಾಯ ತೆರಿಗೆ ಕಾನೂನಿನಲ್ಲಿ, ಎಚ್‌ಯುಎಫ್ ಅನ್ನು ಒಬ್ಬ ವ್ಯಕ್ತಿಯಂತೆ ಒಂದು ಪ್ರತ್ಯೇಕ ಘಟಕವೆಂದು ಪರಿಗಣಿಸಲಾಗುತ್ತದೆ. ಒಂದು ಎಚ್‌ಯುಎಫ್‌ನಲ್ಲಿ ಒಬ್ಬ ವ್ಯಕ್ತಿ ಮತ್ತು ಮಗ-ಮಗಳು, ಮೊಮ್ಮಗ-ಮೊಮ್ಮಗಳು, ಹಾಗೂ ಮುಮ್ಮಗ-ಮುಮ್ಮಗಳಂತಹ ಆತನ ಮುಂದಿನ ತಲೆಮಾರನ್ನು ಸೇರಿಸಲಾಗುತ್ತದೆ. ಇದರೊಂದಿಗೆ, ಹೆಂಡತಿ ಮತ್ತು ಸೊಸೆ ಕೂಡಾ ಸೇರುತ್ತಾರೆ. ಮನೆಯ ಯಜಮಾನ ಇಲ್ಲಿ ಕರ್ತನಾಗುತ್ತಾನೆ. ಮನೆಯ ಎಲ್ಲ ಸದಸ್ಯರು ಇಲ್ಲಿ ಪಾಲುಪಡೆದುಕೊಳ್ಳುತ್ತಾರೆ.
ಎಚ್‌ಯುಎಫ್ ಎಲ್ಲಿಂದ ಆಸ್ತಿ ಪಡೆಯುತ್ತದೆ?
ಎಚ್‌ಯುಎಫ್ ಹೊಂದಿರುವ ಆಸ್ತಿಯು ಸಾಮಾನ್ಯವಾಗಿ ಉಡುಗೊರೆ, ಉಯಿಲು, ಅಥವಾ ಪಿತ್ರಾರ್ಜಿತ ಆಸ್ತಿಗಳಿಂದ ಬಂದಿರುತ್ತದೆ. ಅದು ಮನೆ, ಅಂಗಡಿ, ಭೂಮಿ, ಹಣ, ಅಥವಾ ಕುಟುಂಬದ ಆಸ್ತಿಗಳನ್ನು ಮಾರಿದಾಗ ಬಂದ ಹಣದಿಂದ ಕೊಂಡ ಆಸ್ತಿ ಯಾವುದು ಬೇಕಾದರೂ ಆಗಿರಬಹುದು. ಎಚ್‌ಯುಎಫ್‌ನ ಸದಸ್ಯರೊಬ್ಬರು ಮದುವೆ ಆದಾಗ, ಬರುವ ಉಡುಗೊರೆಗಳು ಇಡೀ ಕುಟುಂಬಕ್ಕೆ ಬಂದ ಉಡುಗೊರೆ ಆಗುತ್ತದೆ. ಇದು ಏಕೆಂದರೆ, ಹಾಗೆ ಬರುವ ಉಡುಗೊರೆಗಳು ವಧು-ವರರಿಗೆ ಮಾತ್ರ ಸೇರದೆ ಇಡೀ ಕುಟುಂಬಕ್ಕೆ ಸೇರುತ್ತದೆ. ಹಾಗೆಯೇ, ತಂದೆಯ ಉಯಿಲಿನಿಂದ ಅಥವಾ ಪಿತ್ರಾರ್ಜಿತವಾಗಿ ಬರುವ ಆಸ್ತಿಯೂ ಸಹ ಒಂದು ಬಗೆಯ ಉಡುಗೊರೆಯೇ ಆಗಿರುತ್ತದೆ.
ಒಂದು ಎಚ್‌ಯುಎಫ್ ಘಟಕದ ಅಸ್ತಿತ್ವವನ್ನು ತೋರಿಸಲು, ಅದರ ಕರ್ತನು ಒಂದು ಎಚ್‌ಯುಎಫ್ ಕರಾರು ಪತ್ರವನ್ನು ಮಾಡಿಸಬೇಕು. ಅದಕ್ಕೆಂದೇ ಪ್ರತ್ಯೇಕವಾದ ಬ್ಯಾಂಕ್ ಖಾತೆ ಮತ್ತು ಪ್ಯಾನ್ (ಪಿ.ಎ.ಎನ್.) ಕಾರ್ಡ್‌ಗಳಿರಬೇಕು. ಆಗ ಮಾತ್ರ ವೈಯಕ್ತಿಕ ಮತ್ತು ಎಚ್‌ಯುಎಫ್‌ನ ಆದಾಯಗಳೆರಡಕ್ಕೂ ತೆರಿಗೆ ವಿನಾಯಿತಿ ಸಿಗುತ್ತದೆ. ಒಬ್ಬ ವ್ಯಕ್ತಿಯ ಆದಾಯದ ಮೇಲೆ ತೆರಿಗೆ ವಿಧಿಸುವಂತೆಯೇ ಎಚ್‌ಯುಎಫ್‌ನ ಆದಾಯದ ಮೇಲೂ ತೆರಿಗೆ ವಿಧಿಸಲಾಗುತ್ತದೆಯಾದರೂ, ಅದರ ಕರ್ತ ಮತ್ತು ಸದಸ್ಯರೆಲ್ಲರೂ ತಮ್ಮ ವೈಯಕ್ತಿಕ ಮತ್ತು ಎಚ್‌ಯುಎಫ್‌ನ ಆದಾಯಗಳೆರಡರ ಮೇಲೂ 80ಸಿ ಮತ್ತು 80ಡಿಗಳಂತಹ ತೆರಿಗೆ ವಿನಾಯಿತಿಯ ಲಾಭಗಳನ್ನು ಪಡೆಯಬಹುದು.
ಒಂದು ಎಚ್‌ಯುಎಫ್ ತನ್ನ ಕರ್ತನ ಮೂಲಕ ಆಸ್ತಿಗಳನ್ನು ಕೊಳ್ಳಬಹುದು. ಹಾಗೆಯೇ, ಅದು ಷೇರುಗಳಲ್ಲಿ, ಮ್ಯೂಚುಯಲ್ ಫಂಡ್‌ಗಳಲ್ಲಿ, ಎಫ್.ಡಿ.ಗಳಲ್ಲಿ, ಅಥವಾ ಯಾವುದೇ ವ್ಯವಹಾರದಲ್ಲಿ, ಹಣ ಹೂಡಬಹುದು. ಈ ಎಲ್ಲಾ ಕೆಲಸಗಳನ್ನೂ ಕರ್ತನ ಮೂಲಕ ಮಾಡಬೇಕು. ನಿಮ್ಮ ಆದಾಯಗಳನ್ನು ಎಚ್‌ಯುಎಫ್‌ನ ಆದಾಯವೆಂದು ತೋರಿಸಿದಾಗ, ನೀವು ದೊಡ್ಡ ಮೊತ್ತದ ತೆರಿಗೆ ಉಳಿಸಿಬಹುದು. ಆದರೆ, ಕುಟುಂಬದ ಸ್ವತ್ತಿಗೆ ಅನೇಕ ಪಾಲುದಾರು ಇರುತ್ತಾರೆ ಎನ್ನುವುದನ್ನು ಮಾತ್ರ ಮರೆಯಬಾರದು. ನೀವು ನಿಮ್ಮ ವೈಯಕ್ತಿಕ ಆದಾಯವನ್ನು ಎಚ್‌ಯುಎಫ್‌ನ ಆದಾಯವೆಂದು ತೋರಿಸಬಾರದು. ಇಲ್ಲದಿದ್ದಲ್ಲಿ, ನಿಮಗೆ ಆದಾಯ ತೆರಿಗೆಯ ನೋಟೀಸ್ ಬರಬಹುದು ಎಚ್ಚರ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications