ಬೆಂಗಳೂರು, ಆಗಸ್ಟ್ 28: ಮಹಿಳೆಯರನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸರ್ಕಾರ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ "ಲಕ್ ಪತಿ ದೀದಿ" ಕೂಡಾ ಒಂದು. ವಿತ್ತ ಸಚಿವೆ ಪ್ರಸಕ್ತ ಸಾಲಿನ ಮಧ್ಯಂತರ ಬಜೆಟ್ ನಲ್ಲಿ ಮಹಿಳೆಯರಿಗಾಗಿ "ಲಕ್ ಪತಿ ದೀದಿ ಯೋಜನೆ" ಯನ್ನು ಪ್ರಸ್ತಾಪಿಸಿದ್ದು ಇದನ್ನು 3 ಕೋಟಿ ಮಹಿಳೆಯರಿಗೆ ಯೋಜನೆಯ ತಲುಪಿಸುವ ಗುರಿ ಹೊಂದಿರುವುದಾಗಿ ಹೇಳಿದ್ದರು.
ಏನಿದು ಲಕ್ ಪತಿ ಯೋಜನೆ
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿ ಅವರನ್ನು ಮುಂದೆ ತರುವುದು ಲಕ್ ಪತಿ ದೀದಿ ಯೋಜನೆಯ ಉದ್ದೇಶ. ಮಹಿಳಾ ಸ್ವಯಂ ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕದಲ್ಲಿರುವ 9 ಕೋಟಿ ಮಹಿಳೆಯರಿದ್ದಾರೆ. ಸ್ವಸಹಾಯ ಗುಂಪುಗಳ ಸಹಾಯ ಪಡೆದು ಇವರೆಲ್ಲರೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಈ ಸ್ವಸಹಾಯ ಗುಂಪುಗಳಿಗೆ ಸಂಬಂಧಪಟ್ಟಂತೆ ಮತ್ತು ಇವುಗಳ ಮೂಲಕ ಮಹಿಳೆಯರ ಆದಾಯ ಹೆಚ್ಚಿಸಲು ಲಕ್ ಪತಿ ದೀದಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲಿ ಸ್ವಂತವಾದ ಉದ್ಯಮವನ್ನು ಪ್ರಾರಂಭ ಮಾಡುವಂತಹ ಮಹಿಳೆಯರಿಗೆ 1 ಲಕ್ಷ ರೂ.ಗಳಿಂದ ಪ್ರಾರಂಭಿಸಿ ಒಂದು ಕೋಟಿ ರೂಪಾಯಿಗಳ ವರೆಗೂ ಬಡ್ಡಿ ರಹಿತ ಸಾಲವನ್ನು ನೀಡಲು ಹೊರಟಿದೆ. ಅದರಲ್ಲೂ ವಿಶೇಷವಾಗಿ 5 ಲಕ್ಷ ರೂ.ಗಳ ವರೆಗೆ ಸುಲಭ ರೂಪದಲ್ಲಿ ಈ ಯೋಜನೆಯ ಮೂಲಕವಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಯೋಜನೆಯ ಪ್ರಯೋಜನಗಳು:
ಸ್ವಯಂ ಸ್ವಸಹಾಯ ಗುಂಪು ನೆರವಿನಿಂದ ಮಹಿಳೆಯರು ಸಣ್ಣ ಪುಟ್ಟ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುತ್ತಾರೆ. ತರಬೇತಿ ಪಡೆದು ಪರಿಣಿತರಾದ ಬಳಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ತಮ್ಮ ಸಂಪಾದನೆಗೆ ದಾರಿ ಕಂಡುಕೊಳ್ಳುತ್ತಾರೆ. ಕೇವಲ ಕೌಶಲ್ಯ ತರಬೇತಿ ಮಾತ್ರವಲ್ಲ, ಸಣ್ಣ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳಲು ಆರ್ಥಿಕ ತಿಳುವಳಿಕೆ ಹೆಚ್ಚಿಸಲು ಸಾಕ್ಷರತಾ ಕಾರ್ಯಾಗಾರವನ್ನು ನಡೆಸಲಾಗುತ್ತದೆ. ಆದ್ರೆ ಈ ಯೋಜನೆಯ ಫಲಾನುಭವಿಗಳಾಗಲು ಬಯಸುವ ಮಹಿಳೆಯರು ಯಾವುದಾದರೂ ಸ್ವ ಸಹಾಯ ಗುಂಪಿನ ಸದಸ್ಯರಾಗಿರಬೇಕು. ಆರ್ಥಿಕ ತರಬೇತಿ ಸಂದರ್ಭದಲ್ಲಿ ಇದರಲ್ಲಿ ಬಜೆಟ್, ಉಳಿತಾಯ, ಹೂಡಿಕೆಯಂತಹ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಮಹಿಳೆಯರಿಗೆ ಹಣ ಉಳಿತಾಯಕ್ಕೆ ಪ್ರೋತ್ಸಾಹ, ಮಹಿಳೆಯರಿಗೆ ಕಿರುಸಾಲ ಸೌಲಭ್ಯ, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಗೆ , ಉದ್ಯಮಿಯಾಗಲು ಬಯಸುವ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ , ಮಹಿಳೆಯರಿಗೆ ಆರ್ಥಿಕ ಭದ್ರತೆ , ವಿಮಾ ಸೌಲಭ್ಯ , ಡಿಜಿಟಲ್ ಬ್ಯಾಂಕಿಂಗ್ ಸರ್ವೀಸ್, ಮೊಬೈಲ್ ವ್ಯಾಲೆಟ್ಸ್ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಒಟ್ಟಿನಲ್ಲಿ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಲಾಗುತ್ತದೆ. ಮಹಿಳೆ ಸ್ವಾವಲಂಭಿಯಾಗುವುದರ ಜೊತೆಗೆ ಆ ಮೂಲಕವೇ ಗ್ರಾಮೀಣ ಆರ್ಥಿಕತೆಯೂ ಬೆಳೆಯುತ್ತದೆ ಎನ್ನುವುದು ಯೋಜನೆಯ ಹಿಂದಿನ ಉದ್ದೇಶವಾಗಿದೆ.
ಕೇಂದ್ರದ 'ಲಕ್ ಪತಿ ದೀದಿ' ಮಹಿಳಾ ಸಬಲೀಕರಣದ ಚೌಕಟ್ಟಿನ ಮೂಲಕ , ಈ ಮಹಿಳೆಯರು ತಮ್ಮ ಜೀವನವನ್ನು ಪರಿವರ್ತಿಸಿಕೊಳ್ಳುವುದು ಮಾತ್ರವಲ್ಲದೆ ಇತರರಿಗೆ ಸ್ಪೂರ್ತಿದಾಯಕ ಮಾದರಿಯಾಗಿ ಹೊರಹೊಮ್ಮುತ್ತಿದ್ದಾರೆ.
ಸಾಲವನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು:
18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರ ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಸ್ವಂತ ಉದ್ಯಮವನ್ನು ಪ್ರಾರಂಭಿಸುವಂತಹ ಕೌಶಲ್ಯ ಹೊಂದಿದ್ದು, ಇದರ ಅಭಿವೃದ್ಧಿ ತರಬೇತಿಯನ್ನು ಕೂಡ ಅವರು ಪಡೆದುಕೊಂಡಿರಬೇಕು.
ಎಲ್ಲಕ್ಕಿಂತ ಪ್ರಮುಖವಾಗಿ ಸ್ವಸಹಾಯ ಸಂಘಗಳ ಮಹಿಳೆಯರು ಈಗಾಗಲೇ ಸದಸ್ಯರಾಗಿರಬೇಕು.
ಈ ಸಾಲ ಯೋಜನೆಗೆ ಬೇಕಾಗಿರುವ ದಾಖಲಾತಿ:
ಆಧಾರ್ ಹಾಗೂ ಪ್ಯಾನ್ ಕಾರ್ಡ್ ಜೊತೆಗೆ ಬ್ಯಾಂಕ್ ಪಾಸ್ ಬುಕ್ ವಿವರ
ಈಗಾಗಲೇ ನೀವು ಸ್ವಸಹಾಯ ಸಂಘದಲ್ಲಿ ಇರುವಂತಹ ಸದಸ್ಯತ್ವದ ಸರ್ಟಿಫಿಕೇಟ್ ಮತ್ತು ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರದ ಜೊತೆಗೆ ಅದಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಪ್ರಮುಖ ದಾಖಲೆಗಳ ಅಗತ್ಯವಿದೆ.


Click it and Unblock the Notifications