ಇಂದು ದೇಶದಲ್ಲಿ ಪ್ಯಾನ್ ಕಾರ್ಡ್ ಹೊಂದುವುದು ಅತೀ ಅಗತ್ಯವಾಗಿದೆ. ಒಂದೇ ಅರ್ಥದಲ್ಲಿ ಹೇಳುವುದಾದರೆ ಆದಾಯ ಇರುವ ಪ್ರತೀ ವ್ಯಕ್ತಿಗಳು ಪ್ಯಾನ್ ಕಾರ್ಡ್ ಹೊಂದಿರಲೇ ಬೇಕು. ಅದೂ ಅಲ್ಲದೆ ಈಗಾಗಲೇ ಪಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಕೂಡ ಅತ್ಯಗತ್ಯವಾಗಿದೆ. ಇದರ ನಡುವೆಯೇ ಇದೀಗ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಈ ಮೂಲಕ ಪ್ಯಾನ್ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆ ಹಾಗೂ ಹೆಚ್ಚುವರಿ ಸುರಕ್ಷತೆ, ಸುಲಭ ಹಾಗೂ ಸರಳ ತೆರಿಗೆ ಪಾವತಿ ವ್ಯವಸ್ಥೆ ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಮೂಲಕ ನೀಡುತ್ತಿದೆ. ಇದಕ್ಕಾಗಿ ಕೇಂದ್ರ ಕ್ಯಾಬಿನೆಟ್ ಬರೋಬ್ಬರಿ 1,435 ಕೋಟಿ ರೂಪಾಯಿ ಮೀಸಲಿಟ್ಟಿದೆ. PAN 2.0 ಯೋಜನೆಯು ಎಲ್ಲಾ ಸರ್ಕಾರಿ ಡಿಜಿಟಲ್ ವ್ಯವಸ್ಥೆಗಳಲ್ಲಿ PAN ಸಂಖ್ಯೆಯನ್ನು ಸಾಮಾನ್ಯ ವ್ಯಾಪಾರ ಗುರುತಿಸುವಿಕೆಯನ್ನಾಗಿ ಮಾಡುವ ಗುರಿ ಹೊಂದಿದೆ. ಕ್ಯಾಬಿನೆಟ್ ಆರ್ಥಿಕ ವ್ಯವಹಾರಗಳ ಸಮಿತಿ (CCEA) ಆದಾಯ ತೆರಿಗೆ ಇಲಾಖೆಯಡಿಯಲ್ಲಿ ಯೋಜನೆಗೆ ಅನುಮೋದನೆ ನೀಡಿದೆ.
ಏನಿದು ಪ್ಯಾನ್ ಕಾರ್ಡ್ 2.0 ಯೋಜನೆ?
ಈಗಾಗಲೇ ಭಾರತದಲ್ಲಿ ಪಾನ್ ಕಾರ್ಡ್ ಚಾಲ್ತಿಯಲ್ಲಿದ್ದು, ಇದರ ನಡುವೆ ಪಾನ್ ಕಾರ್ಡ್ 2.0 ನ ಅಗತ್ಯವಿದೆಯೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುವುದು ಸಹಜವಾಗಿದೆ. ಅದೂ ಅಲ್ಲದೆ ಹೊಸ ಪ್ಯಾನ್ ಕಾರ್ಡ್‌ನಿಂದ ಸದ್ಯ ಇರುವ ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುತ್ತಾ? ಪ್ಯಾನ್ ಇರುವವರೂ ಹೊಸದಾಗಿ ಮಾಡಿಸಿಕೊಳ್ಳಬೇಕಾ ಅನ್ನೋ ಹಲವು ಪ್ರಶ್ನೆಗಳು ಎದ್ದಿದೆ. ಇದಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟನೆ ನೀಡಿದ್ದಾರೆ. ʻಅಸ್ತಿತ್ವದಲ್ಲಿರುವ PAN ಸಂಖ್ಯೆಗಳು ಮಾನ್ಯವಾಗಿರುತ್ತವೆ. ವರ್ಧಿತ ವೈಶಿಷ್ಟ್ಯಗಳೊಂದಿಗೆ ಹೊಸ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಹೀಗಾಗಿ ಹಳೇ ಪ್ಯಾನ್ ಕಾರ್ಡ್ ಇರುವವರು ಹೊಸ ಯೋಜನೆಯಿಂದ ಆತಂಕ ಪಡುವ ಅವಶ್ಯಕತೆ ಇಲ್ಲ. ಹಳೇ ಕಾರ್ಡ್ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಅಪ್‌ಗ್ರೇಡ್ ಮಾಡಲಾದ PAN 2.0 ಕಾರ್ಡ್ QR ಕೋಡ್ ಸೇರಿದಂತೆ ಹೊಸ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಮತ್ತು ಇದನ್ನು ಉಚಿತವಾಗಿ ಒದಗಿಸಲಾಗುತ್ತದೆ. ಸದ್ಯ ಹಳೇ ಕಾರ್ಡ್ ಇರುವವರಿಗೂ ಹೊಸ ಕಾರ್ಡನ್ನು ಉಚಿತವಾಗಿ ನೀಡಲಾಗುತ್ತದೆ. ಹೀಗಾಗಿ ಹೊಸ ಕಾರ್ಡ್‌ಗಾಗಿ ಅರ್ಜಿ ಹಾಕುವುದು, ಶುಲ್ಕ ಪಾವತಿಸುವ ಅಗತ್ಯವಿಲ್ಲ. ಈ ಯೋಜನೆಯು PAN ಸೇವೆಗಳನ್ನು ಡಿಜಿಟಲೀಕರಣಗೊಳಿಸುತ್ತದೆ ಮತ್ತು ಸುವ್ಯವಸ್ಥಿತಗೊಳಿಸುತ್ತದೆ, ಬಳಕೆದಾರರ ಅನುಕೂಲಕ್ಕಾಗಿ ಪೇಪರ್‌ಲೆಸ್ ಆನ್‌ಲೈನ್ ಪ್ರಕ್ರಿಯೆಯನ್ನು ರಚಿಸುತ್ತದೆ. ಪ್ಯಾನ್ ಕಾರ್ಡ್ ವ್ಯವಸ್ಥೆಯಲ್ಲಿ ಮತ್ತಷ್ಟು ಡಿಜಲೀಟಕರಣ ಹಾಗೂ ಸರ್ಕಾರದ ಎಲ್ಲಾ ದಾಖಲೆಗಳಲ್ಲೂ ಪ್ಯಾನ್ ಕಾರ್ಡ್ ಮಾಹಿತಿ ಲಭ್ಯವಾಗಲಿದೆ. ಇದರಿಂದ ಅರ್ಹರಿಗೆ ಸೌಲಭ್ಯಗಳು ಸಿಗಲು ನೆರವಾಗಲಿದೆ. PAN 2.0 ಡೇಟಾ ಸ್ಥಿರತೆ, ಪರಿಸರ ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯ ಭದ್ರತೆಯನ್ನು ವೆಚ್ಚವನ್ನು ನಿರ್ವಹಿಸುವಾಗ ವರ್ಧಿಸುತ್ತದೆ. ಪ್ಯಾನ್ 2.0 ಯೋಜನೆಯಿಂದ ಡೇಟಾ ಮಾಹಿತಿ, ತೆರಿಗೆ ಪಾವತಿ ವ್ಯವಸ್ಥೆ ಸೇರಿದಂತೆ ಪ್ಯಾನ್ ಸಂಬಂದಿಸಿದ ಕೆಲಸಗಳು ಅತೀ ಸುಲಭವಾಗಿ ನಡೆಯಲಿದೆ. ಪ್ಯಾನ್ ಕಾರ್ಡ್ 2.0 ಯೋಜನೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿದ್ದು, PAN ಕಾರ್ಡ್ ಗಳು ಹೆಚ್ಚಿನ ಕಾರ್ಯಶೀಲತೆ ಮತ್ತು ಭದ್ರತೆಗಾಗಿ QR ಕೋಡ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಪ್ಯಾನ್ 2.0 ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಪ್ಯಾನ್ ಕಾರ್ಡ್ 2.0 ಯೋಜನೆಯಿಂದ ಅಸ್ತಿತ್ವದಲ್ಲಿರುವ PAN ವ್ಯವಸ್ಥೆಯಲ್ಲಿ ಹೆಚ್ಚಿನ ಅಪ್ಗ್ರೇಡ್ ಆಗಲಿದೆ. ಪ್ಯಾನ್ 2.0 ಯೋಜನೆಯು ತಂತ್ರಜ್ಞಾನದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ದೊಡ್ಡ ಬದಲಾವಣೆ ತರಲು ಸಹಾಯ ಮಾಡಲಿದೆ. ತೆರಿಗೆದಾರರು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಸುಲಭವಾಗಿ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ತ್ವರಿತ ಸೇವೆಗಳನ್ನು ಒದಗಿಸುವ ಜೊತೆಗೆ ಗುಣಮಟ್ಟವೂ ಸುಧಾರಿಸಲಿದೆ ಎಂದು ಹೇಳಲಾಗಿದೆ. PAN 2.0 ಪ್ರಸ್ತುತ PAN ವ್ಯವಸ್ಥೆಯ ಮುಂದುವರಿದ ಆವೃತ್ತಿಯಾಗಿದೆ. PAN ನೋಂದಣಿಯನ್ನು ಸುಲಭಗೊಳಿಸಲು ಮತ್ತು ತೆರಿಗೆದಾರರಿಗೆ ಸಹಾಯ ಮಾಡುವ ದೃಷ್ಠಿಯಿಂದ ಇದನ್ನು ರೂಪಿಸಲಾಗುತ್ತಿದೆ.

ಹೇಗಿರಲಿದೆ ಹೊಸ ಪ್ಯಾನ್ ಕಾರ್ಡ್ ?
ಹೊಸ ಪ್ಯಾನ್ ಕಾರ್ಡ್ ಹಳೆಯದಕ್ಕಿಂತ ಹೆಚ್ಚು ಭಿನ್ನವಾಗಿರಲಿದೆ. ಹೊಸ ಪ್ಯಾನ್ ಕಾರ್ಡ್‌ಗಳು ಕ್ಯೂಆರ್ ಕೋಡ್‌ಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಪೇಪರ್‌ಲೇನ್ ಅಂದರೆ ಆನ್‌ಲೈನ್ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುವುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಜನರು ಇದಕ್ಕಾಗಿ ಪ್ರತ್ಯೇಕ ಹಣವನ್ನು ಖರ್ಚು ಮಾಡಬೇಕಾಗಿಲ್ಲ, ಜನರು QR ಕೋಡ್‌ನೊಂದಿಗೆ ಪ್ಯಾನ್‌ಗಾಗಿ ಪ್ರತ್ಯೇಕವಾಗಿ ಖರ್ಚು ಮಾಡುವ ಅಗತ್ಯವಿಲ್ಲ. ಸ್ಕ್ಯಾನರ್ ಅಳವಡಿಸಲಾಗಿರುವ ಹೊಸ ಪ್ಯಾನ್ ಕಾರ್ಡ್‌ನಲ್ಲಿ ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
ಪ್ಯಾನ್ ಕಾರ್ಡ್ 2.0 ಎಷ್ಟು ವಿಭಿನ್ನವಾಗಿರುತ್ತದೆ? :
ಕೇಂದ್ರ ಸಚಿವ ಸಂಪುಟವು ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯ ಉದ್ದೇಶವು PAN ಕಾರ್ಡ್ ಅನ್ನು ಹೆಚ್ಚು ಸುರಕ್ಷಿತಗೊಳಿಸುವುದು ಮತ್ತು ತೆರಿಗೆದಾರರ ಶಾಶ್ವತ ಖಾತೆ ಸಂಖ್ಯೆ (PAN)ಯನ್ನು ಎಲ್ಲಾ ಸರ್ಕಾರಿ ಏಜೆನ್ಸಿಗಳಿಗೆ 'ಸಾಮಾನ್ಯ ವ್ಯಾಪಾರ ಗುರುತಿಸುವಿಕೆಗಾಗಿ ಬಳಸುವ ಪ್ರಕ್ರಿಯೆಯನ್ನು ಸರಳಗೊಳಿಸುವುದು. ಇದರೊಂದಿಗೆ, ಪ್ಯಾನ್ ಕಾರ್ಡ್‌ನ ಉತ್ತಮ ಗುಣಮಟ್ಟದ ಜೊತೆಗೆ, ಅದರ ಸೇವೆಯನ್ನು ಸುಲಭ ಮತ್ತು ವೇಗವಾಗಿ ಮಾಡಬೇಕು. ಹೊಸ ಪ್ಯಾನ್ ಕಾರ್ಡ್ ಹಳೆಯ ಪ್ಯಾನ್ ಕಾರ್ಡ್‌ಗಿಂತ ಭಿನ್ನವಾಗಿರುತ್ತದೆ.
ತೆರಿಗೆದಾರರಿಗೆ ಉಚಿತ QR ಕೋಡ್ ಪ್ಯಾನ್ ಕಾರ್ಡ್
ಪ್ಯಾನ್ 2.0. ಯೋಜನೆಯ ಕುರಿತ ಪ್ರಶ್ನೆಗೆ ಅಶ್ವಿನಿ ವೈಷ್ಣವ್ ಸ್ಪಷ್ಟವಾಗಿ ಉತ್ತರಿಸಿದರು. ಪ್ಯಾನ್ 2.0 ಯೋಜನೆಯಡಿ ಭಾರತೀಯರು ಮತ್ತೆ ಹೊಸ ಪ್ಯಾನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಯಡಿ ಈಗಾಗಲೇ ನೀಡಲಾದ ಪ್ಯಾನ್ ಕಾರ್ಡ್‌ಗಳನ್ನು ಕ್ಯೂಆರ್ ಕೋಡ್‌ನೊಂದಿಗೆ ಉಚಿತವಾಗಿ ನವೀಕರಿಸಲಾಗುವುದು ಎಂದು ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications