2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ (Union Budget 2026-27) ಇನ್ನೇನು ಮೂರು ದಿನಗಳು ಮಾತ್ರ ಉಳಿದಿವೆ. ಬಜೆಟ್ ಮಂಡನೆ ದಿನ ಸಮೀಪಿಸುತ್ತಿದ್ದಂತೆ, ದೇಶದ ಆರ್ಥಿಕ ಸ್ಥಿತಿಗತಿಯನ್ನು ವಿವರಿಸುವ "ಆರ್ಥಿಕ ಸಮೀಕ್ಷೆ"ಯತ್ತ (Economic Survey) ಎಲ್ಲರ ಚಿತ್ತ ನೆಟ್ಟಿದೆ. ಸಾಮಾನ್ಯವಾಗಿ ಬಜೆಟ್ ಮಂಡಿಸುವ ಮುನ್ನ ಸಂಸತ್ ಅಧಿವೇಶನದಲ್ಲಿ ಈ ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡಲಾಗುತ್ತದೆ. ಇದೀಗ ಇಂದು, ಅಂದರೆ ಜನವರಿ 29, 2026 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12ರ ತನ ಈ ವರದಿಯನ್ನು ಮಂಡಿಸಲಾಗುತ್ತದೆ. ದೇಶದ ಆರ್ಥಿಕ ಸ್ಥಿತಿಗತಿ ಮತ್ತು ನೀತಿ ಆದ್ಯತೆಗಳನ್ನು ತಳಿಸುವ ಸರ್ಕಾರದ ವಾರ್ಷಿಕ ವರದಿ ಇದಾಗಿದೆ. ಹಾಗಿದ್ರೆ ಆರ್ಥಿಕ ಸಮೀಕ್ಷೆ ಎಂದರೇನು? ಇದರ ಮಹತ್ವವೇನು? ಈ ಎಲ್ಲದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆರ್ಥಿಕ ಸಮೀಕ್ಷೆ ಎಂದರೇನು?
ಆರ್ಥಿಕ ಸಮೀಕ್ಷೆ ಎಂದರೆ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಪ್ರತೀ ವರ್ಷ ಬಿಡುಗಡೆ ಮಾಡಲಾಗುವ ಒಂದು ದೊಡ್ಡ ವರದಿ ಅಥವಾ ರಿಪೋರ್ಟ್ ಕಾರ್ಡ್ ಆಗಿದೆ. ಇದು ಹಿಂದಿನ ವರ್ಷದ (2025-26) ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬಬುದನ್ನು ವಿವರಿಸುತ್ತದೆ ಮತ್ತು ದೇಶದ ಆರ್ಥಿಕತೆಯ ಬಗ್ಗೆ ಮಾಹಿತಿ ಒದಗಿಸುತ್ತದೆ.
ಯಾವಾಗ ಬಿಡುಗಡೆ: ಬಜೆಟ್ ಮಂಡನೆಗೆ ಒಂದೆರಡು ದಿನಗಳ ಮೊದಲು. ಈ ವರ್ಷದಲ್ಲಿ ಜನವರಿ 29, 2026 ರಂದು ಬಿಡುಗಡೆಯಾಗಲಿದೆ.
ಸಮೀಕ್ಷೆಯಲ್ಲಿ ಏನಿರುತ್ತೆ?
ಇನ್ನು ಈ ಆರ್ಥಿಕ ಸಮೀಕ್ಷೆಯಲ್ಲಿ GDP ಬೆಳವಣಿಗೆ, ಹಣದುಬ್ಬರ, ಉದ್ಯೋಗ, ರಫ್ತು-ಆಮದು, ಕೃಷಿ, ಉದ್ಯಮ, ಸೇವಾ ಕ್ಷೇತ್ರಗಳ ವಿವರಗಳು ಇರಲಿದೆ. ಅಲ್ಲದೇ ಭವಿಷ್ಯದ ನಿರೀಕ್ಷೆಗಳು ಮತ್ತು ಸರ್ಕಾರಕ್ಕೆ ಸಲಹೆಗಳನ್ನೂ ನೀಡಲಾಗುತ್ತದೆ. ಈದು ವಿವಿಧ ಕ್ಷೇತ್ರಗಳಲ್ಲಿನ ಆರ್ಥಿಕ ಬೆಳವಣಿಗೆಗಳನ್ನು ದಾಖಲಿಸುತ್ತದೆ. ಕೃಷಿ, ಕೈಗಾರಿಕೆ, ಮೂಲ ಸೌಕರ್ಯ, ಉದ್ಯೋಗ, ಹಣದುಬ್ಬರ, ವ್ಯಾಪರ, ಆಮದು-ರಫ್ತು ಸೇರಿದಂತೆ ಪ್ರಮುಖ ಸೇವೆಗಳ ಬಗ್ಗೆ ವರದಿ ಮಾಡುತ್ತದೆ.
ಆರ್ಥಿಕ ಸಮೀಕ್ಷೆಯ ಮಹತ್ವ:
ಈ ಆರ್ಥಿಕ ಸಮೀಕ್ಷೆಯಿಂದ ದೇಶದ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದರಿಂದ ಮುಂದಿನ ವರ್ಷದ ಆರ್ಥಿಕತೆ ಬೆಳವಣಿಗೆಗೆ ಯಾವ ರೀತಿ ಯೋಜನೆ ರೂಪಿಸಬೇಕು ಎಂಬುದು ಸಹಕಾರಿಯಾಗಲಿದೆ. ಅಲ್ಲದೇ ಹಿಂದಿನ ವರ್ಷದ ಆರ್ಥಿಕ ಪ್ರಗತಿ, ಸವಾಲುಗಳು ಮತ್ತು ಬೆಳವಣಿಗೆಗಳ ಬಗ್ಗೆ ಸರಳ ಚಿತ್ರಣವನ್ನು ತೆರೆದಿಡುತ್ತದೆ.
- ಬಜೆಟ್‌ಗೆ ಹೊಸ ದಾರಿ: ಇನ್ನು ಈ ಸಮೀಕ್ಷೆ ಬಜೆಟ್‌ನ ನಿರ್ಧಾರಗಳಿಗೆ ಸಹಕಾರಿಯಾಗಲಿದೆ. ಸರ್ಕಾರದ ನೀತಿಗಳನ್ನು ರೂಪಿಸಲು ಪ್ರಯೋಜನವಾಗಲಿದೆ.
- ಸಲಹೆಗಳು: ಆರ್ಥಿಕ ಸಮೀಕ್ಷೆ ಸರ್ಕಾರಕ್ಕೆ ಆರ್ಥಿಕ ಸುಧಾರಣೆಗಳನ್ನು ಮಾಡುವುದು ಹೇಗೆ ಎಂಬುದನ್ನು ಸಲಹೆ ನೀಡಲಿದೆ.
ಆರ್ಥಿಕ ಸಮೀಕ್ಷೆಯನ್ನು ತಯಾರಿಸುವುದು ಯಾರು?
ಆರ್ಥಿಕ ಸಮೀಕ್ಷೆಯನ್ನು ದೇಶದ ಮುಖ್ಯ ಆರ್ಥಿಕ ಸಲಹೆಗಾರ (Chief Economic Adviser-CEA) ಮತ್ತು ಅವರ ತಂಡ ಸೇರಿ ತಯಾರಿಸುತ್ತಾರೆ. ಪ್ರಸ್ತುತ ಸಿಇಎ ವಿ. ಅನಂತ ನಾಗೇಶ್ವರನ್ ಅವರು ಆಗಿದ್ದು, ಈ ಬಾರಿ ಆರ್ಥಿಕ ಸಮೀಕ್ಷೆ ಅವರ ನೇತೃತ್ವದಲ್ಲಿ ತಯಾರಾಗಿದೆ. ಇದು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಡಿ ಬರುತ್ತದೆ. ಇನ್ನು ತಂಡದಲ್ಲಿ ಆರ್ಥಿಕ ತಜ್ಞರು, ಅಧಿಕಾರಿಗಳು ಮತ್ತು ಸಲಹೆಗಾರರು ಇರುತ್ತಾರೆ.


Click it and Unblock the Notifications