ಅದೆಷ್ಟೋ ಯುವಕರು ಹಣ ಮಾಡುವ ಉದ್ದೇಶದಿಂದ ವಿದೇಶಗಳಲ್ಲಿ ಉದ್ಯೋಗ (Job) ಹುಡುಕುತ್ತಾ ಇರುತ್ತಾರೆ. ಒಂದು ವೇಳೆ ವಿದೇಶದಲ್ಲಿ ಒಂದೊಳ್ಳೆ ಉದ್ಯೋಗ ಸಿಕ್ಕಿತೆಂದಾದರೆ ಅದೃಷ್ಟ ಖುಲಾಯಿಸಿದಂತೆ. ಅಲ್ಲಿನ ಸಂಬಳ, ಸೌಲಭ್ಯಗಳು ಹೆಚ್ಚಿನ ಯುವಕರನ್ನು (Youths) ಆಕರ್ಷಿಸುತ್ತದೆ. ಇನ್ನು ಹೆಚ್ಚಿನ ಯುವಕರು ದುಬೈ, ಗಲ್ಫ್ ರಾಷ್ಟ್ರಗಳಿಗಾಗಿ ಉದ್ಯೋಗ ಅರಸಿಕೊಂಡು ತೆರಳುತ್ತಾರೆ. ಇದೀಗ ತನ್ನ ವಲಸಿಗರಿಗಾಗಿ ಸೌದಿ ಅರೇಬಿಯಾ (Saudi Arabia) ಮಹತ್ತರವಾದ ನಿರ್ಧಾರವೊಂದನ್ನು ಕೈಗೊಂಡಿದೆ. 'ಆಧುನಿಕ ಗುಲಾಮಗಿರಿ' ಎಂದು ಭಾರೀ ಟೀಕೆಗೆ ಗುರಿಯಾಗಿದ್ದ ಸೌದಿ ಅರೇಬಿಯಾದ 50 ವರ್ಷಗಳಷ್ಟು ಹಳೆಯದಾದ ವಿವಾದಾತ್ಮಕ ಕಫಾಲ ವ್ಯವಸ್ಥೆಯನ್ನು (Kafala System) ರದ್ದು ಗೊಳಿಸಿದೆ.

ಕಫಾಲ ವ್ಯವಸ್ಥೆ ಎಂದರೇನು?
ಕಫಾಲಾ ವ್ಯವಸ್ಥೆ (Kafala System) ಎಂಬುದು ಕೆಲವು ಗಲ್ಫ್ ರಾಷ್ಟ್ರಗಳಲ್ಲಿ (ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್, ಒಮಾನ್ ಮತ್ತು ಬಹ್ರೇನ್) ಮಾತ್ರ ಇರುವ ನೀತಿ. ಈ ವ್ಯವಸ್ಥೆ ವಿದೇಶಿ ಕಾರ್ಮಿಕರನ್ನು ನಿಯಂತ್ರಿಸಲು ಬಳಸುವ ಒಂದು ಸೌದಿಯ ಕಾನೂನು ಚೌಕಟ್ಟಾಗಿದೆ. ಈ ವ್ಯವಸ್ಥೆಯು ವಲಸೆ ಕಾರ್ಮಿಕರ ಉದ್ಯೋಗ, ವೀಸಾ ಮತ್ತು ವಾಸಸ್ಥಾನವನ್ನು ಸ್ಥಳೀಯ "ಕಫೀಲ್" (ಪ್ರಾಯೋಜಕ) ಅಥವಾ ಉದ್ಯೋಗದಾತರು ನಿಯಂತ್ರಣ ಸಾಧಿಸುವುದಾಗಿದೆ.
ಆದರೆ ಇದೀಗ ಸೌದಿ ಅರೇಬಿಯಾ ತನ್ನ ದಶಕಗಳಷ್ಟು ಹಳೆಯ ಕಫಾಲಾ ವ್ಯವಸ್ಥೆಯನ್ನು ಕೊನೆಗೂ ಅಮಾನ್ಯಗೊಳಿಸಿದೆ. ಈ ನಿರ್ಧಾರದಿಂದ ಸುಮಾರು 13 ಮಿಲಿಯನ್ ವಲಸೆ ಕಾರ್ಮಿಕರು ಕಫಾಲ ವ್ಯವಸ್ಥೆಯಿಂದ ಹೊರಬಂದಂತಾಗಿದೆ. ಇನ್ನು ಈ ವಲಸೆ ಕಾರ್ಮಿಕರಲ್ಲಿ 2.6 ಮಿಲಿಯನ್ ಭಾರತೀಯರಿಗೂ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಈ ಕಫಾಲಾ ವ್ಯವಸ್ಥೆಯು ಸೌದಿ ಅರೇಬಿಯಾ ಮಾತ್ರವಲ್ಲದೇ ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಮೇಲೆ ಕಫೀಲ್‌ಗಳು ಅಂದರೆ ಉದ್ಯೋಗದಾತರು ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ನಿರ್ಗಮನ ವೀಸಾ ನಿಯಮಗಳ ಮೇಲೆ ನಿಯಂತ್ರಣ ಸಾಧಿಸುವುದಾಗಿದೆ.
ಕೊನೆಗೂ ಕಾರ್ಮಿಕರಿಗೆ ಮುಕ್ತಿ
70 ವರ್ಷಗಳಿಗೂ ಹೆಚ್ಚು ಕಾಲಗಳಿಂದ ಸೌದಿ ಅರೇಬಿಯಾದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರ ಜೀವನವನ್ನು ನಿಯಂತ್ರಿಸುತ್ತಿದ್ದ ಕಫಾಲಾ ವ್ಯವಸ್ಥೆಯನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದೆ. 2025ರ ಜೂನ್‌ನಲ್ಲಿ ಜಾರಿಗೆ ಬಂದ ಈ ಸುಧಾರಣೆಯ ಯೋಜನೆಯ ಹಿನ್ನೆಲೆ ಗಲ್ಫ್ ರಾಷ್ಟ್ರಗಳ ಕಾರ್ಮಿಕ ನೀತಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇದು ಸುಮಾರು 13 ಮಿಲಿಯನ್ ವಿದೇಶಿ ಕಾರ್ಮಿಕರಿಗೆ ಹಲವು ಪ್ರಯೋಜನ ಸಿಗಲಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪ್ರಕಾರ, ಈ ನಿರ್ಧಾರದಿಂದ ಲಾಭ ಪಡೆಯುವವರಲ್ಲಿ 2.6 ಮಿಲಿಯನ್ ಭಾರತೀಯರೂ ಸೇರಿದ್ದಾರೆ.
ಕಫಾಲಾ ವ್ಯವಸ್ಥೆಗೆ ಏಕೆ ಇಷ್ಟೊಂದು ವಿರೋಧ?
ಆರಂಭದಲ್ಲಿ ರಾಷ್ಟ್ರದ ಉದ್ದೇಶದಿಂದ ಆರಂಭವಾದ ಈ ಕಫಾಲ ವ್ಯವಸ್ಥೆ, ಕಾಲಕ್ರಮೇಣ ದೇಶದಲ್ಲಿ ಶೋಷಣೆ ಮತ್ತು ಅಸಮಾನತೆಯತ್ತ ಸಾಗಲು ಶುರುವಾಯಿತು. ಕಾರ್ಮಿಕರ ಮೇಲೆ ನಿರಂತರವಾಗಿ ಉದ್ಯೋಗದಾತರು, ಕಫೀಲ್‌ಗಳು ಶೋಷಣೆ ಮಾಡಲು ಆರಂಭಿಸಿದರು.
ಅಷ್ಟೇ ಅಲ್ಲದೇ ಕಾರ್ಮಿಕರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು, ವೇತನವನ್ನು ಸರಿಯಾಗಿ ನೀಡದೆ, ಅವರ ಪ್ರಯಾಣಕ್ಕೂ ಅಡ್ಡಿ ಪಡಿಸುತ್ತಿದ್ದರು. ಅಷ್ಟೇ ಅಲ್ಲದೇ ಈ ವ್ಯವಸ್ಥೆಯಿಂದಾಗಿ ಕಾರ್ಮಿಕರು ತಮ್ಮ ಪ್ರಾಯೋಜಕರ ಒಪ್ಪಿಗೆಯಿಲ್ಲದೆ ಉದ್ಯೋಗ ಬದಲಾಯಿಸಲು, ದೇಶವನ್ನು ಬಿಟ್ಟು ಹೋಗಲು ಅಥವಾ ತನ್ನ ಉದ್ಯೋಗದಾತರ ವಿರುದ್ಧ ಯಾವುದೇ ದೂರುಗಳನ್ನು ಸಲ್ಲಿಸಲು ಸಾಧ್ಯವಿರಲಿಲ್ಲ. ಇದೇ ಕಾರಣದಿಂದ ಕೆಲವು ಸಂಘಟನೆಗಳು ಇದನ್ನು ಆಧುನಿಕ ಗುಲಾಮಗಿರಿಯೆಂದು ಕರೆಯಲಾರಂಭಿಸಿದವು. ಅದರಲ್ಲೂ ಈ ವ್ಯವಸ್ಥೆಯಿಂದಾಗಿ ಮಹಿಳಾ ಕಾರ್ಮಿಕರು ಹೆಚ್ಚು ಅನ್ಯಾಯಕ್ಕೆ ಒಳಗಾಗುತ್ತಿದ್ದರು. ಅದರಲ್ಲೂ ದೈಹಿಕವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು ಎನ್ನಲಾಗಿದೆ.
ವಿದೇಶಿ ಕಾರ್ಮಿಕರ ಮೇಲೆ ಸೌದಿ ಅರೇಬಿಯಾ ಅವಲಂಬನೆ:
ಸೌದಿ ಅರೇಬಿಯಾ ಹೆಚ್ಚಾಗಿ ವಲಸೆ ಕಾರ್ಮಿಕರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ 13.4 ಮಿಲಿಯನ್ ಜನರು ಅಂದರೆ ಸುಮಾರು ಶೇ. 42% ರಷ್ಟು ವಿದೇಶಿ ಕಾರ್ಮಿಕರೇ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ, ಕೃಷಿ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿ ಹೆಚ್ಚಿನ ವಲಸೆ ಕಾರ್ಮಿಕರು ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಫಿಲಿಪೈನ್ಸ್‌ನಿಂದ ಬಂದವರಾಗಿದ್ದಾರೆ.
ಸೌದಿ ಅರೇಬಿಯಾದ ಈ ನಿರ್ಧಾರಕ್ಕೆ ಕಾರಣವೇನು?
ಸೌದಿ ಅರೇಬಿಯಾದ ಈ ಘೋಷಣೆಯು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ವಿಷನ್ 2030ರ ಅಡಿಯಲ್ಲಿ ಬಂದಿದೆ. ಇದು ಸಮಾಜದ ಹಿತಾಸಕ್ತಿಯನ್ನು ಸುಧಾರಿಸಲು, ಆರ್ಥಿಕತೆಗೆ ಹೆಚ್ಚು ಒತ್ತು ನೀಡಲು ಮತ್ತು ಜಾಗತಿಕವಾಗಿ ಪ್ರಗತಿಪರವಾಗಿ ಅಭಿವೃದ್ಧಿ ಕಾಣಲು ಸೌದಿ ಅರೇಬಿಯಾದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications