ಬೆಂಗಳೂರು, ಜುಲೈ 12: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ಅವರು ಜುಲೈ 23ರಂದು ಪೂರ್ಣ ಪ್ರಮಾಣದ ಬಜೆಟ್‌ಮಂಡನೆ ಮಾಡಲಿದ್ದು, ಉದ್ಯಮಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಪ್ರತಿಯೊಬ್ಬರಲ್ಲಿಯೂ ಸಾಕಷ್ಟು ಹೊಸ ಕೊಡುಗೆ, ಆರ್ಥಿಕ ಸುಧಾರಣೆಗಳ ನಿರೀಕ್ಷೆಗಳು ಗರಿಗೆದರಿವೆ. ಕೇಂದ್ರದಲ್ಲಿ ಮೂರನೇ ಅವಧಿಗೆ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಮೊದಲ ಬಜೆಟ್‌ಇದಾಗಿದೆ. ಭವಿಷ್ಯದಲ್ಲಿ ದೇಶದ ಆರ್ಥಿಕ ಬೆಳವಣಿಗೆ, ಹಣಕಾಸು ನೀತಿ ಹಾಗೂ ಬೆಳವಣಿಗೆಗೆ ಸಂಬಂಧಿಸಿದಂತೆ ಸರ್ಕಾರದ ಹತ್ತಾರು ಚಿಂತನೆಗಳು ಈ ಬಾರಿಯ ಬಜೆಟ್‌ನಲ್ಲಿ ಅಡಗಿರಬಹುದೆಂದು ನಿರೀಕ್ಷಿಸಲಾಗಿದೆ.
ಜುಲೈ 23ರಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ಅವರು ಬಜೆಟ್‌ಮಂಡನೆ ಮಾಡಲಿದ್ದಾರೆ. ಈ ಬಜೆಟ್‌ಮಂಡನೆಯ ನೇರ ಪ್ರಸಾರ ಕೂಡ ವಿವಿಧ ಫ್ಲಾಟ್‌ಫಾರಂಗಳಲ್ಲಿ ಪ್ರಸಾರವಾಗಲಿದೆ. ಆದರೆ, ಪ್ರತಿ ಬಾರಿಯೂ ಒಂದೇ ಅವಧಿಗೆ ಬಜೆಟ್‌ಮಂಡನೆ ಆಗಿಲ್ಲ ಎನ್ನುವುದು ಇತಿಹಾಸ ನೋಡಿದಾಗ ಗೊತ್ತಾಗುತ್ತದೆ.

1999ರವರೆಗೆ ಈ ಹಿಂದೆ ಬ್ರಿಟಿಷ್‌ಮಾದರಿಯಲ್ಲಿ ಬಹಳ ಸಂಪ್ರದಾಯಿಕವಾಗಿ ಸಂಜೆ 5 ಗಂಟೆಗೆ ಮಂಡನೆ ಮಾಡಲಾಗುತ್ತಿತ್ತು. ಏಕೆಂದರೆ ಈ ಸಮಯವು ಬ್ರಿಟೀಷ್‌ಸರ್ಕಾರಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿತ್ತು. ಈ ಅವಧಿಯು ಇಂಗ್ಲೆಂಡ್‌ಹಾಗೂ ಭಾರತದಲ್ಲಿ ಘೋಷಣೆಗಳನ್ನು ಮಾಡುವುದಕ್ಕೆ ಅನುಕೂಲಕರವಾಗಿತ್ತು. ಏಕೆಂದರೆ, ಭಾರತದಲ್ಲಿನ ಕಾಲಮಾನ ಸಂಜೆ 5 ಗಂಟೆಯು ಯುಕೆಯಲ್ಲಿ ಬೆಳಗ್ಗೆ 11.30 ಅವಧಿಯಾಗಿದೆ. ಇದು ಬ್ರಿಟಿಷ್‌ಸರ್ಕಾರಕ್ಕೆ ಬಜೆಟ್‌ಜತೆಗೆ ಸಂವಹನ ಸಂಪರ್ಕ ಸಾಧಿಸುವುದಕ್ಕೆ ಸುಲಭವಾಗಿತ್ತು. ವಿಶೇಷವೆಂದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವು ಬಜೆಟ್‌ಮಂಡನೆಗೆ ಇದೇ ಬ್ರಿಟೀಷರು ಹುಟ್ಟು ಹಾಕಿದ್ದ ಸಂಜೆ 5ರ ಸಮಯವೇ ಮುಂದುವರಿದಿತ್ತು.
ಹೀಗಾಗಿ, 1999ರವರೆಗೂ ಅದು ಇದೇರೀತಿ ಮುಂದುವರಿದಿತ್ತು. ಆದರೆ, ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಅವರು ಬಜೆಟ್‌ಮಂಡನೆ ಸಮಯವನ್ನು ಸಂಜೆ 5 ಗಂಟೆಯಿಂದ ಬೆಳಗ್ಗೆ 11ಕ್ಕೆ ಬದಲಿಸಲಾಯಿತು. ಆದರೆ, ಪ್ರಮುಖವಾಗಿ ಎರಡು ಕಾರಣಗಳಿಗೆ ಈ ಬದಲಾವಣೆಯನ್ನು ಮಾಡಲಾಗಿತ್ತು. ಮೊದಲನೆಯದಾಗಿ ಭಾರತವು ಬ್ರಿಟಿಷರ ವಸಾಹತುಶಾಯಿಯಿಂದ ಮುಕ್ತ ಪಡೆದುಕೊಂಡಿದ್ದರೂ ಇಂಗ್ಲೆಂಡ್‌ಗೆ ಅನುಕೂಲವಾಗುವ ಸಮಯವನ್ನೇ ಮುಂದುವರಿಸುವ ಅಗತ್ಯವಿರಲಿಲ್ಲ.
ಎರಡನೇಯದಾಗಿ ಬಜೆಟ್‌ಬಗ್ಗೆ ಕಾನೂನು ರೂಪಿಸುವವರು ಹಾಗೂ ಅಧಿಕಾರಿಗಳಿಗೆ ಹೆಚ್ಚಿನ ಚರ್ಚೆ-ಅಧ್ಯಯನಕ್ಕೆ ಅವಕಾಶ ನೀಡುವ ಸದುದ್ದೇಶದಿಂದ ಸಂಜೆಯ ಸಮಯವನ್ನು ಬೆಳಗ್ಗೆಗೆ ಅನುಕೂಲವಾಗುವಂತೆ ಬದಲಿಸುವ ನಿರ್ಧಾರವನ್ನು ವಾಜಪೇಯಿ ಸರ್ಕಾರ ಕೈಗೊಂಡಿತ್ತು. ಅದರಂತೆ 1999ರ ಫೆ.27ರಂದು ಮೊದಲ ಬಾರಿಗೆ ಬಜೆಟ್‌ನ್ನು ಸಂಜೆ 5ರ ಬದಲು ಬೆಳಗ್ಗೆ 11 ಗಂಟೆಗೆ ಸದನದಲ್ಲಿ ಮಂಡಿಸುವ ಮೂಲಕ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಆ ನಂತರದಿಂದ ಕೇಂದ್ರ ಬಜೆಟ್‌ನ್ನು ಪ್ರತಿ ಬಾರಿಯೂ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡನೆ ಮಾಡಲಾಗುತ್ತಿದೆ.
ಇನ್ನೊಂದೆಡೆ, ಪ್ರತಿ ವರ್ಷವೂ ಬಜೆಟ್‌ನ್ನು ಫೆಬ್ರವರಿ ತಿಂಗಳ ಕೊನೆ ದಿನ ಮಂಡನೆ ಮಾಡಲಾಗುತ್ತಿತ್ತು. ಆದರೆ, ಹಣಕಾಸು ಸಚಿವರಾಗಿದ್ದ ಅರುಣ್‌ಜೆಟ್ಲಿ ಅವರು ಈ ಸಂಪ್ರದಾಯವನ್ನು ಕೂಡ ಮುರಿಯುವ ಮೂಲಕ ಬಜೆಟ್‌ಅನ್ನು ಫೆಬ್ರವರಿ ಕೊನೆಯ ದಿನದ ಬದಲು ಫೆ.1ರಂದು ಮಂಡಿಸುವ ಮೂಲಕ ಮತ್ತೊಂದು ಬದಲಾವಣೆಗೆ ಕಾರಣರಾಗಿದ್ದರು. ಪ್ರಮುಖವಾಗಿ ಬಜೆಟ್‌ಅನ್ನು ಫೆಬ್ರವರಿ ಮೊದಲ ವಾರ ಮಂಡಿಸಿದರೆ, ಆ ಬಗ್ಗೆ ಸಮಗ್ರ ಚರ್ಚೆ ನಡೆದು ಆರ್ಥಿಕ ವರ್ಷ ಏಪ್ರಿಲ್1ರಿಂದ ಆರಂಭವಾಗುವುದರಿಂದ ಅನುಷ್ಠಾನ ಪ್ರಕ್ರಿಯೆ ಸುಲಭವಾಗುತ್ತದೆ. ಹೀಗಾಗಿ, ಪೂರ್ವಭಾವಿಯಾಗಿ ದೊರೆಯುವ ಒಂದು ತಿಂಗಳು ಬಜೆಟ್‌ಸಮರ್ಪಕ ಅನುಷ್ಠಾನಕ್ಕೂ ಅನುಕೂಲವಾಗುತ್ತದೆ. 2016ರವರೆಗೆ ರೈಲ್ವೆ ಬಜೆಟ್‌ಅನ್ನು ಕೂಡ ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಅದನ್ನು ಕೂಡ ಒಟ್ಟಿಗೆ ಮಂಡಿಸುವ ಮೂಲಕ 92 ವರ್ಷಗಳ ಆ ಸಂಪ್ರದಾಯವನ್ನು ಕೂಡ ಮುರಿಯಲಾಯಿತು.


Click it and Unblock the Notifications