ಬೆಂಗಳೂರು, ಜೂನ್ 14: ಕನ್ನಡ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ತಮ್ಮದೇ ಹೆಜ್ಜೆಗಳನ್ನು ಇಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರು ಬಹುಬೇಡಿಕೆಯ ನಟರಾಗಿ ಖ್ಯಾತಿ ಗಳಿಸಿದ್ದಾರೆ. ಸಣ್ಣ ಉದ್ಯೋಗದಿಂದ ಜೀವನ ಆರಂಭಿಸಿದ ನಟ ಯಶ್ ಇಂದು ಕೋಟ್ಯಾಧೀಶರಾಗಿದ್ದಾರೆ.
ಹಲವಾರು ಕನ್ನಡ ಬ್ಲಾಕ್‌ಬಾಸ್ಟರ್ ಸಿನಿಮಾಗಳನ್ನು ಕೊಟ್ಟಿರುವ ನಟ ಯಶ ಇಂದು ಸುಭೀಕ್ಷವಾಗಿದ್ದಾರೆ. ಅವರಿಗೆ ನಟಿ ರಾಧಿಕಾ ಪಂಡಿತ್ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಿಲಾಸಿ ಮನೆಯಲ್ಲಿ ಅವರು ನೆಲೆಯೂರಿದ್ದಾರೆ. ಅವರು ಆಸ್ತಿ ಕುರಿತಾದ ವಿವರ ಇಲ್ಲಿದೆ.

ಯಶ್ ಸಂಭಾವನೆ:
ಮೈಸೂರಿನವರಾದ ರಾಕಿಂಗ್ ಸ್ಟಾರ್ ಯಶ್ ಅವರ ಸಂಬಳ ನೂರುಗಳಲ್ಲಿತ್ತು. ಈಗ ಕೋಟಿಗಳಲ್ಲಿದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ, ಸ್ಕಾಕ್ ಗೋ ಎಂಬ ಸಂಸ್ಥೆಯ ನೀಡಿರುವ ಮಾಹಿತಿ ಪ್ರಕಾರ ಅವರು ಈಗ ಒಂದು ಸಿನಿಮಾಕ್ಕೆ 25ರಿಂದ 30 ಕೋಟಿ ವರೆಗೂ ತೆಗೆದುಕೊಳ್ಳುತ್ತಾರೆ ಎಂದು ಹೇಳುತ್ತದೆ. ಅದಲ್ಲದೆ ಸಿನಿಮಾ ನಿರ್ಮಾಣಕ್ಕೂ ಅವರು ಕೈಹಾಕಿದ್ದು ನೂರಾರು ಕೋಟಿಗಳನ್ನು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ಹಲವು ಬ್ರ್ಯಾಂಡ್‌ಗಳ ಅಂಬಾಸಿಡಾರ್:
ನಟ ಯಸ್ ಕೆಜಿಎಫ್ ಬಂದ ನಂತರ ಅವರ ರೇಂಜ್ ಚೇಂಜ್ ಆಯಿತು ಎನ್ನವ ಮಾತಿದೆ. ಅವರು ಅನೇಕ ಕಂಪೆನಿಗಳ ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡಾರ್ ಆಗಿ ನೇಮಕವಾಗಿದ್ದಾರೆ. ಅಂತಹ ಟಾಪ್ ಬ್ರ್ಯಾಂಡ್‌ಗಳೆಂದರೆ, ಫ್ರೀಡಂ ಎಣ್ಣೆ, ಪೆಪ್ಸಿ, ಮ್ಯಾಕ್ರೋಮನ್, ಬಿಯರ್ಡೋ, ಸೆಲ್ಕಾನ್, ರಾಮ್‌ರಾಜ್ ಕಾಟನ್ ಪಂಚೆ ಇವೇ ಮೊದಲಾದವುಗಳಿಗೆ ರಾಯಭಾರಿಯಾಗಿದ್ದಾರೆ. ಇದಕ್ಕೆ ಅವರಿಗೆ ಕೋಟ್ಯಾಂತರ ರೂಪಾಯಿ ಸಂದಾಯವಾಗುತ್ತಿದೆ.
ರಿಯಲ್ ಎಸ್ಟೇಟ್ ಹೂಡಿಕೆ:
ನಟ ಯಶ್ ಅವರು ಬರೋಬ್ಬರಿ ಆರು ಕೋಟಿ ಮೌಲ್ಯದ ಮನೆಯನ್ನು ಬೆಂಗಳೂರಿನಲ್ಲಿ ಹೊಂದಿದ್ದಾರೆ. ಇಲ್ಲದೆ ಹಾಸನದಲ್ಲಿ ಫಾಮ್ ಹೌಸ್ ಸೇರಿದಂತೆ ಆಸ್ತಿಯನ್ನು ಹೊಂದಿದ್ದಾರೆ. ಬೆಂಗಳೂರಿನ ಹೊಸಕೆರೆಯಲ್ಲಿ ವಿಶಾಲ ಮನೆ ಹೊಂದಿದ್ದಾರೆ. ಇದಲ್ಲದೆ ಗೋವಾದಲ್ಲಿ ಮನೆ, ಬೆಂಗಳೂರಿನ ತಾಜ್‌ವೆಸ್ಟೆಂಡ್‌ನಲ್ಲಿ ಪ್ರತ್ಯೇಕ ರೂಮ್ ಇದೆ.
ಯಶ್ ಬಳಿಯಿರುವ ಕಾರುಗಳು:
ನಟ ಯಶ್ ಬಳಿ ಕೋಟ್ಯಾಂತರ ಬೆಲೆ ಬಾಳುವ ಕಾರಗಳನ್ನು ಹೊಂದಿದ್ದಾರೆ. ಅವರು ರೇಂಜ್ ರೋವರ್ ಇವೊಕ್, ಮರ್ಸಿಡೀಸ್ ಬೆಂಜ್ ಜಿಎಲ್‌ಎಸ್, ಬಿಎಂಡ್ಲ್ಯೂ 520ಡಿ, ಮರ್ಸಿಡೀಸ್ ಜಿಎಲ್‌ಸಿ 250ಡಿ ಕ್ಯೂಪ್, ಆಡಿ ಕ್ಯೂ ೭, ಪಜೆರೋ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿದ್ದಾರೆ.
ಯಶ್ ಕಂಪನಿ:
ಯಶ್ ಅವರದ್ದು ಎನ್ನಲಾದ ವಿಲ್ಲಾನ್ ಎಂಬ ಕಂಪೆನಿ ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಬಿಯರ್ಡೋ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಸ್ಟಾಕ್ ಗೋ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಯಶ್ ಬಳಿ 5,00 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಇದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications