ನವದೆಹಲಿ, ಜನವರಿ 31: ಭಾರತೀಯರು ಪ್ರತಿನಿತ್ಯ ತಾವು ಬಳಸುವ ವಾಹನಗಳನ್ನು ತಮ್ಮ ಸ್ನೇಹಿತರಂತೆ ನೋಡಿಕೊಳ್ಳುತ್ತಾರೆ. ವರ್ಷದಿಂದ ವರ್ಷಕ್ಕೆ ತಮ್ಮ ವಾಹನಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ಇಂಥದರ ಮಧ್ಯೆ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ. ಇಂಥ ವಿದ್ಯುನ್ಮಾನ ವಾಹನಗಳ ಮಾರುಕಟ್ಟೆಗೆ ಕೇಂದ್ರ ಬಜೆಟ್ ಯಾವ ರೀತಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ ಎಂಬುದನ್ನು ಇಲ್ಲಿ ತಿಳಿಯೋಣ.
2022-23ರ ಕೇಂದ್ರ ಬಜೆಟ್ ಅನ್ನು ದೇಶದ ಆರ್ಥಿಕತೆಯನ್ನು ಬಲಪಡಿಸುವ ನೀಲನಕ್ಷೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಫೆಬ್ರವರಿ 1ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ದೇಶದ ಸ್ವಾವಲಂಬನೆ ಹೆಚ್ಚಿಸುವುದು ಮತ್ತು ದೇಶೀಯ ಉತ್ಪಾದನೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಆಟೋಮೋಟಿವ್ ವಲಯದ ಸಂಸ್ಥೆಗಳಿಗೆ PLI ಕಾರ್ಯಕ್ರಮದ ನಿಯತಾಂಕಗಳನ್ನು ಸರ್ಕಾರವು ಇತ್ತೀಚೆಗೆ ವಿಸ್ತರಿಸಿದೆ. ಇದು ಕೇಂದ್ರ ಹಣಕಾಸು ಬಜೆಟ್‌ಗೆ ನಾಂದಿಯಾಗುವ ಸಾಧ್ಯತೆಯಿದೆ. ಭಾರತವು ಹೊಸ ಆರ್ಥಿಕ ವರ್ಷವನ್ನು ಪ್ರಾರಂಭಿಸುತ್ತಿದ್ದಂತೆ, ಎಲೆಕ್ಟ್ರಿಕ್ ವಾಹನ ವಲಯವನ್ನು ಬೆಂಬಲಿಸುವ ಸರ್ಕಾರಿ ಚಟುವಟಿಕೆ ಹೆಚ್ಚು ಅಂತರ್ಗತವಾಗಿರಬೇಕು, ವ್ಯಾಪಕ ಶ್ರೇಣಿಯ EV ಚಲನಶೀಲತೆಯ ಆಯ್ಕೆಗಳನ್ನು ಒಳಗೊಂಡಿರಬೇಕು ಎಂದು ನಿರೀಕ್ಷಿಸಲಾಗುತ್ತಿದೆ.
ಕೇಂದ್ರ ಬಜೆಟ್ ಮೇಲೆ ಸಬ್ಸಿಡಿ ನಿರೀಕ್ಷೆ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ(EV) ವಲಯವನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಸಬ್ಸಿಡಿಗಳು, ಚಾರ್ಜಿಂಗ್ ಸ್ಟೇಷನ್‌ಗಳಂತಹ ಮೂಲಸೌಕರ್ಯ ಸೇರಿದಂತೆ ತೆಗೆದುಕೊಂಡಿರುವ ಹಲವು ಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿವೆ. ಇದಲ್ಲದೆ, EV ಅನ್ನು ಉತ್ತೇಜಿಸುವಲ್ಲಿ ಸರ್ಕಾರವು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ನೋಂದಣಿ ರಹಿತ ನೀತಿಯನ್ನು ಜಾರಿಗೊಳಿಸುತ್ತಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇವಿ ಪ್ರಚಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. 2022ರ ಕೇಂದ್ರ ಬಜೆಟ್ ನಲ್ಲಿ, EV ಉದ್ಯಮವು ಸಬ್ಸಿಡಿಗಳ ಮೇಲಿನ ವಿಸ್ತರಣೆ ಮತ್ತು ಪ್ರಸ್ತುತ ಮೂಲಸೌಕರ್ಯಗಳ ಸುಧಾರಣೆಯನ್ನು ಎದುರು ನೋಡುತ್ತಿದೆ.
ಇವಿ ಅಳವಡಿಕೆಗೆ ಸರ್ಕಾರದಿಂದ ಅಭಿಯಾನ
ಕಳೆದ ವರ್ಷ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗಾಗಿ ಸರ್ಕಾರ ನೀಡಿದ ಅಭಿಯಾನವು FAME II ಸಬ್ಸಿಡಿಗಳ ನೆರವಿನಿಂದ ಭಾರಿ ಹೆಚ್ಚಳಕ್ಕೆ ಕಾರಣವಾಯಿತು. FAME ಯೋಜನೆಯ ಅಡಿಯಲ್ಲಿ ಕಳೆದ ಎಂಟು ವರ್ಷಗಳಿಂದ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಪ್ರೋತ್ಸಾಹ ನೀಡಲಾಗಿದೆ. ಎರಡನೇ ಹಂತದಲ್ಲಿ FAME ಪ್ರೋತ್ಸಾಹಕವನ್ನು ಹೊಸ ವರ್ಗಗಳಿಗೆ ವಿಸ್ತರಿಸಲಾಗಿದ್ದು, ವೆಚ್ಚವನ್ನೂ ಹೆಚ್ಚಿಸಲಾಗಿದೆ.
ನಿವ್ವಳದಿಂದ ಹೊರಗುಳಿದಿದ್ದರೂ ರಾಷ್ಟ್ರದಲ್ಲಿ ಮಾರಾಟವಾಗುವ ಶೇ.90ಕ್ಕಿಂತ ಹೆಚ್ಚು ಎಲ್ಲಾ-ಎಲೆಕ್ಟ್ರಿಕ್ ವಾಹನಗಳಲ್ಲಿ ಕಡಿಮೆ-ವೇಗದ ಎಲೆಕ್ಟ್ರಿಕ್ ವಾಹನಗಳು (LSEVs) ಹೆಚ್ಚಾಗಿವೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ LSEV ಗಳನ್ನು ಸಂಯೋಜಿಸುವುದಕ್ಕೆ FAME ಯೋಜನೆಯನ್ನು ಹೆಚ್ಚಿಸುವುದೇ ನಿರ್ಣಾಯಕವಾಗುತ್ತದೆ.
ಚಾರ್ಜಿಂಗ್ ಮೂಲಸೌಕರ್ಯಕ್ಕೆ ಆದ್ಯತೆ
ಗ್ರಾಹಕರಲ್ಲಿ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತ್ವರಿತ ಇವಿ ಅಳವಡಿಕೆಗೆ ಸೂಕ್ತವಾದ ರೀತಿಯಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳ ವಿಸ್ತರಣೆ ಮಾಡಲಾಗುತ್ತದೆ. ಪ್ರಸ್ತು ಜಿಲ್ಲೆಗಳು, ವಸತಿ ಸಂಕೀರ್ಣಗಳು ಮತ್ತು ವ್ಯಾಪಾರ ಉದ್ಯಮಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಯನ್ನು ಉತ್ತೇಜಿಸಲಾಗುತ್ತಿದೆ. ಆ ಮೂಲಕ ಮೂಲಸೌಕರ್ಯಗಳನ್ನು ಸ್ಥಾಪಿಸುವ ಕಡೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಏಕೆಂದರೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ವೇಗ ಹೆಚ್ಚಿಸುವುದು ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಬ್ಯಾಟರಿಯನ್ನು ಪಡೆದುಕೊಳ್ಳುವುದಕ್ಕೆ ಮೂಲಸೌಕರ್ಯ ಕೊರತೆಯಿಂದಾಗಿ ಬೇರೆಯವರನ್ನು ಅವಲಂಬಿಸಬೇಕಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ನೆರವು ನೀಡಬೇಕಿದೆ.
ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್ ಟಿ ಇಳಿಕೆ
ಎಲೆಕ್ಟ್ರಿಕ್ ವಾಹನಗಳ ಮತ್ತು ಮೊಬಿಲಿಟಿ ಉದ್ಯಮಿಗಳ ಪ್ರಕಾರ, ಸರ್ಕಾರವು ತನ್ನ PLI ಯೋಜನೆ ಅಡಿಯಲ್ಲಿ ನೆರವು ನೀಡಬೇಕು. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲಿನ GST ಅನ್ನು ಕಡಿಮೆ ಮಾಡಬೇಕು. PLI ಯೋಜನೆಯು ಹೆಚ್ಚುತ್ತಿರುವ ಮಾರಾಟದ ಮೇಲೆ ತೆರಿಗೆ ವಿನಾಯಿತಿಗಳನ್ನು ನೀಡುವ ಮೂಲಕ ಸ್ಥಳೀಯ ಉತ್ಪಾದನೆ ಹೆಚ್ಚಿಸಲು ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಅಥವಾ ವಿಸ್ತರಿಸಲು ಉತ್ತೇಜನ ನೀಡುತ್ತದೆ. 2023 ರ ನಂತರವೂ FAME II ಸಬ್ಸಿಡಿ ಯೋಜನೆಯನ್ನು ಮುಂದುವರಿಸಬೇಕೆಂದು ಕಂಪನಿಗಳು ಬಯಸುತ್ತವೆ.
ಬ್ಯಾಟರಿ ಮತ್ತು ಹೈಡ್ರೋಜನ್ ಇಂಧನ ಸೆಲ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸಲು ಇತ್ತೀಚೆಗೆ ಘೋಷಿಸಲಾದ ರೂ 25,938-ಕೋಟಿ ಪಿಎಲ್‌ಐ ಯೋಜನೆಗೆ ಅರ್ಹತೆ ಪಡೆಯಲು, ವಾಹನ ತಯಾರಕರು ಕನಿಷ್ಠ ರೂ 10,000 ಕೋಟಿಗಳ ಗುಂಪು ಮಟ್ಟದ ವಹಿವಾಟು ಹೊಂದಿರಬೇಕು. ಕಾರ್ಖಾನೆ ರೀತಿಯ ಕನಿಷ್ಠ ರೂ 3,000 ಕೋಟಿ ಸ್ಥಿರ ಸ್ವತ್ತಿನ ಹೂಡಿಕೆ ಮಾಡಿರಬೇಕು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications