ಬೆಂಗಳೂರು, ಜುಲೈ 11: ಕೇಂದ್ರದಲ್ಲಿ ಕಳೆದ ಎರಡು ಅವಧಿಗೆ ಪೂರ್ಣ ಸರ್ಕಾರ ನೀಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಅದರಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರಂದು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ.
ಕಾರ್ಪೊರೇಟ್ ವಲಯ ಸೇರಿದಂತೆ ಪ್ರತಿಯೊಂದು ವಲಯದವರು ಕೂಡ ಈ ಬಾರಿಯ ಬಜೆಟ್‌ನಲ್ಲಿ ಏನೆಲ್ಲ ಕೊಡುಗೆಗಳು ದೊರೆಯಲಿದೆ ಎನ್ನುವುದನ್ನು ಕಾತರದಿಂದ ಕಾಯುತ್ತಿದ್ದಾರೆ. ತಮ್ಮ ಹಣಕಾಸು ಸ್ಥಿತಿ-ಗತಿ ಸುಧಾರಣೆಗೆ ಯಾವೆಲ್ಲ ಅನುಕೂಲ ದೊರೆಯಲಿದೆ ಎನ್ನುವತ್ತ ದೇಶದ ತೆರಿಗೆದಾರರು ಕೂಡ ಕಾಯುತ್ತಿದ್ದಾರೆ. ಅದರಲ್ಲಿಯೂ ಹಿರಿಯ ನಾಗರಿಕರು ಕೆಲವೊಂದು ತೆರಿಗೆ ವಿನಾಯಿತಿ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಸಿಎನ್‌ಬಿಸಿ ವರದಿ ಮಾಡಿರುವ ಪ್ರಕಾರ, ಅರ್ಥ ಸಚಿವರು ಈ ಬಾರಿ ಪ್ರಮುಖ ಮೂರು ಅಂಶಗಳನ್ನು ಹಿರಿಯ ನಾಗರಿಕರ ಪರ ಕೈಗೊಳ್ಳಲಿದ್ದಾರೆ.

ಅವುಗಳೆಂದರೆ-
1. ಎಲ್‌ಟಿಸಿಜಿ ತೆರಿಗೆ ವಿನಾಯಿತಿ
ಈ ವರದಿಯಂತೆ ಎನ್‌ಡಿಎ ಸರ್ಕಾರವು ಹಿರಿಯ ನಾಗರಿಕರ ಹಿರಿಯ ನಾಗರಿಕರಿಗೆ ದೀರ್ಘಾವಧಿಯ ಬಂಡವಾಳ ಲಾಭಗಳ ವಿನಾಯಿತಿ ಮಿತಿಯನ್ನು ಒಂದು ಲಕ್ಷ ರೂ.ವಿನಿಂದ 2ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆಯಿದೆ. ಇದು ಹಿರಿಯ ನಾಗರಿಕರಿಗೆ ತಮ್ಮ ಬಂಡವಾಳ ಲಾಭಗಳ ಮೇಲಿನ ತೆರಿಗೆ ಭಾರವನ್ನು ಕಡಿಮೆಗೊಳಿಸುವ ಮೂಲಕ ಹೆಚ್ಚಿನ ಆರ್ಥಿಕ ಅನುಕೂಲ ಕಲ್ಪಿಸಲಿದೆ. ಇದರಿಂದ ಹಿರಿಯ ನಾಗರಿಕರಿಗೆ ಹಣಕಾಸು ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದಕ್ಕೆ ಉತ್ತೇಜನ ನೀಡಲಿದೆ.
2. ಮನೆ ಬಾಡಿಗೆಗೆ ತೆರಿಗೆ
ಪಿಂಚಣಿ ಪಡೆಯದ ಹಿರಿಯ ನಾಗರಿಕರಿಗೆ ಮನೆ ಬಾಡಿಗೆ ಮೇಲಿನ ತೆರಿಗೆಯಲ್ಲಿ ವಿನಾಯಿತಿ ದೊರೆಯುವ ಸಾಧ್ಯತೆಯಿದೆ. ಇದರಿಂದ ಬಾಡಿಗೆ ವಸತಿಯಲ್ಲಿ ನೆಲೆಸಿರುವ ಹಿರಿಯ ನಾಗರಿಕರ ಮೇಲಿನ ಆರ್ಥಿಕ ಹೊರೆ ಕಡಿಮೆಗೊಳಿಸಲಿದೆ.
3. ಆರೋಗ್ಯ ವಿಮೆ ಮೇಲೆ ಕಡಿತ
ಇನ್ನೊಂದೆಡೆ ಸರ್ಕಾರವು ಹಿರಿಯ ನಾಗರಿಕರ ಆರೋಗ್ಯ ವಿಮೆ ಮೇಲಿನ ಪ್ರೀಮಿಯಂ ಕಡಿತವನ್ನು ಹೆಚ್ಚಿಸುವ ನಿರೀಕ್ಷೆ ಕೂಡ ಇದೆ. ಅಂದರೆ, ಈಗಿರುವ ಕಡಿತವನ್ನು 50 ಸಾವಿರ ರೂ.ನಿಂದ ಒಂದು ಲಕ್ಷ ರೂ. ಗೆ ಏರಿಸುವ ಸಾಧ್ಯತೆಯಿದೆ. ಈ ಪ್ರಸ್ತಾವನೆಯು ಹಿರಿಯ ನಾಗರಿಕರಿಗೆ ದೊರೆಯುವ ವೈದ್ಯಕೀಯ ಸೇವೆಗಳನ್ನು ಹೆಚ್ಚಿಸಲಿದೆ.
ಈ ಮೂರು ಪ್ರಸ್ತಾವನೆಗಳ ಜತೆಗೆ ಇನ್ನು ಕೆಲವು ಅನುಕೂಲಗಳನ್ನು ಈ ಬಾರಿಯ ಬಜೆಟ್‌ನಲ್ಲಿ ನಿರೀಕ್ಷಿಸಬಹುದಾಗಿದೆ.
4. ಐಟಿಆರ್ ವಿನಾಯಿತಿಯಲ್ಲಿ ವಯೋಮಿತಿ
ಆದಾಯ ತೆರಿಗೆ ಸೆಕ್ಷನ್ 194ಪಿ ಪ್ರಕಾರ, ಹಿರಿಯ ನಾಗರಿಕರು, 75 ವರ್ಷ ಮೇಲ್ಪಟ್ಟವರು ಅಥವಾ ಅದಕ್ಕಿಂತ ಮೇಲ್ಪಟ್ಟವರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಿಂದ ಕೆಲವೊಂದು ಪರಿಸ್ಥಿತಿಯನ್ನು ಆಧರಿಸಿ ವಿನಾಯಿತಿ ನೀಡುವ ಸಾಧ್ಯತೆಯಿದೆ.
5. 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು
ಪಿಂಚಣಿ ಮತ್ತು ಬಡ್ಡಿಯ ಮೂಲಗಳಿಂದ ಮಾತ್ರ ಆದಾಯವನ್ನು ಹೊಂದಿರುವ ಹಿರಿಯ ನಾಗರಿಕರು ಹಿರಿಯ ನಾಗರಿಕರು ತಮ್ಮ ತೆರಿಗೆ ಬಾಧ್ಯತೆ ಪೂರೈಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸುವುದಕ್ಕೆ ಈ ನಿಬಂಧನೆಯನ್ನು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೂ ಅನ್ವಯಿಸಬಹುದು ಎಂದು ಪ್ರಸ್ತಾಪಿಸಲಾಗಿದೆ.
ಇವುಗಳ ಹೊರತಾಗಿಯೂ ಆದಾಯ ತೆರಿಗೆಯಲ್ಲಿಯೂ ಸಾಕಷ್ಟು ವಿನಾಯಿತಿಗಳನ್ನು ಘೋಷಿಸುವ ಮೂಲಕ ಎನ್‌ಡಿಎ ನೇತೃತ್ವದ ಮೋದಿ ಸರ್ಕಾರವು ಈ ಅವಧಿಗೆ ತೆರಿಗೆದಾರರ ಪರವಾಗಿ ಜನಪ್ರಿಯ ಬಜೆಟ್ ಮಂಡಿಸುವ ನಿರೀಕ್ಷೆಯಿದೆ.


Click it and Unblock the Notifications