ಬೆಂಗಳೂರು, ಜುಲೈ 31: ನೀವು ಹೇಳಿದ ನಿಯಮಗಳನ್ನೆಲ್ಲ ಪಾಲಿಸಲು ಸಾಧ್ಯವಿಲ್ಲ. ನಾನು ಭಾರತ ಬಿಟ್ಟು ಹೊರಡುತ್ತೇನೆ ಹೀಗಂತ ಕೇಂದ್ರ ಸರ್ಕಾರಕ್ಕೆ ವಾಟ್ಸಪ್ ಹಿಂದೊಮ್ಮೆ ಹೇಳಿತ್ತು. ಈಗ ಮತ್ತೆ ಅದೆ ವಿಚಾರ ದೊಡ್ಡ ಚರ್ಚೆಯಾಗುತ್ತಿದೆ.
ವಾಟ್ಸಪ್ ಇಲ್ಲದ ಸ್ಮಾರ್ಟ್ ಪೋನ್ ಯಾವುದಾದರೂ ಇದೆಯೇ? ಇದೊಂದು ದಡ್ಡತನದ ಪ್ರಶ್ನೆ ಎಂದು ನೀವು ಭಾವಿಸಬಹುದು. ಮೇಟಾ ವಾಟ್ಸಪ್ ನ್ನು ತನ್ನ ತೆಕ್ಕೆಗೆ ತೆಕ್ಕೆಗೆ ತೆಗೆದುಕೊಂಡ ಮೇಲೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡು ಬಂದಿದೆ. ಆದರೆ ಈಗ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿರುವ ಮಾತುಗಳು ಮತ್ತೆ ಚರ್ಚೆ ಹುಟ್ಟಿಕೊಳ್ಳುವಂತೆ ಮಾಡಿದೆ.

ಸಂದೇಶಗಳ ಎನ್‌ಕ್ರಿಪ್ಶನ್ ಅನ್ನು ಬ್ರೇಕ್ ಮಾಡಲು ಸರ್ಕಾರವು ಒತ್ತಾಯಿಸಿದರೆ ಭಾರತದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಾಗಿ WhatsApp ದೆಹಲಿ ಹೈಕೋರ್ಟ್‌ಗೆ ಈ ವರ್ಷ ತಿಳಿಸಿತ್ತು. ಇದೆ ವಿಚಾರದ ಬಗ್ಗೆ ಕಾಂಗ್ರೆಸ್ ಸದಸ್ಯ ವಿವೇಕ್ ಟಂಖಾ ರಾಜ್ಯಸಭೆಯಲ್ಲಿ ಪ್ರಶ್ನೆ ಎತ್ತಿದ್ದರು. ಬಳಕೆದಾರರ ವಿವರಗಳನ್ನು ಹಂಚಿಕೊಳ್ಳಲು ಕೇಂದ್ರ ಸರ್ಕಾರದ ನಿರ್ದೇಶನದಿಂದಾಗಿ WhatsApp ಭಾರತದಲ್ಲಿ ತನ್ನ ಸೇವೆ ನಿಲ್ಲಿಸಲು ಯೋಜಿಸಿದೆಯೇ? ಎಂದು ಕಾಂಗ್ರೆಸ್ ಎಂಪಿ ಕೇಳಿದ್ದರು.
ಕಾಂಗ್ರೆಸ್ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಭಾರತದಲ್ಲಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸುವ ಯಾವುದೇ ಪ್ಲಾನ್ ಅನ್ನು WhatsApp ಮತ್ತು ಅದರ ಮಾತೃಸಂಸ್ಥೆ Meta ಸರ್ಕಾರಕ್ಕೆ ತಿಳಿಸಿಲ್ಲ ಎಂದು ಹೇಳಿದ್ದರು.
ಸೇವೆ ನಿಲ್ಲಿಸುವ ಕುರಿತು ಯಾವುದೇ ವಿಚಾರವನ್ನು WhatsApp ಆಗಲಿ ಅಥವಾ Meta ಆಗಲಿ ಹೇಳಿಲ್ಲ ಎನ್ನುವುದನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಹ ಸ್ಪಷ್ಟ ಪಡಿಸಿದೆ. ಮಾಹಿತಿ ತಂತ್ರಜ್ಞಾನ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಮತ್ತು ನಿಯಮಗಳು 2021 ರ ಅಡಿಯಲ್ಲಿ ಇಂಥ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗಳ ಸಂದೇಶಗಳನ್ನು ಪತ್ತೆಹಚ್ಚಲು WhatsApp ಮತ್ತು ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಅನುಮತಿಸುವ ಅಗತ್ಯವಿದೆ ಎಂದು ಭಾರತ ಸರ್ಕಾರವು ಪದೇ ಪದೇ ಹೇಳಿಕೊಂಡು ಬಂದಿದೆ. ಆದರೆ ಸೋಶಿಯಲ್ ಮೀಡಿಯಾ ಸಂಸ್ಥೆಗಳು ನಾವು ಗ್ರಾಹಕರ ಖಾಸಗಿ ಹಕ್ಕನ್ನು ಕಾಪಾಡುತ್ತೇವೆ ಎನ್ನುತ್ತ ಅನುಮತಿ ನೀಡಿಲ್ಲ.
ವಾಟ್ಸಾಪ್ ಸ್ಥಗಿತಗೊಂಡರೆ ಏನಾಗುತ್ತದೆ?
ವಾಟ್ಸಾಪ್ ಭಾರತವನ್ನು ತೊರೆದರೆ, ಕಂಪನಿ ಮತ್ತು ಅದರ 400 ಮಿಲಿಯನ್‌ಗಿಂತಲೂ ಹೆಚ್ಚು ಜನರ ಬಳಕೆದಾರರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಭಾರತದಲ್ಲಿ ಅನೇಕ ವ್ಯಕ್ತಿಗಳು ಮತ್ತು ವ್ಯವಹಾರಗಳು ಸಂವಹನಕ್ಕಾಗಿ ವಾಟ್ಸಾಪ್ ಅನ್ನು ಅವಲಂಬಿಸಿವೆ. ಹೀಗಾಗಿ ವಾಟ್ಸಾಪ್ ಸ್ಥಗಿತಗೊಂಡರೆ ಈ ಕಮ್ಯೂನಿಕೇಶನ್ ಸಿಸ್ಟಮ್ ಗೆ ಪರ್ಯಾಯ ಹುಡುಕಿಕೊಳ್ಳಬೇಕಾಗಬಹುದು.
ಚೀನಿ ಅಪ್ಲಿಕೇಶನ್ ನಿಷೇಧ
2020 ರಲ್ಲಿ ಅನೇಕ ಚೀನಿ ಅಪ್ಲಿಕೇಶನ್ ಗಳ ವಿರುದ್ಧ ಕೇಂದ್ರ ಸರ್ಕಾರ ಗದಾ ಪ್ರಹಾರ ಮಾಡಿತ್ತು. ಟಿಕ್ ಟಾಕ್ ಸೇರಿದಂತೆ ಅನೇಕ ಅಪ್ಲಿಕೇಶನ್ ಗಳು ಬ್ಯಾನ್ ಆಗಿದ್ದವು. ಭಾರತೀಯರ ವೈಯಕ್ತಿಕ ಮಾಹಿತಿ ಕದಿಯುತ್ತವೆ ಎಂಬ ಆರೋಪ ಕೇಳಿಬಂದ ಕಾರಣ ಕೇಂದ್ರ ಸರ್ಕಾರ ದಿಟ್ಟ ಕ್ರಮ ತೆಗದುಕೊಂಡಿತ್ತು.


Click it and Unblock the Notifications