ವಾಟ್ಸಾಪ್ (Whatsapp) ಎಂಬುದು ಇಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿಬಿಟ್ಟಿದೆ. ಯಾವುದೇ ಮೆಸೇಜ್ ಕಳುಹಿಸುವುದರಿಂದ ಹಿಡಿದು ಪೇಮೆಂಟ್‌ವರೆಗೂ (Payment) ಒಂದೇ ಆಪ್‌ನಲ್ಲಿ ಇಂದು ಮಾಡಿಮುಗಿಸಬಹುದಾಗಿದೆ. ಆದರೆ, ಇತ್ತೀಚಿನ ವರದಿಯೊಂದು ವಾಟ್ಸಾಪ್ ಬಳಕೆದಾರರನ್ನು ಬೆಚ್ಚಿಬೀಳಿಸುವಂತಿದೆ. ವಾಟ್ಸಾಪ್‌ನ ಜನಪ್ರಿಯ ಫೀಚರ್ ಒಂದು ಬಳಕೆದಾರರ ಗೌಪ್ಯತೆಗೆ ಸಮಸ್ಯೆಯನ್ನುಂಟು ಮಾಡಲಿದೆ ಎಂದು ವರದಿಯಾಗಿದೆ.

ಹೌದು, ಇತ್ತೀಚೆಗೆ ಹಚ್ಚಿನ ವಾಟ್ಸಾಪ್ ಬಳಕೆದಾರರಿಗೆ ರಾತ್ರಿಯಾಗಲಿ, ಹಗಲಾಗಲಿ, ಅಪರಿಚಿತ ನಂಬರ್‌ನಿಂದ ಮೆಸೇಜ್ ಬರುತ್ತೆ. ಅದರು ಉದ್ಯೋಗದ ಆಫರ್ ಆಗಲೀ, ಬೇರೆ ಯಾವುದಾದರೂ ಮಾಹಿತಿ ರೂಪದಲ್ಲಿ ಮೆಸೇಜ್ ಬರುತ್ತದೆ. ಆದ್ರೆ ಆ ವ್ಯಕ್ತಿಗೆ ನಂಬರ್ ಎಲ್ಲಿಂದ ಸಿಕ್ಕಿತು ಎಂಬ ಪ್ರಶ್ನೆ ಎಲ್ಲರಿಗೂ ಉದ್ಭವಿಸುತ್ತದೆ. ಇನ್ನೂ ಕೆಲವರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದೀಗ ನವೆಂಬರ್ 2025ರ ದೊಡ್ಡ ಸಂಶೋಧನೆಯೊಂದು ಈ ಸಣ್ಣ ಪ್ರಶ್ನೆಗೆ ಶಾಕಿಂಗ್ ವರದಿಯನ್ನು ನೀಡಿದೆ.
ಪ್ರಪಂಚದಾದ್ಯಂತ ಇರುವ ಎಲ್ಲಾ WhatsApp ಬಳಕೆದಾರರ ಫೋನ್ ಸಂಖ್ಯೆಗಳು ಎಲ್ಲರಿಗೂ ತಿಳಿದರೆ ಏನಾಗುತ್ತದೆ ಎಂದು ಒಮ್ಮೆ ಊಹಿಸಿ? ಇದು ಕೂಡಾ ಅಂತಹದೇ ಒಂದು ಪ್ರಕರಣ. WhatsAppನ ಸಂಪೂರ್ಣ ಸದಸ್ಯರ ಮಾಹಿತಿ ದೀರ್ಘಕಾಲದವರೆಗೆ ಅಸುರಕ್ಷಿತವಾಗಿತ್ತು ಮತ್ತು ಡಾರ್ಕ್ ವೆಬ್‌ನಲ್ಲಿ ಮಾರಾಟವಾಗುತ್ತಿತ್ತು ಎನ್ನಲಾಗಿದೆ. ಆಸ್ಟ್ರಿಯನ್ ಸಂಶೋಧಕರು 3.5 ಬಿಲಿಯನ್ ಬಳಕೆದಾರರ ಫೋನ್ ನಂಬರ್‌ಗಳು ಮತ್ತು ಇತರ ಪ್ರೊಫೈಲ್ ಡೇಟಾವನ್ನು ಡೌನ್‌ಲೋಡ್ ಮಾಡಬಹುದೆಂದು ಹೇಳಿಕೊಂಡಿದ್ದಾರೆ. ನಂಬರ್ ಲೀಕ್ ನೋಡಿದೆ, ಇದು ಅತಿದೊಡ್ಡ ಡೇಟಾ ಸೋರಿಕೆಯಾಗಿದೆ.
ಡೇಟಾ ಉಲ್ಲಂಘನೆಯ ಜೊತೆಗೆ ಮೆಟಾಗೆ ಈಗಿನಿಂದಲ್ಲ, ಹಿಂದಿನಿಂದಲೂ ಸಂಬಂಧವಿದೆ. ಕೇಂಬ್ರಿಡ್ಜ್ ಅನಲಿಟಿಕಾ ಡೇಟಾ ಉಲ್ಲಂಘನೆಯ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ, ಮೆಟಾ ಮತ್ತು ಡೇಟಾ ಉಲ್ಲಂಘನೆಯ ಸಂಬಂಧ ಹೊಸದಲ್ಲ. ಆಗಲೂ ಕಂಪನಿಯು "ಥರ್ಡ್ ಪಾರ್ಟಿಯಿಂದ ಡೇಟಾ ಸೋರಿಕೆಯಾಗಿದೆ" ಎಂದು ಹೇಳಿ ಜಾರಿಕೊಂಡಿತ್ತು. ಆಶ್ಚರ್ಯವೆಂದರೆ, 2017ರಲ್ಲಿಯೇ ಈ ದೋಷದ ಬಗ್ಗೆ ಮೆಟಾಗೆ ಸೂಚನೆ ಕೂಡಾ ನೀಡಲಾಗಿತ್ತು. ಇದೀಗ ಈ ಡೇಟಾವನ್ನು ಸೈಬರ್ ಕ್ರಿಮಿನಲ್‌ಗಳು ಬಹಳ ಸಮಯದಿಂದ ಬಳಸುತ್ತಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ, 'WhatsApp ಡೇಟಾ ಲೀಕ್' ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಪ್ರಪಂಚದಾದ್ಯಂತ ಸುಮಾರು 350 ಕೋಟಿ ಬಳಕೆದಾರರ ಡೇಟಾ ಅಪಾಯದಲ್ಲಿದೆ ಎಂದು ಹೇಳಲಾಗಿದೆ. ಆದರೆ ಇದೀಗ ಸಂಶೋಧಕರ ಆಳವಾದ ತನಿಖೆಯಿಂದ, ಇದು ಸರ್ವರ್ ಅನ್ನು ಬಳಸಿ, ಯಾರೂ 'ಹ್ಯಾಕ್' ಮಾಡಿಲ್ಲ ಎಂದು ತಿಳಿದುಬಂದಿದೆ. ಇದೊಂದು ಸಿಸ್ಟಮ್ ದೋಷ ಎಂದು ಬಹಿರಂಗವಾಗಿದೆ.
ವಿಯೆನ್ನಾ ವಿಶ್ವವಿದ್ಯಾನಿಲಯದ ಭದ್ರತಾ ಸಂಶೋಧಕರು ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿದ್ದು, ಇದು ಮೆಟಾ ಪ್ರಧಾನ ಕಚೇರಿಯಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. WhatsApp ಸಿಸ್ಟಮ್‌ನಲ್ಲೇ ಒಂದು ಆಘಾತಕಾರಿ ದೋಷವೊಂದು ಇದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ತಾಂತ್ರಿಕ ಭಾಷೆಯಲ್ಲಿ ಇದನ್ನು 'Contact Discovery Flaw' ಎಂದು ಕರೆಯಲಾಗುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಇದು ಸ್ವಯಂಚಾಲಿತ ಯಂತ್ರದಂತೆ ಕಾರ್ಯನಿರ್ವಹಿಸುತ್ತದೆ.
ಸಂಶೋಧಕರು ಒಂದು ಸ್ಕ್ರಿಪ್ಟ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಒಂದು ಗಂಟೆಯಲ್ಲಿ ಕೋಟಿಗಟ್ಟಲೆ ರ್ಯಾಂಡಮ್ ಆಗಿ ಫೋನ್ ಸಂಖ್ಯೆಗಳನ್ನು WhatsApp ಸರ್ವರ್‌ಗೆ ಪಿಂಗ್ ಮಾಡಿದೆ. ಪ್ರತಿ ಬಾರಿಯೂ, WhatsApp ಬಳಕೆದಾರರ ಫೋಟೋದಿಂದ ಹಿಡಿದು ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಲಾಯಿತು, ಇದರಿಂದ ಆ ನಂಬರ್ ನಿಜವಾಗಿದೆಯಾ ಮತ್ತು ಬಳಕೆಯಲ್ಲಿದೆಯಾ ಎಂಬುದಕ್ಕೆ ಪುರಾವೆಯಾಗಿದೆ.
ಇದರಿಂದ ನಿಮ್ಮ ಅನುಮತಿಯಿಲ್ಲದೆ, ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಆಕ್ಟಿವ್ ಆಗಿರುವ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ರಚಿಸಬಹುದು. ನಂತರ ಅದನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಸೈಬರ್ ಕ್ರಿಮಿನಲ್‌ಗಳು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಇದು 'ಹ್ಯಾಕ್' ಅಲ್ಲ, 'ಸ್ಕ್ರ್ಯಾಪಿಂಗ್' ಎಂದು ಕರೆಯಲಾಗುತ್ತದೆ.. ಸಾಮಾನ್ಯ ಬಳಕೆದಾರರಿಗೆ 'ಹ್ಯಾಕ್' ಮತ್ತು 'ಸ್ಕ್ರ್ಯಾಪಿಂಗ್' ನಡುವೆ ವ್ಯತ್ಯಾಸ ಗುರುತಿಸುವುದು ಕಷ್ಟ. ಆದರೆ ಗೌಪ್ಯತೆಯ ದೃಷ್ಟಿಯಿಂದ ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಆದ್ದರಿಂದ ಈ ವರದಿಯಲ್ಲಿ, ಯಾರೂ ನಿಮ್ಮ ಖಾಸಗಿ ಚಾಟ್‌ಗಳನ್ನು ಓದಿಲ್ಲ, WhatsAppನ ಎನ್‌ಕ್ರಿಪ್ಶನ್ (End-to-End Encryption) ಇನ್ನೂ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಡಿಜಿಟಲ್ ಅರೆಸ್ಟ್, ಉದ್ಯೋಗ ವಂಚನೆಗಳು ಮತ್ತು ಸ್ಪ್ಯಾಮ್ ಕರೆಗಳು ಹೆಚ್ಚಾಗಲು ಇದೇ ಕಾರಣ. ಆದರೆ ನಿಮ್ಮ ಡೇಟಾ ಸೋರಿಕೆಯಾಗಿಲ್ಲ, ಅದನ್ನು 'ಸ್ಕ್ರ್ಯಾಪ್' ಎಂದು ಕರೆಯಲಾಗುತ್ತದೆ. ನಂತರ ಅವರು ಸ್ಕ್ಯಾಮರ್‌ಗಳಿಗೆ ನೀಡುತ್ತಾರೆ.
50 ಕೋಟಿಗೂ ಹೆಚ್ಚು WhatsApp ಬಳಕೆದಾರರನ್ನು ಹೊಂದಿರುವ ಭಾರತ, ಇಂತಹ ಡೇಟಾ ಉಲ್ಲಂಘನೆಯಿಂದಲೇ ನರಳುವಂತಾಗಿದೆ. ಜಾಗತಿಕ ಮಟ್ಟದಲ್ಲಿ ಡೇಟಾ ಸ್ಕ್ರ್ಯಾಪ್ ಆದಾಗ, ಭಾರತೀಯ ಸಂಖ್ಯೆಗಳು ಮೊದಲು ಗುರಿಯಾಗುತ್ತವೆ. ಕಳೆದ ಕೆಲವು ತಿಂಗಳುಗಳಲ್ಲಿ ನಿಮಗೆ +92, +84 ಅಥವಾ +62 ನಂತಹ ಕೋಡ್‌ಗಳಿಂದ ವೀಡಿಯೊ ಕರೆಗಳು ಬಂದಿರಬಹುದು. ಇದಕ್ಕೆ ಮುಖ್ಯ ಕಾರಣ 'Contact Discovery'ಯ ಪರಿಣಾಮವಾಗಿದೆ.
ಈಗಾಗಲೇ ಮೆಟಾ ಈ ದೋಷವನ್ನು ಸರಿಪಡಿಸಿದ್ದರೂ, ಈ ಹಿಂದಿನಿಂದ ಅಸ್ಥಿತ್ವದಲ್ಲಿರುವ ಕಾರಣ ಡೇಟಾ ಡಾರ್ಕ್ ವೆಬ್‌ನಲ್ಲಿ ಮಾರಾಟವಾಗುತ್ತಿದೆ ಎಂದು ಸಂಶೋಧಕರು ನಂಬಿದ್ದಾರೆ. ಮೆಟಾ ತನ್ನ ಹೇಳಿಕೆಯಲ್ಲಿ, ಈ ಸಮಸ್ಯೆಯನ್ನು ಸರಿಪಡಿಸಿದ್ದಾರೆ ಮತ್ತು ಯಾವುದೇ ಬಳಕೆದಾರರ ಖಾತೆ ಹ್ಯಾಕ್ ಆಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ. ಮೆಟಾದ ಈ ಸ್ಪಷ್ಟನೆ ಒಳ್ಳೆಯದು, ಆದರೆ ಸಂಪೂರ್ಣ ಸುರಕ್ಷಿತ ಎನ್ನಲು ಸಾಧ್ಯವಿಲ್ಲ.


Click it and Unblock the Notifications