ಇಂದು ಅಕ್ಟೋಬರ್ 20, ಬೆಳಕಿನ ಹಬ್ಬ ದೀಪಾವಳಿ ಆರಂಭದ ದಿನ (Deepavali). ನಾಡಿನೆಲ್ಲೆಡೆ ಸರ್ಕಾರಿ ಕಚೇರಿಗಳಿಗೆ, ಕೆಲವು ಕಂಪನಿಗಳಿಗೆ, ಶಾಲಾ-ಕಾಲೇಜುಗಳಿಗೆ ರಜೆ (Holidays) ಘೋಷಣೆ ಮಾಡಲಾಗಿದೆ. ಆದ್ರೆ ಈ ಮಧ್ಯೆ ಹೂಡಿಕೆದಾರರಿಗೆ ಇಂದು ಷೇರು ಮಾರುಕಟ್ಟೆ (Stock Market) ತೆರೆದಿರುತ್ತದೆಯೇ? ಅಥವಾ ಮುಚ್ಚಿರುತ್ತಾ? ಎಂಬ ಪ್ರಶ್ನೆ ಹುಟ್ಟಿದೆ. ಸಾಮಾನ್ಯವಾಗಿ, ದೀಪಾವಳಿ ದಿನವು ಸಮೃದ್ಧಿ ಮತ್ತು ಸಂಪತ್ತು, ನೆಮ್ಮದಿಯ ಹಬ್ಬವೆಂದು ಆಚರಿಸಲಾಗುತ್ತದೆ. ಇನ್ನು ಪ್ರತಿ ವರ್ಷ ದೀಪಾವಳಿಯಂದು ಷೇರು ಮಾರುಕಟ್ಟೆಯಲ್ಲಿ ಮುಹೂರ್ತ ವ್ಯಾಪಾರ ಎಂದು ನಡೆಸಲಾಗುತ್ತದೆ. ಆದ್ದರಿಂದ ಈ ಸಮಯವನ್ನು ತುಂಬಾ ಒಳ್ಳೆಯ ಸಮಯವೆಂದು ಪರಿಗಣಿಸಲಾಗುತ್ತದೆ.

ಆದ್ದರಿಂದ, ಈ ವರ್ಷ, ಮುಹೂರ್ತ ವ್ಯಾಪಾರವು ನಾಳೆ ಅಂದರೆ ಅಕ್ಟೋಬರ್ 21 ರಂದು ಮಧ್ಯಾಹ್ನ 1:45 ರಿಂದ 2:45 ರವರೆಗೆ ನಡೆಯಲಿದೆ . ಇಂದು ಮಾತ್ರ ಎಂದಿನಂತೆ ಭಾರತೀಯ ಷೇರುಪೇಟೆಗಳು ತೆರೆದಿರುತ್ತವೆ.
ಷೇರು ಮಾರುಕಟ್ಟೆಗೆ ಇಂದು ಇಲ್ಲ ರಜೆ:
ಅಕ್ಟೋಬರ್ 20, 2025ರ ಸೋಮವಾರದಂದು ಭಾರತೀಯ ಷೇರುಪೇಟೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು BSE ಮತ್ತು NSE ರಜಾ ದಿನಗಳ ಕ್ಯಾಲೆಂಡರ್ ವರದಿ ಮಾಡಿದೆ. ದೀಪಾವಳಿ ಹಬ್ಬವಿದ್ದರೂ, ಭಾರತೀಯ ಸ್ಟಾಕ್ ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಅದೇ ರೀತಿ ಹೂಡಿಕೆದಾರರು ಕೂಡಾ ತಮಗೆ ಬೇಕಾದಂತೆ ವಹಿವಾಟು ನಡೆಸಬಹುದು ಎನ್ನಲಾಗಿದೆ.
ಯಾವಾಗ ಮುಹೂರ್ತ ಟ್ರೇಡಿಂಗ್?
ದೀಪಾವಳಿಯ ಶುಭ ಸಂದರ್ಭದಲ್ಲಿ, ಹೂಡಿಕೆದಾರರಿಗೆ ಶುಭ ಸಮಯ ಯಾವಾಗ ಎಂಬುದು ಪ್ರಶ್ನೆ ಬರೋದು ಸಾಮಾನ್ಯ. ಪ್ರತಿ ವರ್ಷ ದೀಪಾವಳಿ ದಿನದಂದು "ಮುಹೂರ್ತ ಟ್ರೇಡಿಂಗ್" ಎಂಬ ವಿಶೇಷ ವಹಿವಾಟು ನಡೆಸಲಾಗುತ್ತದೆ. ಅದೇ ರೀತಿ ಈ ವರ್ಷ, ಮುಹೂರ್ತ ಟ್ರೇಡಿಂಗ್ ಅಕ್ಟೋಬರ್ 21 ರಂದು ಮಧ್ಯಾಹ್ನ 1:45 ರಿಂದ 2:45 ರವರೆಗೆ ನಡೆಯಲಿದೆ. ಅಂದರೆ, ದೀಪಾವಳಿಯ ಎರಡನೇ ದಿನ ಈ ವಿಶೇಷ ವಹಿವಾಟು ನಡೆಯಲಿದೆ. ಆದ್ದರಿಂದ ಅ.20 ರಂದು ಷೇರ ಮಾರುಕಟ್ಟೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
ಅಕ್ಟೋಬರ್ 21, ಮಂಗಳವಾರದಂದು ದೀಪಾವಳಿ ಲಕ್ಷ್ಮಿ ಪೂಜೆಯ ಹಿನ್ನೆಲೆಯಲ್ಲಿ BSE ಮತ್ತು NSE ಗಳಿಗೆ ಅಧಿಕೃತವಾಗಿ ರಜೆ ಘೋಷಿಸಲಾಗಿದೆ. ಆದ್ದರಿಂದ ಈ ದಿನ ಸಾರ್ವಜನಿಕವಾಗಿ ರಜೆ ಘೋಷಣೆ ಮಾಡಲಾಗಿದೆ. ಆದರೆ, ಅ.21 ರಂದು, ಎರಡೂ ವಿನಿಮಯ ಕೇಂದ್ರಗಳು ಒಂದು ಗಂಟೆಯ ಕಾಲ ವಿಶೇಷ ಮುಹೂರ್ತ ಟ್ರೇಡಿಂಗ್ ಅವಕಾಶವನ್ನು ನೀಡಲಿದೆ. ಇದು ಶುಭ ಆರಂಭ ಮತ್ತು ಹೂಡಿಕೆದಾರರಿಗೆ ಸಮೃದ್ಧಿಯನ್ನು ಸಂಕೇತಿಸುವ ಒಂದು ಹಳೆಯ ಸಂಪ್ರದಾಯವಾಗಿದೆ.
ವಿನಿಮಯ ಕೇಂದ್ರಗಳ ಅಧಿಸೂಚನೆಗಳ ಪ್ರಕಾರ, ಮುಹೂರ್ತ ಟ್ರೇಡಿಂಗ್ ಸಮಯವು ಅಕ್ಟೋಬರ್ 21 ರಂದು ಮಧ್ಯಾಹ್ನ 1:45 ರಿಂದ 2:45 ರವರೆಗೆ ನಡೆಯಲಿದೆ. ಇದಕ್ಕೂ ಮೊದಲು, ಮಧ್ಯಾಹ್ನ 1:30 ರಿಂದ 1:45 ರವರೆಗೆ ಪ್ರೀ ಓಪನಿಂಗ್ ತೆರೆಯಲಿದೆ.
ಸಾಂಪ್ರದಾಯಿಕವಾಗಿ, 'ಮುಹೂರ್ತ' ಟ್ರೇಡಿಂಗ್ ಸಮಯದಲ್ಲಿ, ಅಂದರೆ ಶುಭ ಸಮಯದಲ್ಲಿ ವ್ಯಾಪಾರ ಮಾಡುವುದು ಹೂಡಿಕೆದಾರರಿಗೆ ಸಮೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯನ್ನು ತರುತ್ತದೆ ಎಂದು ನಂಬಲಾಗಿದೆ.
ಈ ವರ್ಷದ ರಜಾ ದಿನಗಳು:
ಅಕ್ಟೋಬರ್ 22, ಬುಧವಾರದಂದು, ಬಲಿಪಾಡ್ಯಮಿಯ ಕಾರಣದಿಂದ ಮಾರುಕಟ್ಟೆಗಳು ಅಂದೂ ಕೂಡಾ ಮುಚ್ಚಿರುತ್ತದೆ. ಆದ್ದರಿಂದ ವ್ಯಾಪಾರ ವಹಿವಾಟು ಎಂದಿನಂತೆ ಅಕ್ಟೋಬರ್ 23, ಗುರುವಾರದಿಂದ ಪುನರಾರಂಭವಾಗುತ್ತದೆ.
ನವೆಂಬರ್ 5 ರಂದು ಪ್ರಕಾಶ್ ಗುರುಪುರಬ್ ಶ್ರೀ ಗುರು ನಾನಕ್ ದೇವ್ ಅವರ ಜನ್ಮದಿನದಂದು ಷೇರು ಮಾರುಕಟ್ಟೆಗೆ ರಜೆ ಘೋಷಿಸಲಾಗಿದೆ. 2025 ರ ಕೊನೆಯ ಷೇರು ಮಾರುಕಟ್ಟೆ ರಜೆ ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇರಲಿದೆ. ಈ ದಿನ ಸಾರ್ವತ್ರಿಕ ರಜೆ ಇರುವುದರಿಂದ, ಷೇರು ಮಾರುಕಟ್ಟೆಗೂ ರಜೆ ಘೋಷಿಸಲಾಗಿದೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ಕೂಡ ಅಕ್ಟೋಬರ್ 21 ಮತ್ತು ಅಕ್ಟೋಬರ್ 22 ರಂದು ದೀಪಾವಳಿ ಲಕ್ಷ್ಮಿ ಪೂಜೆ ಮತ್ತು ಬಲಿಪಾಡ್ಯಮಿ ರಜೆ ನೀಡಿದೆ. MCX ಅಕ್ಟೋಬರ್ 21 ರಂದು ಸಂಪೂರ್ಣವಾಗಿ ಮುಚ್ಚಿರುತ್ತದೆ. ಆದರೆ MCX ಅಕ್ಟೋಬರ್ 21, 2025 ರಂದು ಮುಹೂರ್ತ ಟ್ರೇಡಿಂಗ್ ಅನ್ನು ನಡೆಸಲಿದೆ.


Click it and Unblock the Notifications