ಆಹಾರ ಪ್ರಿಯರ ಬಾಯಲ್ಲಿ ಹರಿದಾಡುವ ಹೆಸರಾಂತ ಫುಡ್ ಡೆಲಿವರಿ ಆ್ಯಪ್‌ಗಳಲ್ಲಿ ಸ್ವಿಗ್ಗಿ ಕೂಡ ಒಂದು. ಗ್ರಾಹಕರು ಬಯಸುವಂತಹ ಎಲ್ಲಾ ತರಹದ ಆಹಾರಗಳನ್ನ ಕ್ಷಣಾರ್ಧದಲ್ಲೇ ತಂದು ತಲುಪಿಸುತ್ತದೆ. ದೇಶದ ಮೂಲೆಮೂಲೆಯಲ್ಲಿ ಇದು ತನ್ನ ಗ್ರಾಹಕರನ್ನ ಹೊಂದಿದೆ. ಅಲ್ಲದೆ ಸುಮಾರು 3,00,000 ರೆಸ್ಟೋರೆಂಟ್‌ಗಳೊಂದಿಗೆ ಪಾಲುದಾರಿಕೆಯನ್ನ ಸಹ ಸ್ವಿಗ್ಗಿ ಹೊಂದಿದೆ.
ಜನರ ಬಾಯಲ್ಲಿ ಈಗ ಜನಪ್ರಿಯವಾಗಿರುವ ಸ್ವಿಗ್ಗಿಯ ಬೆಳವಣಿಗೆ ಬೆಂಗಳೂರಿನ ಕೋರಮಂಗಲ ಸ್ಟ್ರೀಟ್‌ನಿಂದ ಆರಂಭವಾಗಿ, ಮುಂಬೈನ ದಲಾಲ್ ಸ್ಟ್ರೀಟ್‌ವರೆಗೆ ಹಿಡಿದು ತನ್ನ ಇತ್ತೀಚಿನ IPO ಚೊಚ್ಚಲದವರೆಗೆ ಬಹಳ ದೂರ ಸಾಗಿದೆ . ಅಲ್ಲದೆ ಸ್ವಿಗ್ಗಿ ಈಗ ದೇಶಾದ್ಯಂತ ಸುಮಾರು 3,00,000 ರೆಸ್ಟೋರೆಂಟ್‌ಗಳೊಂದಿಗೆ ಪಾಲುದಾರಿಕೆ ಹೊಂದಿದ್ದರೂ, ಅದರ ವಿನಮ್ರ ಆರಂಭ ಮಾತ್ರ 2014 ರಲ್ಲಿ ಕೋರಮಂಗಲದ ಜನಪ್ರಿಯ ರೆಸ್ಟೋರೆಂಟ್‌ಗಳೊಂದಿಗೆ ಶುರುವಾಯಿತು.

ಸ್ವಿಗ್ಗಿಯ ಮೊದಲ ಆರ್ಡರ್
ಹಾಗೆ ಸ್ವಿಗ್ಗಿ ಸಹ-ಸಂಸ್ಥಾಪಕ ಶ್ರೀಹರ್ಷ ಮೆಜೆಟಿ ಅವರು ಅನೇಕ ಸಂದರ್ಭಗಳಲ್ಲಿ ಸ್ವಿಗ್ಗಿಯನ್ನ ಮುಚ್ಚುತ್ತೇವೆ ಎಂಬ ಮಾತನ್ನ ಬಹಿರಂಗಪಡಿಸಿದ್ದರು. ಸ್ವಿಗ್ಗಿ ಲಾಂಚ್‌ನ ಮೊದಲ ದಿನದಲ್ಲಿ ಅವರಿಗೆ ಒಂದೂ ಆರ್ಡರ್‌ಗಳು ದೊರೆತಿರಲಿಲ್ಲ. ಹಾಗೆ ಆರಂಭದಲ್ಲಿ ಸ್ವಿಗ್ಗಿಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಆರಂಭದಲ್ಲಿ ಕೋರಮಂಗಲದ 5ನೇ ಬ್ಲಾಕ್‌ನಲ್ಲಿರುವ ಜ್ಯೋತಿ ನಿವಾಸ್ ಕಾಲೇಜು ಬಳಿ ಸ್ವಿಗ್ಗಿಯ ಸಿಬ್ಬಂದಿ ಆ್ಯಪ್‌ನ ಕರಪತ್ರಗಳನ್ನು ಹಂಚಿದ್ದನ್ನು ಶ್ರೀಹರ್ಷ ಅವರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆದರೂ ಕೂಡ ಬೆಂಗಳೂರಿನ ಜನಪ್ರಿಯ ಫಾಸ್ಟ್ ಫುಡ್ ಚೈನ್ ಟ್ರಫಲ್ಸ್ ಸ್ವಿಗ್ಗಿಯ ಮೊದಲ ಪಾಲುದಾರರಲ್ಲಿ ಒಂದಾಗಿದೆ.
ಇನ್ನು ಶ್ರೀಹರ್ಷ ಅವರು ಸ್ವಿಗ್ಗಿಯ ಆರಂಭದ ದಿನಗಳ ಕುರಿತು ಹೇಳಿದ್ದು ಹೀಗೆ, "ನಾವು ಆಗಸ್ಟ್ 6, 2014 ರಂದು ಸ್ವಿಗ್ಗಿ ಪ್ರಾರಂಭಿಸಿದಾಗ, ನಾವು ಇಡೀ ದಿನ ಒಂದೂ ಆರ್ಡರ್‌ಗಳಿಲ್ಲದೇ ಕೊನೆಗೊಳಿಸಬೇಕಿತ್ತು. ಹಾಗೆ ನಂತರ ದಿನಗಳಲ್ಲಿ ನಮ್ಮ ಪ್ರಯಾಣದ ನಿಜವಾದ ಆರಂಭವನ್ನು ಗುರುತಿಸುವ ಮೂಲಕ ನಾವು ನಮ್ಮ ಮೊದಲ ಆರ್ಡರನ್ನ ಪಡೆದಿದ್ದೆವೇ. ಅಲ್ಲದೆ ಟ್ರಫಲ್ಸ್ ನಮ್ಮ ಆರಂಭಿಕ ಪಾಲುದಾರ ಆಗಿತ್ತು,ಸ್ವಿಗ್ಗಿಯಲ್ಲಿ ದಿನಕ್ಕೆ ಕೇವಲ ಎರಡು ಆರ್ಡರ್‌ಗಳೊಂದಿಗೆ ನಮ್ಮ ಪ್ರಯಾಣ ಆರಂಭವಾಗಿತ್ತು. ಅಂದಿನಿಂದ, ಪ್ರತಿದಿನ ಅಲ್ಲಿ 7,261 ಆರ್ಡರ್‌ಗಳನ್ನ ನಾವು ಪಡೆಯುತ್ತಿದ್ದೇವೆ. ಹಾಗೆ ನಾವು ಅಲ್ಲಿಂದ ಇಲ್ಲಿಯವರೆಗೆ ಒಟ್ಟಿಗೆ ಈ ಪ್ರಯಾಣವನ್ನ ಮುಂದುವರೆಸಿದ್ದೇವೆ.
ಇನ್ನು ಕೆಲವು ದೃಢೀಕರಿಸದ ವರದಿಗಳು ಹೇಳುವ ಪ್ರಕಾರ ಕೋರಮಂಗಲದ ಕರಾಮಾ ರೆಸ್ಟೊರೆಂಟ್ ಸ್ವಿಗ್ಗಿಯ ಮೊದಲ ಆಹಾರ ಆರ್ಡರ್ ಅನ್ನು ಸ್ವೀಕರಿಸಿದೆ ಎಂದು ಹೇಳಲಾಗ್ತಿದೆ. ಅದರ ಪಟ್ಟಿಯನ್ನ ಸಹ ಸಾರ್ವಜನಿಕರ ಮುಂದಿಡಲಾಗಿದೆ.
ಇತ್ತೀಚೆಗೆ ಸ್ವಿಗ್ಗಿಯ 10 ನೇ ವಾರ್ಷಿಕೋತ್ಸವದ ಸಮಯದಲ್ಲಿ, ಶ್ರೀಹರ್ಷ ಕೋರಮಂಗಲದ ರೆಸ್ಟೋರೆಂಟ್ ಮಾಲೀಕರನ್ನು ಬೇಟಿಯಾಗಿದ್ರು. "ನಾಥನ್ (ಹೋಲ್ ಇನ್ ದಿ ವಾಲ್), ಅಂಕೀತ್ (ಆನಂದ್ ಸ್ವೀಟ್ಸ್), ಅವಿನಾಶ್ (ಟ್ರಫಲ್ಸ್), ಸಮೀರ್ (ಚಿನಿತಾ), ಪವನ್‌ದೀಪ್ (ತಡ್ಕಾ ಸಿಂಗ್), ಚೇತನ್ (ತಂಡೂರ್ ಹಟ್), ಕಾಶಿಫ್ (ಲಕ್ನೋ ಸ್ಟ್ರೀಟ್) ನಂತಹ ಪಾಲುದಾರನ್ನ ಮತ್ತೆ ಭೇಟಿಯಾಗಿ ನನಗೆ ತುಂಬಾ ಸಂತೋಷವಾಯಿತು. ರೋಜರ್ (ವೈಯಾ ಮಿಲಾನೊ) ಮತ್ತು ಕಶ್ಯಪ್ (ಗ್ರಾಮಿನ್) ಆಹಾರ ವಿತರಣೆಯು ಇನ್ನೂ ನಾವು ಸ್ವಿಗ್ಗಿ ಶುರು ಮಾಡಿದ ಆರಂಭದಲ್ಲೇ ನಮ್ಮನ್ನು ನಂಬಿ ನಮ್ಮೊಂದಿಗಿದ್ದರು. ಇಂದು ಅವರೆಲ್ಲರ ನಂಬಿಕೆ ಮತ್ತು ಪಾಲುದಾರಿಕೆ ಬಹಳ ಮುಖ್ಯವಾಗಿದೆ ಮತ್ತು ಅವರು ನಮಗೆ ನಮ್ಮ ಕೋರ್ ಸಂಸ್ಥಾಪಕ ತಂಡದ ಸದಸ್ಯರಂತೆ, ಇವತ್ತು ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಆಹಾರ ವಿತರಣೆಯನ್ನು ಮಾಡಲು ಇವರೆಲ್ಲರ ಸಹಾಯ ಹೆಚ್ಚಿದೆ ಎಂದು ಬಿಲಿಯನೇರ್ ಸಿಇಒ ಹೇಳಿದರು.


Click it and Unblock the Notifications