ಬೆಂಗಳೂರು ನಮ್ಮ ಮೆಟ್ರೋ:ಪರ್ಪಲ್ ಲೈನ್‌ನಲ್ಲಿ ಹೊಸ ಕ್ರಾಂತಿ..ವೈಟ್ ಫೀಲ್ಡ್-KR ಪುರಂಗೆ ಕೇವಲ 22 ನಿಮಿಷಗಳ ಪ್ರಯಾಣ! ಹೇಗೆ ಗೊತ್ತಾ?

ಇಡೀ ದೇಶದಲ್ಲಿ ಅತ್ಯುತ್ತಮ ಐಟಿ ವಲಯ ಕೇಂದ್ರ ಹಾಗೂ ತಂತ್ರಜ್ಞಾನ ಕೇಂದ್ರವಾಗಿರುವ ಬೆಂಗಳೂರು ಇಂದು ದೊಡ್ಡ ಮಹಾನಗರಿಯಾಗಿ ಬೆಳೆದು ನಿಂತಿದೆ. ಬೆಂಗಳೂರು ಎಂದರೆ ಸಿಲಿಕಾನ್ ಸಿಟಿ, ಮೆಟ್ರೋ ಸಿಟಿ, ಐಟಿ ಸಿಟಿ, ಗಾರ್ಡನ್ ಸಿಟಿ ಹೀಗೆ ನಾನಾ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿರುವ ಭಾರತದ ಅತಿದೊಡ್ಡ ನಗರವಾಗಿದೆ. ಮೊದಲೇ ಟ್ರಾಫಿಕ್ ಹಬ್ ಆಗಿರುವ ಬೆಂಗಳೂರು ಟ್ರಾಫಿಕ್ ನಿಯಂತ್ರಣ, ಜನ ದಟ್ಟಣೆ, ಸಂಚಾರ ದಟ್ಟಣೆಗಾಗಿ ಸದಾ ಒಂದಿಲ್ಲೊಂದು ಪ್ರಯತ್ನಗಳನ್ನ ಮಾಡುತ್ತಲೇ ಇರುತ್ತದೆ. ಹಾಗೆಯೇ ಈಗ ಕೂಡ ಒಂದು ಪ್ರಯತ್ನ ಯಶಸ್ವಿಯಾಗಿದೆ. ಅದೇನೆಂದರೆ ನಮ್ಮ ಮೆಟ್ರೋ ನೇರಳೆಮಾರ್ಗದಲ್ಲಿ ಸಂಚಾರದ ಅವಧಿ ಕಡಿತವಾಗುವಂತೆ ಮಾಡಿದೆ.

ಬೆಂಗಳೂರು ನಮ್ಮ ಮೆಟ್ರೋ: ಪರ್ಪಲ್ ಲೈನ್‌ನಲ್ಲಿ ಹೊಸ ಕ್ರಾಂತಿ..!

ಹೌದು, ಮಹಾನಗರಿ ಬೆಂಗಳುರು ತನ್ನ ಸಾರಿಗೆ ಮೂಲಸೌಕರ್ಯವನ್ನು ಇನ್ನಷ್ಟು ಶಕ್ತಿಗೊಳಿಸಲು ಹೊಸ ಹೆಜ್ಜೆ ಇಟ್ಟಿದೆ. 2023ರ ಅಕ್ಟೋಬರ್ 9ರಂದು ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗದ ಪರ್ಪಲ್ ಲೈನ್ ಮೆಟ್ರೋ ಸೇವೆ ಅಧಿಕೃತವಾಗಿ ಚಾಲನೆ ಕಂಡಿತು. ಈ ಮಾರ್ಗದ ಮೂಲಕ ಪೂರ್ವ ಬಳ್ಳಿಯ ಐಟಿ ಉದ್ಯಮ ಪ್ರದೇಶಗಳು, ವಾಣಿಜ್ಯ ಕೇಂದ್ರಗಳು ಹಾಗೂ ಪ್ರಮುಖ ರೈಲು ನಿಲ್ದಾಣಗಳನ್ನು ಸಮರ್ಥವಾಗಿ ಜೋಡಿಸಲಾಗಿದೆ.

22 ನಿಮಿಷಗಳಲ್ಲಿ ವೈಟ್‌ಫೀಲ್ಡ್-ಕೆಆರ್ ಪುರಂ ಪ್ರಯಾಣ ಸಾಧ್ಯ:

ಪರ್ಪಲ್ ಲೈನ್ ಮೆಟ್ರೋ ಮಾರ್ಗದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಈಗಿನ ವೇಗ. ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ನಡುವೆ ಯಾವುದೇ ಟ್ರಾಫಿಕ್ ತಡೆಗಳಿಲ್ಲದೆ ಕೇವಲ 22 ನಿಮಿಷಗಳಲ್ಲಿ ತಲುಪಬಹುದಾಗಿದೆ. ಇದರಿಂದ ಪ್ರತಿದಿನ ಈ ಮಾರ್ಗದ ಮೂಲಕ ತಮ್ಮ ಐಟಿ ಉದ್ಯೋಗಕ್ಕೆ ತೆರಳುವ ಉದ್ಯೊಗಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯ ನಾಗರಿಕರಿಗೆ ಸಮಯ ಉಳಿತಾಯವಾಗುತ್ತಿದ್ದು, ಹೆಚ್ಚು ಉಪಕಾರಿಯಾಗಿದೆ.

ಜಾಗದ ಉಳಿತಾಯ ಮತ್ತು ತಾಂತ್ರಿಕ ವಿನ್ಯಾಸ:

ಅಂದಹಾಗೆ ಈ ಪರ್ಪಲ್ ಲೈನ್ ಮಾರ್ಗದಲ್ಲಿ ಎತ್ತರದ ನಿಲ್ದಾಣಗಳ ವಿನ್ಯಾಸವಿದೆ. ಇದರಿಂದ ಭೂಸ್ವಾಧೀನ ಪ್ರಕ್ರಿಯೆ ಕಡಿಮೆಯಾಗಿದೆ. ಅಲ್ಲದೇ ಈ ರೀತಿಯ ವಿನ್ಯಾಸವು ನಗರ ಯೋಜನೆಯ ಅನೇಕ ತಾಂತ್ರಿಕ ಸವಾಲುಗಳಿಗೆ ಪರಿಹಾರವಾಗುತ್ತಿದೆಯೆಂದು ಅಭಿಪ್ರಾಯ ವ್ಯಕ್ತವಾಗಿದೆ.

ವ್ಯಾಪಾರ, ಉದ್ಯಮ, ಶಿಕ್ಷಣ ಎಲ್ಲದಕ್ಕೂ ಬೆಂಬಲ:

ಇನ್ನು ವೈಟ್‌ಫೀಲ್ಡ್ ಮತ್ತು ಕೆ.ಆರ್ ಪುರಂ ಭಾಗಗಳು ಐಟಿ ಉದ್ಯಮಕ್ಕೆ ಹೆಸರುವಾಸಿ ಕೇಂದ್ರಗಳು. ಇದರಿಂದ ಈ ಮಾರ್ಗವು ವ್ಯಾಪಾರ, ಉದ್ಯೋಗ ಸೃಷ್ಟಿ ಮತ್ತು ಶಿಕ್ಷಣ ಕ್ಷೇತ್ರಗಳ ಪ್ರಗತಿಗೆ ಪೂರಕವಾಗಿದೆ. ಕಾರ್ಪೊರೇಟ್ ಕಂಪನಿಗಳು ಮತ್ತು ಸ್ಥಳೀಯ ವ್ಯಾಪಾರಸ್ಥರಿಗೆ ಈ ಸಂಪರ್ಕ ಹೆಚ್ಚಿನ ಲಾಭವನ್ನು ನೀಡುವ ಭರವಸೆ ನೀಡುತ್ತಿದೆ.

₹4,500 ಕೋಟಿ ವೆಚ್ಚದಲ್ಲಿ ಸ್ಥಾಪಿತ, 12 ನಿಲ್ದಾಣಗಳ ವಿನ್ಯಾಸ:

ಈ ಮೆಟ್ರೋ ಮಾರ್ಗವು ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಕಾರಿಡಾರ್‌ನ ಎರಡನೇ ಹಂತವಾಗಿ ರೂಪುಗೊಂಡಿದ್ದು, ಒಟ್ಟು 12 ನಿಲ್ದಾಣಗಳನ್ನು ಒಳಗೊಂಡಿದೆ. ಪರ್ಪಲ್ ಲೈನ್ ಎಂಬ ಗುರುತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಾರ್ಗವನ್ನು ₹4,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಪ್ರತಿದಿನ ಸರಾಸರಿ 1.2 ಲಕ್ಷ ಜನರು ಈ ಮಾರ್ಗದ ಮೂಲಕ ಪ್ರಯಾಣ ಮಾಡುವ ನಿರೀಕ್ಷೆ ಇದೆ.

ಭವಿಷ್ಯದ ಮೆಟ್ರೋ ಯೋಜನೆಗೆ ಮಾರ್ಗದರ್ಶನ:

ಈ ಮಾರ್ಗದ ಯಶಸ್ಸು, ಮುಂದಿನ ಮೆಟ್ರೋ ವಿಸ್ತರಣೆ ಯೋಜನೆಗಳಿಗೆ ದಿಕ್ಕು ತೋರಿಸುತ್ತಿದೆ. ಜನಸಂಚಾರ ಕಡಿಮೆ ಮಾಡುವುದು, ಸಂಚಾರ ಸಮಯ ಉಳಿಸುವುದು ಮತ್ತು ನಗರದ ಅಭಿವೃದ್ಧಿಗೆ ಮೆಟ್ರೋ ಸಾರಿಗೆ ನೀಡುತ್ತಿರುವ ಕೊಡುಗೆ ಇದರಿಂದ ಮತ್ತಷ್ಟು ಸ್ಪಷ್ಟವಾಗುತ್ತಿದೆ.

ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗವು ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಆದರೆ ಬೆಂಗಳೂರಿನ ಜೀವನಶೈಲಿಗೆ ಹೊಸ ಉಸಿರು ತುಂಬಿದ ಬದಲಾವಣೆ. ಪ್ರಯಾಣದ ಸಮಯದಲ್ಲಿ ಉಳಿತಾಯ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಒದಗಿಸುವ ಈ ಮಾರ್ಗ, ನಗರೀಕರಣದ ದಿಟ್ಟ ಹೆಜ್ಜೆಯಾಗಿ ಪರಿಣಮಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+