ಈಗಾಗಲೇ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರ (World Cup 2025) ಕಿರೀಟವನ್ನು ಭಾರತೀಯ ವನಿತೆಯರು ಮುಡಿಗೇರಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ (India-South Africa) ಕದನದಲ್ಲಿ ಭಾರತೀಯ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ. ಇನ್ನು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಸೋಲಿಗೆ ಮುಖ್ಯ ಕಾರಣ ಭಾರತ ತಂಡದ ಬ್ಯಾಟ್ಸ್‌ಮನ್ ಜೆಮಿಮಾ ರೋಡ್ರಿಗಸ್ (Jemimah Rodrigues) ICC ಮಹಿಳಾ ವಿಶ್ವಕಪ್ 2025ರ ಸೆಮಿ-ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 127 ರನ್ ಗಳಿಸಿ ಜೆಮಿಮಾ ರೋಡ್ರಿಗಸ್ ಇತಿಹಾಸ ಬರೆದರು.

ಮಂಗಳೂರಿನ (Mangalore) ಮೂಲದವರಾದ ಜೆಮಿಮಾ ರೋಡ್ರಿಗಸ್, ತನ್ನ ಅಭೂತಪೂರ್ವ ಬ್ಯಾಟಿಂಗ್ ಪ್ರದರ್ಶನದ ಮೂಲಕ ಇದೀಗ ವಿಶ್ವದೆಲ್ಲೆಡೆ ಜನಪ್ರಿಯರಾಗಿದ್ದಾರೆ. ಹಾಗಿದ್ರೆ ಮಂಗಳೂರಿನಿಂದ ಅಂತರಾಷ್ಟ್ರೀಯ ಕ್ರಿಕೆಟ್‌ವರೆಗೆ ಜೆಮಿಮಾ ಪ್ರಯಾಣ ಹೇಗಿತ್ತು? ಅಷ್ಟಕ್ಕೂ ಇವರ ಆದಾಯ ಎಷ್ಟಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಜೆಮಿಮಾ ರೋಡ್ರಿಗಸ್ ಭಾರತದ ಮುಂದಿನ ಯಶಸ್ವಿ ಆಟಗಾರರಲ್ಲಿ ಒಬ್ಬರು. 2000ರ ಸೆಪ್ಟೆಂಬರ್ 5ರಂದು ಮುಂಬೈನ ಭಾಂಡುಪ್‌ನಲ್ಲಿ ಜನಿಸಿದ ಇವರು, ಮಂಗಳೂರಿನ ಕ್ರಿಶ್ಚಿಯನ್ ಕುಟುಂಬದಲ್ಲಿ ಬೆಳೆದವರು. ಚಿಕ್ಕ ವಯಸ್ಸಿನಿಂದಲೇ ಕ್ರೀಡೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಜೆಮಿಮಾ, ಮುಂಬೈನ ಸೇಂಟ್ ಜೋಸೆಫ್ಸ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪಡೆದು, ನಂತರ ರಿಜ್ವಿ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್‌ನಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಇಂದು ಇಡೀ ದೇಶವೇ ಅವರನ್ನು ಕೊಂಡಾಡುತ್ತಿದೆ.
ಇಂದಿನ ಲೇಖನದಲ್ಲಿ ಜೆಮಿಮಾ ರೋಡ್ರಿಗಸ್ ಕುಟುಂಬದ ಹಿನ್ನೆಲೆ, ಶಿಕ್ಷಣ, ವೃತ್ತಿಜೀವನದ ಅಂಕಿಅಂಶಗಳು, ಪ್ರಚಾರಗಳು ಮತ್ತು ಅಂದಾಜು ನಿವ್ವಳ ಮೌಲ್ಯ ಎಷ್ಟಿದೆ ಎಂದು ತಿಳಿಸಲಾಗಿದೆ.
ಯಾರು ಈ ಜೆಮಿಮಾ ರೋಡ್ರಿಗಸ್?
ಜೆಮಿಮಾ ರೋಡ್ರಿಗಸ್ ಭಾರತದ ಮಹಿಳಾ ಕ್ರಿಕೆಟ್ ತಂಡದ ಭರವಸೆಯ ಆಟಗಾರರಲ್ಲಿ ಒಬ್ಬರು. ಐಸಿಸಿ ಏಕದಿನ ವಿಶ್ವಕಪ್ 2025ರ ಸೆಮಿಫೈನಲ್‌ನಲ್ಲಿ ಭಾರತ ಫೈನಲ್‌ಗೆ ಲಗ್ಗೆಯಿಡಲು ಕಾರಣರಾದವರು. ಜೆಮಿಮಾ ರೋಡ್ರಿಗಸ್, 2000ರ ಸೆಪ್ಟೆಂಬರ್ 5ರಂದು ಮುಂಬೈನಲ್ಲಿ ಜನಿಸಿದರು. ರೈಟ್‌ಹ್ಯಾಂಡ್ ಬ್ಯಾಟ್ಸ್‌ಮನ್ ಆಗಿರುವ ಜೆಮಿಮಾ, ಆಫ್-ಸ್ಪಿನ್ ಬೌಲಿಂಗ್ ಕೂಡಾ ಮಾಡುತ್ತಾರೆ. 2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ, ಭಾರತದ ಪ್ರಮುಖ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಜೆಮಿಮಾ ಮೂಲತಃ ಮಂಗಳೂರಿನ ಬಂಟ್ವಾಳ ತಾಲೂಕಿನ ಪಚ್ಚಿನಡ್ಕದ ತೊಡಂಬಿಲದವರು. ಅವರ ತಂದೆ ಐವಾನ್ ರೋಡ್ರಿಗಸ್ ಕಾರವಾರದವರು ಎಂದು ಹೇಳಲಾಗಿದೆ.
ಜೆಮಿಮಾ ಲೈಫ್:
ಜೆಮಿಮಾ ಮುಂಬೈನ ಭಾಂಡುಪ್‌ನಲ್ಲಿ ಮಂಗಳೂರು ಕ್ರಿಶ್ಚಿಯನ್ ಕುಟುಂಬದಲ್ಲಿ ಬೆಳೆದರು. ಅವರ ತಂದೆ, ಐವಾನ್ ರೋಡ್ರಿಗಸ್, ಜೂನಿಯರ್ ಕೋಚ್ ಆಗಿದ್ದು, ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಡಲು ಅವರೇ ಕಾರಣ. ಚಿಕ್ಕ ವಯಸ್ಸಿನಿಂದಲೂ ಜೆಮಿಮಾ ಅವರಿಗೆ ಕ್ರಿಕೆಟ್ ಕಲಿಸಿದ್ದು ಅವರ ತಂದೆ ಇವಾನ್ ರೋಡ್ರಿಗಸ್ ಅಂತೆ. ಮುಂಬೈನ ಸೇಂಟ್ ಜೋಸೆಫ್ಸ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಓದಿದ ಇವರು, ನಂತರ ರಿಜ್ವಿ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್‌ನಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಒಂದೊಮ್ಮೆ ಬಾಲ್ಯದಲ್ಲಿ ಜೆಮಿಮಾ ರೋಡ್ರಿಗಸ್ ಮಹಾರಾಷ್ಟ್ರ ಪರ ಜೂನಿಯರ್ ಮಟ್ಟದಲ್ಲಿ ಫೀಲ್ಡ್ ಹಾಕಿ ಕೂಡಾ ಆಡಿದ್ದಾರೆ.
ಕ್ರಿಕೆಟ್ ವೃತ್ತಿಜೀವನ
ಜೆಮಿಮಾ 2018ರ ಫೆಬ್ರವರಿಯಲ್ಲಿ T20I ಗೆ ಭಾರತದ ತಂಡದಿಂದ ಪಾದಾರ್ಪಣೆ ಮಾಡಿದರು ಮತ್ತು ನಂತರ ಮಾರ್ಚ್ 2018ರಲ್ಲಿ ODI ಗೆ ಪಾದಾರ್ಪಣೆ ಮಾಡಿದರು. 2017ರಲ್ಲಿ U19 ದೇಶೀಯ ಪಂದ್ಯದಲ್ಲಿ 202 ರನ್‌ಗಳ ದ್ವಿಶತಕ ಬಾರಿಸುವ ಮೂಲಕ ಎರಡನೇ ಭಾರತೀಯ ಮಹಿಳಾ ಆಟಗಾರ್ತಿಯಾಗಿ ಗುರುತಿಸಿಕೊಂಡರು. ಇನ್ನು ಜೆಮಿಮಾ WPL ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವುಮೆನ್, WBBL ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ವುಮೆನ್ ಸೇರಿದಂತೆ ವಿಶ್ವದಾದ್ಯಂತ ವಿವಿಧ ಲೀಗ್‌ಗಳಲ್ಲಿ ಆಡಿದ್ದಾರೆ.
ಜೆಮಿಮಾ ರೋಡ್ರಿಗಸ್ ಸಾಧನೆಗಳು:
2012-13: ಸುಮಾರು 12.5 ವರ್ಷದವರಾಗಿದ್ದಾಗ, U-19ಗೆ ಪಾದಾರ್ಪಣೆ ಮಾಡಿದರು.
ನವೆಂಬರ್ 2017: ಸೌರಾಷ್ಟ್ರ ವಿರುದ್ಧದ U-19 ಏಕದಿನ ಪಂದ್ಯದಲ್ಲಿ 202 ರನ್ ಬಾರಿಸಿದರು. ಈ ಮೂಲಕ ಜೆಮಿಮಾ ದ್ವಿಶತಕ ಗಳಿಸಿದ ಎರಡನೇ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಫೆಬ್ರವರಿ 13, 2018: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕಾಗಿ T20I ಗೆ ಆಗಮನ.
ಮಾರ್ಚ್ 12, 2018: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕಾಗಿ ODI ಗೆ ಪಾದಾರ್ಪಣೆ.
ಡಿಸೆಂಬರ್ 2023: ಇಂಗ್ಲೆಂಡ್ ವಿರುದ್ಧ ಭಾರತಕ್ಕಾಗಿ ಟೆಸ್ಟ್ ಗೆ ಪಾದಾರ್ಪಣೆ ಮಾಡಿದರು.
2023 WPL ಹರಾಜು: ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ INR 2.20 ಕೋಟಿಗೆ ಜೆಮಿಮಾ ಅವರನ್ನು ಖರೀದಿ ಮಾಡಿತು.
ಕ್ರಿಕೆಟ್ ಲೋಕ ಬಿಟ್ಟರೆ ಜೆಮಿಮಾ ಶಿಸ್ತಿನ ವ್ಯಕ್ತಿತ್ವವನ್ನು ಹೊಂದಿದವರು. ತನ್ನ ತಂದೆ ಐವಾನ್ ರೋಡ್ರಿಗಸ್ ಅವರ ಮಾರ್ಗದರ್ಶನದೊಂದಿಗೆ, ತಾಯಿ ಲವಿತಾ ಮತ್ತು ಇಬ್ಬರು ಸಹೋದರರಾದ ಎನೋಕ್ ಮತ್ತು ಎಲಿ ಅವರ ಬೆಂಬಲದಿಂದ ಇಂದು ಸಾಧಕರಾದರು. ಹಾಕಿ ಮತ್ತು ಕ್ರಿಕೆಟ್‌ನಂತಹ ವಿವಿಧ ಕ್ರೀಡೆಗಳಿಗೆ ಅವರು ತೋರಿಸಿದ ಆಸಕ್ತಿ, ಜೆಮಿಮಾ ಅವರ ಕ್ರೀಡಾಸಕ್ತಿ ಎಷ್ಟಿದೆ ಎಂದು ತೋರಿಸುತ್ತದೆ.
ಜೆಮಿಮಾ ರೋಡ್ರಿಗಸ್ ಅವರ ಆಸ್ತಿ ಎಷ್ಟು?
2025ರ ಹೊತ್ತಿಗೆ, ಜೆಮಿಮಾ ಅವರ ಅಂದಾಜು ನಿವ್ವಳ ಮೌಲ್ಯವು ಸುಮಾರು ₹10 ಕೋಟಿಗೂ (ಸುಮಾರು US $1-1.3 ಮಿಲಿಯನ್) ಹೆಚ್ಚು ಎಂದು ಅಂದಾಜಿಸಲಾಗಿದೆ. ಇನ್ನು ಈ ಆದಾಯ ಲೀಗ್ ಮ್ಯಾಚ್‌ಗಳು, ಪ್ರಮೋಷನ್, ಒಪ್ಪಂದಗಳನ್ನು ಅವಲಂಬಿಸಿರುತ್ತದೆ. ಅವರ ಆದಾಯದ ಮೂಲಗಳಲ್ಲಿ BCCI ಕೇಂದ್ರ ಒಪ್ಪಂದ, ಪಂದ್ಯದ ಫೀಸ್‌ಗಳು, ದೇಶೀಯ ಮತ್ತು ಅಂತರರಾಷ್ಟ್ರೀಯ ಲೀಗ್ ಸಂಬಳಗಳು (WPL ಮತ್ತು WBBL ನಂತಹ) ಮತ್ತು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಕೂಡಾ ಸೇರಿವೆ.
ಇನ್ನು ಈ ವರ್ಷದ ICC ಮಹಿಳಾ ವಿಶ್ವಕಪ್ 2025ರ ಸೆಮಿ-ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 127 ರನ್ ಗಳಿಸಿ ಜೆಮಿಮಾ ರೋಡ್ರಿಗಸ್ ಹೊಸ ದಾಖಲೆ ಬರೆದರು. ಭಾರತವು 339 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಪಂದ್ಯಕ್ಕೆ ಯಶಸ್ವಿ ಜಯ ತಂದು ಕೊಟ್ಟರು. ಇದು ಮಹಿಳಾ ODI ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ಚೇಸ್ ಆಗಿತ್ತು. ಅದರಲ್ಲೂ ವಿಶೇಷವೆಂದರೆ ಪುರುಷ ಮತ್ತು ಮಹಿಳಾ ಎರಡೂ ಪಂದ್ಯಾವಳಿಗಳಲ್ಲಿ ODI ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ 300ಕ್ಕೂ ಹೆಚ್ಚು ರನ್‌ಗಳನ್ನು ಬೆನ್ನಟ್ಟಿ ಗೆದ್ದ ಮೊದಲ ಪಂದ್ಯ ಇದಾಗಿದೆ.
More From GoodReturns

T20 World Cup: ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್‌ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications