ಹೈದರಬಾದ್, ಜುಲೈ 10: ವಿವಿಧ ಉದ್ಯಮಗಳ ಚುಕ್ಕಾಣಿ ಹಿಡಿದು ಮಹಿಳೆಯರು ಮುನ್ನಡೆಸುತ್ತಿರುವುದು ಹೊಸದಲ್ಲ. ಕೆಲವರು ಸ್ವ ಉದ್ಯೋಗ, ಸ್ಟಾರ್ಟಪ್ ಯಶಸ್ವಿ ನಾಯಕತ್ವ ಹೊಂದಿದ್ದರೆ ಇನ್ನು ಒಂದಿಷ್ಟು ಮಹಿಳೆಯರು ಕುಟುಂಬದ ಉದ್ಯಮಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.
ಅಂತಹ ಉದ್ಯಮಶೀಲ ಮಹಿಳೆಯರಲ್ಲಿ ನಿಲಿಮಾ ಪ್ರಸಾದ್ ಡಿವಿ ಕೂಡಾ ಒಬ್ಬರು. ಇವರು ಡಿವಿಸ್ ಲ್ಯಾಬೊರೇಟರೀಸ್ ಲಿಮಿಟೆಡ್‌ನಲ್ಲಿ ನಿರ್ದೇಶಕರು (ವಾಣಿಜ್ಯ)ರಾಗಿದ್ದಾರೆ. ಹೈದರಾಬಾದ್‌ನ ಅತ್ಯಂತ ಶ್ರೀಮಂತ ಉದ್ಯಮಿ ಡಾ. ಮುರಳಿ ಕೆ. ಡಿವಿ ಅವರ ಪುತ್ರಿಯಾಗಿರುವ ನಿಲಿಮಾ ಕಳೆದ ಐದು ವರ್ಷಗಳಿಂದ ಸಂಸ್ಥೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ಡಾ. ಮುರಳಿ ಕೆ. ಡಿವಿ 1,23,000 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಕಂಪನಿಯಾದ ಡಿವಿಸ್ ಲ್ಯಾಬೊರೇಟರೀಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕಂಪನಿಯು ಔಷಧೀಯ ಪದಾರ್ಥಗಳ( active pharmaceutical ingredients (API) ವಿಶ್ವದ ಅಗ್ರ ಪೂರೈಕೆದಾರರಲ್ಲಿ ಒಂದಾಗಿದೆ.
ನಿಲಿಮಾ ಇತ್ತೀಚೆಗೆ ಐಷಾರಾಮಿ ಆಸ್ತಿ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಜಾಪ್‌ಕಿ Zapkey ದಾಖಲೆಗಳ ಪ್ರಕಾರ ಮನಿ ಕಂಟ್ರೋಲ್ ವರದಿ ಪ್ರಕಾರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದು, ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ 80 ಕೋಟಿ ರೂ.ಗೆ ಎರಡು ಆಸ್ತಿಗಳನ್ನು ಖರೀದಿಸಿದ್ದಾರೆ. ಪ್ರತಿಯೊಂದು ಆಸ್ತಿಯು 11,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ ಎಂದು ವರದಿಯಾಗಿದೆ.
ನಿಲಿಮಾ ಅವರು ಭಾರತದ ಗೀತಮ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್‌ನಿಂದ ಇಂಟರ್ನ್ಯಾಷನಲ್ ಬಿಸಿನೆಸ್‌ನಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬ್ರಿಟನ್ ನ ಗ್ಲ್ಯಾಸ್ಗೋ ಯೂನಿವರ್ಸಿಟಿಯಿಂದ ಇಂಟರ್ನ್ಯಾಷನಲ್ ಫೈನಾನ್ಸ್ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಡಿವಿ'ಸ್ ನ ಎಲ್ಲಾ ಪ್ರಯೋಗಾಲಯಗಳ ಮೆಟೀರಿಯಲ್ ಸೋರ್ಸಿಂಗ್ ಮತ್ತು ಸಂಗ್ರಹಣೆ, ಕಾರ್ಪೊರೇಟ್ ಹಣಕಾಸು ಮತ್ತು ಹೂಡಿಕೆದಾರರ ಸಂಬಂಧಗಳನ್ನು ನೋಡಿಕೊಳ್ಳುತ್ತಾರೆ.
ನಿಲಿಮಾ ಅವರ ತಂದೆ ಮುರಳಿ ಡಿವಿ ಇಂದು ವಿಶ್ವದ ಶ್ರೀಮಂತ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಮುರಳಿ ಡಿವಿ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದವರು. ಮುರಳಿ ಅವರು 1976 ರಲ್ಲಿ ಅಮೇರಿಕಾಗೆ ತೆರಳಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಅವರಿಗೆ ಕೇವಲ 25 ವರ್ಷದವರಾಗಿರುವ ತಮ್ಮೊಂದಿಗೆ ಕೇವಲ 500 ರೂ ಇದ್ದಾಗ, ಅವರು ಅಮೇರಿಕಾಕ್ಕೆ ತೆರಳಿ ತಮ್ಮ ಭವಿಷ್ಯವನ್ನು ಬದಲಾಯಿಸಿಕೊಂಡರು . ಫೈಕ್ ಕೆಮಿಕಲ್ನಂತಹ ಅಮೇರಿಕನ್ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕೆಲಸ ಮಾಡಿದ ನಂತರ ಭಾರತಕ್ಕೆ ಹಿಂದಿರುಗಿ 1984 ರಲ್ಲಿಉದ್ಯಮಿಯಾಗಿ ಪ್ರಯಾಣವನ್ನು ಆರಂಭಿಸಿದರು.
ಡಿವಿಸ್ ಕುಟುಂಬದ ಮಾರುಕಟ್ಟೆ ಮೌಲ್ಯ 65110 ಕೋಟಿ ರೂ. ಆಗಿದ್ದು ಇವರ ಡಿವಿಸ್ ಲ್ಯಾಬ್ ತನ್ನ ವಾರ್ಷಿಕ ಆದಾಯದಲ್ಲಿ ಸುಮಾರು 90 ಪ್ರತಿಶತ ಸುಮಾರು USD 965 ಮಿಲಿಯನ್ ರಫ್ತುಗಳಿಂದ ಪಡೆಯುತ್ತದೆ.


Click it and Unblock the Notifications