ಬೆಂಗಳೂರು, ಜೂನ್ 25: ಶ್ರೇಯಾ ಘೋಷಾಲ್ ಭಾರತೀಯರಿಗೆ ಅದರಲ್ಲೂ ಸಂಗೀತಪ್ರಿಯರಿಗೆ ಚಿರಪರಿಚಿತ ಹೆಸರು. ಭಾರತೀಯ ಚಿತ್ರರಂಗದಲ್ಲಿ ಶ್ರೇಯಾ ಘೋಷಾಲ್ ತಮ್ಮದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡವರು. ಇವರ ಸುಮಧುರ ದ್ವನಿ ಚಿರಪರಿಚಿತವಾಗಿದ್ದರೂ, ಅವರ ವೈಯಕ್ತಿಕ ಜೀವನ ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ.
ಹೌದು ಶ್ರೇಯಾ ಘೋಷಾಲ್ ಅವರು ಬಾಲಿವುಡ್ ಹಿನ್ನೆಲೆ ಗಾಯನದಲ್ಲಿ ರಾಣಿಯಾಗಿ ಮೆರೆಯುತ್ತಿದ್ದರೆ ಅವರ ಪತಿ ಶಿಲಾದಿತ್ಯ ಮುಖ್ಯೋಪಾಧ್ಯಾಯ ಅವರು ಐಟಿ ಜಗತ್ತಿನಲ್ಲಿ ಹೆಸರುವಾಸಿಯಾಗಿದ್ದಾರೆ. ಇವರು ಕಾಲರ್ ಐಡಿ ಮತ್ತು ಸ್ಪ್ಯಾಮ್ ಕಾಲ್ ಬಗ್ಗೆ ಎಚ್ಚರಿಸುವ ಅಪ್ಲಿಕೇಷನ್ ಟ್ರೂ ಕಾಲರ್ ಕಂಪನಿಯ ಬೆಳವಣಿಗೆ ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಶಿಲಾದಿತ್ಯ ಮುಖೋಪಾಧ್ಯಾಯ ಟ್ರೂಕಾಲರ್ ನಲ್ಲಿ ವ್ಯಾಪಾರದ ಜಾಗತಿಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು, ಕಂಪನಿಯನ್ನು ನಿರಂತರ ಯಶಸ್ಸಿನತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಟ್ರೂಕಾಲರ್‌ನ ವಾರ್ಷಿಕ ವರದಿಯ ಪ್ರಕಾರ, 2009 ರಲ್ಲಿ ಸ್ಥಾಪನೆಯಾದ ಮತ್ತು ಸ್ಟಾಕ್‌ಹೋಮ್ ಮೂಲದ ಕಂಪನಿಯು ಜನವರಿಯಿಂದ ಡಿಸೆಂಬರ್ 2023 ರವರೆಗೆ ಒಟ್ಟು SEK 1,740.4 ಮಿಲಿಯನ್ (ಸುಮಾರು ರೂ 1406 ಕೋಟಿ) ಆದಾಯವನ್ನು ಹೊಂದಿದೆ. ಟ್ರೂಕಾಲರ್ 374 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ, ಭಾರತವು ಇದರ ಅತಿದೊಡ್ಡ ಮಾರುಕಟ್ಟೆಯಾಗಿದೆ.
ಶಿಲಾದಿತ್ಯ ಮುಖೋಪಾಧ್ಯಾಯ ಅವರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ವ್ಯಾಪಾರ ಅಭಿವೃದ್ಧಿ, ಮೊಬೈಲ್ ಅಪ್ಲಿಕೇಶನ್‌ಗಳು, ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಉತ್ಪನ್ನ ನಿರ್ವಹಣೆ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ಏಕೀಕರಣದಲ್ಲಿ ಪರಿಣತರಾಗಿದ್ದಾರೆ. ಅವರು ಈ ಹಿಂದೆ ಕ್ಯಾಲಿಫೋರ್ನಿಯಾ ಮೂಲದ SaaS ಕಂಪನಿಯಾದ CleverTap ನಲ್ಲಿ ಮಾರಾಟದ ನಿರ್ದೇಶಕರಾಗಿ ಮತ್ತು ನಂತರ ಮಾರಾಟದ ಉಪಾಧ್ಯಕ್ಷರಾಗಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು. ಶಿಲಾದಿತ್ಯ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿಇ ಪದವಿ ಪಡೆದಿದ್ದಾರೆ.
ಶ್ರೇಯಾ ಘೋ ಷಾಲ್ ಮತ್ತು ಶಿಲಾದಿತ್ಯ ಮುಖೋಪಾಧ್ಯಾ ಯ ಬಾಲ್ಯ ಸ್ನೇಹಿತರಾಗಿದ್ದು ಹತ್ತು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಇವರಿಬ್ಬರು 2015ರಲ್ಲಿ ಮದುವೆಯಾರು. ಈ ದಂಪತಿಗಳಿಗೆ ದೇವಯಾನ್ ಎಂಬ ಪುತ್ರನಿದ್ದಾನೆ. ಮಾಧ್ಯಮಗಳ ಪ್ರಕಾರಶ್ರೇಯಾ ಘೋಷಾಲ್ ಅಂದಾಜು ನಿವ್ವಳ ಮೌಲ್ಯ 180 ರಿಂದ 185 ಕೋಟಿ ರೂ. ಆಗಿದೆ.


Click it and Unblock the Notifications